Home Blog Page 1847

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಹೈದರಾಬಾದ್, ನ.2 (ಪಿಟಿಐ) ತೆಲಂಗಾಣದಲ್ಲಿ ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಸಾಮಾಜಿಕ ಪಿಂಚಣಿ, ಎಲ್‍ಪಿಜಿ ಸಿಲಿಂಡರ್‍ನಲ್ಲಿ ಉಳಿತಾಯ ಮತ್ತು ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಮೂಲಕ ತೆಲಂಗಾಣದಲ್ಲಿ ಮಹಿಳೆಯರು 4,000 ರೂ.ವರೆಗೆ ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಹೇಳಿದ್ದಾರೆ.

ಕಾಳೇಶ್ವರಂ ಯೋಜನೆಯ ಮೆಡಿಗಡ್ಡಾ ಬ್ಯಾರೇಜ್ ಬಳಿಯ ಅಂಬಟಿಪಲ್ಲಿ ಗ್ರಾಮದಲ್ಲಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ ಎನ್ನಲಾದ ಎಲ್ಲ ಹಣವನ್ನು ಮರಳಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದರು.

ಇಲ್ಲಿ ಮುಖ್ಯಮಂತ್ರಿಗಳ ಲೂಟಿಯಿಂದ ತೆಲಂಗಾಣ ಮಹಿಳೆಯರು ಹೆಚ್ಚು ತೊಂದರೆಗೀಡಾಗಿದ್ದಾರೆ, ಮುಖ್ಯಮಂತ್ರಿ ಲೂಟಿ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು.

ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಮೊದಲ ಹಂತವಾಗಿ ಪ್ರತಿ ತಿಂಗಳು 2,500 ರೂ.ಗಳನ್ನು ಸಾಮಾಜಿಕ ಪಿಂಚಣಿಯಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 1,500 ರೂಪಾಯಿ ಉಳಿತಾಯವಾಗಲಿದೆ, ಈಗ 1,000 ರೂಪಾಯಿ ಬೆಲೆಯ ಎಲ್‍ಪಿಜಿ ಸಿಲಿಂಡರ್ ಅನ್ನು 500 ರೂಪಾಯಿಗಳಿಗೆ ಮತ್ತು ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಮೂಲಕ ಇನ್ನೂ 1,000 ರೂಪಾಯಿಗಳನ್ನು ಪೂರೈಸುತ್ತದೆ.
ಇವೆಲ್ಲದರ ಜೊತೆಗೆ ನೀವು ಪ್ರತಿ ತಿಂಗಳು 4,000 ರೂ. ಪ್ರಯೋಜನ ಪಡೆಯುತ್ತೀರಿ. ಇದನ್ನು ಪರಜಾಲ ಸರ್ಕಾರ (ಜನರ ಸರ್ಕಾರ) ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ 1 ಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ಆರೋಪಿಸಿದ ಗಾಂ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ನೇತೃತ್ವದ ಪಕ್ಷದ ನಡುವೆ ಹೋರಾಟವಿದ್ದರೂ ಬಿಆರ್‍ಎಸ್, ಬಿಜೆಪಿ ಮತ್ತು ಎಂಐಎಂ ಒಂದೇ ಕಡೆ ಸ್ರ್ಪಧಿಸಲಿವೆ ಎಂದು ಹೇಳಿದರು.

ಎಂಐಎಂ ಮತ್ತು ಬಿಜೆಪಿ ಬಿಆರ್‍ಎಸ್‍ಗೆ ಬೆಂಬಲ ನೀಡುತ್ತಿವೆ. ಆದ್ದರಿಂದ ನೀವು ದೋರಲ ಸರ್ಕಾರವನ್ನು ತೊಡೆದುಹಾಕಲು ಮತ್ತು ಪರಜಾಲ ಸರ್ಕಾರವನ್ನು (ಜನರ ಆಡಳಿತ) ಸ್ಥಾಪಿಸಲು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಅವರು ಹೇಳಿದರು.

ಕಾಳೇಶ್ವರಂ ಯೋಜನೆಯು ಕೆಸಿಆರ್‍ಗೆ ಹಣ ಸಂಪಾದನೆಗಾಗಿ ಎಟಿಎಂ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ರಾಹುಲï, ಈ ಯಂತ್ರವನ್ನು ಚಲಾಯಿಸಲು ತೆಲಂಗಾಣದ ಎಲ್ಲಾ ಕುಟುಂಬಗಳು 2040 ರವರೆಗೆ ವಾರ್ಷಿಕ 31,500 ರೂ.ಪಾವತಿಸಬೇಕಾಗುತ್ತದೆ ಎಂದಿದ್ದಾರೆ.

ಭಾರತ-ಪೋರ್ಚಗಲ್ ನಡುವೆ ನೇರ ವಾಯು ಸಂಪರ್ಕ ಬೇಕು : ಜೈಶಂಕರ್

ಲಿಸ್ಬನ್, ನ.2 (ಪಿಟಿಐ) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ದ್ವಿಪಕ್ಷೀಯ ವಿನಿಮಯವನ್ನು ವಿಸ್ತರಿಸಲು ಭಾರತ ಮತ್ತು ಪೋರ್ಚುಗಲ್ ನಡುವೆ ನೇರ ವಾಯು ಸಂಪರ್ಕದ ಅಗತ್ಯವಿದೆ ಎಂದಿದ್ದಾರೆ.ಅವರು ತಮ್ಮ ಯುರೋಪ್ ಪ್ರವಾಸದ ಸಮಯದಲ್ಲಿ ಪೋರ್ಚುಗಲ್‍ನಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವಿನ ನಿಕಟ ಸಂಬಂಧಗಳಿಗೆ ಪೋರ್ಚುಗಲ್‍ನ ಕೊಡುಗೆಯನ್ನು ಎತ್ತಿ ತೋರಿಸಿದರು ಮತ್ತು ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆಯನ್ನು ಹಂಚಿಕೊಂಡರು.

ಭಾರತ-ಇಯು ಬಾಂಧವ್ಯವನ್ನು ಹತ್ತಿರವಾಗಿಸುವಲ್ಲಿ ಪೋರ್ಚುಗಲ್‍ನ ಕೊಡುಗೆಯನ್ನು ಎತ್ತಿ ತೋರಿಸಿದೆ. ಪೋರ್ಟೊ 2021 ಉಭಯ ರಾಷ್ಟ್ರಗಳ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ಒದಗಿಸುವ ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆಯನ್ನು ಹಂಚಿಕೊಂಡಿದ್ದಾರೆ. ನಮ್ಮ ರಾಜತಾಂತ್ರಿಕ ಸಂಬಂಧಗಳ 50 ನೇ ವಾರ್ಷಿಕೋತ್ಸವದ ಆಚರಣೆಗೆ ಕೊಡುಗೆ ನೀಡುವಂತೆ ಸಮುದಾಯವನ್ನು ಅವರು ಒತ್ತಾಯಿಸಿದರು.

ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಕೆಲ ದಿನಗಳ ಹಿಂದೆ ಜೈಶಂಕರ್ ಅವರು ಸಮಕಾಲೀನ ಸವಾಲುಗಳು ಮತ್ತು ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಅಭಿವೃದ್ಧಿ ಕುರಿತು ಚರ್ಚಿಸಿದರು. ನಾವು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಹೊಸ ಶಕ್ತಿ ಮತ್ತು ಚಟುವಟಿಕೆಗಳನ್ನು ನೋಡುತ್ತೇವೆ. ವ್ಯಾಪಾರ ಮತ್ತು ಹೂಡಿಕೆಯು ಸ್ಪಷ್ಟವಾಗಿ ಪ್ರಬಲ ಪ್ರೇರಕ ಶಕ್ತಿಯಾಗಿದೆ. ಭಾರತೀಯ ಐಟಿ ಕಂಪನಿಗಳಂತಹ ಭಾರತೀಯ ಕಂಪನಿಗಳು, ವಿಶೇಷವಾಗಿ ಪೋರ್ಚುಗಲ್‍ನಲ್ಲಿ ತಮ್ಮ ಛಾಪು ಮೂಡಿಸಿವೆ ಎಂದು ಜೈಶಂಕರ್ ಪೋರ್ಚುಗಲ್‍ನ ವಿದೇಶಾಂಗ ಸಚಿವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಭಾಗವಾಗಿ ಹೇಳಿದರು.

ಉಭಯ ನಾಯಕರು ನಡೆಸಿದ ಕೆಲವು ಚರ್ಚೆಗಳನ್ನು ಅನುಸರಿಸಲು ಜಂಟಿ ಆರ್ಥಿಕ ಸಮಿತಿಯನ್ನು ಕೇಳಲಾಗುವುದು ಮತ್ತು ಆರೋಗ್ಯ, ಔಷೀಧಿಯ, ನವೀಕರಿಸಬಹುದಾದ ಇಂಧನದಲ್ಲಿ ನಾವು ಇನ್ನೇನು ಮಾಡಬಹುದು ಎಂಬುದನ್ನು ನೋಡಿ ಎಂದು ಜೈಶಂಕರ್ ಹೇಳಿದರು.

ನಾವು ರಕ್ಷಣಾ ಸಹಕಾರ, ಸ್ಟಾರ್ಟ್‍ಅಪ್‍ಗಳು ಮತ್ತು ನಾವೀನ್ಯತೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ನೇರ ವಿಮಾನ ಸಂಪರ್ಕದ ಬಗ್ಗೆ ನಮ್ಮ ನಡುವೆ ಕೆಲವು ಮಾತುಕತೆ ನಡೆದಿತ್ತು ಏಕೆಂದರೆ ಅದು ಇಂದು ಸಂಬಂಧದಲ್ಲಿ ಕಾಣೆಯಾಗಿದೆ ಎಂದು ಅವರು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-11-2023)

ನಿತ್ಯ ನೀತಿ : ಬದುಕು ನಮ್ಮನ್ನು ಎಷ್ಟು ನೋಯಿಸಿದರೂ ನಾವು ಮುಂದೆ ಸಾಗಲೇಬೇಕು, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ…

ಪಂಚಾಂಗ ಗುರುವಾರ 02-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆರಿದ್ರಾ / ಯೋಗ: ಶಿವ / ಕರಣ: ಕೌಲವ

ಸೂರ್ಯೋದಯ : ಬೆ.06.13
ಸೂರ್ಯಾಸ್ತ : 05.53
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.
ವೃಷಭ: ಯಾವುದೇ ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.
ಮಿಥುನ: ಮುಖ್ಯ ಕೆಲಸವೊಂದಕ್ಕೆ ಸಲಹೆ ಪಡೆಯಲು ಗಣ್ಯ ವ್ಯಕ್ತಿಯನ್ನು ಸಂಪರ್ಕಿಸುವಿರಿ.

ಕಟಕ: ಉದಾರ ಮನೋಭಾವದಿಂದಾಗಿ ನೆರೆಹೊರೆಯವರ ಗಮನ ಸೆಳೆಯುವಿರಿ.
ಸಿಂಹ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.
ಕನ್ಯಾ: ಪೂರ್ವ ನಿಯೋಜಿತ ಕೆಲಸಗಳು ಉತ್ತಮವಾಗಿ ನಡೆಯುವುದರಿಂದ
ನೆಮ್ಮದಿ ಸಿಗಲಿದೆ.

ತುಲಾ: ಹಿರಿಯರ ಮಾತಿ ನಂತೆ ನಡೆದುಕೊಳ್ಳುವುದರಿಂದ ಶುಭ ಫಲ ಸಿಗಲಿದೆ.
ವೃಶ್ಚಿಕ: ಮಕ್ಕಳ ಬಗ್ಗೆ ಜವಾ ಬ್ದಾರಿ ವಹಿಸಿ. ಮಕ್ಕಳಿಗೆ ವಸ್ತುಗಳನ್ನು ಖರೀದಿಸುವಿರಿ.
ಧನುಸ್ಸು: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.

ಮಕರ: ಹೂವು, ಹಣ್ಣು, ತರಕಾರಿ, ಹಾಲಿನ ವ್ಯಾಪಾರಿಗಳಿಗೆ ಅಕ ಲಾಭ ಸಿಗಲಿದೆ.
ಕುಂಭ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಮೀನ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.

ವಿಶ್ವಕಪ್‌ನಿಂದ ಪಾಂಡ್ಯ ಔಟ್..?

ಮುಂಬೈ, ನ.1- ಪಾದದ ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ನವೆಂಬರ್ 12 ರಂದು ನೆದಲ್ರ್ಯಾಂಡ್ಸ್ ವಿರುದ್ಧದ ವಿಶ್ವಕಪ್‍ನ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಕಣಕ್ಕೆ ಮರಳುವ ಸಾಧ್ಯತೆಯಿಲ್ಲ.

ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರು ಬೌಲಿಂಗ್‍ನಲ್ಲಿ ಚಂಡನ್ನು ತಡೆಯುವಾಗ ಎಡ ಪಾದಕ್ಕೆ ಗಾಯವಾಗಿತ್ತು. ನಂತರ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಆಡಲಿಲ್ಲ ನಾಳೆ ಶ್ರೀಲಂಕಾ ಮತ್ತು ನ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದಲ್ರ್ಯಾಂಡ್ಸ್ ವಿರುದ್ಧ ಭಾರತ ಆಡಲಿರುವ ಕೊನೆಯ ಲೀಗ್ ಪಂದ್ಯಕ್ಕೆ ಪಾಂಡ್ಯ ಲಬ್ಯವಾಗಬಹುದು,ಪ್ರಸ್ತುತ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ನೇರವಾಗಿ ಸೆಮಿಫೈನಲ್ ಪಂದ್ಯ ಆಡುವ ಸಾಧ್ಯತೆಯೂ ಇದೆ. ಈಗಾಗಲೆ ಆರು ಪಂದ್ಯಗಳಲ್ಲಿ ಗೆಲುವು ಪಡೆದು ಭಾರತ ಸೆಮಿಫೈನಲ್‍ಗೆ ಅರ್ಹತೆ ಪಡೆಯುವುದು ನಿಶ್ಛಿತವಾಗಿದೆ.

ವಾಣಿಜ್ಯ ಸಿಲಿಂಡರ್ ಬೆಲೆ 101 ರೂ. ಏರಿಕೆ

ಪಾಂಡ್ಯ ಅನುಪಸ್ಥಿತಿಯಲ್ಲಿ, ಭಾರತ ತಂಡ ಐವರು ಬೌಲರ್‍ಗಳೊಂದಿಗೆ ಆಡುತ್ತಿದ್ದು, ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ. ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‍ಸಿಎ) ಚೇತರಿಸಿಕೊಳ್ಳುತ್ತಿದ್ದು.ವೈದ್ಯಕೀಯ ತಂಡವು ಪರಿಶೀಲಿಸುತ್ತಿದೆ ನಾವು ಕೂಡ ಎನ್‍ಸಿಎ ಜೊತೆಗೆ ಸಂಪರ್ಕದಲ್ಲಿದ್ದೇವೆ ಒಂದೆರಡು ದಿನಗಳಲ್ಲಿ ಸದ್ಯದ ಪರಿಸ್ಥಿತಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೌಲಿಂಗ್ ಕೋಚ್ ಮಾಂಬ್ರೆ ಹೇಳಿದ್ದಾರೆ.

ಬಿಸಿಸಿಐ ಮಾಧ್ಯಮ ಬಿಡುಗಡೆಯ ಪ್ರಕಾರ, ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಪಾಂಡ್ಯ ಲಕ್ನೋದಲ್ಲಿ ತಂಡವನ್ನು ಸೇರಿಕೊಳ್ಳಬೇಕಿತ್ತು ಆದರೆ ಅವರು ತಂಡದಲ್ಲಿ ಇರಲಿಲ್ಲ.

ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಬೆಂಗಳೂರು,ನ.1- ಕನ್ನಡ ಭಾಷಿಕರು, ಪ್ರದೇಶ ಏಕೀಕರಣವಾದ ರಾಜ್ಯೋತ್ಸವ ಸಡಗರ ಹಾಗೂ ಕರ್ನಾಟಕ ಎಂಬ ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸುವರ್ಣ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದೆ.

ಕನ್ನಡಿಗರ ಅಸ್ತಿತ್ವ ಮತ್ತು ಆಸ್ಮಿತೆಯ ಸಂಕೇತವಾಗಿರುವ ಹಳದಿ-ಕೆಂಪು ಬಾವುಟ ಇಂದು ರಾಜ್ಯದೆಲ್ಲೆಡೆ ಹಾರಾಡುತ್ತಿದ್ದು, ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಲಿದೆ. ಈ ಸುದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಗಣ್ಯರು ಸಾಮಾಜಿಕ ಜಾಲತಾಣ ಮೂಲಕ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದಿರುವ ಸಿಎಂ ಸಿದ್ದರಾಮಯ್ಯ, ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

1973ರ ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡ ಭಾಷೆಯಷ್ಟೇ ಸೀಮಿತ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದಿದ್ದಾರೆ.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷ ಪೂರೈಸಿದ್ದು, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಹಾಗೂ ಕನ್ನಡಿಗರ ಏಳಿಗೆಗಾಗಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಹೀಗೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶುಭಕೋರಿದರು.

ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆಯೇ, ಕರ್ನಾಟಕವೆಂದು ಹೆಸರಾಗಿ ಇಂದಿಗೆ 50 ವರ್ಷ. ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆ ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆ ಯನ್ನು ಮುಗಿಲೆತ್ತರಕ್ಕೆ ಹಾರೈಸೋಣ. ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿ ಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಕನ್ನಡ ಉಳಿಸುವ, ಬೆಳೆಸುವ ದೃಢಸಂಕಲ್ಪ ಸದಾ ನಮ್ಮದಾಗಿರಲಿ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಅಭಿಮಾನಪೂರ್ವಕ ಶುಭಾಶಯಗಳು ಎಂದು ಶುಭಾಶಯ ಕೋರಿದ್ದಾರೆ.

ವಿಶ್ವದ ಸಮಸ್ತ ಕನ್ನಡಿಗರಿಗೆ 68ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಕರ್ನಾಟಕ..! ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು. ಜಗದಗಲ ಹಬ್ಬಲಿ ಕರ್ನಾಟಕ ಸಂಭ್ರಮ, ಮೊಳಗಲಿ ಕನ್ನಡ ಡಿಂಡಿಮ. ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಕನ್ನಡಿಗರಿಗೆ ರಾಜ್ಯೋತ್ಸವದ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ, ನ.1- ಅರವತ್ತೆಂಟನೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರುನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಪೋರ್ತಿಯಾಗಲಿ ಎಂದು ಹಾರೈಸಿದ್ದಾರೆ.

ಕನ್ನಡಿಗರು ಫಿದಾ: ಕರ್ನಾಟಕ ರಚನೆಯಾಗಿ 50ನೆ ವರ್ಷದ ಸುವರ್ಣ ಮಹೋತ್ಸವಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲೇ ಬಂದಿರುವ ಈ ಬಾರಿಯ ಕನ್ನಡ ರಾಜ್ಯೋತ್ಸವ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಕೋರಿರುವುದಕ್ಕೆ ನಾಡಿನ ಜನ ಫಿದಾ ಆಗಿದ್ದಾರೆ.

ಕರಾಳ ದಿನಾಚರಣೆ ಮಾಡುವವರಿಗೆ ತಾಯಿನೆಲದ ತಿಳುವಳಿಕೆ ಬೇಕು : ಸತೀಶ್ ಜಾರಕಿಹೊಳಿ

ಬೆಂಗಳೂರು, ನ.1- ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನ ಆಚರಣೆ ಮಾಡುವವರಿಗೆ ತಾಯ್ನೆಲದ ಬಗ್ಗೆ ತಿಳುವಳಿಕೆ ಅಗತ್ಯ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿಂದು ಕನ್ನಡ ರಾಜ್ಯೋತ್ಸವ ಆಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಂಘಟನೆಯವರು ಸರ್ಕಾರದ ಅನುಮತಿ ಇಲ್ಲದೆಯೂ ಕರಾಳ ದಿನಾಚರಣೆ ಮಾಡುತ್ತಾರೆ. ಇಲ್ಲಿಯೇ ವಾಸ ಮಾಡುವ ಅವರಿಗೆ ತಿಳುವಳಿಕೆ ಬರಬೇಕು. ಹಕ್ಕುಗಳಿಗಾಗಿ ಭಾಷಣ ಮಾಡಲಿ, ಆದರೆ ಸರ್ಕಾರವನ್ನು ವಿರೋಧ ಮಾಡುವುದು ಸರಿಯಲ್ಲ ಎಂದರು.

ಯಾವುದೇ ಕಾರ್ಯಕ್ರಮವಾದರೂ ರಕ್ಷಣೆ ನೀಡುವುದು ಪೊಲೀಸರ ಜವಾಬ್ದಾರಿ. ಒಂದು ವೇಳೆ ರಕ್ಷಣೆ ನೀಡದೆ ಇದ್ದರೆ ಗಲಾಟೆಯಾದರೆ ಯಾರು ಹೊಣೆ ಅದಕ್ಕಾಗಿ ರಕ್ಷಣಾ ವ್ಯವಸ್ಥೆ ಮಾಡಲಾಗುತ್ತದೆ. ಅದನ್ನು ಎಂಇಎಸ್‍ಗೆ ರಕ್ಷಣೆ ಎಂದು ಬಿಂಬಿಸಬೇಕಿಲ್ಲ ಎಂದರು.

ಸರ್ಕಾರ ನಾಡ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತದೆ. ಆದರೆ ಪ್ರಕರಣ ನ್ಯಾಯಾಲಯಕ್ಕೆ ಹೋದ ಮೇಲೆ ನಾವು ಏನು ಮಾಡಲಾಗುವುದಿಲ್ಲ. ನ್ಯಾಯಾಲಯದಲ್ಲಿ ಜಾಮೀನು ದೊರೆಯುತ್ತದೆ, ಕೆಲವೊಮ್ಮೆ ಪ್ರಕರಣವು ವಜಾಗೊಳ್ಳುತ್ತದೆ ಎಂದರು.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ಈ ಬಾರಿ ಮುನ್ನೆಚ್ಚರಿಕೆಯಾಗಿ 35 ಜನರನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿದ್ದ ಪೊಲೀಸ್ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು. ಮುಂದುವರೆದ ಸಚಿವ ಸತೀಶ್ ಜಾರಕಿಹೊಳಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಎಂಬುದು ಎಲ್ಲಾ ಕಡೆಯಿಂದ ಪಕ್ಷಾತೀತವಾಗಿ ಬೇಡಿಕೆಯಾಗಿದೆ. ಆದರೆ ಅದಕ್ಕೂ ಮಹೂರ್ತ ಕೂಡಿ ಬರಬೇಕು, ಹಣಕಾಸು ಲಭ್ಯತೆ ನೋಡಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ವಿಭಜನೆಗೂ ಮೊದಲು ಬೆಳಗಾವಿ ತಾಲ್ಲೂಕು ವಿಭಜನೆಯಾಗಬೇಕಿದೆ. ಪ್ರಸ್ತುತ ತಾಲ್ಲೂಕಿನಲ್ಲಿ ಎಂಟುವರೆ ಲಕ್ಷ ಮತದಾರರಿದ್ದಾರೆ. 11 ಲಕ್ಷ ಜನಸಂಖ್ಯೆ ಇದೆ. ನಿಗದಿತ ಪ್ರಮಾಣಕ್ಕಿಂತಲೂ ಶೇ.20ರಷ್ಟು ಹೆಚ್ಚು ಜನಸಂಖ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ ಎಂಟು ಲಕ್ಷ ಜನಸಂಖ್ಯೆ ಇದ್ದರೇ ಅದಕ್ಕಿಂತಲೂ ಹೆಚ್ಚು ಜನ ಬೆಳಗಾವಿ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ. ಆದಷ್ಟು ಶೀಘ್ರ ತಾಲ್ಲೂಕು ವಿಭಜನೆ ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದರು.

ಬೆಳಗಾವಿ ನಗರ ಒಂದು ತಾಲ್ಲೂಕು ಆಗಲಿದೆ, ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲ್ಲೂಕು ಆಗಲಿದೆ. ಬೆಳಗಾವಿ ಮಹಾನಗರ ಪಾಲಿಕೆಗೆ 12 ಗ್ರಾಮ ಪಂಚಾಯತ್‍ಗಳನ್ನು ಸೇರ್ಪಡೆ ಮಾಡಲಾಗುವುದು ಎಂದರು.

ಪಶು ವೈದ್ಯಾಧಿಕಾರಿ, ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ

ಬೆಂಗಳೂರು,ನ.1- ನಗರದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಇಂದು ಬೆಳಿಗ್ಗೆ ಪಶು ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಚಿರತೆ ದಾಳಿಯಿಂದ ಗಾಯ ಗೊಂಡಿರುವ ಪಶು ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ಬೊಮ್ಮನಹಳ್ಳಿಯ ಕೂಡ್ಲುಗೇಟ್ ಸಮೀಪದ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದ ಪಾಳು ಮನೆಯೊಂದರಲ್ಲಿ ಚಿರತೆ ಪತ್ತೆಯಾಗಿದ್ದರಿಂದ ಸ್ಥಳೀಯ ಜನತೆ ಆತಂಕಕ್ಕೆ ಒಳಗಾಗಿದ್ದರು. ಚಿರತೆ ಇದ್ದ ಪಾಳು ಮನೆ ಸುತ್ತಮುತ್ತ ಎರಡು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪೊದೆ ಬೆಳೆದುಕೊಂಡಿದ್ದರಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಚಿರತೆ ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಚಿರತೆ ಬಹಿರಂಗವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಬೇಟೆಗಾಗಿ ಹರಸಾಹಸ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಚಿರತೆ ಹುಡುಕಾಟಕ್ಕಾಗಿ ಮೈಸೂರು ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿತ್ತು.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ವಿಶೇಷ ತಂಡದವರು ಚಿರತೆ ಪತ್ತೆಗಾಗಿ ಥರ್ಮಲ್ ಇಮೇಜ್ ಡ್ರೋಣ್ ಕ್ಯಾಮರಾ ಬಳಕೆ ಮಾಡಿ ಶೋಧ ನಡೆಸಿದ್ದರೂ ಚಿರತೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಬೆಳಿಗ್ಗೆ 10.30 ರ ಸಮಯದಲ್ಲಿ ಪಾಳು ಮನೆಯ ಪೊದೆ ಸಮೀಪ ಚಿರತೆ ದಿಢೀರ್ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಚಿರತೆಗೆ ಸ್ಪ್ರೇ ಮತ್ತು ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾದರು.

ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾದ ಪಶು ವೈದ್ಯಾಧಿಕಾರಿ ಹಾಗೂ ಅವರ ಜತೆಗಿದ್ದ ಅರಣ್ಯ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿ ಪರಾರಿಯಾಗಿದೆ. ತಕ್ಷಣ ಉಳಿದ ಸಿಬ್ಬಂದಿಗಳು ಚಿರತೆ ದಾಳಿಯಿಂದ ಗಾಯಗೊಂಡಿದ್ದ ಪಶುವೈದ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದಾಳಿಯ ನಂತರ ಮತ್ತೆ ಪೊದೆಯಲ್ಲಿ ಕಣ್ಮರೆಯಾಗಿರುವ ಚಿರತೆ ಬಂಧನಕ್ಕಾಗಿ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹುಡುಕಾಟ ಮುಂದುವರೆಸಿದ್ದಾರೆ.

ಕಾಂಗ್ರೆಸ್ ಒಳ ಬೇಗುದಿ ; ಸಿಎಂ-ಡಿಸಿಎಂ ಜೊತೆ ಸುರ್ಜೆವಾಲ ಮೀಟಿಂಗ್

ಬೆಂಗಳೂರು,ನ.1- ಆಪರೇಷನ್ ಕಮಲ ಹಾಗೂ ಪಕ್ಷದ ಒಳ ಬೇಗುದಿಗಳ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು ಅಖಾಡಕ್ಕಿಳಿದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದು, ರಾಜಕೀಯ ಪರಿಸ್ಥಿತಿಗಳ ಮೇಲೆ ತೀವ್ರ ನಿಗಾ ಇಟ್ಟು ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರ ಹೆಗಲಿಗೆ ಹೊರಿಸಲಾಗಿದೆ.

ಬಿಜೆಪಿ ಒಂದೆಡೆ ಆಪರೇಷನ್ ಕಮಲವನ್ನು ಚಾಲ್ತಿಯಲ್ಲಿಟ್ಟಿದ್ದು, ಹಲವಾರು ಮಂದಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಕೋಟ್ಯಂತರ ಹಣ ಹಾಗೂ ಅಧಿಕಾರದ ಆಮಿಷ ಒಡ್ಡಲಾಗುತ್ತಿದೆ. ಮತ್ತೊಂದೆಡೆ ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದವರು ಒಳಗೊಳಗೆ ಕುದಿಯುತ್ತಿದ್ದಾರೆ. ಈ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 30ಕ್ಕೂ ಹೆಚ್ಚು ಶಾಸಕರ ಜೊತೆ ದೀಪಾವಳಿ ಬಳಿಕ ದುಬೈ ಪ್ರವಾಸ ನಡೆಸಲಿದ್ದಾರೆ ಎಂಬ ವದಂತಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಒಂದು ವೇಳೆ ಸತೀಶ್ ಜಾರಕಿಹೊಳಿ ಪ್ರವಾಸ ಮಾಡಿದ್ದೇ ಆದರೆ ಅದು ಬೇರೆ ರೀತಿಯ ಸಂದೇಶ ರವಾನೆ ಮಾಡುತ್ತದೆ. ಗುಂಪುಗಾರಿಕೆ ಮತ್ತು ಬಣ ರಾಜಕೀಯಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂಬ ಆತಂಕ ಕಾಂಗ್ರೆಸಿಗರನ್ನು ಕಾಡುತ್ತಿದೆ. ಹೀಗಾಗಿ ಸತೀಶ್ ಜಾರಕಿಹೊಳಿಯವರ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಲು ಸಂಧಾನ ಸಭೆ ನಡೆಸಲು ಮುಖ್ಯಮಂತ್ರಿಯವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ರಣದೀಪ್ ಸಿಂಗ್ ಸುರ್ಜೆವಾಲ ಅವರ ಚರ್ಚೆ ನಡೆಸಿರುವ ಪ್ರಕಾರ ಯಾವುದೇ ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆಯ ತಂತ್ರ ಅನುಸರಿಸುತ್ತದೆ.

ಇದು ಮಹಾರಾಷ್ಟ್ರ , ಮಧ್ಯಪ್ರದೇಶ ಮಾದರಿಯಲ್ಲಿ ರಾಜಕೀಯ ಬೆಳವಣಿಗೆಗೆ ಕಾರಣವಾಗಬಹುದು. ಅಂಥ ಸಂದರ್ಭ ಬಂದರೆ ಸರ್ಕಾರವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಯಾವುದೇ ತ್ಯಾಗವನ್ನಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ಹೈಕಮಾಂಡ್ ತಾಕೀತು ಮಾಡಿದೆ ಎನ್ನಲಾಗಿದೆ.

ಅಧಿಕಾರ ಹಂಚಿಕೆ ಸೇರಿದಂತೆ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವವರಿಗೆ ಆಯಾ ಮುಖಂಡರು ಕಡಿವಾಣ ಹಾಕಬೇಕು. ಇಲ್ಲವಾದರೆ ಹೈಕಮಾಂಡ್‍ನ ಶಿಸ್ತು ಸಮಿತಿ ಮುಂದಿನ ಕ್ರಮ ಜರುಗಿಸಲಿದೆ.

ಪಕ್ಷದಲ್ಲಿ ಶಿಸ್ತು ಪಾಲನೆಯಾಗದೆ ಇದ್ದರೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ರೀತಿಯ ಗೊಂದಲಗಳು ಅನಗತ್ಯ. ಹೀಗಾಗಿ ಎಲ್ಲರೂ ತಮ್ಮ ಸೀಮಿತ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ನಿರ್ದೇಶಿತ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೈಕಮಾಂಡ್‍ನ ಎಚ್ಚರಿಕೆಯನ್ನು ಸುರ್ಜೆವಾಲ ರಾಜ್ಯ ನಾಯಕರಿಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಅಧಿವೇಶನಕ್ಕೆ ಬಿಜೆಪಿ ಶಾಸಕಾರು ಗೈರು..?

ಬೆಂಗಳೂರು,ನ.1- ಕೂಡಲೇ ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾಗುವುದಾಗಿ ಬಿಜೆಪಿ ಶಾಸಕರು ಬೆದರಿಕೆ ಹಾಕಿದ್ದಾರೆ. ಮಂಗಳವಾರ ಸಂಜೆ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಶಾಸಕರು ಬೆಳಗಾವಿ ಅಧಿವೇಶನ ಆರಂಭವಾಗುವುದರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸದನಕ್ಕೆ ಹೋಗುವುದೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ನಾವು ವರಿಷ್ಠರ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಆದರೆ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಆರು ತಿಂಗಳು ಮುಗಿಯುತ್ತಾ ಬಂದಿದೆ. ಈವರೆಗೂ ವಿಧಾನಸಭೆ ಹಾಗೂ ವಿಧಾನಪರಿಷತ್‍ಗೆ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿಲ್ಲ ಎಂದರೆ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾದರೂ ಹೇಗೆ ಎಂದು ಬಿಎಸ್‍ವೈ ಬಳಿ ಅನೇಕ ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಆಡಳಿತ ಪಕ್ಷದವರು ಪ್ರತಿ ಹಂತದಲ್ಲೂ ನಮ್ಮನ್ನು ಸದನದ ಒಳಗೆ ಮತ್ತು ಹೊರಗೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲದವರು ಎಂದು ಟೀಕಿಸುತ್ತಾರೆ. ಒಂದೊಂದು ವೈಫಲ್ಯವನ್ನು ಮುಂದಿಡಲು ಮುಂದಾಗುತ್ತಿದ್ದಂತೆ ಈ ಪ್ರಶ್ನೆಯನ್ನೇ ಮುಂದಿಟ್ಟು ನಮ್ಮ ಬಾಯಿ ಮುಚ್ಚಿಸುತ್ತಾರೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.

ಶಾಸಕರ ನೋವಿಗೆ ದನಿಗೂಡಿಸಿರುವ ಯಡಿಯೂರಪ್ಪ , ಹಿಂದೆ ನಾನು ದೆಹಲಿಗೆ ಭೇಟಿ ನೀಡಿದ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತಕ್ಷಣವೇ ವಿಧಾನಸಭೆ ಹಾಗೂ ಪ್ರತಿಪರಿಷತ್‍ಗೆ ಸೂಕ್ತರಾದವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಯ್ಕೆ ಮಾಡುವ ಆಶ್ವಾಸನೆ ಕೊಟ್ಟಿದ್ದರು. ಆದರೂ ಈಗಲೂ ಮಾಡದಿರುವುದು ವೈಯಕ್ತಿಕವಾಗಿ ನನಗೂ ಬೇಸರ ತಂದಿದೆ ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಅಧಿಕಾರ ಅವಧಿ ಮುಗಿದು ಹಲವು ತಿಂಗಳೇ ಕಳೆದಿದೆ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅರ್ಹರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಮನವಿ ಮಾಡಲಾಗಿತ್ತು. ಇದರ ಬಗ್ಗೆಯೂ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಸರ್ಕಾರವನ್ನು ಪ್ರಶ್ನಿಸಲು ಅನೇಕ ಹಗರಣಗಳಿವೆ. ಸದನದಲ್ಲಿ ನಾವು ಇದರ ಬಗ್ಗೆ ಗಟ್ಟಿಯಾಗಿ ದನಿ ಎತ್ತಬೇಕು. ಆದರೆ ನಮ್ಮಲ್ಲಿ ಪ್ರತಿಪಕ್ಷದ ನಾಯಕ ಇಲ್ಲದಿರುವಾಗ ನಾವು ಯಾರ ಸಾರಥ್ಯದಲ್ಲಿ ಸದನದೊಳಗೆ ಹೋರಾಟ ನಡೆಸಬೇಕು ಎಂಬುದೇ ಗೊತ್ತಾಗುತ್ತಿಲ್ಲ.

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಎಷ್ಟು ದಿನ ನಾವು ಸದನದಲ್ಲಿ ಸರ್ಕಾರದಿಂದ ಕುಹುಕ, ವ್ಯಂಗ್ಯ ಮಾತುಗಳನ್ನು ಕೇಳಬೇಕು, ಸದನದಲ್ಲಿ ಸ್ವಾಭಿಮಾನ ಬಿಟ್ಟು ಕೂರಬೇಕೆ ಎಂದು ಬಿಎಸ್‍ವೈ ಬಳಿ ಬೆಂಗಳೂರಿನ ಹಿರಿಯ ಶಾಸಕರೊಬ್ಬರು ನೋವು ಹೊರಹಾಕಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಅವೇಶನ ಮುಗಿದಿದೆ. ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದಿದ್ದರೆ ಬೆಳಗಾವಿ ಅವೇಶನಕ್ಕೆ ಹೋಗುವುದರಲ್ಲಿ ಅರ್ಥವೇ ಇಲ್ಲ. ತಕ್ಷಣವೇ ದೆಹಲಿ ನಾಯಕರ ಬಳಿ ಚರ್ಚಿಸಿ ಇದಕ್ಕೊಂದು ಅಂತ್ಯ ಹಾಡಬೇಕೆಂದು ಶಾಸಕರು ಕೇಳಿಕೊಂಡಿದ್ದಾರೆ.

ನವೆಂಬರ್ ತಿಂಗಳ ಅಂತ್ಯದೊಳಗೆ ಈ ಪ್ರಕ್ರಿಯೆ ಮುಗಿಯದಿದ್ದರೆ ಬೆಳಗಾವಿ ಅಧಿವೇಶನಕ್ಕೆ ನಾವು ಹೋಗುವುದೇ ಇಲ್ಲ. ನಮ್ಮನ್ನು ಮುಜುಗರ ಮಾಡಬೇಕೆಂಬ ಉದ್ದೇಶ ರಾಷ್ಟ್ರೀಯ ನಾಯಕರಿಗಿದ್ದರೆ ನಾವು ಏನೂ ಮಾಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಶಾಸಕರು ಇದರ ಬಗ್ಗೆ ಬಹಿರಂಗ ಹೇಳಿಕೆ ಕೊಡುವ ಅಗತ್ಯವಿಲ್ಲ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ನಾನೇ ದೆಹಲಿಗೆ ತೆರಳಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಬಿಎಸ್‍ವೈ ಶಾಸಕರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.