Home Blog Page 1860

ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್‍ಗೆ ಜಾಮೀನು

ಬೆಂಗಳೂರು, ಅ.27- ಹುಲಿ ಉಗುರು ಧರಿಸಿದ್ದಾರೆಂಬ ಆರೋಪದ ಮೇರೆಗೆ ಅರಣ್ಯಾಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಬಿಗ್‍ಬಾಸ್ ಸ್ರ್ಪಧಿ ವರ್ತೂರು ಸಂತೋಷ್ ಹಳ್ಳಿಕಾರ್‍ಗೆ ಜಾಮೀನು ಮಂಜೂರಾಗಿದೆ. 4 ಸಾವಿರ ರೂ. ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಬೆಂಗಳೂರಿನ ಎರಡನೆ ಎಸಿಜೆಎಂ ನ್ಯಾಯಾಲಯ ಆದೇಶಿಸಿ ಜಾಮೀನು ಮಂಜೂರು ಮಾಡಿದೆ.

ಬಿಗ್‍ಬಾಸ್ ಸ್ರ್ಪಧಿಯಾಗಿ ವರ್ತೂರು ಸಂತೋಷ್ ಭಾಗವಹಿಸಿದ್ದರು. ಸಂತೋಷ್ ಹುಲಿ ಉಗುರು ಪೆಂಡೆಂಟ್ ಹೊಂದಿರುವ ಸರ ಧರಿಸಿದ್ದಾರೆಂದು ಅರಣ್ಯಾಧಿಕಾರಿಗಳು ಬಿಗ್‍ಬಾಸ್ ಮನೆಯಿಂದಲೇ ಸಂತೋಷ್ ಅವರನ್ನು ಬಂಧಿಸಿ ಕರೆದೊಯ್ದಿದ್ದರು.

ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ಇದೀಗ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬ್ರೇಕಿಂಗ್ : ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು,ಅ.27- ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹುಲಿ ಉಗುರು ಪ್ರಸಂಗಗಳ ಕುರಿತಂತೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಜನತೆಗೆ ಸಮಸ್ಯೆಯಾಗದಂತೆ ತಿಳಿ ಹೇಳೀ ಕಾನೂನು ಕ್ರಮದಿಂದ ಪಾರಾಗಲು ಹೊಸ ಆಲೋಚನೆ ಮಾಡಿದೆ.

ರಾಜ್ಯಾದ್ಯಂತ ಹಲವು ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳು, ಚಿತ್ರರಂಗದ ತಾರೆಯರು, ರಾಜಕಾರಣಿಗಳಿಗೆ ಹೊಸ ಫಜೀತಿಯಾಗಿರುವ ಇದನ್ನು ಸರಿಮಾಡಲು ಅರಣ್ಯ ಸಚಿವಾಲಯ ವನ್ಯಪ್ರಾಣಿಗಳ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ ನೀಡಲು ಸಮಯ ಅವಕಾಶ ನೀಡುವ ಯೋಜನೆಯನ್ನು ರೂಪಿಸುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೆಲವರು ಹುಲಿ ಉಗುರು, ಜಿಂಕೆ ಕೊಂಬು, ಕೆಲವು ವನ್ಯಪ್ರಾಣಿಗಳ ಚರ್ಮಗಳನ್ನು ಬಳಸುತ್ತಿದ್ದರು. ಕಾಲ ಕಳೆದಂತೆ ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕಾಗಿ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಆದರೆ ಇದರ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ ಮತ್ತು ಜಾಗೃತಿ ಮೂಡಿಸುವ ಕಾರ್ಯಗಳು ಕೂಡ ಅಷ್ಟಾಗಿ ನಡೆದಿಲ್ಲ.

ಪ್ರಸ್ತುತ ಪ್ರಗತಿಪರ ರೈತ ವರ್ತೂರ್ ಸಂತೋಷ್ ಬಂಧನದ ನಂತರ ರಾಜ್ಯಾದ್ಯಂತ ಸಂಚಲ ಸೃಷ್ಟಿಯಾಗಿದ್ದು, ಈಗಾಗಲೇ ಹಲವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗಳು ಕೂಡ ಸೃಷ್ಟಿಯಾಗುತ್ತಿದೆ.
ಇದೆಲ್ಲದರ ಮನಗಂಡು ಸರ್ಕಾರ ಸದ್ಯಯಾರನ್ನು ಬಂಸುವುದು ಬೇಡ. ಅವರಿಗೆ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡುವ ಕ್ರಮಕ್ಕೆ ಮುಂದಾಗಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೂಡ ಈಗ ಯಾರನ್ನು ಬಂಸಬೇಕೆಂಬುದು, ಕಾನೂನು ಕ್ರಮ ಕೈಗೊಳ್ಳುವುದು ತನಿಖಾಕಾಧಿರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸುವ ಮೂಲಕ ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿದರು.

ಹಲವು ಸಚಿವರು ಹಾಗೂ ಶಾಸಕರ ಮನವಿಯಂತೆ ಸರ್ಕಾರ ಹೊಸದಾಗಿ ಅಭಿಯಾನ ಆರಂಭಿಸಿ ಯಾರ್ಯಾರ ಬಳಿ ಹುಲಿ ಉಗುರಾಗಲಿ, ಇತರೆ ಕಾನೂನು ವಿರೋ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸುವ ಅವಕಾಶವನ್ನು ನೀಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾರ್ವಜನಿಕರಿಗೆ ನಿಗದಿತ ಸಮಯ ಹಾಗೂ ಯಾವ ಕಚೇರಿಗಳಲ್ಲಿ ಇದನ್ನು ಒಪ್ಪಿಸಬೇಕು ಎಂಬುದರ ಬಗ್ಗೆಯೂ ರೂಪುರೇಷೆ ಸಿದ್ದಪಡಿಸಲು ಅಧಿಕಾರಿ ವಲಯದಲ್ಲಿ ಕೂಡ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಸರ್ಕಾರ ಯಾವ ಯಾವ ನಿಯಮಗಳನ್ನು ಮುಂದಿಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

BIG NEWS : ಧರ್ಮದ ಹೆಸರಲ್ಲಿ 2ನೇ ಮದುವೆಗೆ ನಿರ್ಬಂಧ

ಗುವಾಹಟಿ,ಅ.27- ಇನ್ನುಮುಂದೆ ಸರ್ಕಾರಿ ನೌಕರರು ಅನುಮತಿ ಪಡೆಯದೇ ಎರಡನೇ ವಿವಾಹವಾಗುವುದು ಶಿಕಾರ್ಹ ಅಪರಾಧ. ಏಕೆಂದರೆ ಅಸ್ಸಾಂ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಹೊಸ ಕಾನೂನಿನ ಪ್ರಕಾರ ಪತ್ನಿ ಜೀವಂತ ಇರುವಾಗಲೇ ಸರ್ಕಾರಿ ನೌಕರರು 2ನೇ ಮದುವೆಯಾಗುವುದಕ್ಕೆ ನಿರ್ಬಂಧ ಹಾಕಲಾಗಿದೆ.

ಒಂದು ವೇಳೆ ಧರ್ಮವು 2ನೇ ವಿವಾಹಕ್ಕೆ ಅನುಮತಿಸಿದರೂ ಸರ್ಕಾರದ ಒಪ್ಪಿಗೆ ಇಲ್ಲದೆ ವಿವಾಹವಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ ಹೇಳಿದ್ದಾರೆ.

ಧರ್ಮ ಹೇಳಿದೆ ಎಂಬ ಕಾರಣಕ್ಕಾಗಿ ಮೊದಲನೇ ಪತಿ ಜೀವಂತವಾಗಿರುವಾಗಲೇ 2ನೇ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರದಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಇದು ಯಾವುದೇ ಒಂದು ಧರ್ಮದ ವಿರುದ್ಧ ತೆಗೆದುಕೊಂಡಿರುವ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಸಾಧನೆ

ಮುಸ್ಲಿಂ ಪುರುಷರು ಇಬ್ಬರು ಮಹಿಳೆಯರನ್ನು ಮದುವೆಯಾಗುವ ಪ್ರಕರಣಗಳು ಮತ್ತು ನಂತರ ಇಬ್ಬರೂ ಪತ್ನಿಯರು ಒಂದೇ ವ್ಯಕ್ತಿಯ ಪಿಂಚಣಿಗಾಗಿ ಹೋರಾಡುವ ಪ್ರಕರಣಗಳನ್ನು ನಾವು ಕಾಣುತ್ತೇವೆ. ಈ ಕಾನೂನು ಈಗಾಗಲೇ ಇತ್ತು, ಈಗ ನಾವು ಅದನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು 58 ವರ್ಷಗಳ ಹಿಂದೆ ಸ್ಥಾಪಿಸಲಾದ ಅಸ್ಸಾಂನ ನಾಲ್ಕು ಲಕ್ಷ-ಬಲವಾದ ಉದ್ಯೋಗಿಗಳ ಸೇವಾ ನಿಯಮವನ್ನು ನೆನಪಿಸುತ್ತದೆ, ಅದು ಮೊದಲ ಪತ್ನಿ ಜೀವಂತವಾಗಿರುವವರೆಗೆ ಸರ್ಕಾರದ ಒಪ್ಪಿಗೆಯಿಲ್ಲದೆ ಯಾರನ್ನಾದರೂ ಎರಡನೇ ಬಾರಿಗೆ ಮದುವೆಯಾಗುವುದನ್ನು ನಿರ್ಬಂಧಿಸುತ್ತದೆ. ಮುಸ್ಲಿಮರನ್ನು ಉಲ್ಲೇಖಿಸದೆ, ವೈಯಕ್ತಿಕ ಕಾನೂನಿನಿಂದ ಅನುಮತಿ ಪಡೆದ ಪುರುಷರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಅಂತೆಯೇ, ಯಾವುದೇ ಮಹಿಳಾ ಸರ್ಕಾರಿ ನೌಕರರು ಮೊದಲು ಸರ್ಕಾರದ ಅನುಮತಿಯನ್ನು ಪಡೆಯದೆ ವಾಸಿಸುವ ಪತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ಆಫೀಸ್ ಮೆಮೊರಾಂಡಮ್ ಹೇಳಿದೆ.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ಅಕ್ಟೋಬರ್ 20 ರಂದು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅವರು ಅಧಿಸೂಚನೆ ಹೊರಡಿಸಿದ್ದರು, ಆದರೆ ಅದು ಗುರುವಾರ ಬೆಳಕಿಗೆ ಬಂದಿದೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ.

ಮೇಲಿನ ನಿಬಂಧನೆಗಳ ಸಂದರ್ಭದಲ್ಲಿ, ಶಿಸ್ತಿನ ಪ್ರಾಧಿಕಾರವು ತಕ್ಷಣದ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು…ಕಡ್ಡಾಯ ನಿವೃತ್ತಿ ಸೇರಿದಂತೆ ಪ್ರಮುಖ ದಂಡವನ್ನು ವಿಧಿಸಲು, ಆದೇಶವು ಹೇಳಿದೆ. ಸಮಾಜದ ಮೇಲೆ ದೊಡ್ಡ ಬೇರಿಂಗ್ ಹೊಂದಿರುವ ಸರ್ಕಾರಿ ನೌಕರನ ಕಡೆಯಿಂದ ಇಂತಹ ಅಭ್ಯಾಸವನ್ನು ಇದು ಒಂದು ದೊಡ್ಡ ದುರ್ನಡತೆ ಎಂದು ಬಣ್ಣಿಸಿದೆ. ಇಂತಹ ಪ್ರಕರಣಗಳು ಪತ್ತೆಯಾದಾಗಲೆಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಫೀಸ್ ಮೆಮೊರಾಂಡಮ್ ಕೇಳಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

ಬೆಳಗಾವಿ,ಅ.27- ಹುಲಿ ಉಗುರಿನ ಪ್ರಕರಣಗಳು ದಿನಕ್ಕೊಂದರಂತೆ ಹೊರ ಬರುತ್ತಿದ್ದು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಸಚಿವೆಯ ಪುತ್ರ ಮೃಣಾಲ್ ಪುತ್ರ ಹುಲಿಉಗುರಿನ ಮಾದರಿಯ ಪೆಂಟೆಂಡ್ ಸರವನ್ನು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಕುರಿತು ಇಂದು ಬೆಳಗ್ಗೆ ಅರಣ್ಯ ಇಲಾಖೆಯ ಡಿಎಫ್‍ಓ ಶಂಕರ್ ಕಲ್ಲೋಳಿಕರ್, ಎಸಿಎಫ್ ಸುರೇಶ್ ತೇಲಿ ಸೇರಿ, 15 ರಿಂದ 20 ಅಧಿಕಾರಿಗಳು ಬೆಳಗಾವಿಯ ಕುವೆಂಪು ನಗರದಲ್ಲಿರುವ ಮೃಣಾಲ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೂರವಾಣಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಶೀಲನೆ ನಡೆಸಿ ನ್ಯಾಯ ರೀತಿ ಕ್ರಮಗಳನ್ನು ಮುಂದುವರೆಸುವಂತೆ ಸಲಹೆ ನೀಡಿದರು ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ಹುಲಿ ಪೆಂಡೆಂಟ್ ಎಲ್ಲಿಂದ ಬಂತು, ಯಾರು ನೀಡಿದ್ದಾರೆಂದು ಅರಣ್ಯ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಎಷ್ಟು ವರ್ಷದಿಂದ ಪೆಂಡೆಂಟ್ ಧರಿಸಿದ್ದೀರಿ ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿರುವ ಮೃಣಾಲ್ ನನ್ನ ಮದುವೆಯಲ್ಲಿ ಸಂಬಂಧಿಕರು ಉಡುಗೊರೆ ನೀಡಿದ್ದು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಪ್ಲಾಸ್ಟಿಕ್‍ದು ಎಂಬ ಕಾರಣಕ್ಕೆ ಹಾಕಿಕೊಳ್ತಿದ್ದೆ ಎಂದಿದ್ದಾರೆ ಎಂದು ತಿಳಿಸಲಾಗಿದೆ.

ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಅಧಿಕಾರಿ, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮೃಣಾಲ್ ಧರಿಸಿರುವ ಪೆಟೆಂಟ್ ಅನ್ನು ಪರಿಶೀಲಿಸಿದ್ದೇವೆ. ಅದರ ಉದ್ದ, ಅಗಲ, ತೂಕ ಲೆಕ್ಕ ಹಾಕಲಾಗಿದೆ. ಅದರೊಂದಿಗಿನ ಬಂಗಾರದ ಸರವನ್ನು ಬೇರ್ಪಡಿಸಿದ ಬಳಿಕ ಎಫ್‍ಎಸ್‍ಎಲ್ ಗೆ ಕಳುಹಿಸುತ್ತೇವೆ. ಅಲ್ಲಿಂದ ವರದಿ ನಂತ ಅಧಿಕೃತ ಪ್ರತಿಕ್ರಿಯೆ ನೀಡಲಾಗುವುದು ಎಂದಿದ್ದಾರೆ.

ನಿನ್ನೆ ಮಾಧ್ಯಮದಲ್ಲಿ ತೋರಿಸಿರುವ ಪೆಟೆಂಟ್ ಮೃಣಾಳ್ ಅವರ ತೋಳಿನಲ್ಲಿರುವುದು ಗಮನಕ್ಕೆ ಬಂದಿದೆ. ಅದರ ಬಗ್ಗೆ ಹೇಳಿಕೆ ಪಡೆದಿದ್ದೇವೆ. ಸಚಿವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ. ಯಾವ ರೀತಿಯ ತನಿಖೆ ಅಗತ್ಯವೂ ಅದನ್ನು ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. ಇಂದು ಸಚಿವರು ಮನೆಯಲ್ಲಿ ಇಲ್ಲ. ವಿಚಾರಣೆಗೆ ಪುತ್ರನೊಂದಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.

ಈ ನಡುವೆ ಬೇರೆ ಕಡೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ್ ಬಳಿ ಇರುವುದು ನಿಜವಾದ ಹುಲಿ ಉಗುರಲ್ಲ. ಮದುವೆ ಸಂದರ್ಭದಲ್ಲಿ ಸಂದರ್ಭದಲ್ಲಿ ಸಂಬಂಧಿಕರು ಆ ಡಾಲರ್ ಅನ್ನು ಉಡುಗೊರೆ ನೀಡಿದ್ದರು. ಅದು ಪ್ಲಾಸ್ಟಿಕ್‍ನದು ಎಂದರು.

ನಾನು ಶುದ್ಧ ಸಸ್ಯಹಾರಿ, ಪ್ರಾಣಿ ಹತ್ಯೆಯನ್ನು ವಿರೋಧಿಸುತ್ತೇನೆ. ಇನ್ನೂ ಹುಲಿ ಉಗುರು ಧರಿಸುವುದನ್ನು ಹೇಗೆ ಸಹಿಸಲಿ. ಇಷ್ಟಕ್ಕೂ ಈಗಿನ ಕಾಲದಲ್ಲಿ ನಿಜವಾದ ಹುಲಿ ಉಗುರು ಎಲ್ಲಿ ದೊರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಈ ಮಧ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯನೂ ಆಗಿರುವ ಹುಬ್ಬಳ್ಳಿಯ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೂಡ ಮೃಣಾಲ್ ಮಾದರಿಯ ಪೆಟೆಂಟ್ ಧರಿಸಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ರಜತ್, ಮದುವೆ ಸಂದರ್ಭದಲ್ಲಿ ಫೋಟೋ ಶೂಟ್‍ಗಾಗಿ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲಾಗಿತ್ತು. ಅವರು ಕಾಸ್ಟೊಮ್ ವಿನ್ಯಾಸಗೊಳಿಸುವಾಗ ಸಿಂಥೆಟಿಕ್‍ನ ಹುಲಿ ಉಗುರಿನ ಮಾದರಿಯನ್ನು ನೀಡಿದ್ದರು. ಅದು ಈಗಲೂ ನನ್ನ ಬಳಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಳಿದರೆ ಹಾಜರು ಪಡಿಸುತ್ತೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ನನ್ನ ಮತ್ತು ಮೃಣಾಲ್ ಅವರ ಮದುವೆ 10 ರಿಂದ 12 ದಿನಗಳ ಅಂತರದಲ್ಲಿ ನಡೆದಿತ್ತು. ಇಬ್ಬರಿಗೂ ಒಂದೇ ಸಂಸ್ಥೆಯವರು ಆ ಸರ ನೀಡಿದ್ದರು. ಬಹುಶಃ ಮೃಣಾಲ್ ಬಳಿ ಇರುವುದು ಸಿಂಥೆಟಿಕ್ ಸ್ವರೂಪದ್ದಾಗಿರಬಹುದು. ವನ್ಯ ಜೀವಿ ಕಾಯ್ದೆ 1972ರಲ್ಲಿ ಬಂದಿದೆ. ಆಗಿನನ್ನೂ ನಾವು ಹುಟ್ಟೆ ಇರಲಿಲ್ಲ. ನಮಗೆ ಪ್ರಾಣಿಗಳ ಮೇಲೆ ಪ್ರೀತಿ ಇದೆ. ಗೋತ್ತಿದ್ದೋ ಗೋತ್ತಿಲ್ಲದೆಯೋ ಹುಲಿ ಉಗುರಿನ ಮಾದರಿಯನ್ನು ಧರಿಸಿ ತಪ್ಪು ಮಾಡಿದ್ದೇವೆ. ಅರಣ್ಯ ಇಲಾಖೆ ಅಕಾರಿಗಳು ಸೂಚನೆ ನೀಡಿದರೆ ಅದನ್ನು ಹಾಜರು ಪಡಿಸುತ್ತೇವೆ. ರಾಜಕೀಯ ಕಾರಣಕ್ಕೆ ಇತ್ತೀಚೆಗೆ ಇದು ವ್ಯಾಪಕ ಚರ್ಚೆಯಾಗುತ್ತಿದೆ ಎಂದರು.

ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ಬೆಂಗಳೂರು, ಅ.27- ಪಿಎಚ್‍ಡಿ ಪದವಿ ಪಡೆಯದ ಎಲ್ಲಾ ಅರ್ಹ ಸಹಾಯಕ ಪ್ರಾಧ್ಯಾಪಕರು ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೆರೆ.

ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದಿರುವ ಗೌಡರು, ಡಿಸೆಂಬರ್ 31ರ ವರೆಗೆ ಪಿಎಚ್‍ಡಿ ಪದವಿ ಪಡೆಯದ ಅರ್ಹರಾಗಿರುವ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೂ ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಪರಿಗಣಿಸಬೇಕು ಎಂದು ಕೋರಿದ್ದಾರೆ.

ಇದಕ್ಕಾಗಿ ಭಾರತ ಸರ್ಕಾರ ಜುಲೈ 31ರಂದು ಹೊರಡಿಸಿರುವ ಗೆಜೆಟ್‍ನಲ್ಲಿನ ಪಾಯಿಂಟ್ ಸಂಖ್ಯೆ 6.3ರಲ್ಲಿ ಮುಂಬಡ್ತಿ ಪಡೆಯಲು ವಿನಾಯಿತಿ ನೀಡಲಾಗಿದೆ. ಆದರೆ, 2019ರ ಜುಲೈ 17ರಂದು ಹೊರಡಿಸಿರುವ ಷರತ್ತುಗಳು ಅನ್ವಯಿಸಿರುವುದು ಪದೋನ್ನತಿ ಪಡೆಯಲು ಅಡ್ಡಿಯಾಗುತ್ತಿದೆ. ಅಲ್ಲದೆ, ಅಸ್ಪಷ್ಟತೆಯಿಂದ ಕೂಡಿದೆ. ಆರು ತಿಂಗಳ ಅವಗೆ ಮಾತ್ರ ಎಂಬ ಷರತ್ತು ಅನ್ವಯವಾಗುವುದರಿಂದ ಬಹಳಷ್ಟು ಅರ್ಹ ಬೋಧಕ ವರ್ಗಕ್ಕೆ ಪದೋನ್ನತಿ ಪಡೆಯುವ ಅವಕಾಶ ತಪ್ಪುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿಲ್ಲಾರೆ.

ಚೀನಾ 2ನೇ ಮಹಾನಾಯಕನ ಸಾವಿಗೆ ದಿಗ್ಬ್ರಮೆ

ಪದೋನ್ನತಿ ಪಡೆಯುವ ಅವಯನ್ನು ಡಿ.31ರವರೆಗೆ ಈಗಾಗಲೇ ವಿಸ್ತರಿಸಿರುವುದರಿಂದ ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳನ್ನು ಸಡಿಲಿಕೆ ಮಾಡಿ ಯುಜಿಸಿ ನಿಯಮಗಳಿಗೆ ಸೂಕ್ತ ಮಾರ್ಪಾಡು ಮಾಡಬೇಕು. ಈ ರೀತಿ ಮಾಡುವುದರಿಂದ ಶೈಕ್ಷಣಿಕವಾಗಿ ಎಲ್ಲಾ ಅರ್ಹ ಬೋಧಕವರ್ಗದವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

“ನೌಕಾಪಡೆ ಮಾಜಿ ಅಧಿಕಾರಿಗಳ ಮರಣದಂಡನೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ”

ಬೆಂಗಳೂರು,ಅ.27- ಭಾರತದ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯ ಮರಣದಂಡನೆ ಘೋಷಿಸಿರುವುದನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಭಾರತದ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದು ಆಘಾತಕಾರಿ ಸುದ್ದಿ. ಆದರೆ ಗೋಪ್ಯತೆಯ ಕಾರಣ ನೀಡಿ ಕೇಂದ್ರ ಸರ್ಕಾರ ಇದೊಂದು ಸಾಮಾನ್ಯ ಪ್ರಕರಣ ಎಂದು ತೇಪೆ ಹಾಕುತ್ತಿದೆ. ಭಾರತದ ನೌಕಪಡೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ ವಿದೇಶಿ ನ್ಯಾಯಾಲಯ ಮರಣ ದಂಡನೆ ವಿಧಿಸಿರುವುದು ಸಾಮಾನ್ಯ ಪ್ರಕರಣವೆ?

ಭಾರತದ ನೌಕಾಪಡೆಯ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯ ಕುರಿತು ಕೇವಲ ಪ್ರಾಥಮಿಕ ಮಾಹಿತಿಯಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಕೇಂದ್ರ ಸರ್ಕಾರದ ರಾಜತಾಂತ್ರಿಕ ವೈಫಲ್ಯವಲ್ಲವೆ ? ಗಲ್ಲು ಶಿಕ್ಷೆಗೊಳಗಾದ ನೌಕಾಪಡೆಯ ಸಿಬ್ಬಂದಿಗಳು ಕಳೆದ 1 ವರ್ಷದಿಂದ ಕತಾರ್ ಜೈಲಿನಲ್ಲಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಏನು ಮಾಡುತಿತ್ತು ಎಂದು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ನೌಕಾದಳದ 8 ಮಾಜಿ ಅಧಿಕಾರಿಗಳಿಗೆ ಕತಾರ್ ಮರಣ ದಂಡನೆ ವಿಧಿಸಿರುವುದು ಇಡೀ ದೇಶವೇ ಕಳವಳ ಪಡುವ ವಿಚಾರ. ಇಸ್ರೇಲ್-ಪ್ಯಾಲೆಸ್ಟೇನ್ ನಡುವಿನ ಸಂಘರ್ಷದ ಹೊತ್ತಿನಲ್ಲೇ ಈ ತೀರ್ಪು ಬಂದಿರುವುದು ಚಿಂತಿಸಬೇಕಾದ ವಿಚಾರ. ದೇಶಕ್ಕೆ ಸೇವೆ ಸಲ್ಲಿಸಿದವರು ವಿದೇಶಿ ನೆಲದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸೂಕ್ಷ್ಮವಾಗಿ ವರ್ತಿಸಬೇಕು.

ಕತಾರ್ ನ್ಯಾಯಾಲಯದ ತೀರ್ಪಿನಿಂದ ಗಲ್ಲುಶಿಕ್ಷೆಗೆ ಗುರಿಯಾದ ನೌಕಾದಳದ ಸಿಬ್ಬಂದಿಗಳ ಕುಟುಂಬವಷ್ಟೇ ಅಲ್ಲ, ಇಡೀ ದೇಶವೇ ಆತಂಕಕ್ಕೀಡಾಗಿದೆ. ಕೇಂದ್ರ ಸರ್ಕಾರ ಗೋಪ್ಯತೆಯ ಸಬೂಬು ಹೇಳಿ ಕೈ ಚೆಲ್ಲಿ ಕುಳಿತರೆ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವೇ ಸ್ವತಃ ಕೈಯ್ಯಾರೆ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಕೇಂದ್ರ ಈ ಪ್ರಕರಣದ ಸೂಕ್ಷ್ಮತೆ ಅರಿತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ : ಪರಮೇಶ್ವರ್

ಬೆಂಗಳೂರು, ಅ.27- ಮೈತ್ರಿ ಸರ್ಕಾರ ಪತನಗೊಳ್ಳುವ ಮುನ್ನಾ ಆಗಿನ ಉಪಮುಖ್ಯಮಂತ್ರಿ ಪರಮೇಶ್ವರ್ ಮನೆಯಲ್ಲಿ ಸಭೆ ನಡೆದು, ಕೆಲ ಶಾಸಕರು ತಿಂಡಿ ತಿಂದು ಹೊರಟರು ಎಂಬುದು ಆಧಾರ ರಹಿತ ಆರೋಪ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವ ಸಭೆಗಳು ನಡೆದಿಲ್ಲ. ಶಾಸಕರು ಸಚಿವರ ಮನೆಗೆ ಬರುವುದು ಸ್ವಾಭಾವಿಕ. ಆದರೆ ನಮ್ಮ ಮನೆಯಲ್ಲಿ ಸರ್ಕಾರ ಪತನಗೊಳಿಸುವಂತಹ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಹೇಳಿದ ಎಲ್ಲಾದಕ್ಕೂ ಉತ್ತರ ನೀಡುವ ಅಗತ್ಯ ಇಲ್ಲ. ಈಗಾಗಲೇ ರಾಜ್ಯದ ಜನ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೂ ಹಾಗೂ ನಮ್ಮ ಅಹವಾಲಿಗೂ ಉತ್ತರ ಸಿಕ್ಕಿದೆ ಎಂದರು.

ವನ್ಯಜೀವಿಗಳ ವಸ್ತುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಕೋಮುವಾದದ ಒಡಕು ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವರು, ದೇಶದಲ್ಲಿರುವ ಕಾನೂನು ಎಲ್ಲರಿಗೂ ಒಂದೆ ಯಾವುದೇ ಜಾತಿ, ಧರ್ಮ ಪ್ರತ್ಯೇಕವಾಗಿರುವುದಿಲ್ಲ. ಎಲ್ಲರಿಗೂ ಏಕರೂಪವಾಗಿಯೇ ಅನ್ವಯವಾಗುತ್ತದೆ. ವನ್ಯ ಜೀವಿಗಳ ವಸ್ತುಗಳನ್ನು ವಾಪಾಸ್ ನೀಡಲು ಮತ್ತೊಮ್ಮೆ ಅವಕಾಶ ನೀಡುವ ಬಗ್ಗೆ ಸಚಿವರು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅಂತಹ ವಸ್ತುಗಳನ್ನು ಯಾರೇ ಇಟ್ಟುಕೊಂಡಿದ್ದರೂ ನಿಗದಿತ ಅವಯಲ್ಲಿ ವಾಪಾಸ್ ನೀಡಬೇಕು. ಇಲ್ಲವಾದರೆ ಕ್ರಮ ಜರುಗಿಸಲಾಗುತ್ತದೆ. ದರ್ಗಾದಲ್ಲಿ ನವೀಲುಗರಿಗಳಿದ್ದರೆ ಅದರ ವಿರುದ್ಧವೂ ಕ್ರಮಗಳಾಗುತ್ತವೆ ಎಂದರು.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಪೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹಗರಣದ ಆರೋಪಿ ಶ್ರೀಕಿ ಪರ ವಕೀಲರು ಒಂದನೇ ಎಸಿಎಂಎಂ ನ್ಯಾಯಾಲಯಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಬಿಟ್ ಕಾಯಿನ್ ತನಿಖೆ ನಡೆಸುತ್ತಿರುವ ಪ್ರತಿ ಅಕಾರಿಗೂ ಬಹಳ ಎಚ್ಚರಿಕೆಯಿಂದ ಇರಬೇಕು ಹಾಗೂ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಹೇಳಿದ್ದೇವೆ.

ಅದರಲ್ಲಿರುವ ಅಧಿಕಾರಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ತನಿಖಾ ತಂಡದಿಂದ ಕೈ ಬಿಡುತ್ತೇವೆ. ಅತಂಹವರನ್ನು ಇಟ್ಟುಕೊಂಡು ತನಿಖೆ ಮಾಡುವುದಿಲ್ಲ ಎಂದರು.

ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ವಿದೇಶ ಪ್ರವಾಸ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಸ್ವಂತ ದುಡ್ಡಿನಲ್ಲಿ ತಾನೇ ವಿದೇಶ ಪ್ರವಾಸ ಮಾಡುತ್ತಾರೆ. ಹೋಗಲಿ ಬಿಡಿ, ಖುಷಿಯಾಗಿ ಪ್ರವಾಸ ಮಾಡಿ ಸಂಭ್ರಮಿಸಿ ಬರಲಿ. ನಾಲ್ಕು ಮಂದಿ ಶಾಸಕರು ಪ್ರವಾಸ ಹೋಗುತ್ತಾರೆ ಎಂದರೆ ಅದಕ್ಕೆ ಬೇರೆ ಬಣ್ಣ ಕಟ್ಟುವ ಅಗತ್ಯ ಇಲ್ಲ ಎಂದರು.

ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಕುಣಿಗಲ್ ಕೂಡ ಬೆಂಗಳೂರಿಗೆ ಸೇರಬೇಕು ಎಂಬ ಯಾವುದೇ ಪ್ರಸ್ತಾವನೆಗಳಿಲ್ಲ. ರಾಮನಗರ ವಿವಾದದಲ್ಲಿ ತುಮಕೂರಿನವರನ್ನು ಮಧ್ಯೆ ತರಬೇಡಿ. ನಾವು ಶಾಂತಿಯಿಂದ ಇದ್ದೇವೆ ಎಂದರು.

ರೈತರ ಅನುಕೂಲಕ್ಕಾಗಿ ಕೃತಕ ಬುದ್ಧಿಮತ್ತೆ ಆನ್‍ಲೈನ್ ಕೋರ್ಸ್

ಪುಣೆ, ಅ 27 (ಪಿಟಿಐ) ಬಾರಾಮತಿ ಮೂಲದ ಅಗ್ರಿಕಲ್ಚರ್ ಡೆವಲಪ್‍ಮೆಂಟ್ ಟ್ರಸ್ಟ್ ರೈತರ ಅನುಕೂಲಕ್ಕಾಗಿ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲು ಅನುಕೂಲವಾಗುವ ಆನ್‍ಲೈನ್ ಕೋರ್ಸ್ ಅನ್ನು ಪರಿಚಯಿಸಲಿದೆ ಎಂದು ಎನ್‍ಸಿಪಿ ಸಂಸ್ಥಾಪಕ ಶರದ್ ಪವಾರ್ ಹೇಳಿದ್ದಾರೆ.

ಕೃಷಿ ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಗಾಗಿ ಕೃತಕ ಬುದ್ಧಿಮತ್ತೆ ಎಂಬ ಕೋರ್ಸ್ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಡಿಟಿಯ ಸಹ-ಸಂಸ್ಥಾಪಕರೂ ಆಗಿರುವ ಮಾಜಿ ಕೇಂದ್ರ ಸಚಿವರು, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯವು ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ ಎಂದು ವಿವರಣೆ ನೀಡಿದರು.

ಇಸ್ರೇಲ್-ಹಮಾಸ್ ಹಿಂಸಾಚಾರದ ಯುದ್ಧಕ್ಕೆ ಪ್ರಿಯಾಂಕಾ ವಾದ್ರಾ ಖಂಡನೆ

ಇದು ರೈತರಿಗೆ ನಿರ್ವಹಣೆ ಮತ್ತು ಇಳುವರಿ ಮುನ್ಸೂಚನೆ, ನೀರು ನಿರ್ವಹಣೆ ಮತ್ತು ಬರ ಮುನ್ಸೂಚನೆ, ಕೃಷಿ ಸಂಪನ್ಮೂಲ ಹಂಚಿಕೆ, ಮಣ್ಣಿನ ನಿರ್ವಹಣೆ, ಬೆಳೆ ಸರದಿ, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ಸಹಾಯ ಮಾಡುತ್ತದೆ ಎಂದು ಎಡಿಟಿ ಪ್ರಕಟಣೆ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಕ್ಲೌಡ್ ಅಂಡ್ ಎಡ್ಜ್ ಇಂಪ್ಲಿಮೆಂಟೇಶನ್ ಕೋರ್ಸ್ ನಿರ್ದೇಶಕ ಅಜಿತ್ ಜಾವ್ಕರ್, ಎಐ ತಂತ್ರಜ್ಞಾನವನ್ನು ನೆಲಮಟ್ಟದಲ್ಲಿ ಮತ್ತು ರೈತರ ಅನುಕೂಲಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡುವುದು ನಮ್ಮ ಗಮನವಾಗಿದೆ ಎಂದಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಸಾಧನೆ

ನವದೆಹಲಿ, ಅ 27 (ಪಿಟಿಐ) ಭಾರತವು ಟೆಲಿಕಾಂ ತಂತ್ರಜ್ಞಾನ ಡೆವಲಪರ್ ಮತ್ತು ರಫ್ತುದಾರ ನಾಯಕನಾಗಿ ಹೊರಹೊಮ್ಮುತ್ತಿದೆ ಮತ್ತು ಜಗತ್ತು ಇಂದು ದೇಶವನ್ನು ಭರವಸೆಯಿಂದ ನೋಡುತ್ತಿದೆ ಎಂದು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ದೃಷ್ಟಿಕೋನ ಮತ್ತು ನಾಯಕತ್ವದಿಂದ ಟೆಲಿಕಾಂ ಕ್ಷೇತ್ರ ಇಂತಹ ಸಾಧನೆ ಮಾಡಿದೆ ಎಂದಿದ್ದಾರೆ. ದೂರ ಸಂಪರ್ಕ, ಕೈಗೆಟುಕುವಿಕೆ ಮತ್ತು ಗುಣಮಟ್ಟದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ ಮತ್ತು ದಾವೆ ಮತ್ತು 2ಜಿ ಹಗರಣದ ನೆರಳಿನಿಂದ ಹೊರಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ನಮ್ಮ ದೇಶ ಟೆಲಿಕಾಂ ಡಿಜಿಟಲ್‍ನ ಗೇಟ್‍ವೇ ಆಗಿದೆ, ಭಾರತದಲ್ಲಿ 5ಜಿ ಸೇವೆಗಳ ತ್ವರಿತ ರೋಲ್ ಔಟ್ ಮತ್ತು ರಾಷ್ಟ್ರದ ಸ್ಪಷ್ಟ 6ಜಿ ದೃಷ್ಟಿಯನ್ನು ಉಲ್ಲೇಖಿಸಿ ವೈಷ್ಣವ್ ಈ ಹೇಳಿಕೆ ನೀಡಿದ್ದಾರೆ.

ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಕೋಲ್ಕತ್ತಾ, ಅ.27- ಬಹುಕೋಟಿ ಪಡಿತರಚೀಟಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಜಾರಿನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಪಶ್ಚಿಮ ಬಂಗಾಳದ ವಿವಿಧ ಕಡೆ ಜಾರಿ ನಿರ್ದೇಶನಾಲಯದ ಅಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಈ ಹಿಂದೆ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹಾಲಿ ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕೆ ಹಾಗೂ ಅರಣ್ಯ ಸಚಿವರಾಗಿರುವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಸುದೀರ್ಘ ವಿಚಾರಣೆ ನಂತರ ಇಂದು ಮುಂಜಾನೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

17-18 ಗಂಟೆಗಳ ವಿಚಾರಣೆಯ ನಂತರ ಶುಕ್ರವಾರ ಮುಂಜಾನೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಚಿವರನ್ನು ಬಂಧಿಸಲಾಗಿದೆ. ಬಂಧಿತ ಜ್ಯೋತಿಪ್ರಿಯೋ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ದೊಡ್ಡ ಪಿತೂರಿಯ ಬಲಿಪಶು ನಾನು. ಆಪಾದಿತ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿಸಲ್ಪಟ್ಟ ನಂತರ ಟಿಎಂಸಿ ಸಚಿವರು ಹೇಳಿದ್ದಾರೆ.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಕೇಂದ್ರದ ಸರ್ಕಾರಿ ಸಂಸ್ಥೆಗಳ ದುರುಪಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಸುಳ್ಳುಗಳನ್ನು ಹರಡುತ್ತಾರೆ. ಮಲ್ಲಿಕ್ ಅವರು ಅಸ್ವಸ್ಥರಾಗಿದ್ದು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರಿಗೇನಾದರೂ ಆದರೆ ಬಿಜೆಪಿ ಮತ್ತು ಇಡಿ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಹಲವಾರು ಟಿಎಂಸಿ ನಾಯಕರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಇದು ರಾಜ್ಯ ಸರ್ಕಾರವನ್ನು ಸ್ಕ್ಯಾನರ್‍ನಡಿ ತಂದಿದೆ. ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಶಿಕ್ಷಕರ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.

ಆಪಾದಿತ ಪಡಿತರ ಹಗರಣದಲ್ಲಿ, ಉದ್ಯಮಿ ಬಾಕಿಬುರ್ ರಹಮಾನ್ ಅವರನ್ನು ಅ.14ರಂದು ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿರುವ ಕೈಖಾಲಿಯಲ್ಲಿರುವ ಅವರ ಮನೆಯಿಂದ ಇಡಿ ಬಂಧಿಸಿತ್ತು. ಇಡಿ ಅಧಿಕಾರಿಗಳ ಪ್ರಕಾರ, ರೆಹಮಾನ್ ಮಲ್ಲಿಕ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ರೆಹಮಾನ್ ಅವರು ವಿತರಕರಿಗೆ ಅಕ್ಕಿ ಮತ್ತು ಗೋಯನ್ನು ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದ್ದರು. ಉಳಿದ ಹಣವನ್ನು ನಂತರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು.

ಇಡಿ ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ರಹಮಾನ್‍ನ ಸುಮಾರು ಹನ್ನೆರಡು ಸ್ಥಳಗಳಲ್ಲಿ ಮೂರು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಸ್ಥಳಗಳಲ್ಲಿ ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು, ಮೂರು ಸ್ಟಾರ್ ಹೋಟೆಲ್ ಮತ್ತು ರೆಹಮಾನ್ ಒಡೆತನದ ಬಾರ್ ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ಕೇಂದ್ರ ಕೋಲ್ಕತ್ತಾದ ಅಮ್ಹೆಸ್ರ್ಟ್ ಸ್ಟ್ರೀಟ್‍ನಲ್ಲಿರುವ ಮಲ್ಲಿಕ್ ಅವರ ಪೂರ್ವಜರ ಮನೆಯನ್ನೂ ಇಡಿ ಶೋಧಿಸಿದೆ. ಆಪಾದಿತ ಹಗರಣವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮತ್ತು ಕೋವಿಡ್ ಲಾಕ್‍ಡೌನ್‍ಗಳ ಸಮಯದಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ವರದಿಯಾದ ಅಕ್ರಮಗಳಿಗೆ ಸಂಬಂಸಿದೆ.