Thursday, November 6, 2025
Home Blog Page 1860

ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ಬೆಂಗಳೂರು, ಅ.27- ಪಿಎಚ್‍ಡಿ ಪದವಿ ಪಡೆಯದ ಎಲ್ಲಾ ಅರ್ಹ ಸಹಾಯಕ ಪ್ರಾಧ್ಯಾಪಕರು ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೆರೆ.

ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದಿರುವ ಗೌಡರು, ಡಿಸೆಂಬರ್ 31ರ ವರೆಗೆ ಪಿಎಚ್‍ಡಿ ಪದವಿ ಪಡೆಯದ ಅರ್ಹರಾಗಿರುವ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೂ ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಪರಿಗಣಿಸಬೇಕು ಎಂದು ಕೋರಿದ್ದಾರೆ.

ಇದಕ್ಕಾಗಿ ಭಾರತ ಸರ್ಕಾರ ಜುಲೈ 31ರಂದು ಹೊರಡಿಸಿರುವ ಗೆಜೆಟ್‍ನಲ್ಲಿನ ಪಾಯಿಂಟ್ ಸಂಖ್ಯೆ 6.3ರಲ್ಲಿ ಮುಂಬಡ್ತಿ ಪಡೆಯಲು ವಿನಾಯಿತಿ ನೀಡಲಾಗಿದೆ. ಆದರೆ, 2019ರ ಜುಲೈ 17ರಂದು ಹೊರಡಿಸಿರುವ ಷರತ್ತುಗಳು ಅನ್ವಯಿಸಿರುವುದು ಪದೋನ್ನತಿ ಪಡೆಯಲು ಅಡ್ಡಿಯಾಗುತ್ತಿದೆ. ಅಲ್ಲದೆ, ಅಸ್ಪಷ್ಟತೆಯಿಂದ ಕೂಡಿದೆ. ಆರು ತಿಂಗಳ ಅವಗೆ ಮಾತ್ರ ಎಂಬ ಷರತ್ತು ಅನ್ವಯವಾಗುವುದರಿಂದ ಬಹಳಷ್ಟು ಅರ್ಹ ಬೋಧಕ ವರ್ಗಕ್ಕೆ ಪದೋನ್ನತಿ ಪಡೆಯುವ ಅವಕಾಶ ತಪ್ಪುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿಲ್ಲಾರೆ.

ಚೀನಾ 2ನೇ ಮಹಾನಾಯಕನ ಸಾವಿಗೆ ದಿಗ್ಬ್ರಮೆ

ಪದೋನ್ನತಿ ಪಡೆಯುವ ಅವಯನ್ನು ಡಿ.31ರವರೆಗೆ ಈಗಾಗಲೇ ವಿಸ್ತರಿಸಿರುವುದರಿಂದ ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳನ್ನು ಸಡಿಲಿಕೆ ಮಾಡಿ ಯುಜಿಸಿ ನಿಯಮಗಳಿಗೆ ಸೂಕ್ತ ಮಾರ್ಪಾಡು ಮಾಡಬೇಕು. ಈ ರೀತಿ ಮಾಡುವುದರಿಂದ ಶೈಕ್ಷಣಿಕವಾಗಿ ಎಲ್ಲಾ ಅರ್ಹ ಬೋಧಕವರ್ಗದವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

“ನೌಕಾಪಡೆ ಮಾಜಿ ಅಧಿಕಾರಿಗಳ ಮರಣದಂಡನೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ”

ಬೆಂಗಳೂರು,ಅ.27- ಭಾರತದ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯ ಮರಣದಂಡನೆ ಘೋಷಿಸಿರುವುದನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಭಾರತದ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದು ಆಘಾತಕಾರಿ ಸುದ್ದಿ. ಆದರೆ ಗೋಪ್ಯತೆಯ ಕಾರಣ ನೀಡಿ ಕೇಂದ್ರ ಸರ್ಕಾರ ಇದೊಂದು ಸಾಮಾನ್ಯ ಪ್ರಕರಣ ಎಂದು ತೇಪೆ ಹಾಕುತ್ತಿದೆ. ಭಾರತದ ನೌಕಪಡೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ ವಿದೇಶಿ ನ್ಯಾಯಾಲಯ ಮರಣ ದಂಡನೆ ವಿಧಿಸಿರುವುದು ಸಾಮಾನ್ಯ ಪ್ರಕರಣವೆ?

ಭಾರತದ ನೌಕಾಪಡೆಯ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯ ಕುರಿತು ಕೇವಲ ಪ್ರಾಥಮಿಕ ಮಾಹಿತಿಯಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಕೇಂದ್ರ ಸರ್ಕಾರದ ರಾಜತಾಂತ್ರಿಕ ವೈಫಲ್ಯವಲ್ಲವೆ ? ಗಲ್ಲು ಶಿಕ್ಷೆಗೊಳಗಾದ ನೌಕಾಪಡೆಯ ಸಿಬ್ಬಂದಿಗಳು ಕಳೆದ 1 ವರ್ಷದಿಂದ ಕತಾರ್ ಜೈಲಿನಲ್ಲಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಏನು ಮಾಡುತಿತ್ತು ಎಂದು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ನೌಕಾದಳದ 8 ಮಾಜಿ ಅಧಿಕಾರಿಗಳಿಗೆ ಕತಾರ್ ಮರಣ ದಂಡನೆ ವಿಧಿಸಿರುವುದು ಇಡೀ ದೇಶವೇ ಕಳವಳ ಪಡುವ ವಿಚಾರ. ಇಸ್ರೇಲ್-ಪ್ಯಾಲೆಸ್ಟೇನ್ ನಡುವಿನ ಸಂಘರ್ಷದ ಹೊತ್ತಿನಲ್ಲೇ ಈ ತೀರ್ಪು ಬಂದಿರುವುದು ಚಿಂತಿಸಬೇಕಾದ ವಿಚಾರ. ದೇಶಕ್ಕೆ ಸೇವೆ ಸಲ್ಲಿಸಿದವರು ವಿದೇಶಿ ನೆಲದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸೂಕ್ಷ್ಮವಾಗಿ ವರ್ತಿಸಬೇಕು.

ಕತಾರ್ ನ್ಯಾಯಾಲಯದ ತೀರ್ಪಿನಿಂದ ಗಲ್ಲುಶಿಕ್ಷೆಗೆ ಗುರಿಯಾದ ನೌಕಾದಳದ ಸಿಬ್ಬಂದಿಗಳ ಕುಟುಂಬವಷ್ಟೇ ಅಲ್ಲ, ಇಡೀ ದೇಶವೇ ಆತಂಕಕ್ಕೀಡಾಗಿದೆ. ಕೇಂದ್ರ ಸರ್ಕಾರ ಗೋಪ್ಯತೆಯ ಸಬೂಬು ಹೇಳಿ ಕೈ ಚೆಲ್ಲಿ ಕುಳಿತರೆ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವೇ ಸ್ವತಃ ಕೈಯ್ಯಾರೆ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಕೇಂದ್ರ ಈ ಪ್ರಕರಣದ ಸೂಕ್ಷ್ಮತೆ ಅರಿತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ : ಪರಮೇಶ್ವರ್

ಬೆಂಗಳೂರು, ಅ.27- ಮೈತ್ರಿ ಸರ್ಕಾರ ಪತನಗೊಳ್ಳುವ ಮುನ್ನಾ ಆಗಿನ ಉಪಮುಖ್ಯಮಂತ್ರಿ ಪರಮೇಶ್ವರ್ ಮನೆಯಲ್ಲಿ ಸಭೆ ನಡೆದು, ಕೆಲ ಶಾಸಕರು ತಿಂಡಿ ತಿಂದು ಹೊರಟರು ಎಂಬುದು ಆಧಾರ ರಹಿತ ಆರೋಪ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದೆಲ್ಲಾ ಸತ್ಯ ಅಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವ ಸಭೆಗಳು ನಡೆದಿಲ್ಲ. ಶಾಸಕರು ಸಚಿವರ ಮನೆಗೆ ಬರುವುದು ಸ್ವಾಭಾವಿಕ. ಆದರೆ ನಮ್ಮ ಮನೆಯಲ್ಲಿ ಸರ್ಕಾರ ಪತನಗೊಳಿಸುವಂತಹ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಹೇಳಿದ ಎಲ್ಲಾದಕ್ಕೂ ಉತ್ತರ ನೀಡುವ ಅಗತ್ಯ ಇಲ್ಲ. ಈಗಾಗಲೇ ರಾಜ್ಯದ ಜನ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೂ ಹಾಗೂ ನಮ್ಮ ಅಹವಾಲಿಗೂ ಉತ್ತರ ಸಿಕ್ಕಿದೆ ಎಂದರು.

ವನ್ಯಜೀವಿಗಳ ವಸ್ತುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಕೋಮುವಾದದ ಒಡಕು ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವರು, ದೇಶದಲ್ಲಿರುವ ಕಾನೂನು ಎಲ್ಲರಿಗೂ ಒಂದೆ ಯಾವುದೇ ಜಾತಿ, ಧರ್ಮ ಪ್ರತ್ಯೇಕವಾಗಿರುವುದಿಲ್ಲ. ಎಲ್ಲರಿಗೂ ಏಕರೂಪವಾಗಿಯೇ ಅನ್ವಯವಾಗುತ್ತದೆ. ವನ್ಯ ಜೀವಿಗಳ ವಸ್ತುಗಳನ್ನು ವಾಪಾಸ್ ನೀಡಲು ಮತ್ತೊಮ್ಮೆ ಅವಕಾಶ ನೀಡುವ ಬಗ್ಗೆ ಸಚಿವರು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅಂತಹ ವಸ್ತುಗಳನ್ನು ಯಾರೇ ಇಟ್ಟುಕೊಂಡಿದ್ದರೂ ನಿಗದಿತ ಅವಯಲ್ಲಿ ವಾಪಾಸ್ ನೀಡಬೇಕು. ಇಲ್ಲವಾದರೆ ಕ್ರಮ ಜರುಗಿಸಲಾಗುತ್ತದೆ. ದರ್ಗಾದಲ್ಲಿ ನವೀಲುಗರಿಗಳಿದ್ದರೆ ಅದರ ವಿರುದ್ಧವೂ ಕ್ರಮಗಳಾಗುತ್ತವೆ ಎಂದರು.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಪೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹಗರಣದ ಆರೋಪಿ ಶ್ರೀಕಿ ಪರ ವಕೀಲರು ಒಂದನೇ ಎಸಿಎಂಎಂ ನ್ಯಾಯಾಲಯಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಬಿಟ್ ಕಾಯಿನ್ ತನಿಖೆ ನಡೆಸುತ್ತಿರುವ ಪ್ರತಿ ಅಕಾರಿಗೂ ಬಹಳ ಎಚ್ಚರಿಕೆಯಿಂದ ಇರಬೇಕು ಹಾಗೂ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಹೇಳಿದ್ದೇವೆ.

ಅದರಲ್ಲಿರುವ ಅಧಿಕಾರಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ತನಿಖಾ ತಂಡದಿಂದ ಕೈ ಬಿಡುತ್ತೇವೆ. ಅತಂಹವರನ್ನು ಇಟ್ಟುಕೊಂಡು ತನಿಖೆ ಮಾಡುವುದಿಲ್ಲ ಎಂದರು.

ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ವಿದೇಶ ಪ್ರವಾಸ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಸ್ವಂತ ದುಡ್ಡಿನಲ್ಲಿ ತಾನೇ ವಿದೇಶ ಪ್ರವಾಸ ಮಾಡುತ್ತಾರೆ. ಹೋಗಲಿ ಬಿಡಿ, ಖುಷಿಯಾಗಿ ಪ್ರವಾಸ ಮಾಡಿ ಸಂಭ್ರಮಿಸಿ ಬರಲಿ. ನಾಲ್ಕು ಮಂದಿ ಶಾಸಕರು ಪ್ರವಾಸ ಹೋಗುತ್ತಾರೆ ಎಂದರೆ ಅದಕ್ಕೆ ಬೇರೆ ಬಣ್ಣ ಕಟ್ಟುವ ಅಗತ್ಯ ಇಲ್ಲ ಎಂದರು.

ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಕುಣಿಗಲ್ ಕೂಡ ಬೆಂಗಳೂರಿಗೆ ಸೇರಬೇಕು ಎಂಬ ಯಾವುದೇ ಪ್ರಸ್ತಾವನೆಗಳಿಲ್ಲ. ರಾಮನಗರ ವಿವಾದದಲ್ಲಿ ತುಮಕೂರಿನವರನ್ನು ಮಧ್ಯೆ ತರಬೇಡಿ. ನಾವು ಶಾಂತಿಯಿಂದ ಇದ್ದೇವೆ ಎಂದರು.

ರೈತರ ಅನುಕೂಲಕ್ಕಾಗಿ ಕೃತಕ ಬುದ್ಧಿಮತ್ತೆ ಆನ್‍ಲೈನ್ ಕೋರ್ಸ್

ಪುಣೆ, ಅ 27 (ಪಿಟಿಐ) ಬಾರಾಮತಿ ಮೂಲದ ಅಗ್ರಿಕಲ್ಚರ್ ಡೆವಲಪ್‍ಮೆಂಟ್ ಟ್ರಸ್ಟ್ ರೈತರ ಅನುಕೂಲಕ್ಕಾಗಿ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲು ಅನುಕೂಲವಾಗುವ ಆನ್‍ಲೈನ್ ಕೋರ್ಸ್ ಅನ್ನು ಪರಿಚಯಿಸಲಿದೆ ಎಂದು ಎನ್‍ಸಿಪಿ ಸಂಸ್ಥಾಪಕ ಶರದ್ ಪವಾರ್ ಹೇಳಿದ್ದಾರೆ.

ಕೃಷಿ ತಂತ್ರಜ್ಞಾನ ಮತ್ತು ಹವಾಮಾನ ಬದಲಾವಣೆಗಾಗಿ ಕೃತಕ ಬುದ್ಧಿಮತ್ತೆ ಎಂಬ ಕೋರ್ಸ್ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಡಿಟಿಯ ಸಹ-ಸಂಸ್ಥಾಪಕರೂ ಆಗಿರುವ ಮಾಜಿ ಕೇಂದ್ರ ಸಚಿವರು, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯವು ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ ಎಂದು ವಿವರಣೆ ನೀಡಿದರು.

ಇಸ್ರೇಲ್-ಹಮಾಸ್ ಹಿಂಸಾಚಾರದ ಯುದ್ಧಕ್ಕೆ ಪ್ರಿಯಾಂಕಾ ವಾದ್ರಾ ಖಂಡನೆ

ಇದು ರೈತರಿಗೆ ನಿರ್ವಹಣೆ ಮತ್ತು ಇಳುವರಿ ಮುನ್ಸೂಚನೆ, ನೀರು ನಿರ್ವಹಣೆ ಮತ್ತು ಬರ ಮುನ್ಸೂಚನೆ, ಕೃಷಿ ಸಂಪನ್ಮೂಲ ಹಂಚಿಕೆ, ಮಣ್ಣಿನ ನಿರ್ವಹಣೆ, ಬೆಳೆ ಸರದಿ, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ಸಹಾಯ ಮಾಡುತ್ತದೆ ಎಂದು ಎಡಿಟಿ ಪ್ರಕಟಣೆ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಕ್ಲೌಡ್ ಅಂಡ್ ಎಡ್ಜ್ ಇಂಪ್ಲಿಮೆಂಟೇಶನ್ ಕೋರ್ಸ್ ನಿರ್ದೇಶಕ ಅಜಿತ್ ಜಾವ್ಕರ್, ಎಐ ತಂತ್ರಜ್ಞಾನವನ್ನು ನೆಲಮಟ್ಟದಲ್ಲಿ ಮತ್ತು ರೈತರ ಅನುಕೂಲಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡುವುದು ನಮ್ಮ ಗಮನವಾಗಿದೆ ಎಂದಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಸಾಧನೆ

ನವದೆಹಲಿ, ಅ 27 (ಪಿಟಿಐ) ಭಾರತವು ಟೆಲಿಕಾಂ ತಂತ್ರಜ್ಞಾನ ಡೆವಲಪರ್ ಮತ್ತು ರಫ್ತುದಾರ ನಾಯಕನಾಗಿ ಹೊರಹೊಮ್ಮುತ್ತಿದೆ ಮತ್ತು ಜಗತ್ತು ಇಂದು ದೇಶವನ್ನು ಭರವಸೆಯಿಂದ ನೋಡುತ್ತಿದೆ ಎಂದು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ದೃಷ್ಟಿಕೋನ ಮತ್ತು ನಾಯಕತ್ವದಿಂದ ಟೆಲಿಕಾಂ ಕ್ಷೇತ್ರ ಇಂತಹ ಸಾಧನೆ ಮಾಡಿದೆ ಎಂದಿದ್ದಾರೆ. ದೂರ ಸಂಪರ್ಕ, ಕೈಗೆಟುಕುವಿಕೆ ಮತ್ತು ಗುಣಮಟ್ಟದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ ಮತ್ತು ದಾವೆ ಮತ್ತು 2ಜಿ ಹಗರಣದ ನೆರಳಿನಿಂದ ಹೊರಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ನಮ್ಮ ದೇಶ ಟೆಲಿಕಾಂ ಡಿಜಿಟಲ್‍ನ ಗೇಟ್‍ವೇ ಆಗಿದೆ, ಭಾರತದಲ್ಲಿ 5ಜಿ ಸೇವೆಗಳ ತ್ವರಿತ ರೋಲ್ ಔಟ್ ಮತ್ತು ರಾಷ್ಟ್ರದ ಸ್ಪಷ್ಟ 6ಜಿ ದೃಷ್ಟಿಯನ್ನು ಉಲ್ಲೇಖಿಸಿ ವೈಷ್ಣವ್ ಈ ಹೇಳಿಕೆ ನೀಡಿದ್ದಾರೆ.

ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಕೋಲ್ಕತ್ತಾ, ಅ.27- ಬಹುಕೋಟಿ ಪಡಿತರಚೀಟಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಜಾರಿನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಪಶ್ಚಿಮ ಬಂಗಾಳದ ವಿವಿಧ ಕಡೆ ಜಾರಿ ನಿರ್ದೇಶನಾಲಯದ ಅಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಈ ಹಿಂದೆ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹಾಲಿ ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕೆ ಹಾಗೂ ಅರಣ್ಯ ಸಚಿವರಾಗಿರುವ ಜ್ಯೋತಿಪ್ರಿಯೋ ಮಲ್ಲಿಕ್ ಅವರನ್ನು ಸುದೀರ್ಘ ವಿಚಾರಣೆ ನಂತರ ಇಂದು ಮುಂಜಾನೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

17-18 ಗಂಟೆಗಳ ವಿಚಾರಣೆಯ ನಂತರ ಶುಕ್ರವಾರ ಮುಂಜಾನೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಚಿವರನ್ನು ಬಂಧಿಸಲಾಗಿದೆ. ಬಂಧಿತ ಜ್ಯೋತಿಪ್ರಿಯೋ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ದೊಡ್ಡ ಪಿತೂರಿಯ ಬಲಿಪಶು ನಾನು. ಆಪಾದಿತ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿಸಲ್ಪಟ್ಟ ನಂತರ ಟಿಎಂಸಿ ಸಚಿವರು ಹೇಳಿದ್ದಾರೆ.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಕೇಂದ್ರದ ಸರ್ಕಾರಿ ಸಂಸ್ಥೆಗಳ ದುರುಪಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಸುಳ್ಳುಗಳನ್ನು ಹರಡುತ್ತಾರೆ. ಮಲ್ಲಿಕ್ ಅವರು ಅಸ್ವಸ್ಥರಾಗಿದ್ದು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರಿಗೇನಾದರೂ ಆದರೆ ಬಿಜೆಪಿ ಮತ್ತು ಇಡಿ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಹಲವಾರು ಟಿಎಂಸಿ ನಾಯಕರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಇದು ರಾಜ್ಯ ಸರ್ಕಾರವನ್ನು ಸ್ಕ್ಯಾನರ್‍ನಡಿ ತಂದಿದೆ. ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಶಿಕ್ಷಕರ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.

ಆಪಾದಿತ ಪಡಿತರ ಹಗರಣದಲ್ಲಿ, ಉದ್ಯಮಿ ಬಾಕಿಬುರ್ ರಹಮಾನ್ ಅವರನ್ನು ಅ.14ರಂದು ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿರುವ ಕೈಖಾಲಿಯಲ್ಲಿರುವ ಅವರ ಮನೆಯಿಂದ ಇಡಿ ಬಂಧಿಸಿತ್ತು. ಇಡಿ ಅಧಿಕಾರಿಗಳ ಪ್ರಕಾರ, ರೆಹಮಾನ್ ಮಲ್ಲಿಕ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ರೆಹಮಾನ್ ಅವರು ವಿತರಕರಿಗೆ ಅಕ್ಕಿ ಮತ್ತು ಗೋಯನ್ನು ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದ್ದರು. ಉಳಿದ ಹಣವನ್ನು ನಂತರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು.

ಇಡಿ ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ರಹಮಾನ್‍ನ ಸುಮಾರು ಹನ್ನೆರಡು ಸ್ಥಳಗಳಲ್ಲಿ ಮೂರು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಸ್ಥಳಗಳಲ್ಲಿ ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು, ಮೂರು ಸ್ಟಾರ್ ಹೋಟೆಲ್ ಮತ್ತು ರೆಹಮಾನ್ ಒಡೆತನದ ಬಾರ್ ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕರ್ನಾಟಕದ ಯೋಧನಿಗೆ ಗಂಭೀರ ಗಾಯ

ಕೇಂದ್ರ ಕೋಲ್ಕತ್ತಾದ ಅಮ್ಹೆಸ್ರ್ಟ್ ಸ್ಟ್ರೀಟ್‍ನಲ್ಲಿರುವ ಮಲ್ಲಿಕ್ ಅವರ ಪೂರ್ವಜರ ಮನೆಯನ್ನೂ ಇಡಿ ಶೋಧಿಸಿದೆ. ಆಪಾದಿತ ಹಗರಣವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮತ್ತು ಕೋವಿಡ್ ಲಾಕ್‍ಡೌನ್‍ಗಳ ಸಮಯದಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ವರದಿಯಾದ ಅಕ್ರಮಗಳಿಗೆ ಸಂಬಂಸಿದೆ.

ಚೀನಾ 2ನೇ ಮಹಾನಾಯಕನ ಸಾವಿಗೆ ದಿಗ್ಬ್ರಮೆ

ಹಾಂಗ್ ಕಾಂಗ್, ಅ. 27 – ಚೀನಾದ ಮಾಜಿ ನಂ 2 ನಾಯಕ ಲೀ ಕೆಕಿಯಾಂಗ್ ಅವರ ಹಠಾತ್ ಮರಣವು ದೇಶದ ಅನೇಕ ಜನರನ್ನು ದಿಗ್ಭ್ರಮೆಗೊಳಿಸಿದೆ. ಹೃದಯಾಘಾತದಿಂದ ಶುಕ್ರವಾರ ನಿಧನರಾದ ಲಿ, ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದರು, ಅಮೆರಿಕದೊಂದಿಗಿನ ಉದ್ವಿಗ್ನತೆ ಮತ್ತು ಕೋವಿಡ್-19 ಸಾಂಕ್ರಾಮಿಕದಂತಹ ಸವಾಲುಗಳ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಮುನ್ನಡೆಸಲು ಸಹಾಯ ಮಾಡಿದ್ದರು.

ಅವರು ಖಾಸಗಿ ವ್ಯವಹಾರದ ಸಮರ್ಥನೆಗೆ ಹೆಸರುವಾಸಿಯಾಗಿದ್ದರು ಆದರೆ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ತಮಲ್ಲೆ ಹೆಚ್ಚಿನ ಅಧಿಕಾರ ಇಟ್ಟುಕೊಂಡಿದ್ದರಿಂದ ಮತ್ತು ಚೀನೀ ರಾಷ್ಟ್ರದ ಮಹಾನ್ ಪುನರುಜ್ಜೀವನ ದ ಸಹಾಯಕ್ಕಾಗಿ ಮಿಲಿಟರಿ ಮತ್ತು ಭದ್ರತಾ ಸೇವೆಗಳನ್ನು ಹೆಚ್ಚಿಸಿದ್ದರಿಂದ ಅವರ ಪ್ರಭಾವವನ್ನು ಕಳೆದುಕೊಂಡರು.

ಏಷ್ಯನ್ ಚಾಂಪಿಯನ್‍ಶಿಪ್‍ನ ಏರ್ ರೈಫಲ್‍ನಲ್ಲಿ ಬೆಳ್ಳಿ ಗೆದ್ದ ಬಾಬುಟಾ

ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್ ವೀಬೊದಲ್ಲಿ ಅವರ ಸಾವಿಗೆ ಸಂಬಂಧಿಸಿದ ಹ್ಯಾಶ್‍ಟ್ಯಾಗ್ ಕೆಲವೇ ಗಂಟೆಗಳಲ್ಲಿ 1 ಬಿಲಿಯನ್ ವೀಕ್ಷಣೆಗಳನ್ನು ಸೆಳೆಯಿತು. ಲಿ ಕುರಿತ ಪೋಸ್ಟ್‍ಗಳಲ್ಲಿ, ಲೈಕ್ ಬಟನ್ ಅನ್ನು ಡೈಸಿಯಾಗಿ ಪರಿವರ್ತಿಸಲಾಯಿತು – ಚೀನಾದಲ್ಲಿ ಅಂತ್ಯಕ್ರಿಯೆಗಳಿಗೆ ಸಾಮಾನ್ಯ ಹೂವು, ಅನೇಕ ಬಳಕೆದಾರರು ಶಾಂತಿಯಲ್ಲಿ ವಿಶ್ರಾಂತಿ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತು ಕೆಲವರು ಸುದ್ದಿ ನಂಬಲು ಕಷ್ಟ ಎಂದು ಹೇಳಿದರು.

ಲಿ ಅವರ ನಿಧನದ ಬಗ್ಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ನವದೆಹಲಿ,ಅ. 27 (ಪಿಟಿಐ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರ ಒಂದು ವರ್ಷ ಪೂರ್ಣಗೊಂಡಿದ್ದು, ಅವರ ನಾಯಕತ್ವದಲ್ಲಿ ಪಕ್ಷವು ಮಹತ್ವದ ಪ್ರಗತಿ ಸಾಧಿಸಿದೆ ಮತ್ತು ಸಂಘಟನಾ ರಚನೆಯನ್ನು ಪುನಶ್ಚೇತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿ 2022ರ ಅ. 26 ರಂದು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಕಾಂಗ್ರೆಸ್ ಅಧ್ಯಕ್ಷರು ಜನರ ಒಳಿತಿಗೆ ಬದ್ಧರಾಗಿದ್ದಾರೆ. ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸದ್ಗುಣಗಳನ್ನು ಒಳಗೊಂಡಿದ್ದಾರೆ – ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಅಂತರ್ಗತ ಬೆಳವಣಿಗೆ ಮತ್ತು ದೇಶಭಕ್ತಿಯ ಸದ್ಗುಣಗಳು ಅವರಲ್ಲಿವೆ ಎಂದು ಕಾಂಗ್ರೆಸ್ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದೆ.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ಶ್ರೇಯಾಂಕಗಳ ಮೂಲಕ ಏರಿದ ನಂತರ, ಅವರು ಉತ್ಸಾಹ ಮತ್ತು ಪರಿಶ್ರಮದಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ಅವರ ಆದರ್ಶ ಉದಾಹರಣೆ ಎಂದು ಅದು ಹೇಳಿದೆ. ಬ್ಲಾಕ್ ಮಟ್ಟದ ನಾಯಕನ ವಿನಮ್ರ ಸ್ಥಾನದಿಂದ ಪಕ್ಷದ ಚುನಾಯಿತ ಅಧ್ಯಕ್ಷರಾಗುವವರೆಗೆ, 55 ವರ್ಷಗಳ ಚುನಾವಣಾ ಯಶಸ್ಸಿನೊಂದಿಗೆ ಅವರ ಪ್ರಯಾಣವು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರಜಾಪ್ರಭುತ್ವದ ಕಾರಣಕ್ಕಾಗಿ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಅವರು (ಖರ್ಗೆ) ಅವರು ನಂಬಿದ ಆದರ್ಶಗಳಿಗಾಗಿ ಹೋರಾಡುವ ಮತ್ತು ರಕ್ಷಿಸುವ ನಿರ್ಭೀತ ನಾಯಕರಾಗಿದ್ದಾರೆ. ಅವರು ಬಡವರು ಮತ್ತು ಅಂಚಿನಲ್ಲಿರುವವರ ಹಕ್ಕುಗಳನ್ನು ಸಹ ಬೆಂಬಲಿಸುತ್ತಾರೆ ಎಂದು ಪಕ್ಷ ಹೇಳಿದೆ.

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕೀ.ಮಿ ರಿಕ್ಷಾ ಪೆಡಲ್ ತುಳಿದ ಬಾಲಕಿ

ಭದ್ರಕ್, ಅ. 27 (ಪಿಟಿಐ)- ಗಾಯಗೊಂಡಿದ್ದ ತನ್ನ ತಂದೆಯನ್ನು ಆಸ್ಪತ್ರೆಗೆ ಸಾಗಿಸಲು 14 ವರ್ಷದ ಬಾಲಕಿ 35 ಕಿ.ಮೀ ದೂರ ರಿಕ್ಷಾದ ಟ್ರಾಲಿಯನ್ನು ಪೆಡಲ್ ತುಳಿದಿರುವ ಘಟನೆ ಒಡಿಶಾದ ಭದ್ರಕ್‍ನಲ್ಲಿ ನಡೆದಿದೆ. ಬಾಲಕಿ ಟ್ರಾಲಿಯಲ್ಲಿ ತನ್ನ ತಂದೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕೆಲವು ಸ್ಥಳೀಯ ಜನರು ಮತ್ತು ಪತ್ರಕರ್ತರು ಭದ್ರಕ್ ಪಟ್ಟಣದ ಮೊಹತಾಬ್ ಛಾಕ್ ಬಳಿ ಬಾಲಕಿಯನ್ನು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ನಾಡಿಗನ್ ಗ್ರಾಮದ ಬಾಲಕಿ ಸುಜಾತಾ ಸೇಥಿ (14) ತನ್ನ ತಂದೆ ಸಂಭುನಾಥ್ ಅವರ ಟ್ರಾಲಿಯನ್ನು ಪೆಡಲ್ ಮಾಡುತ್ತಾ ತನ್ನ ಗ್ರಾಮದಿಂದ ಸುಮಾರು 14 ಕಿಮೀ ದೂರದಲ್ಲಿರುವ ಧಮ್‍ನಗರ ಆಸ್ಪತ್ರೆಗೆ ಗಾಯಗೊಂಡ ತಂದೆಯನ್ನು ಕರೆದೊಯ್ದಳು.

ಆದಾಗ್ಯೂ, ವೈದ್ಯರು ಆಕೆಯ ತಂದೆಯನ್ನು ಭದ್ರಕ್ ಡಿಎಚ್‍ಹೆಚ್‍ಗೆ ಸ್ಥಳಾಂತರಿಸುವಂತೆ ಕೇಳಿಕೊಂಡರು. ಆಗ ತನ್ನ ತಂದೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲು ಅವಳು ಟ್ರಾಲಿಯನ್ನು 35 ಕಿಮೀ ಪೆಡಲ್ ಮಾಡಿದ್ದಾಳೆ. ಅಕ್ಟೋಬರ್ 22 ರಂದು ನಡೆದ ಗುಂಪು ಘರ್ಷಣೆಯಲ್ಲಿ ಆಕೆಯ ತಂದೆ ಸಂಭುನಾಥ್ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ಸುಜಾತಾ ಪ್ರಕಾರ, ಭದ್ರಕ್ ಡಿಎಚ್‍ಹೆಚ್‍ನ ವೈದ್ಯರು ಅವಳನ್ನು ಹಿಂತಿರುಗಿ ಮತ್ತು ಒಂದು ವಾರದ ನಂತರ ಆಪರೇಷನ್‍ಗೆ ಬರುವಂತೆ ಸಲಹೆ ನೀಡಿದರು. ನನ್ನ ಬಳಿ ಖಾಸಗಿ ವಾಹನ ಅಥವಾ ಆಂಬ್ಯುಲೆನ್ಸ್‍ಗೆ ಕರೆ ಮಾಡಲು ಮೊಬೈಲ್ ಫೋನ್ ಬಾಡಿಗೆಗೆ ಹಣವಿಲ್ಲ, ಆದ್ದರಿಂದ ನಾನು ಅವರನ್ನು ಆಸ್ಪತ್ರೆಗೆ ಕರೆತರಲು ನನ್ನ ತಂದೆಯ ಟ್ರಾಲಿಯನ್ನು ಬಳಸಿದ್ದೇನೆ ಎಂದು ಅವರು ಹೇಳಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಭದ್ರಕ್ ಶಾಸಕ ಸಂಜಿಬ್ ಮಲ್ಲಿಕ್ ಮತ್ತು ಧಮ್‍ನಗರ ಮಾಜಿ ಶಾಸಕ ರಾಜೇಂದ್ರ ದಾಸ್ ಬಾಲಕಿಯನ್ನು ತಲುಪಿ ಅಗತ್ಯ ಸಹಾಯ ಮಾಡಿದರು.

ಇಸ್ರೇಲ್-ಹಮಾಸ್ ಹಿಂಸಾಚಾರದ ಯುದ್ಧಕ್ಕೆ ಪ್ರಿಯಾಂಕಾ ವಾದ್ರಾ ಖಂಡನೆ

ನವದೆಹಲಿ, ಅ 27 (ಪಿಟಿಐ) ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಯುದ್ಧವನ್ನು ಕಾಂಗ್ರೆಸ್ ನಾಯಕ ಪ್ರಿಯಾಂಕಾ ವಾದ್ರಾ ಟೀಕಿಸಿದ್ದಾರೆ. ಗಾಜಾದಲ್ಲಿ ಯಾವುದೇ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಆದರೂ ಅಲ್ಲಿ ನಿರಂತರವಾಗಿ ದಾಳಿ ನಡೆಯುತ್ತಿದೆ. ಮಾನವೀಯತೆಯು ಯಾವಾಗ ಎಚ್ಚರಗೊಳ್ಳುತ್ತದೆ ಎಂದು ಅವರು ಎಕ್ಸ್‍ನಲ್ಲಿ ಪ್ರಶ್ನಿಸಿದ್ದಾರೆ.

ಹಮಾಸ್ ಆಳ್ವಿಕೆಯಲ್ಲಿರುವ ಗಾಜಾದಲ್ಲಿನ ಆರೋಗ್ಯ ಸಚಿವಾಲಯವು ಸಂಘರ್ಷದಲ್ಲಿ 7,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ ನಂತರ ಎಕ್ಸ್‍ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ಪ್ರಿಯಾಂಕಾ ಗಾಂಧಿ, ಗಾಜಾದಲ್ಲಿ 7,000 ಜನರನ್ನು ಕೊಂದ ನಂತರವೂ ರಕ್ತಪಾತ ಮತ್ತು ಹಿಂಸಾಚಾರದ ಚಕ್ರ ನಿಂತಿಲ್ಲ ಎಂದು ಹೇಳಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ವಿಚಾರ ಖಂಡಿಸಿದ ಅಶ್ವಥ್ ನಾರಾಯಣ್

ಅಂತರರಾಷ್ಟ್ರೀಯ ಕಾನೂನನ್ನು ತುಳಿದಿಲ್ಲ. ಅಂತಹ ಯಾವುದೇ ಮಿತಿಯನ್ನು ದಾಟಿಲ್ಲ. ಅಂತಹ ನಿಯಮವನ್ನು ಉಲ್ಲಂಘಿಸದ ಯಾವುದೇ ನಿಯಮವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಮಾನವೀಯತೆ ಯಾವಾಗ ಎಚ್ಚೆತ್ತುಕೊಳ್ಳುತ್ತದೆ? ಎಷ್ಟು ಜೀವಗಳನ್ನು ಕಳೆದುಕೊಂಡ ನಂತರ. ಎಷ್ಟು ಮಕ್ಕಳನ್ನು ಬಲಿಕೊಟ್ಟ ನಂತರ. ಮನುಷ್ಯ ಎಂಬ ಪ್ರಜ್ಞಾ ಉಳಿಯುತ್ತದೆಯೇ? ಅದು ಎಂದಾದರೂ ಅಸ್ತಿತ್ವದಲ್ಲಿದೆಯೇ? ಅವರು ಪ್ರಶ್ನಿಸಿದ್ದಾರೆ.