Thursday, November 6, 2025
Home Blog Page 1880

ಶೆಟ್ಟರ್ – ಸಾಹುಕಾರ್ ಭೇಟಿ ಬಗ್ಗೆ ಡಿಕೆಶಿ ಹೇಳಿದ್ದೇನು..?

ಬೆಂಗಳೂರು, ಅ.18- ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ-ಜೆಡಿಎಸ್ ನಾಯಕರು ಹುನ್ನಾಡ ನಡೆಸುತ್ತಿದ್ದಾರೆ, ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ ಏನೆಲ್ಲಾ ಆಮಿಷವೊಡ್ಡುತ್ತಿದ್ದಾರೆ ಎಂಬುದನ್ನು ಖುದ್ದು ಶಾಸಕರಿಂದಲೇ ಹೇಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್‍ಗಳೇ ಅಳೆಯಬೇಕು ಮತ್ತು ಮೇಜರ್ ಆಪರೇಶನ್ ಮಾಡಬೇಕು ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಹಾಗೆಲ್ಲ ಎಲ್ಲದರಲ್ಲೂ ಅನುಮಾನಪಡಲು ಆಗುವುದಿಲ್ಲ. ಜಗದೀಶ್ ಶೆಟ್ಟರ್ ಅವರು, ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ಈ ಬಗ್ಗೆ ನಾನೇನು ಹೆಚ್ಚು ಮಾತನಾಡುವುದಿಲ್ಲ ಎಂದರು.

ಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಬಿಜೆಪಿಯ ತಂಡವೊಂದು ಸರ್ಕಾರ ಬೀಳಿಸಲು ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ತಮಗೆ ಎಲ್ಲಾ ಗೊತ್ತಿದೆ ನನಗೆ. ಯಾವ ಶಾಸಕರನ್ನು, ಯಾರು ಯಾವಾಗ ಭೇಟಿ ಮಾಡಿದರು, ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟವರೇ ನನಗೆ ಮತ್ತು ಸಿಎಂಗೆ ದೂರು ನೀಡುತ್ತಿದ್ದಾರೆ. ಬಿಜೆಪಿಯವರು ಏನು ಆಫರ್ ಕೊಡುತ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ನಮ್ಮ ಬಳಿ ಪ್ರತಿಯೊಂದು ಮಾಹಿತಿ ಇದೆ. ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬುದನ್ನು ಅಧಿವೇಶನ ನಡೆದ ವೇಳೆ ನಮ್ಮ ಶಾಸಕರಿಂದಲೇ ಹೇಳಿಸುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಡಿ.ಕೆ.ಶಿವಕುಮಾರ್ ಇದೇ ರೀತಿಯ ಆರೋಪ ಮಾಡಿದ್ದರು. ಸರ್ಕಾರ ಪತನಗೊಳಿಸಲು ಬಿಜೆಪಿಯ ಒಂದು ತಂಡ ಪ್ರಯತ್ನಿಸುತ್ತಿದೆ ಎಂದು ದೂರಿದರು. ಅದನ್ನು ಇಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

“ಕಾಂಗ್ರೆಸ್ ಬಂದಿದೆ, ಲೂಟಿ ಜೋರಾಗಿದೆ, ಹೈಕಮಾಂಡ್ ಜೇಬು ತುಂಬಿದೆ”

ಬೆಂಗಳೂರು,ಅ.18-ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ. ಕಾಂಗ್ರೆಸ್ ಬಂದಿದೆ ಕಮಿಷನ್ ತಿಂದಿದೆ. ಕಾಂಗ್ರೆಸ್ ಬಂದಿದೆ ಲೂಟಿ ಜೋರಾಗಿದೆ. ಕಾಂಗ್ರೆಸ್ ಬಂದಿದೆ ಹೈಕಮಾಂಡ್ ಜೇಬು ತುಂಬಿದೆ. ಕಾಂಗ್ರೆಸ್ ಬಂದಿದೆ ಕರ್ನಾಟಕ ದಿವಾಳಿ ಆಗಿದೆ ಎಂದು ಪ್ರತಿಪಕ್ಷ ಬಿಜೆಪಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಕೆಣಕಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು, ನಂಗೂ ಫ್ರೀ, ನಿಂಗೂ ಫ್ರೀ ಎಂದು ಬೊಗಳೆ ಬಿಟ್ಟಿದ್ದ ಸಿದ್ದರಾಮಯ್ಯ ಅವರೇ ಇಲ್ಲಿ ನೋಡಿ, ನಿಮ್ಮ ಸರ್ಕಾರದ ಅಸಲಿ ತಾಕತ್ತು ಏನೆಂಬುದು ತಿಳಿಯುತ್ತದೆ.

ನೇಕಾರರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ವಾಪಸ್ ಪಡೆದಿದ್ದೀರಿ, ಈಗ ನೇಕಾರರಿಗೆ ಉಚಿತ ವಿದ್ಯುತ್ ಹಾಗಿರಲಿ, ಕನಿಷ್ಟ ಒಂದು ತಾಸು ವಿದ್ಯುತ್ ನೀಡಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆಯೂ ಇಲ್ಲ, ಸಾಮಥ್ರ್ಯವೂ ಇಲ್ಲ. ಅಂತಹ ಅಸಮರ್ಥ ಸರ್ಕಾರ ನಿಮ್ಮದು ಎಂದು ಆರೋಪ ಮಾಡಿದೆ.

ಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಕಿರಿಕ್ ದೊಡ್ಡದಾಗುತ್ತಿದೆ. ಈ ನಡುವೆ ಲೋಕಸಭೆ ಚುನಾವಣೆಗೆ ಇದೇ ಅಸ್ತ್ರವನ್ನು ದೊಡ್ಡದಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯ ನಾಯಕರು ಪ್ಲ್ಯಾನ್ ಮಾಡಿದಂತೆ ತೋರುತ್ತಿದೆ. ಹೀಗೆ ಕಾಂಗ್ರೆಸ್ ಬಿಜೆಪಿ ನಡುವೆ ನಡೆಯುತ್ತಿರುವ ಐಟಿ ಜಟಾಪಟಿ ಸದ್ಯಕ್ಕೆ ಮುಗಿಯುವ ಯಾವುದೇ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲ ಗ್ಯಾರಂಟಿ ವಾರ್ ಕೂಡ ಮುಂದುವರಿಯುವುದು ಗ್ಯಾರಂಟಿಯಾಗಿದೆ.

ಚಿತ್ರರಂಗದ ದೂರ ಸರಿಯುವ ಸುಳಿವು ಕೊಟ್ಟ ಅನುಷ್ಕಾ

ಮುಂಬೈ,ಅ.18- ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಚಿತ್ರರಂಗದ ದೂರ ಸರಿಯುವ ಸುಳಿವು ನೀಡಿದ್ದಾರೆ. ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಅನುಷ್ಕಾ ವಿರಾಟ್ ಕೊಹ್ಲಿ ಅವರನ್ನು ವಿವಾಹವಾದ ನಂತರ ಕುಟುಂಬದ ಕಡೆ ಹೆಚ್ಚಿನ ಗಮನಹರಿಸಿದ್ದಾರೆ.

ಈಗಾಗಲೇ ಒಂದು ಹೆಣ್ಣು ಮಗುವಿನ ತಾಯಿ ಆಗಿರುವ ಅನುಷ್ಕಾ ಸದ್ಯದಲ್ಲೇ 2ನೇ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು. ಇದೀಗ ಅನುಷ್ಕಾ ಶರ್ಮ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗುತ್ತಿದೆ.

ತೆಲಂಗಾಣದಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳು ವಶ

ನಾನು ಈಗಾಗಲೇ ವಿವಾಹವಾಗಿದ್ದೇನೆ. ನನಗೆ ಒಂದು ಮಗು ಕೂಡ ಇದೆ. ಅದರ ಪೋಷಣೆ ಮತ್ತು ಶಿಕ್ಷಣದ ಕಡೆ ಗಮನಹರಿಸಬೇಕು. ಕುಟುಂಬದ ನಿರ್ವಹಣೆ ನನ್ನ ಹೆಗಲ ಮೇಲಿರುವುದರಿಂದ ಬಹುಶಃ ನಾನು ಬರುವ ದಿನಗಳಲ್ಲಿ ತೆರೆಯ ಮೇಲೆ ಕಾಣಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಪರೋಕ್ಷವಾಗಿ ಚಿತ್ರರಂಗದಿಂದ ದೂರು ಉಳಿಯುವ ಸುಳಿವು ಕೊಟ್ಟಿದ್ದಾರೆ. ತಮ್ಮ 2ನೇ ಮಗುವಿನ ಬಗ್ಗೆ ಯಾವುದೇ ಸುಳಿವು ನೀಡದ ಅನುಷ್ಕಾ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಅನಕ್ಷರಸ್ಥ : ಹಿಮಂತ್ ಬಿಸ್ವಾಸ್

ನವದೆಹಲಿ,ಅ.18- ಕುಟುಂಬ ರಾಜಕಾರಣ ಪದದ ಅರ್ಥ ಗೊತ್ತಿಲ್ಲದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅನಕ್ಷರಸ್ಥ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೂಡ ಬಿಜೆಪಿಯ ಒಂದು ವಿಂಗ್ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ರಾಜಕಾರಣದಲ್ಲಿ ಅನುರಾಗ್ ಠಾಕೂರ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಇರುವಂತೆ ಬಿಸಿಸಿಐನಲ್ಲಿ ಕೇಂದ್ರ ಗೃಹಸಚಿವ ಅಮಿತ್‍ಷಾ ಪುತ್ರ ಜೈಷಾ ಇದ್ದಾರೆ. ಇಂತಹ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದೆ ಎಂದು ರಾಹುಲ್ ಲೇವಡಿ ಮಾಡಿದ್ದರು.

ಇದಕ್ಕೆ ತಿರುಗೇಟು ಕೊಟ್ಟಿರುವ ಹಿಮಂತ್ ಬಿಸ್ವಾಸ್, ಅನುರಾಗ್ ಠಾಕೂರ್ ಹಾಗೂ ಪಂಕಜ್ ಸಿಂಗ್ ತಮ್ಮ ಪರಿಶ್ರಮದ ಮೇಲೆ ಗೆದಿದ್ದಾರೆ. ಬಿಸಿಸಿಐ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದಕ್ಕೂ ಬಿಜೆಪಿಗೂ ಏನು ಸಂಬಂಧ. ವಂಶ ಪಾರಂಪರ್ಯದ ರಾಜಕಾರಣದ ಅರ್ಥವೇ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಬಿಸಿಸಿಐ ಬಿಜೆಪಿಯ ಒಂದು ವಿಂಗ್ ಎಂದು ಹೇಳುವ ರಾಹುಲ್ ಗಾಂಧಿ ಓರ್ವ ಅನಕ್ಷರಸ್ಥ ಎಂದು ವ್ಯಂಗ್ಯವಾಡಿದರು.

ಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಅಮಿತ್ ಷಾ ಅವರ ಪುತ್ರ ಜೈಷಾ ಬಿಜೆಪಿಯಲ್ಲಿ ಇಲ್ಲ. ಅವರು ಬಿಸಿಸಿಐನ ಕಾರ್ಯದರ್ಶಿ. ಚುನಾವಣೆ ಮೂಲಕ ಗೆದ್ದು ಆಯ್ಕೆಯಾಗಿದ್ದಾರೆ. ರಾಹುಲ್ ಗಾಂಧಿ ಕುಟುಂಬದವರ ತರ ರಾಜಕೀಯದಲ್ಲಿ ಇಲ್ಲ. ಮುತ್ತಾತ, ತಾತ, ಅಜ್ಜಿ, ಅಪ್ಪ ತಾಯಿ, ಸಹೋದರಿ ಹೀಗೆ ಪ್ರತಿಯೊಬ್ಬರು ಕೂಡ ರಾಜಕಾರಣದಲ್ಲಿದ್ದಾರೆ. ಇದನ್ನೇ ಕುಟುಂಬ ರಾಜಕಾರಣ ಎಂದು ಕರೆಯುತ್ತಾರೆ.

ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಎಂದಿಗೂ ಕೂಡ ಬಿಜೆಪಿಯನ್ನು ನಿಯಂತ್ರಿಸಿಲ್ಲ. ಇಂದು ಕಾಂಗ್ರೆಸ್ ಪಕ್ಷಕ್ಕೆ ಎಐಸಿಸಿ ಅಧ್ಯಕ್ಷರಿದ್ದರೂ ಇಡೀ ಪಕ್ಷವನ್ನು ನಿಯಂತ್ರಿಸುತ್ತಿರುವುದು ಪ್ರಿಯಾಂಕ ಗಾಂಧಿ ಎಂದು ಕಿಡಿಕಾರಿದ್ದಾರೆ.

3 ದಿನಗಳ ಬಿಹಾರ ಪ್ರವಾಸದಲ್ಲಿ ರಾಷ್ಟ್ರಪತಿ ಮುರ್ಮು

ಪಾಟ್ನಾ, ಅ 18 (ಪಿಟಿಐ)- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೂರು ದಿನಗಳ ಪ್ರವಾಸಕ್ಕೆಂದು ಬಿಹಾರಕ್ಕೆ ಆಗಮಿಸಿದ್ದಾರೆ. ತಮ್ಮ ಪ್ರವಾಸ ಸಂದರ್ಭದಲ್ಲಿ ಅವರು ರಾಜ್ಯದ ಕೃಷಿ ಮಾರ್ಗ ನಕ್ಷೆಯ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ ಮತ್ತು ಘಟಿಕೋತ್ಸವ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುರ್ಮು ಅವರು ಬೆಳಿಗ್ಗೆ 11.30 ರ ಸುಮಾರಿಗೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಅಲ್ಲಿಂದ ಅವರು ನೇರವಾಗಿ ನಾಲ್ಕನೇ ಕೃಷಿ ರಸ್ತೆ ನಕ್ಷೆಯನ್ನು (2023-2028) ಉದ್ಘಾಟಿಸಲು ಗಾಂಧಿ ಮೈದಾನದ ಬಳಿಯಿರುವ ಬಾಪು ಸಭಾಗರ್‍ಗೆ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷಿ ಉತ್ಪನ್ನ ಮತ್ತು ರೈತರ ಆದಾಯವನ್ನು ಸುಧಾರಿಸಲು 2007 ರಲ್ಲಿ ಬಿಹಾರದಲ್ಲಿ ಮೊದಲ ರಸ್ತೆ ನಕ್ಷೆಯನ್ನು ಪ್ರಾರಂಭಿಸಲಾಯಿತು.

ಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ನಾಳೆ ಮುರ್ಮು ಅವರು, ಮೋತಿಹಾರಿಯಲ್ಲಿ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಅಲಂಕರಿಸಲಿದ್ದಾರೆ. ಅದೇ ದಿನ, ಅವರು ರಾಜಭವನದಲ್ಲಿ ಬಿಹಾರದ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ, ರಾಷ್ಟ್ರಪತಿಗಳು ಪಾಟ್ನಾದ ಏಮ್ಸ್‍ನ ಮೊದಲ ಘಟಿಕೋತ್ಸವವನ್ನು ಅಲಂಕರಿಸಲಿದ್ದಾರೆ.

ಅ 20 ರಂದು, ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವವನ್ನು ಅಲಂಕರಿಸಲು ರಾಷ್ಟ್ರಪತಿಗಳು ಗಯಾಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮುರ್ಮು ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಶಹನವಾಜ್ ಹುಸೇನ್ ವಿರುದ್ಧದ ಸಮನ್ಸ್ ಗೆ ವಿಶೇಷ ಕೋರ್ಟ್ ತಡೆ

ನವದೆಹಲಿ,ಅ. 18 (ಪಿಟಿಐ) ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಬಿಜೆಪಿ ಮುಖಂಡ ಸೈಯದ್ ಶಾಹನವಾಜ್ ಹುಸೇನ್ ವಿರುದ್ಧ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‍ಗೆ ವಿಶೇಷ ನ್ಯಾಯಾಲಯ ತಡೆ ನೀಡಿದೆ.

ಹುಸೇನ್ ಅವರಿಗೆ ಅ.20ರಂದು ವಿಚಾರಣೆಗೆ ಹಾಜರಾಗುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ಧ ಹುಸೇನ್ ಅವರು ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಈ ಆದೇಶ ಹೊರಡಿಸಿದ್ದಾರೆ.

ತಮ್ಮ ಆದೇಶದಲ್ಲಿ,ನ್ಯಾಯಾಧೀಶರು ಅರ್ಜಿಯ ಬಗ್ಗೆ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದರು ಮತ್ತು ನವೆಂಬರ್ 8 ರೊಳಗೆ ಅವರ ಪ್ರತಿಕ್ರಿಯೆಯನ್ನು ಕೇಳಿದರು. ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಸಲ್ಲಿಸುತ್ತಿರುವ ಸಲ್ಲಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿಯವರೆಗೆ, ಪ್ರಕರಣದ ತಡೆಹಿಡಿಯಲಾದ ಆದೇಶದ ಕಾರ್ಯಾಚರಣೆ ಮತ್ತು ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಇದಕ್ಕೂ ಮೊದಲು, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಪಾದಿತ ಅಪರಾಧದ ಅರಿವನ್ನು ಪಡೆದುಕೊಂಡಿತು ಮತ್ತು ಅಕ್ಟೋಬರ್ 20 ರಂದು ತನ್ನ ಮುಂದೆ ಹಾಜರಾಗುವಂತೆ ಮಾಜಿ ಕೇಂದ್ರ ಸಚಿವರಿಗೆ ಸೂಚಿಸಿತ್ತು. 2018 ರ ಏಪ್ರಿಲ್‍ನಲ್ಲಿ ರಾಷ್ಟ್ರ ರಾಜಧಾನಿಯ ಪಾರ್ಮ್‍ಹೌಸ್‍ನಲ್ಲಿ ಹುಸೇನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. FIR ರದ್ದುಗೊಳಿಸುವಂತೆ ಕೋರಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಅ 10 ರಂದು ನೀಡಲಾದ ಆದೇಶದಲ್ಲಿ, ನ್ಯಾಯಾಧಿಶರು ಪೊಲೀಸ್ ವರದಿಯನ್ನು ವಜಾಗೊಳಿಸಿದರು, ರದ್ದತಿ ವರದಿಯನ್ನು ಸಲ್ಲಿಸುವಾಗ ತನಿಖಾಧಿಕಾರಿಯು ಪ್ರಸ್ತಾಪಿಸಿದ ವಿಷಯಗಳು ವಿಚಾರಣೆಯ ಸಮಯದಲ್ಲಿ ನಿರ್ಧರಿಸಬಹುದಾದ ವಿಷಯಗಳಾಗಿವೆ ಎಂದು ಹೇಳಿದರು.

ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಅಪರಾಧ ಬೆದರಿಕೆ) ಸೇರಿದಂತೆ ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಆಪಾದಿತ ಅಪರಾಧಗಳ ಕುರಿತು ನ್ಯಾಯಾಧಿಶರು ಗಮನ ಸೆಳೆದರು. ಪ್ರಥಮ ಮಾಹಿತಿ ವರದಿ ದಾಖಲಿಸಿ ತನಿಖೆ ಆರಂಭಿಸಲು ದೆಹಲಿ ಹೈಕೋರ್ಟ್‍ನ ಆದೇಶವನ್ನು ಪ್ರಶ್ನಿಸಿ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿಯಲ್ಲಿ ವಜಾಗೊಳಿಸಿತ್ತು.

ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು ಮತ್ತು ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಪರಿಹಾರಗಳು ಹುಸೇನ್ ಅವರಿಗೆ ಮುಕ್ತವಾಗಿದೆ ಎಂದು ಹೇಳಿದರು. ತನ್ನ ವಿರುದ್ಧ FIR ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಕಳೆದ ವರ್ಷ ಆಗಸ್ಟ್ 17ರಂದು ವಜಾಗೊಳಿಸಿತ್ತು, 2018ರ ಆದೇಶದಲ್ಲಿ ಯಾವುದೇ ವಿಕೃತಿ ಇಲ್ಲ ಎಂದು ಹೇಳಿತ್ತು.

2018 ರಲ್ಲಿ, ದೆಹಲಿ ಮೂಲದ ಮಹಿಳೆಯು ಅತ್ಯಾಚಾರದ ಆರೋಪಕ್ಕಾಗಿ ಹುಸೇನ್ ವಿರುದ್ಧ FIR ದಾಖಲಿಸಲು ಕೋರಿ ಕೆಳ ನ್ಯಾಯಾಲಯವನ್ನು ಸಂಪರ್ಕಿಸಿದ್ದರು, ಆದರೆ ಬಿಜೆಪಿ ನಾಯಕ ನಿರಾಕರಿಸಿದರು. ಜುಲೈ 7, 2018 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹುಸೇನ್ ವಿರುದ್ಧ FIR ದಾಖಲಿಸಲು ಆದೇಶಿಸಿತ್ತು, ದೂರಿನಲ್ಲಿ ಕಾಗ್ನಿಸೇಬಲ್ ಅಪರಾಧವನ್ನು ಮಾಡಲಾಗಿದೆ ಎಂದು ಹೇಳಿದರು.

20 ವರ್ಷಗಳ ನಂತರ ಸಿಕ್ಕಿಬಿದ್ದ ಚಾಣಾಕ್ಷ ಕೊಲೆಗಾರ..!

ದೆಹಲಿ,ಅ.18-ಇಪ್ಪತ್ತು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರ ಹತ್ಯೆ ಮಾಡಿ, ಇತರ ಇಬ್ಬರಿಗೆ ಬೆಂಕಿ ಹಚ್ಚಿದ ಆರೋಪ ನಂತರ ನಾಪತ್ತೆಯಾಗಿದ್ದ ನೌಕಾ ಪಡೆಯ ಮಾಜಿ ನೌಕರನನ್ನು ಬಂಧಿಸುವಲ್ಲಿ ದೆಹಲಿ ಅಪರಾಧ ವಿಭಾಗದ ಹಿರಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 60 ವರ್ಷದ ಬಾಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ 20 ವರ್ಷಗಳಿಂದ ಈತ ತನ್ನ ಹೆಸರನ್ನು ಅಮಾನ್‍ಸಿಂಗ್ ಎಂದು ಬದಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ರವೀಂದರ್ ಯಾದವ್ ತಿಳಿಸಿದ್ದಾರೆ.

ದೆಹಲಿಯ ಬವಾನಾ ಪ್ರದೇಶದಲ್ಲಿ 2004 ರಲ್ಲಿ ನಡೆದ ಕೊಲೆಗೆ ಬೇಕಾಗಿದ್ದ ವ್ಯಕ್ತಿ ಸುಮಾರು 30 ಕಿಮೀ ದೂರದಲ್ಲಿರುವ ನಜಾಫಗಢದಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ಬಂದ ನಂತರ ಈಗ 60 ವರ್ಷದ ಬಾಲೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅವರ ಅನುಮಾನಗಳನ್ನು ದೃಢಪಡಿಸಿದ ತನಿಖೆಯ ನಂತರ ಪೊಲೀಸರು ಕುಮಾರ್ ಅವರನ್ನು ಬಂಧಿಸಿದಾಗ, 20 ವರ್ಷಗಳ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಮೂಲತಃ ಹರಿಯಾಣದವರಾದ ಕುಮಾರ್ ಅವರು 8 ನೇ ತರಗತಿಯವರೆಗೆ ಓದಿದ್ದರು. ಅವರು 1981 ರಲ್ಲಿ ನೌಕಾಪಡೆಗೆ ಸೇರಿ 1996 ರಲ್ಲಿ ನಿವೃತ್ತರಾದರು. ನಂತರ ಅವರು ಸಾರಿಗೆ ಉದ್ಯಮವನ್ನು ಪ್ರಾರಂಭಿಸಿದರು ಮತ್ತು ತಮ್ಮ ಕುಟುಂಬದೊಂದಿಗೆ ದೆಹಲಿಯ ಉತ್ತಮ್ ನಗರದಲ್ಲಿ ವಾಸಿಸುತ್ತಿದ್ದರು.

2004 ರಲ್ಲಿ ದೆಹಲಿಯ ಸಮಯಪುರ ಬದ್ಲಿಯಲ್ಲಿ ರಾಜೇಶ್ ಎಂಬ ವ್ಯಕ್ತಿಯನ್ನು ತಾನು ಮತ್ತು ತನ್ನ ಸಹೋದರ ಸುಂದರ್ ಲಾಲ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದೇವು ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಕುಮಾರ್ ಮತ್ತು ರಾಜೇಶ್ ಅವರ ಪತ್ನಿಯ ನಡುವೆ ವಿವಾಹೇತರ ಸಂಬಂಧದ ಬಗ್ಗೆ ಜಗಳ ನಡೆದಾಗ ಮೂವರು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಮದ್ಯದ ಅಮಲಿನಲ್ಲಿದ್ದ ಕುಮಾರ್ ಹಾಗೂ ಆತನ ಸಹೋದರ ರಾಜೇಶ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ನಂತರ ಕುಮಾರ್ ಎಸ್ಕೇಪ್ ಪ್ಲಾನ್ ಮಾಡಿದರು. ಅವರು ಬಿಹಾರದ ಇಬ್ಬರು ಕಾರ್ಮಿಕರನ್ನು ನೇಮಿಸಿಕೊಂಡರು, ದೆಹಲಿಯ ಸಮಯಪುರ ಬದ್ಲಿಯಿಂದ ಮನೋಜ್ ಮತ್ತು ಮುಖೇಶ್ ಎಂಬುವರಿಗೆ ಕೆಲಸ ಮಾಡುವ ಭರವಸೆ ನೀಡಿದರು. ನಂತರ ಮೂವರು ಕುಮಾರ್ ಸಹೋದರನ ಟ್ರಕ್‍ನಲ್ಲಿ ರಾಜಸ್ಥಾನಕ್ಕೆ ತೆರಳಿದರು. ಜೋಧ್‍ಪುರದಲ್ಲಿ, ಕುಮಾರ್ ಟ್ರಕ್‍ಗೆ ಬೆಂಕಿ ಹಚ್ಚಿದರು, ಒಳಗಿದ್ದ ಕಾರ್ಮಿಕರೊಂದಿಗೆ. ನಂತರ ಅವರು ತಮ್ಮ ದಾಖಲೆಗಳನ್ನು ಒಳಗೆ ಬಿಟ್ಟರು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅದರಲ್ಲಿ ಒಂದು ಶವ ಕುಮಾರ್ ಅವರದ್ದು ಎಂದು ಗುರುತಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ.

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ : ಇಬ್ಬರು ಪೊಲೀಸರ ಬಂಧನ

ರಾಜೇಶ್ ಹತ್ಯೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಸುಂದರ್ ಲಾಲ್ ಎಂಬಾತನನ್ನು ಬಂ„ಸಲಾಗಿದ್ದು, ಟ್ರಕ್ ಬೆಂಕಿಯಲ್ಲಿ ಕುಮಾರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಕುಮಾರ್ ಅವರ ಪತ್ನಿ ಪಿಂಚಣಿ ಪ್ರಯೋಜನಗಳು ಮತ್ತು ಜೀವ ವಿಮಾ ಮೊತ್ತವನ್ನು ಪಡೆದರು. ಟ್ರಕ್‍ನ ವಿಮೆಯನ್ನು ಸಹ ಅವರ ಪತ್ನಿಗೆ ಕಳುಹಿಸಲಾಗಿದೆ. ಅದೃಷ್ಟ ಮುಗಿಯುವವರೆಗೂ ಅವನ ಹಿಂದಿನ ಗುರುತು ಮತ್ತು ಅಪರಾಧಗಳು ಬಯಲಿಗೆ ಬಂದಿರಲಿಲ್ಲ.

ಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು

ಜೆರುಸಲೇಂ,ಅ.18- ಗಾಜಾ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲೆ ಗಾಜಾ ಭಯೋತ್ಪಾದಕರು ಹಾರಿಸಿದ ರಾಕೆಟ್ ಮಿಸ್‍ಫೈರ್ ಆದ ಪರಿಣಾಮ 500 ಮಂದಿ ಸ್ಥಳೀಯರು ಸಾವನ್ನಪ್ಪಿದ್ದಾರೆ. ಈ ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಮೊದಲು ಶಂಕಿಸಲಾಗಿತ್ತು. ಆದರೆ ಇದೀಗ ಗಾಜಾ ಪಟ್ಟಣದಲ್ಲಿರುವ ಅಲ್-ಅಹಿಲ್ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ 500 ಮಂದಿ ಸಾವಿಗೆ ಅಲ್ಲಿನ ಭಯೋತ್ಪಾದಕರೇ ಕಾರಣ ಎಂಬುದು ದೃಢಪಟ್ಟಿದೆ.

ಗಾಜಾ ಉಗ್ರರು ಇಸ್ರೇಲಿ ಸೈನಿಕರನ್ನು ಗುರಿಯಾಗಿಟ್ಟುಕೊಂಡು ರಾಕೆಟ್ ಉಡಾವಣೆ ಮಾಡಲು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ರಾಕೆಟ್ ಇಸ್ರೇಲ್ ಸೇನಾ ಪಡೆ ಬಳಿ ಸ್ಪೋಟಗೊಳ್ಳುವ ಬದಲು ಗಾಜಾದಲ್ಲಿರುವ ಆಸ್ಪತ್ರೆ ಬಳಿ ಸ್ಪೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಇಸ್ರೇಲ್ ಸೇನಾ ಪಡೆ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ಗಾಜಾ ಉಗ್ರರಿಗೆ ರಾಕೆಟ್ ಉಡಾವಣೆ ಮಾಡುವ ಬಗ್ಗೆ ಯಾವುದೇ ತರಬೇತಿ ಇರಲಿಲ್ಲ. ಉಗ್ರರು ನೀರಿನ ಪೈಪ್‍ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು.

ವೈಮಾನಿಕ ದಾಳಿಯ ತೀವ್ರತೆಗೆ ಅಲ್ ಅಹ್ಲಿ ಆಸ್ಪತ್ರೆಯ ಕಟ್ಟಡ ನಾಶಗೊಂಡಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಗಾಜಾದಲ್ಲಿ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಇವುಗಳ ಅಡಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರಬಹುದು ಎಂದು ಸೇನೆ ತಿಳಿಸಿದೆ.

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಈ ದಾಳಿಯ ಸಮಯದಲ್ಲಿ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶ್ವಸಂಸ್ಥೆ ನಿರಾಶ್ರೀತರ ಕೇಂದ್ರಕ್ಕೂ ಹಾನಿಯಾಗಿದೆ. 500ಕ್ಕೂ ಅಕ ಮಂದು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳಿಂದ ದೇಹಗಳನ್ನು ತೆಗೆಯುತ್ತಿದ್ದಾರೆ.

ಇಸ್ರೇಲ್‍ನ 11 ದಿನಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 3,000 ಜನರು ಸಾವನ್ನಪ್ಪಿದ್ದಾರೆ. ಇದು ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದ ಬಳಿಕ ಒಂದೇ ಸ್ಥಳದಲ್ಲಿ ದಾಖಲಾದ ಹೆಚ್ಚಿನ ಸಾವಿನ ಪ್ರಮಾಣವಾಗಿದೆ. ಇನ್ನು ಪ್ಯಾಲೇಸ್ತೀನ್ ಸರ್ಕಾರ 3 ದಿನಗಳ ಮೌನಾಚರಣೆ ಘೋಷಣೆ ಮಾಡಿದೆ. ಈ ನಡುವೆ ಇಸ್ರೇಲ್ ಸತತ ದಾಳಿಯಿಂದಾಗಿ ಗಾಜಾ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಲುಪಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ನೀರು, ಆಹಾರ ಹಾಗೂ ವಿದ್ಯುತ್ ಕೊರತೆ ಎದುರಾಗಿದೆ.

ಆಸ್ಪತ್ರೆಯ ಮೇಲೆ ರಾಕೆಟ್ ಬೀಳುತ್ತಿರುವ ವಿಡಿಯೋವನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದ್ದು, ಹಮಾಸ್ ದಾಳಿ ನಡೆಸುತ್ತಿದ್ದಾಗ ಆಸ್ಪತ್ರೆಯ ಮೇಲೆ ರಾಕೆಟ್ ಬಿದ್ದಿದೆ ಎಂದು ಸೇನೆ ಹೇಳಿಕೊಂಡಿದೆ. ಗಾಜಾದಲ್ಲಿ ಬಾಂಬ್ ದಾಳಿ ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಅ.7ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್‍ಗಳಿಂದ ದಾಳಿ ನಡೆಸಿತ್ತು.

ಛತ್ತೀಸ್‍ಗಢದಲ್ಲಿ 5.5 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳ ವಶ

ಅಷ್ಟೇ ಅಲ್ಲದೆ ಕಂಡ ಕಂಡಲ್ಲಿ ಜನರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದೆ. ಒಟ್ಟಾರೆ ಘಟನೆಯಲ್ಲಿ ಇದುವರೆಗೆ 4 ಸಾವಿರಕ್ಕೂ ಅಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಗಾಜಾ ಮೇಲೆ ನಾವು ಬಾಂಬ್ ದಾಳಿ ನಡೆಸುತ್ತೇವೆ ನಾಗರಿಕರೆಲ್ಲರೂ ಗಾಜಾದ ದಕ್ಷಿಣ ಭಾಗಕ್ಕೆ ಹೋಗಿ ಎಂದು ಇಸ್ರೇಲ್ ಹೇಳಿತ್ತು ಹೀಗಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಗಾಜಾ ತೊರೆದಿದ್ದರು. ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಿರಿಯ ಹಮಾಸ್ ಅಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಘಟನೆಯನ್ನು ಜೋರ್ಡಾನ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ಗಾಜಿಯಾಬಾದ್, ಅ.17- ಮಲತಾಯಿ ತನ್ನ ಮಲಮಗನನ್ನು ಹತ್ಯೆ ಮಾಡಿ ಶವವನ್ನು ಒಳಚರಂಡಿ ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಘಟನೆ ಇಲ್ಲಿನ ಗೋವಿಂದ್‍ಪುರಿಯಲ್ಲಿ ನಡೆದಿದೆ. ಮಲತಾಯಿಯಿಂದಲೇ ಹತ್ಯೆಯಾದ ಮಲಮಗನನ್ನು 11 ವರ್ಷದ ಬಾಲಕ ಶಾದಾಬ್ ಎಂದು ಗುರುತಿಸಲಾಗಿದ್ದು, ಮಲತಾಯಿ ರೇಖಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 15 ರಂದು ಶಾದಾಬ್ ನಾಪತ್ತೆಯಾಗಿದ್ದ ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆತ ಮನೆಯಿಂದ ಹೊರಬಾರದಿರುವುದು ಪತ್ತೆಯಾಗಿತ್ತು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಮನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಳಚರಂಡಿ ತೊಟ್ಟಿಯಲ್ಲಿ ಅಪ್ರಾಪ್ತನ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಆಯುಕ್ತ (ಮೋದಿ ನಗರ ವೃತ್ತ) ಜ್ಞಾನ್ ಪ್ರಕಾಶ್ ರೈ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಆತನ ಮಲತಾಯಿ ರೇಖಾ ತನ್ನ ಸ್ನೇಹಿತೆ ಪೂನಂ ಸಹಾಯದಿಂದ ಶಾಬಾದ್‍ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿದರು.

ವಿಶ್ವಕ್ಕೆ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯ ಭಾರತಕ್ಕಿದೆ : ಜೈಶಂಕರ್

ಇದು ಪೂರ್ವಯೋಜಿತ ಕೊಲೆ ಎಂದು ರೇಖಾ ಪೊಲೀಸರಿಗೆ ತಿಳಿಸಿದ್ದು, ಶಾಬಾದ್ ಹೊರಗೆ ಆಟವಾಡಿದ ನಂತರ ಮನೆಗೆ ಹಿಂದಿರುಗಿದಾಗ ತಾನು ಅಪರಾಧ ಮಾಡಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ, ರಾಹುಲ್ ಸೇನ್ ಅವರ ಎರಡನೇ ಪತ್ನಿ ರೇಖಾ ಅವರು ತಮ್ಮ ಮಲಮಗನನ್ನು ಇಷ್ಟಪಡಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸೇನ್ ಅವರು ಸಲೂನ್ ನಡೆಸುತ್ತಿದ್ದಾರೆ ಮತ್ತು ಮೂರು ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.

ರೇಖಾ ತನ್ನ ಪತಿ ಮತ್ತು ಅತ್ತೆಯ ಮುಂದೆ ತನ್ನ ಮಲಮಗನ ಅಪಹರಣದ ಕಥೆಯನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಬಾದ್ ಹತ್ಯೆಗೆ ಸಹಕರಿಸಿದ ರೇಖಾ ಮತ್ತು ಆಕೆಯ ಸ್ನೇಹಿತೆ ಪೂನಂ ಅವರನ್ನು ಇಂದು ಸಂಜೆ ಜೈಲಿಗೆ ಕಳುಹಿಸಲಾಗಿದೆ ಎಂದು ಎಸಿಪಿ ರೈ ತಿಳಿಸಿದ್ದಾರೆ.

ತೆಲಂಗಾಣದಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳು ವಶ

ಹೈದರಾಬಾದ್,ಅ.18- ಚುನಾವಣೆಗೆ ದಿನಾಂಕ ನಿಗದಿಯಾದ ದಿನದಿಂದ ಇದುವರೆಗೂ ತೆಲಂಗಾಣದಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣದಲ್ಲಿ ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ತೆಲಂಗಾಣದಲ್ಲಿ ಚುನಾವಣಾ ಸಂಬಂಧ ವಶಪಡಿಸಿಕೊಂಡ ಪ್ರಕರಣಗಳು 100 ಕೋಟಿ ದಾಟಿದೆ.

ಛತ್ತೀಸ್‍ಗಢದಲ್ಲಿ 5.5 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳ ವಶ

58.96 ಕೋಟಿ ನಗದು, 64.2 ಕೆಜಿ ಚಿನ್ನ, 400 ಕೆಜಿ ಬೆಳ್ಳಿ, 42.203 ಕ್ಯಾರೆಟ್ ವಜ್ರ, 6.64 ಕೋಟಿ ಮೌಲ್ಯದ ಮದ್ಯ, 2.97 ಕೋಟಿ ಮೌಲ್ಯದ ಗಾಂಜಾ ಮತ್ತು 6.89 ಕೋಟಿ ಮೌಲ್ಯದ ಇತರೆ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ಅ 9 ರಿಂದ ಇಲ್ಲಿಯವರೆಗೆ ಕಾನೂನು ಜಾರಿ ಸಂಸ್ಥೆಗಳಿಂದ ಒಟ್ಟು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 109.11 ಕೋಟಿ ಎಂದು ಅದು ಹೇಳಿದೆ. ರಾಜ್ಯದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. ಪೊಲೀಸರು ಮತ್ತು ಇತರ ಜಾರಿ ಸಂಸ್ಥೆಗಳು ಅಕ್ರಮ ಹಣ, ಡ್ರಗ್ಸ್, ಮದ್ಯ, ಉಚಿತ ಮತ್ತು ಇತರ ಪ್ರಚೋದನೆಗಳ ವಿರುದ್ಧ ರಾಜ್ಯವ್ಯಾಪಿ ಜಾರಿ ಪ್ರಯತ್ನಗಳನ್ನು ತೀವ್ರಗೊಳಿಸಿವೆ.