Home Blog Page 1914

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಗೆಲುವು

ಹ್ಯಾಂಗ್‍ಝೌ, ಅ 6 (ಪಿಟಿಐ) ಪುರುಷರ ಕ್ರಿಕೆಟ್ ಸ್ಪರ್ಧೆಯಲ್ಲಿ ಪ್ರಶಸ್ತಿ ಫೆವರಿಟ್ ತಂಡವಾಗಿರುವ ಭಾರತ ಇಂದು ಇಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಬಾಂಗ್ಲಾದೇಶ ವಿರುದ್ಧ ಒಂಬತ್ತು ವಿಕೆಟ್‍ಗಳ ಜಯ ಸಾಧಿಸುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದೆ. ಟಾಸ್ ಗೆದ್ದ ನಂತರ ಮೊದಲು ಫೀಲ್ಡಿಂಗ್ ಮಾಡುವ ಭಾರತದ ನಾಯಕ ರುತುರಾಜ್ ಗಾಯಕ್ವಾಡ್ ಅವರ ನಿರ್ಧಾರವನ್ನು ಅವರ ಬೌಲರ್‍ಗಳು ಸಮರ್ಥಿಸಿಕೊಂಡರು, ಅವರು ಬಾಂಗ್ಲಾದೇಶವನ್ನು ಒಂಬತ್ತು ವಿಕೆಟ್‍ಗೆ 96 ಕ್ಕಿಂತ ಕಡಿಮೆ ಮಟ್ಟಕ್ಕೆ ನಿರ್ಬಂಧಿಸುವಲ್ಲಿ ಯಶಸ್ವಿಯಾದರು.

ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ಪ್ರತ್ಯುತ್ತರವಾಗಿ, ಭಾರತೀಯರು ಯಾವುದೇ ತೊಂದರೆಯನ್ನು ಎದುರಿಸಲಿಲ್ಲ ಮತ್ತು ಕಾಂಟಿನೆಂಟಲ್ ಶೋಪೀಸ್‍ನಲ್ಲಿ ನಡೆದ ಕ್ರಿಕೆಟ್ ಸ್ಪರ್ಧೆಯಲ್ಲಿ ತಮ್ಮ ಮೊದಲ ಪ್ರದರ್ಶನದಲ್ಲಿ ಫೈನಲ್‍ಗೆ ಪ್ರವೇಶಿಸಲು 9.2 ಓವರ್‍ಗಳಲ್ಲಿ ಗೆಲುವು ಸಾಧಿಸಿದರು.

ಭಾರತ ಮೊದಲ ಓವರ್‍ನಲ್ಲೇ ಪ್ರತಿಭಾವಂತ ಯಶಸ್ವಿ ಜೈಸ್ವಾಲ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು ಆದರೆ ನಾಯಕ ಗಾಯಕ್‍ವಾಡ್ (26 ಎಸೆತಗಳಲ್ಲಿ 40; 4 ಬೌಂಡರಿ, ಮೂರು 6) ಮತ್ತು ತಿಲಕ್ ವರ್ಮಾ (55; 26 ಎರಡು 4 ಮತ್ತು ಆರು ಸಿಕ್ಸ್ ಸಿಡಿಸುವ ಮೂಲಕ ಬಾಂಗ್ಲಾದೇಶವನ್ನು ಇನ್ನು 64 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿದರು.

ವಿಜಯೇಂದ್ರಗೆ ಪಟ್ಟ ಕಟ್ಟಲು ಬಿಎಸ್‍ವೈ ಕಸರತ್ತು

ಶನಿವಾರ ನಡೆಯಲಿರುವ ಚಿನ್ನದ ಪದಕದ ಹಣಾಹಣಿಯಲ್ಲಿ ಭಾರತವು ಪಾಕಿಸ್ತಾನ ಮತ್ತು ಅಘಾನಿಸ್ತಾನದ ವಿಜೇತರನ್ನು ಎದುರಿಸಲಿದೆ. ಸಾಯಿ ಕಿಶೋರ್ ಅವರು ನಾಲ್ಕು ಓವರ್‍ಗಳಿಂದ 3/12 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಮುಗಿಸಿದ ಕಾರಣ ಭಾರತಕ್ಕೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು, ಆದರೆ ವಾಷಿಂಗ್ಟನ್ ಸುಂದರ್ ಸಹ ಪ್ರಭಾವಶಾಲಿಯಾಗಿ ಬೌಲಿಂಗ್ ಮಾಡಿ ಅವರ ಸಂಪೂರ್ಣ ಕೋಟಾದಲ್ಲಿ 2/15 ರೊಂದಿಗೆ ಅಚ್ಚುಕಟ್ಟಾಗಿ ಕೊನೆಗೊಂಡರು. ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಷ್ಣೋಯ್ ಮತ್ತು ಶಹಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಕಂಚು ಗೆದ್ದ ಭಾರತ ಮಹಿಳಾ ರಿಕರ್ವ್ ತಂಡ

ಹ್ಯಾಂಗ್‍ಝೌ, ಅ 6 (ಪಿಟಿಐ) ಏಷ್ಯನ್ ಗೇಮ್ಸ್‍ನ ರಿಕರ್ವ್ ವಿಭಾಗದಲ್ಲಿ ಭಾರತದ ಬಿಲ್ಲುಗಾರರು 13 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು, ಅಂಕಿತಾ ಭಕತ್, ಸಿಮ್ರಂಜೀತ್ ಕೌರ್ ಮತ್ತು ಭಜನ್ ಕೌರ್‍ಅವರನ್ನೊಳಗೊಂಡ ಮಹಿಳಾ ತಂಡ ವಿಯೆಟ್ನಾಂ ಅನ್ನು ಸೋಲಿಸಿ ಇಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಕಂಚು ಗೆದ್ದಿತು.

ಐದನೇ ಶ್ರೇಯಾಂಕದ ಮೂವರು ಮಹಿಳೆಯರು ತಮ್ಮ ವಿಯೆಟ್ನಾಂ ಪ್ರತಿಸ್ಪರ್„ಗಳಾದ ದೋ ಥಿ ಅನ್ ನ್ಗುಯೆಟ್ , ನ್ಗುಯೆನ್ ಥಿ ಥಾನ್ ನ್ಹಿ ಮತ್ತು ಹೊವಾಂಗ್ ವಾಂಗ್ ಥಾವೊ ಅವರನ್ನು 6-2 (56-52, 55-56, 57-50, 51-48) ಅಂತರದಿಂದ ಸೋಲಿಸಿ ಕಂಚು ಪದಕ ಪಡೆದುಕೊಂಡಿದೆ.

ಭಾರತಕ್ಕೆ ಇದು ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಆರ್ಚರಿಯಲ್ಲಿ ಅವರ ದಾಖಲೆಯ ಏಳನೇ ಪದಕವಾಗಿದೆ. ಅವರು ಈಗಾಗಲೇ ಸಂಯುಕ್ತ, ಮಿಶ್ರ, ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಮೂರು ತಂಡಗಳ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ವಿಜಯೇಂದ್ರಗೆ ಪಟ್ಟ ಕಟ್ಟಲು ಬಿಎಸ್‍ವೈ ಕಸರತ್ತು

ಅಭಿಷೇಕ್ ವರ್ಮಾ ಮತ್ತು ಓಜಸ್ ಡಿಯೋಟಾಲೆ ಅವರು ಸಂಯುಕ್ತ ವೈಯಕ್ತಿಕ ವಿಭಾಗದಲ್ಲಿ ಅಗ್ರ-ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜ್ಯೋತಿ ಸುರೇಖಾ ವೆನ್ನಂ ಕೂಡ ಮಹಿಳಾ ಕಾಂಪೌಂಡ್ ವೈಯಕ್ತಿಕ ಫೈನಲ್‍ಗೆ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.ಗುವಾಂಗ್‍ಝೌ 2010ರ ನಂತರ ಏಷ್ಯನ್ ಗೇಮ್ಸ್‍ನಲ್ಲಿ ಒಲಿಂಪಿಕ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

2010 ರಲ್ಲಿ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಕೊನೆಯ ಬಾರಿಗೆ ರಿಕರ್ವ್ ವಿಭಾಗದಲ್ಲಿ ಪದಕವನ್ನು ಗೆದ್ದುಕೊಂಡಿತ್ತು, ಅವರು ವೈಯಕ್ತಿಕ ಬೆಳ್ಳಿ ಮತ್ತು ಪುರುಷರ ಮತ್ತು ಮಹಿಳೆಯರ ಟೀಮ್ ಈವೆಂಟ್‍ಗಳಲ್ಲಿ ತಂಡ ಕಂಚಿನ ಪದಕಗಳನ್ನು ಪಡೆದರು.

ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ಹ್ಯಾಂಗ್‍ಝೌ, ಅ 6 (ಪಿಟಿಐ) -ಇಲ್ಲಿ ನಡೆದ ಮಹಿಳೆಯರ ಕಬಡ್ಡಿ ಸ್ಪರ್ಧೆಯಲ್ಲಿ ನೇಪಾಳ ವಿರುದ್ಧ 61-17 ಅಂತರದ ಜಯ ಸಾ„ಸುವ ಮೂಲಕ ಎರಡು ಬಾರಿಯ ಮಾಜಿ ಚಾಂಪಿಯನ್ ಭಾರತ ಏಷ್ಯನ್ ಗೇಮ್ಸ್‍ನ ಸತತ ನಾಲ್ಕನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದೆ.

ಕಳೆದ ಆವೃತ್ತಿಯ ರನ್ನರ್-ಅಪ್ ಆಗಿದ್ದ ಭಾರತವು ತಮ್ಮ ಪ್ರತಿಸ್ಪರ್ಗಧಿಳಿಂದ ಸ್ವಲ್ಪ ಸವಾಲನ್ನು ಎದುರಿಸಿತು ಮತ್ತು ಪೂಜಾ ಹತ್ವಾಲಾ ಮತ್ತು ಪುಷ್ಪಾ ರಾಣಾ ರೈಡ್‍ಗಳನ್ನು ಮುನ್ನಡೆಸುವುದರೊಂದಿಗೆ ವಿರಾಮದ ವೇಳೆಗೆ 29-10 ರಿಂದ ಮುನ್ನಡೆ ಸಾಧಿಸಿತು.

ಸಿಎಂ ಜನತಾದರ್ಶನ ಮುಂದೂಡಿಕೆ

ಒಟ್ಟಾರೆಯಾಗಿ, ಕಾಂಟಿನೆಂಟಲ್ ಶೋಪೀಸ್‍ನಲ್ಲಿ ನಡೆದ ಮಹಿಳೆಯರ ಕಬಡ್ಡಿಯಲ್ಲಿ ನಾಲ್ಕು ಫೈನಲ್‍ಗಳಲ್ಲಿ ನಾಲ್ಕು ಫೈನಲ್‍ಗೆ ಹೋಗುವ ಮಾರ್ಗದಲ್ಲಿ ಭಾರತವು ಪಂದ್ಯದಲ್ಲಿ ಐದು ಆಲ್‍ಔಟ್‍ಗಳನ್ನು ಮಾಡಿತು.

ಭಾರತಕ್ಕೆ, ಏಷ್ಯನ್ ಗೇಮ್ಸ್‍ಗೆ ಪಾದಾರ್ಪಣೆ ಮಾಡುತ್ತಿದ್ದ ಜಾರ್ಖಂಡ್ ಯುವ ಆಟಗಾರ್ತಿ ಅಕ್ಷಿಮಾ ಕೂಡ ಪ್ರಭಾವಶಾಲಿಯಾಗಿದ್ದು, ಯಶಸ್ವಿ ದಾಳಿಗಳನ್ನು ಮಾಡಿ ಎರಡು ಟಚ್ ಪಾಯಿಂಟ್‍ಗಳನ್ನು ಗಳಿಸಿದರು. 2018ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಪುರುಷರ ತಂಡ ಸೆಮಿಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-10-2023)

ನಿತ್ಯ ನೀತಿ : ದೈವೀಶಕ್ತಿಯ ಅನುಭವದ ಅನುಭೂತಿ ಸರ್ವ ತಾಪತ್ರಯಗಳನ್ನು ನೀಗಿ ಸರ್ವಸಮರ್ಥರ ನ್ನಾಗಿಸುವುದರ ಜತೆಗೆ ಕ್ರಿಯಾಶೀಲ, ತೀಕ್ಷ್ಣತಮ ಬುದ್ಧಿಶಕ್ತಿಯುಳ್ಳವರನ್ನಾಗಿಸುತ್ತದೆ.

ಪಂಚಾಂಗ ಶುಕ್ರವಾರ 06-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಆರಿದ್ರಾ / ಯೋಗ: ಪರಿಘ / ಕರಣ: ಬಾಲವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.07
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಅವಸರದ ಹೆಜ್ಜೆ ಹಾಕುವ ಮುನ್ನ ಯೋಚಿಸುವುದು ಒಳಿತು. ಎಲ್ಲ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುತ್ತವೆ.
ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಮಿಥುನ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಶ್ರಮ ವಹಿಸಿ ಕೆಲಸ ಮಾಡಿ.

ಕಟಕ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಸಿಂಹ: ಶುಭ ಸಮಾರಂಭಕ್ಕೆ ಹೋಗಲು ಆರೋಗ್ಯ ಸಮಸ್ಯೆ ಎದುರಾಗಬಹುದು.
ಕನ್ಯಾ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.

ತುಲಾ: ಸಮಾಧಾನದಿಂದ ಕೆಲಸ ಮಾಡುವುದನ್ನು ಕಲಿಯಿರಿ. ಒತ್ತಡಕ್ಕೆ ಒಳಗಾಗದಿರಿ.
ವೃಶ್ಚಿಕ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿ.
ಧನುಸ್ಸು: ಸಾಧ್ಯವಾದಷ್ಟು ರಾತ್ರಿ ಪ್ರಯಾಣ ಮಾಡ ಬೇಡಿ. ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.

ಮಕರ: ದುಷ್ಟ ಜನರ ಸಹವಾಸದಿಂದ ದೂರವಿರು ವುದು ಒಳಿತು. ಸುಖ ಭೋಜನ ಮಾಡುವಿರಿ.
ಕುಂಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಮೀನ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಬಹಳ ಆಹ್ಲಾದಕರವಾಗಿರುತ್ತದೆ.

ಸಿಎಂ ಜನತಾದರ್ಶನ ಮುಂದೂಡಿಕೆ

ಬೆಂಗಳೂರು,ಅ.5- ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಜನತಾದರ್ಶನ ಮುಂದೂಡಿಕೆಯಾಗಿದೆ. ಅ.9 ರಂದು ಗೃಹಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 10.30ರಿಂದ ಜನತಾದರ್ಶನ ನಡೆಸಲು ನಿರ್ಧರಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು.

ಆದರೆ ಅದೇ ದಿನ ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‍ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿಯವರು ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನತಾದರ್ಶನವನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಮೊದಲ ಅವಯ ಮುಖ್ಯಮಂತ್ರಿಯಾಗಿದಾಗಲೇ ಸಿದ್ದರಾಮಯ್ಯ ಜನತಾದರ್ಶನಕ್ಕೆ ಒತ್ತು ನೀಡಿದ್ದರು. ಎರಡನೇ ಅವಯಲ್ಲಿ ಜಿಲ್ಲಾ ಹಾಗೂ ಇಲಾಖಾವಾರು ಜನತಾದರ್ಶನಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕಳೆದ ತಿಂಗಳು 25 ರಿಂದ 2 ದಿನಗಳ ಕಾಲ ನಡೆದ ಜಿಲ್ಲಾ ಜನತಾದರ್ಶನದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿತ್ತು. ಅವುಗಳನ್ನು ಬಹುತೇಕ ಇತ್ಯರ್ಥಗೊಂಡಿದ್ದು, ಬಾಕಿ ಅರ್ಜಿಗಳನ್ನು ಇಲಾಖಾವಾರು ಪರಿಶೀಲನೆ ನಡೆಸಲಾಗುತ್ತಿದೆ.

ವಿಶ್ವವಿಖ್ಯಾತ ದಸರಾಕ್ಕೆ ಬರದ ಸಿದ್ಧತೆ, ವೇಳಾಪಟ್ಟಿ ಬಿಡುಗಡೆ

ಈ ಮೊದಲು ಮುಖ್ಯಮಂತ್ರಿಯವರ ನೇರ ಜನತಾದರ್ಶನದಲ್ಲಿ ಸಾವಿರಾರು ಅರ್ಜಿಗಳು ಬರುತ್ತಿದ್ದವು. ಸಿದ್ದರಾಮಯ್ಯನವರ ಬಳಿಕ ಈ ರೀತಿಯ ಜನತಾದರ್ಶನಗಳು ಸ್ಥಗಿತಗೊಂಡಿದ್ದವು. ಅದಕ್ಕೆ ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಜನತಾದರ್ಶನದ ದಿನಾಂಕವನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ವಿಜಯೇಂದ್ರಗೆ ಪಟ್ಟ ಕಟ್ಟಲು ಬಿಎಸ್‍ವೈ ಕಸರತ್ತು

ಬೆಂಗಳೂರು,ಅ.5- ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿ ಸೊರಗಿ ನಿಂತಿರುವ ಬಿಜೆಪಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸೂಕ್ತ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಯಾರು ಶಕ್ತಿ ತುಂಬ ಬಲ್ಲವರು ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಈ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರಿಗೆ ಬಿಜೆಪಿಯ ಸಾರಥ್ಯ ನೀಡಿದ್ದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಪುಟಿದೇಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ಎದ್ದು ಕಾಣುತ್ತಿರು ವುದು ವಿರೋಧ ಪಕ್ಷದ ನಾಯಕನ ಕೊರತೆ. ಹೊಸ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೆ ವಿಧಾನಸಭೆ ಅವೇಶನ ನಡೆಯುವ ಮೂಲಕ ಬಿಜೆಪಿಗೆ ಮುಜುಗರ ಸನ್ನಿವೇಶವೂ ಉಂಟಾಗಿತ್ತು.

ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿವೆ. ಎರಡು ಪಕ್ಷಗಳ ಮೈತ್ರಿಯ ಲಾಭವನ್ನು ಲೋಕಸಭೆ ಚುನಾವಣೆಯಲ್ಲಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮೈತ್ರಿ ಬಗ್ಗೆ ಎರಡು ಪಕ್ಷಗಳಲ್ಲಿ ಅಸಮಾಧಾನವೂ ಇದೆ. ಮೈತ್ರಿಯಿಂದ ಬಿಜೆಪಿಯ ನಾಯಕತ್ವ ಸೊರಗಲಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಎದ್ದು ನಿಲ್ಲಿಸುವ ನಿಟ್ಟಿನಲ್ಲಿ ಸೂಕ್ತ ನಾಯಕತ್ವದ ಹುಡುಕಾಟ ನಡೆಯುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಬಿ.ವೈ.ವಿಜಯೇಂದ್ರ ಹೆಸರೂ ಮುನ್ನಲೆಗೆ ಬರುತ್ತಿದೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಪುತ್ರನನ್ನು ಮುನ್ನಲೆಗೆ ತರಲು ಬಿಎಸ್‍ವೈ ಕಸರತ್ತು: ತನ್ನ ಕ್ಷೇತ್ರ ತ್ಯಾಗ ಮಾಡಿ, ಪುತ್ರನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ ಬಿಎಸ್‍ವೈ ಇದೀಗ ಪುತ್ರನಿಗೆ ಬಿಜೆಪಿಯ ನಾಯಕತ್ವ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಮಟ್ಟದಲ್ಲೂ ಅವರು ಲಾಬಿ ನಡೆಸುತ್ತಿದ್ದಾರೆ. ಸದ್ಯ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ವಿಜಯೇಂದ್ರಗೆ ಆ ಪಟ್ಟ ಕೊಡುವ ಬಗ್ಗೆಯೂ ಬಿಎಸ್‍ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಶಾಸಕರು ಹಾಗೂ ಮಾಜಿ ಶಾಸಕರು ಈ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ಲಿಂಗಾಯತ ಸಮುದಾಯವನ್ನು ಪೂರ್ಣ ಪ್ರಮಾಣವಾಗಿ ಸೆಳೆಯುವ ನಿಟ್ಟಿನಲ್ಲಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆ ಒಂದು ಕಡೆಗಿದೆ. ಹೀಗಾದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬೇರೆ ಸಮುದಾಯಕ್ಕೆ ನೀಡಬೇಕಾಗಿದೆ.

ವಿಜಯೇಂದ್ರಗೆ ಅವರ ತಂದೆ ಯಡಿಯೂರಪ್ಪ ಅವರೇ ದೊಡ್ಡ ಶಕ್ತಿ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಅಧಿಕಾರಕ್ಕೆ ತಂದ ಕೀರ್ತಿ ಅವರದ್ದು. ಬಿಎಸ್ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ರಾಗಿದ್ದವರು. ಇದೀಗ ಪುತ್ರನಿಗೆ ರಾಜಕೀಯ ಶಕ್ತಿ ತುಂಬಲು ಸ್ವತಃ ಯಡಿಯೂರಪ್ಪ ಅವರು ಪ್ರಯತ್ನ ಮಾಡುತ್ತಿದ್ದಾರೆ. ಬಿಎಸ್ವೈ ಮಾರ್ಗದರ್ಶನ ವಿಜಯೇಂದ್ರಗೆ ದೊಡ್ಡ ಶಕ್ತಿಯಾಗಿದೆ.

ಬಿಎಸ್‍ವೈ ಬಳಿಕ ಲಿಂಗಾಯತ ಸಮುದಾಯದ ಪ್ರಬಲ ಬೆಂಬಲ ಅವರ ಪುತ್ರ ವಿಜಯೇಂದ್ರ ಸಿಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಉತ್ತಮ ಮಾತುಗಾರಿಕೆಯೂ ಇವರಲ್ಲಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬಿಜೆಪಿಯ ಬಹುತೇಕ ಶಾಸಕರು ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಕ್ಕೆ ಅಭ್ಯಂತರ ಇಲ್ಲದಂತಹ ವಾತಾವರಣವಿದೆ.

ವಿಜಯೇಂದ್ರ ಅವರು ಹೈಕಮಾಂಡ್ ಜೊತೆಗೂ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯೇಂದ್ರ ಬೆನ್ನು ತಟ್ಟಿದ ಫೋಟೋ ಈ ಸಂದೇಶವನ್ನು ರವಾನೆ ಮಾಡಿತ್ತು. ಇದು ಕೂಡವಿಜಯೇಂದ್ರ ಪಾಲಿಗೆ ಸಕರಾತ್ಮಕವಾಗಿ ಪರಿಣಮಿಸಬಹುದು.

ಸ್ವಪಕ್ಷೀಯರಿಂದಲೇ ಆರೋಪ: ಬಿಎಸ್ ಯಡಿಯೂರಪ್ಪ ಅವರು ಅಧಿಕಾರಲ್ಲಿದ್ದಾಗ ವಿಜಯೇಂದ್ರ ವಿರುದ್ಧ ಅವರ ಪಕ್ಷದ ಕೆಲವು ಶಾಸಕರೇ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಭ್ರಷ್ಟಾಚಾರದ ಆರೋಪವನ್ನು ವಿಜಯೇಂದ್ರ ವಿರುದ್ಧ ಮಾಡಿದ್ದರು. ಹಾಗಿದ್ದರೂ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಜರಗಿರಲಿಲ್ಲ.

ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ

ಇನ್ನು ವಿಜಯೇಂದ್ರ ಅವರಿಗೆ ರಾಜಕೀಯ ಕುಟುಂಬ ಹಿನ್ನೆಲೆ ಇದ್ದರೂ, ವೈಯಕ್ತಿಕವಾಗಿ ಅವರು ಪಳಗಿಲ್ಲ ಎಂಬ ಅಭಿಪ್ರಾಯವೂ ಇದೆ. ಮೊದಲ ಬಾರಿ ಶಾಸಕರಾಗಿರುವ ಅವರು ರಾಜಕೀಯದಲ್ಲಿ ಮತ್ತಷ್ಟು ಪಳಗಬೇಕು. ಹಿರಿತನ ಗಳಿಸಬೇಕು, ಬಳಿಕ ಅವರಿಗೆ ನಾಯಕತ್ವ ನೀಡಬೇಕು ಎಂಬ ವಾದವೂ ಪಕ್ಷದಲ್ಲಿ ಕೇಳಿಬರುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಕಾರಣರಾದ ಕೆಲವು ಹೈಕಮಾಂಡ್ ನಾಯಕರು ವಿಜಯೇಂದ್ರ ಅವರ ಪಾಲಿಗೂ ವಿಲನ್‍ಗಳಾಗಿದ್ದಾರೆ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ. ಕುಟುಂಬ ರಾಜಕಾರಣದ ವಿರುದ್ಧವಾಗಿ ಮಾತನಾಡುವ ಕೆಲವು ನಾಯಕರು ವಿಜಯೇಂದ್ರ ನಾಯಕತ್ವ ವನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ.

ಶಾಸ್ತ್ರೋಕ್ತವಲ್ಲದ ವಿವಾಹ ಅಸಿಂಧು

ಅಲಹಾಬಾದ್,ಅ.5-ಸಪ್ತಪದಿ ಹಾಗೂ ಇತರೆ ವಿವಿಧಾನಗಳಿಲ್ಲದ ಹಿಂದೂ ವಿವಾಹವೂ ಕಾನೂನು ಪ್ರಕಾರ ಸಿಂಧುವಾಗುವುದಿಲ್ಲ ಎಂದು ಅಲಹಾಬಾದ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನಿಂದ ದೂರವಾಗಿರುವ ಪತ್ನಿ, ತನಗೆ ವಿಚ್ಚೇದನ ನೀಡದೆ ಶಾಸ್ತ್ರೋಕ್ತವಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾಳೆ ಎಂದು ಸತ್ಯಂ ಎಂಬುವರು ಆರೋಪಿಸಿರುವ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಶಾಸ್ತ್ರೋಕ್ತ ಎಂಬ ಪದವು ಮದುವೆ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಮಾಡಬೇಕಾದ ಹಾಗೂ ಸೂಕ್ತ ಆಚರಣೆಗಳೊಂದಿಗೆ ಮದುವೆಯನ್ನು ಆಚರಿಸುವುದು ಎಂದು ಇದರ ಅರ್ಥ. ಮದುವೆಯನ್ನು ಸಮರ್ಪಕ ಸಮಾರಂಭಗಳು ಹಾಗೂ ಆಚರಣಾ ಪದ್ಧತಿಗಳೊಂದಿಗೆ ನೆರವೇರಿಸದೆ ಅಥವಾ ಆಚರಿಸದೆ ಹೋದರೆ ಅದನ್ನು ಶಾಸ್ತ್ರೋಕ್ತ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಹಿಂದೂ ಕಾನೂನಿನಲ್ಲಿ ಸಪ್ತಪದಿಯು ಮಾನ್ಯವಾದ ಮದುವೆಯನ್ನು ಪ್ರತಿಪಾದಿಸಲು ಅತಿ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಆದರೆ ಈ ಹಾಲಿ ಪ್ರಕರಣದಲ್ಲಿ ಅದರ ಪುರಾವೆಯೇ ಇಲ್ಲ. ಮದುವೆಯು ಮಾನ್ಯವಾದ ವಿವಾಹವಲ್ಲದಿದ್ದರೆ, ಅನ್ವಯವಾಗುವ ಕಾನೂನಿನ ಪ್ರಕಾರ ಅದು ಮದುವೆಯೇ ಅಲ್ಲ ಎಂದಿದ್ದಾರೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 7ರ ಮೇಲೆ ಅವಲಂಬಿತವಾಗಿದೆ. ಇದು ಹಿಂದೂ ವಿವಾಹವನ್ನು ಯಾವುದೇ ಪಕ್ಷಗಳ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳುತ್ತದೆ. ಎರಡನೆಯದಾಗಿ ಅಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ ಸಪ್ತಪದಿ (ಬೆಂಕಿಯ ಸುತ್ತಲೂ ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ಹಾಕುವುದು) ಸೇರಿದೆ, ಇದು ಏಳನೇ ಹೆಜ್ಜೆ ಇಟ್ಟಾಗ ಮದುವೆ ಪೂರ್ಣಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಏಪ್ರಿಲ್ 21, 2022 ರ ಸಮನ್ಸ್ ಆದೇಶವನ್ನು ರದ್ದುಗೊಳಿಸುವಾಗ ಮತ್ತು ಪತ್ನಿ, ಅರ್ಜಿದಾರರ ವಿರುದ್ಧ ಮಿಜರ್ ಪುರ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ದೂರಿನ ಪ್ರಕರಣದ ಮುಂದಿನ ಪ್ರಕ್ರಿಯೆಗಳನ್ನು ರದ್ದುಗೊಳಿಸುವಾಗ ನ್ಯಾಯಾಲಯವು ಸಪ್ತಪದಿಗೆ ಸಂಬಂಧಿಸಿದಂತೆ ದೂರಿನಲ್ಲಿ ಮತ್ತು ನ್ಯಾಯಾಲಯದ ಮುಂದೆ ಹೇಳಿಕೆಗಳಲ್ಲಿ ದೂರಿನಲ್ಲಿ ಯಾವುದೇ ತಕರಾರಿಲ್ಲ. ಆದ್ದರಿಂದ ಈ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಹೊರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕಳ್ಳನೆಂದು ಭಾವಿಸಿ ಯುವಕನ ಕೊಲೆ

ಬೆಂಗಳೂರು, ಅ.5- ನಿರ್ಮಾಣ ಹಂತದ ಮನೆಯ ಕಟ್ಟಡದ ಬಳಿ ಇಬ್ಬರು ಯುವಕರು ಕಳ್ಳತನಕ್ಕೆ ಬಂದಿದ್ದಾರೆಂದು ಸ್ಥಳದಲ್ಲಿದ್ದವರು ಜಗಳವಾಡಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಪೂಜಿ ಲೇಔಟ್ ನಿವಾಸಿ ಖಾದರ್ ಅಹಮದ್ (28) ಕೊಲೆಯಾದ ಯುವಕ.

ಬಾಪೂಜಿ ಲೇಔಟ್, 9ನೇ ಕ್ರಾಸ್, ಕೆಎಫ್‍ಸಿ ಮಳಿಗೆ ಹಿಂಭಾಗ ನಿರ್ಮಾಣ ಹಂತದ ಮನೆಯ ಕಾಮಗಾರಿ ನಡೆಯುತ್ತಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಖಾದರ್ ಅಹಮದ್ ತನ್ನ ಸ್ನೇಹಿತನ ಜೊತೆ ಈ ಸ್ಥಳಕ್ಕೆ ಬಂದಿದ್ದಾನೆ. ಆ ವೇಳೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಈ ಇಬ್ಬರು ಯುವಕರನ್ನು ನೋಡಿ ಕಳ್ಳತನಕ್ಕೆ ಬಂದಿದ್ದಾರೆಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಮನೆ ಮಾಲೀಕನ ಮಗ ರಾಜೇಂದ್ರ ಪ್ರಸಾದ್ ಸ್ಥಳದಲ್ಲಿದ್ದರು. ಇಬ್ಬರು ಯುವಕರನ್ನು ನೋಡಿ, ಇಲ್ಲೇನು ಮಾಡುತ್ತಿದ್ದೀರಿ, ಕಳ್ಳತನಕ್ಕೆ ಬಂದಿದ್ದೀರಾ ಎಂದು ಹೇಳುತ್ತಿದ್ದಂತೆ ಅವರುಗಳ ಮಧ್ಯೆ ಜಗಳವಾಗಿದೆ.ಗಲಾಟೆ ವಿಕೋಪಕ್ಕೆ ತಿರುಗಿದಾಗ ಖಾದರ್ ತನ್ನ ಬಳಿಯಿದ್ದ ಚಾಕು ತೆಗೆದು ರಾಜೇಂದ್ರ ಪ್ರಸಾದ್ ಮೇಲೆ ಹಲ್ಲೆಗೆ ಮುಂದಾದ್ದಾಗ, ತಕ್ಷಣ ರಾಜೇಂದ್ರ ಚಾಕು ಕಿತ್ತುಕೊಂಡಿದ್ದಾರೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಆ ವೇಳೆ ಖಾದರ್ ಅಹಮದ್ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಕೈಗೆ ಸಿಕ್ಕಿದ ಸನಿಕೆ ಮತ್ತು ಮರದ ತುಂಡುಗಳಿಂದ ಹಲ್ಲೆಗೆ ಮುಂದಾದಾಗ ತಕ್ಷಣ ಎಚ್ಚೆತ್ತುಕೊಂಡ ರಾಜೇಂದ್ರ ಪ್ರಸಾದ್ ಕಿತ್ತುಕೊಂಡಿದ್ದ ಅದೇ ಚಾಕುವಿನಿಂದ ಖಾದರ್ ಎದೆಗೆ ಚುಚ್ಚಿದಾಗ ಆತ ಕೆಳಗೆ ಕುಸಿದು ಬಿದ್ದಿದ್ದಾನೆ.

ಖಾದರ್ ಜೊತೆಗಿದ್ದ ಸ್ನೇಹಿತ ಘಟನೆಯಿಂದ ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಕಟ್ಟಡ ಕಾರ್ಮಿಕರು ಹಾಗೂ ರಾಜೇಂದ್ರ ಪ್ರಸಾದ್ ಸೇರಿಕೊಂಡು ಖಾದರ್‍ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಚಂದ್ರಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಆಸ್ತಿ ಹೊಂದಿದವರಿಗೆ ಕಾದಿದೆ ಬಿಗ್ ಶಾಕ್..!

ಬೆಂಗಳೂರು, ಅ.5- ಬಿಬಿಎಂಪಿ ವ್ಯಾಪ್ತಿಯಲ್ಲಿ ಆದಾಯ ಸಂಪನ್ಮೂಲ ಕ್ರೂಢೀಕರಣವನ್ನು ಹೆಚ್ಚಿಸುವ ಸಲುವಾಗಿ ತೆರಿಗೆ ಪದ್ಧತಿಯನ್ನು ಪರಿಷ್ಕರಣೆ ಮಾಡಲು ಚಿಂತನೆ ನಡೆದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ತೆರಿಗೆ ಸಂಗ್ರಹ ನನಗೆ ತೃಪ್ತಿ ನೀಡಿಲ್ಲ. ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಪದೇಪದೇ ಹಣ ನೀಡಲಾಗುವುದಿಲ್ಲ. ಅದಕ್ಕಾಗಿ ಪರಿಣಾಮಕಾರಿ ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳ ಕಟ್ಟಡಗಳು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ವಸೂಲಿ ಮಾಡಲು ಸೂಚಿಸಲಾಗಿದೆ. ತಾವೇ ಖುದ್ದಾಗಿ ಎಲ್ಲಾ ಇಲಾಖೆಗಳಿಗೂ, ಸಂಸ್ಥೆಗಳಿಗೂ ಪತ್ರ ಬರೆದಿದ್ದೇನೆ. ಎಚ್‍ಎಎಎಲ್‍ನವರು 93 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಮೊದಲು ಸರ್ಕಾರದಿಂದ ಬಾಕಿ ಇರುವ ತೆರಿಗೆ ವಸೂಲಿ ಮಾಡಲಾಗುವುದು. ನಂತರ ಖಾಸಗಿ ಆಸ್ತಿಗಳ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ

ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಪ್ಲಾನ್ ಅಪ್ರೂವಲ್ ಪಡೆದಿರುವ ನಿರ್ಮಾಣಕ್ಕೆ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೆಚ್ಚುವರಿ ನಿರ್ಮಾಣಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ವಾಣಿಜ್ಯ ಕಟ್ಟಡಗಳಲ್ಲೂ ಜನವಸತಿ ತೆರಿಗೆಯನ್ನೇ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಪ್ರತಿ ಮನೆಯ ತೆರಿಗೆಯನ್ನು ಪುನರ್ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಬ್ರಾಂಡ್ ಬೆಂಗಳೂರಿಗೆ ಸಂಬಂಧಪಟ್ಟಂತೆ 70 ಸಾವಿರ ಸಲಹೆಗಳು ಬಂದಿವೆ. ಅವುಗಳನ್ನು ಏಳೆಂಟು ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದು, ಸಲಹೆಗಳ ಮೇಲೆ ಕಾರ್ಯಾನುಷ್ಠಾನ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇದೇ 9 ರಂದು ಈ ಕುರಿತು ಬೃಹತ್ ಕಾರ್ಯಾಗಾರ ನಡೆಸಲಾಗುವುದು. ಬಳಿಕ ವಿವಿಧ ಗುಂಪುಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಹೇಳಿದರು.

ಗುತ್ತಿಗೆದಾರರ ಬಿಲ್ ಪಾವತಿ :
ಅಮೃತ ನಗರ ಯೋಜನೆಯಡಿ ತಡೆಹಿಡಿಯಲಾಗಿದ್ದ ಯೋಜನೆಗಳನ್ನು ಮುಂದುವರೆಸಲು ಸೂಚಿಸಲಾಗಿದೆ. ಮಳೆನೀರು ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಗುತ್ತಿಗೆದಾರರ ಬಾಕಿಯನ್ನು 2021 ರ ಸೆಪ್ಟೆಂಬರ್ ವೇಳೆಗೆ 432 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪ್ರಕರಣಗಳ ತನಿಖೆಗಳು ಚಾಲ್ತಿಯಲ್ಲಿವೆ. ಅದರ ನಡುವೆ ಶೇ.50 ರಷ್ಟು ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಹಂತದಲ್ಲಿ 675 ಕೋಟಿ ಒದಗಿಸಲಾಗಿದ್ದು, ಕೆಲವೇ ದಿನಗಳಲ್ಲಿ 750 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದರು.

ನಗರದಲ್ಲಿನ ರಸ್ತೆಗುಂಡಿಗಳನ್ನು ನವೆಂಬರ್ 31 ರೊಳಗೆ ಮುಚ್ಚಲು ಗುರಿ ಇಡಲಾಗಿದೆ. ಸಾರ್ವಜನಿಕರು ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ನೀಡಬಹುದು. 350 ಕಿ.ಮೀ. ಟೆಂಡರ್‍ಶೂರ್ ರಸ್ತೆ ನಿರ್ಮಿಸಲಾಗಿದೆ. ಅದರಲ್ಲಿ ಅಕ್ಕಪಕ್ಕ ಸುರಂಗಮಾರ್ಗಗಳನ್ನು ನಿರ್ಮಿಸಲಾಗಿದೆ. ಆ ಭಾಗದಲ್ಲಿ ಅಪ್ಟಿಕಲ್ ಕೇಬಲ್‍ಗಳು ಮೇಲ್ಭಾಗದಲ್ಲೇ ತೂಗಾಡುತ್ತಿರುವುದು ಸರಿಯಲ್ಲ. ಹೀಗಾಗಿ ಸುರಂಗಮಾರ್ಗದಲ್ಲೇ ಅವುಗಳನ್ನು ಅಳವಡಿಸಬೇಕು ಎಂದರು.

ಪ್ರಕೃತಿ ವಿಕೋಪ ನಿರ್ವಹಣೆಯಡಿ ವಿಶ್ವಬ್ಯಾಂಕ್‍ನಿಂದ 3 ಸಾವಿರ ಕೋಟಿ ರೂ.ಗಳ ಆರ್ಥಿಕ ನೆರವಿಗೆ ಮನವಿ ಸಲ್ಲಿಸಲಾಗಿತ್ತು. ಅದು ಅಂಗೀಕಾರಗೊಳ್ಳುತ್ತಿದೆ. ಇದರಿಂದ ಮಳೆನೀರು ಹಾಗೂ ಪ್ರವಾಹದ ಸಮಸ್ಯೆಗಳ ನಿವಾರಣೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ 250 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಕಾವೇರಿ ನೀರು ಬಿಡಲು ಸಾಧ್ಯವಿಲ್ಲ :
ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಪ್ರಸ್ತುತ 56 ಟಿಎಂಸಿ ನೀರು ಮಾತ್ರ ಲಭ್ಯವಿದೆ. 106 ಟಿಎಂಸಿಯ ಅಗತ್ಯವಿದೆ. ಕಳೆದ ಎರಡು ದಿನಗಳಲ್ಲಿ ಮಳೆ ಸುರಿದಿದ್ದರಿಂದ ಒಳಹರಿವು ಸುಧಾರಣೆಯಾಗಿತ್ತು. ಅ.1 ರಂದು 13 ಸಾವಿರ, 2 ರಂದು 26 ಸಾವಿರ, 3 ರಂದು 20 ಸಾವಿರ, 4 ರಂದು 15 ಸಾವಿರ, ಇಂದು 10 ಸಾವಿರ ಕ್ಯೂಸೆಕ್ಸ್ ಒಳಹರಿವಿದೆ ಎಂದು ವಿವರಿಸಿದರು.

ರಾಜ್ಯಸರ್ಕಾರ ಪ್ರಸ್ತುತ ರೈತರ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ರಾಜ್ಯದಲ್ಲಿ ಬರಗಾಲ ಷಣೆಯಾಗಿರುವುದರಿಂದ ಮುಂದೆ ಯಾವುದೇ ಬೆಳೆ ಬೆಳೆಯಬಾರದು. ಮಳೆ ಬಂದಾಗ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಬೇರೆ ಬೆಳೆಗಳಿಗೆ ಅವಕಾಶ ಇಲ್ಲ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮುಂದಿನ ತಿಂಗಳು ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಈ ವರ್ಷ ಸಂಕಷ್ಟದ ವರ್ಷ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಳೆದ ವರ್ಷ ಈ ವೇಳೆಗೆ ಒಳಹರಿವು ಹೆಚ್ಚಿತ್ತು. ಪ್ರತಿದಿನ ತಾವು ಮಳೆ ಬರಲಿ ಎಂದು ದೇವರಿಗೆ ಕೈಮುಗಿಯುತ್ತಿದ್ದೇನೆ. ಪ್ರತಿಭಟನೆ ಮಾಡುವವರು ಮಾಡಲಿ, ಅದನ್ನು ನಾವು ಅಡಗಿಸುವುದಿಲ್ಲ ಎಂದರು.

ಸಂಚಾರಿ ದಟ್ಟಣೆ ನಿವಾರಣೆಗೆ ಬೆಂಗಳೂರಿನಲ್ಲಿ 190 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ

ಬೆಂಗಳೂರು, ಅ.5- ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸಲು ನಿರ್ಧರಿಸಲಾಗಿದ್ದು, ಮುಂದಿನ 45 ದಿನಗಳಲ್ಲಿ ಈ ಕುರಿತು ಟೆಂಡರ್ ಕರೆಯುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಮೂಲ ಸೌಕರ್ಯ, ಸಂಚಾರ ವಿಕೇಂದ್ರಿಕರಣ, ಸುರಂಗಮಾರ್ಗ, ರಸ್ತೆ ಅಗಲೀಕರಣ, ಸಂಚಾರ ನಿರ್ವಹಣೆ, ಮೇಲ್ಸೇತುವೆ ಸೇರಿದಂತೆ ಹಲವು ರೀತಿಯ ಯೋಜನೆಗಳ ಬಗ್ಗೆ ಪ್ರಸ್ತಾವನೆ ಇದೆ ಎಂದರು.

ಇದರ ವಿಸ್ತೃತ ಯೋಜನಾ ವರದಿಗೆ ಜಾಗತಿಕ ಆಸಕ್ತಿ ಆಹ್ವಾನಿಸಲಾಗಿತ್ತು. ಗಡುವು ಮುಗಿಯುವ ವೇಳೆಗೆ 9 ಸಂಸ್ಥೆಗಳು ಭಾಗವಹಿಸಿದ್ದವು. ಅದರಲ್ಲಿ 8 ಸಂಸ್ಥೆಗಳು ಅರ್ಹವಾಗಿವೆ. ಈ ತಿಂಗಳ ಒಳಗೆ ಸಮಾಲೋಚನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. 45 ದಿನಗಳ ಒಳಗೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 15 ರೊಳಗೆ ಕಾರ್ಯಸಾಧುತ್ವವಾದ ವರದಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಗರದಲ್ಲಿ 190 ಕಿ.ಮೀ. ಉದ್ದದಲ್ಲಿ ಸುರಂಗ ಮಾರ್ಗ ಹಾಗೂ ಇತರ ಯೋಜನೆಗಳ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಳ್ಳಾರಿ ರಸ್ತೆ-ಹಳೆಮದ್ರಾಸು ರಸ್ತೆ ಕಾರಿಡಾರ್ ಎಸ್ಟಿಮ್ ಮಾಲ್ ಜಂಕ್ಷನ್‍ನಿಂದ ಮೇಕ್ರಿ ಸರ್ಕಲ್, ಮಿಲ್ಲರ್ ರಸ್ತೆ, ಕೆನ್ಸಿಂಗ್‍ಟನ್‍ರಸ್ತೆ, ಮರ್ಫಿ ರಸ್ತೆ ಮೂಲಕ ಹಳೆ ಮದ್ರಾಸು ರಸ್ತೆವರೆಗೂ 14 ಕಿ.ಮೀ., ಬಳ್ಳಾರಿ ರಸ್ತೆಯಿಂದ ಮೇಕ್ರಿ ಸರ್ಕಲ್‍ನಿಂದ ಚಾಲುಕ್ಯ ವೃತ್ತದವರೆಗೂ 7 ಕಿ.ಮೀ., ಹಳೆ ಮದ್ರಾಸು ರಸ್ತೆಯಿಂದ ಬೂದಿಗೆರೆ ಕೆ.ಆರ್.ಪುರಂ ಮೂಲಕ ಟ್ರಿನಿಟಿ ಸರ್ಕಲ್‍ವರೆಗೂ 25 ಕಿ.ಮೀ., ಹಳೆ ವಿಮಾನನಿಲ್ದಾಣ ರಸ್ತೆಯಿಂದ ಎಎಸ್‍ಸಿ ಜಂಕ್ಷನ್ ಯಮನೂರು ಜಂಕ್ಷನ್‍ವರೆಗೂ 18 ಕಿ.ಮೀ.,

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಸರ್ಜಾಪುರ ರಸ್ತೆಯಿಂದ ಹೊಸೂರು ಮೂಲಕ 10 ಕಿ.ಮೀ., ಹೊಸೂರು ರಸ್ತೆಯಿಂದ ಬೆಲ್ಲಾರ ಜಂಕ್ಷನ್‍ನಿಂದ ಸಿಲ್ಕ್ ಬೋರ್ಡ್‍ವರೆಗೂ 6 ಕಿ.ಮೀ., ಬನ್ನೇರುಘಟ್ಟ ರಸೆಯಿಂದ ಓಆರ್‍ಆರ್ ಜಂಕ್ಷನ್ ಮೂಲಕ 17 ಕಿ.ಮೀ., ಕನಕಪುರ ರಸ್ತೆಯಿಂದ ಎನ್‍ಐಸಿ ಜಂಕ್ಷನ್‍ವರೆಗೂ 15 ಕಿ.ಮೀ., ಮೈಸೂರು ರಸ್ತೆಯಿಂದ ನೈಸ್ ರಸ್ತೆಗೆ 10 ಕಿ.ಮೀ., ಮಾಗಡಿ ರಸ್ತೆಯಿಂದ ನೈಸ್ ಸಂಪರ್ಕಕ್ಕೆ 12 ಕಿ.ಮೀ., ತುಮಕೂರು ರಸ್ತೆಯಿಂದ ಯಶವಂತಪುರಕ್ಕೆ 10 ಕಿ.ಮೀ., ಹೊರವಲಯದಲ್ಲಿ ಗೊರಗುಂಟೆಪಾಳ್ಯದಿಂದ ಕೆ.ಆರ್.ಪುರಂ, ಸಿಲ್ಕ್‍ಬೋರ್ಡ್, ಮೈಸೂರು ರಸ್ತೆವರೆಗೂ ಸಂಚಾರ ದಟ್ಟಣೆಯ ರಸ್ತೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಸುರಂಗ ಮಾರ್ಗ ನಿರ್ಮಾಣಕ್ಕೆ ನಮ್ಮಲ್ಲಿ ಸಣ್ಣ ಯಂತ್ರಗಳಿವೆ. ಕನಿಷ್ಠ 4, ಗರಿಷ್ಠ 6 ಪಥದ ರಸ್ತೆ ನಿರ್ಮಾಣಕ್ಕೆ ಬೃಹತ್ ಯಂತ್ರಗಳು ಬೇಕು. ಮುಂಬೈ ಮತ್ತು ಉತ್ತರಭಾರತದಲ್ಲಿ ಈ ರೀತಿಯ ಕಾಮಗಾರಿ ಮಾಡುವ ಯಂತ್ರಗಳಿವೆ. ರಸ್ತೆ ನಿರ್ಮಾಣಕ್ಕೆ ಮೇಲ್ಭಾಗದಲ್ಲಿ ಭೂಸ್ವಾದೀನ ಕಷ್ಟ. ಹೀಗಾಗಿ ಸುರಂಗ ಮಾರ್ಗವೇ ಸೂಕ್ತ ಎಂದರು.

ಚಾಲುಕ್ಯ ವೃತ್ತ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಸುರಂಗ ಮಾರ್ಗದಿಂದ ಹೊರಬರುವ ಸಂಪರ್ಕಕ್ಕೆ ಸ್ಥಳ ಸಿಗುವುದು ಕಷ್ಟ. ಈ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಬ್ಬನ್‍ಪಾರ್ಕ್‍ನಲ್ಲಿ ಕೆಲಸ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಗಾಲ್-ಟರ್ಫ್ ಕ್ಲಬ್‍ಗಳಲ್ಲಿ ಅಥವಾ ಅರಮನೆ ಮೈದಾನದಲ್ಲಿ ಜಾಗ ಇದೆ. ಆದರೆ ಈ ಮೂರು ಜಾಗಗಳನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಬೋಗ್ಯಕ್ಕೆ ನೀಡಲಾಗಿದೆ. ಅವರನ್ನು ಹೇಗೆ ಎತ್ತಂಗಡಿ ಮಾಡಬೇಕು ಎಂಬುದು ಚರ್ಚೆಯಾಗುತ್ತಿದೆ ಎಂದರು.

ಟರ್ಫ್ ಕ್ಲಬ್‍ನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿಯೊಂದಿಗಿನ ಸಭೆಯಲ್ಲಿ ಸ್ಥಳಾಂತರ ಮಾಡಿಕೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ. ಅವರಿಗೆ ನಗರದಿಂದ ಹೊರ ಹೋಗುವಂತೆ ನಾವು ಸಲಹೆ ನೀಡಿದ್ದೇವೆ. ಅರಮನೆ ಮೈದಾನಕ್ಕೆ ಸಂಬಂಧಪಟ್ಟಂತೆ ಹಿಂದೆ ರಸ್ತೆ ಅಗಲೀಕರಣಕ್ಕೆ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ವಿವರಿಸಿದರು.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಈ ಯೋಜನೆಗಳ ಕುರಿತು ಸ್ಥಳೀಯವಾಗಿ ಚರ್ಚೆಯಾದ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಮೊದಲು ನಿತಿನ್ ಗಟ್ಕರಿಯವರೊಂದಿಗೆ ಚರ್ಚೆ ಮಾಡಿದ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ತುಮಕೂರು, ಕೆ.ಆರ್.ಪುರಂ, ಹೊಸೂರು, ಮೈಸೂರು ರಸ್ತೆಗಳಿಂದ ವಾಹನಗಳು ಬೆಂಗಳೂರಿಗೆ ಬರುತ್ತಿವೆ. ಸಂಚಾರದಟ್ಟಣೆ ಹೆಚ್ಚಾಗಲಿರುವ ಕಾರಣ. ಹೀಗಾಗಿ ಕೇಂದ್ರ ಸರ್ಕಾರವು ಸಹಭಾಗಿತ್ವವನ್ನು ನೀಡಬೇಕಿದೆ ಎಂದರು.

ಜನ ನನಗೆ ಅಧಿಕಾರ ನೀಡಿದ್ದಾರೆ. ಅದರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತೇನೆ. ವಿರೋಧಪಕ್ಷಗಳನ್ನು ಕೇಳಿ ಕೆಲಸ ಮಾಡಲಾಗುವುದಿಲ್ಲ. ಕೋಳಿ ಕೇಳಿ ಮಸಾಲೆ ಅರೆಯಲು ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು.

ಕಾಮಗಾರಿ ವೇಳೆ ಅಂತರ್ಜಲ ಸೇರಿದಂತೆ ಎಲ್ಲಾ ರೀತಿಯ ರಕ್ಷಣೆಗೆ ತಂತ್ರಜ್ಞರ ನೆರವು ಪಡೆಯಲಾಗುವುದು. ಕೆಲವು ದೇಶಗಳಲ್ಲಿ 300-400 ವರ್ಷಗಳ ಹಿಂದೆಯೇ ಸುರಂಗ ಮಾರ್ಗ ರಸ್ತೆ ನಿರ್ಮಿಸಿದ್ದಾರೆ. ನಾವು ಈಗ ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಯ ಪ್ರಸ್ತಾವನೆಯೇ 90 ಪುಟಗಳಿವೆ. ಯೋಜನಾ ವೆಚ್ಚ ಎಲ್ಲಿಂದ ಆರಂಭವಾಗಿ, ಎಲ್ಲಿ ಅಂತ್ಯಗೊಳ್ಳಬೇಕು, ಅಲ್ಲಿ ಎದುರಾಗುವ ಜಾಗದ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ, ಹಣಕಾಸು ಕ್ರೂಢೀಕರಣ, ರಸ್ತೆ ಮಾದರಿ ಯಾವ ಸ್ವರೂಪದ್ದು, ಎಲ್ಲೆಲ್ಲಿ ಎಷ್ಟು ಅಗಲದ ಸುರಂಗ ನಿರ್ಮಿಸಬೇಕು ಎಂಬುದರ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿನ ಕೈಗಾರಿಕೆ ಹಾಗೂ ಇತರ ಜನದಟ್ಟಣೆಯನ್ನು ವಿಕೇಂದ್ರಿಕರಿಸಲು ಬಿಡದಿ ಹಾಗೂ ಇತರ ಕಡೆಗಳಲ್ಲಿ ಕೈಗಾರಿಕಾ ಪಾರ್ಕ್‍ಗಳನ್ನು ಸ್ಥಾಪಿಸುವ ಕುರಿತು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.