Thursday, November 6, 2025
Home Blog Page 1933

A350-900 ವಿಮಾನ ಸ್ವಾಧೀನಕ್ಕೆ ಪಡೆದ ಏರ್ ಇಂಡಿಯಾ

ನವದೆಹಲಿ, ಸೆ 29 (ಪಿಟಿಐ) : ಗಿಫ್ಟ್ ಸಿಟಿ ಮೂಲಕ ಹೆಚ್‍ಎಸ್‍ಬಿಸಿಯ ಹಣಕಾಸು ಗುತ್ತಿಗೆ ವಹಿವಾಟಿನ ಮೂಲಕ ತನ್ನ ಮೊದಲ ಎ350-900 ವಿಮಾನದ ಸ್ವಾಧೀನವನ್ನು ಪೂರ್ಣಗೊಳಿಸಿದೆ ಎಂದು ಏರ್ ಇಂಡಿಯಾ ಹೇಳಿದೆ. ದೇಶದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಗಿಫ್ಟ್ ಸಿಟಿ ಮೂಲಕ ಗುತ್ತಿಗೆ ಪಡೆದ ಮೊದಲ ಏರ್ ಕ್ರಾಫ್ಟ್ ಇದಾಗಿದೆ.

ಏರ್‍ಲೈನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಎಐ ಫ್ಲೀಟ್ ಸರ್ವಿಸಸ್ ಲಿಮಿಟೆಡ್‍ನಿಂದ ವ್ಯವಹಾರವನ್ನು ಸುಗಮಗೊಳಿಸಿದೆ ಮತ್ತು ಈ ವರ್ಷದ ಆರಂಭದಲ್ಲಿ ಮಾಡಿದ 470 ವಿಮಾನಗಳ ಆರ್ಡರ್‍ಗಳಿಂದ ಮೊದಲ ಹಣಕಾಸು ವ್ಯವಹಾರವಾಗಿದೆ.ಮಹತ್ವಾಕಾಂಕ್ಷೆಯ ರೂಪಾಂತರ ಯೋಜನೆಯನ್ನು ಕೈಗೊಂಡಿರುವ ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ, ಈ ವರ್ಷದ ಅಂತ್ಯದ ವೇಳೆಗೆ ಮೊದಲ ಎ350-900 ವಿಮಾನವು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.

ವಿಮಾನಯಾನ ಸಂಸ್ಥೆಯು ಹೆಚ್‍ಎಸ್‍ಬಿಸಿಯೊಂದಿಗಿನ ಹಣಕಾಸು ಗುತ್ತಿಗೆ ವಹಿವಾಟಿನ ಮೂಲಕ ಭಾರತದ ಮೊದಲ ಏರ್‍ಬಸ್ ಎ350-900 ವಿಮಾನವನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡಿದೆ.ನಮಗೆ ಮತ್ತು ನಮ್ಮ ಅಂಗಸಂಸ್ಥೆಗಳಿಗೆ ಭವಿಷ್ಯದ ವಿಮಾನ ಹಣಕಾಸು ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಮತ್ತು ಪರಿವರ್ತನೆ ಅಧಿಕಾರಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2023)

ಇಂಟನ್ರ್ಯಾಷನಲ್ – ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿ ಕಾರ್ಯನಿರ್ವಾಹಕ ನಿರ್ದೇಶಕ ದೀಪೇಶ್ ಶಾ ಅವರು ವಿಮಾನ ಗುತ್ತಿಗೆ ಮತ್ತು ಹಣಕಾಸುಗಾಗಿ ನಿಯಂತ್ರಕ ಸಕ್ರಿಯಗೊಳಿಸುವವರನ್ನು ಅಭಿವೃದ್ಧಿಪಡಿಸಲು ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಐಎ-ಎಸ್‍ಸಿಯಲ್ಲಿ ವಿಮಾನ ಗುತ್ತಿಗೆ ಮತ್ತು ಹಣಕಾಸು ಉದ್ದೇಶಕ್ಕಾಗಿ ಹಣಕಾಸು ಕಂಪನಿಯನ್ನು ಸ್ಥಾಪಿಸುವ ಮೂಲಕ ಏರ್ ಇಂಡಿಯಾ ಕೈಗೊಂಡ ಕ್ರಮಗಳು ಐಎಫ್ ಎಸ್‍ಸಿಯನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ವಿಮಾನ ಗುತ್ತಿಗೆ ಮತ್ತು ಹಣಕಾಸುಗಾಗಿ ಆದ್ಯತೆಯ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ ಬಹಳ ದೂರ ಹೋಗುತ್ತವೆ ಎಂದು ಅವರು ಹೇಳಿದರು.

ವಿಮಾನಯಾನ ಸಂಸ್ಥೆಯು ಆರು ಎ350-900 ವಿಮಾನಗಳನ್ನು ಆರ್ಡರ್ ಮಾಡಿದೆ ಮತ್ತು ಅವುಗಳಲ್ಲಿ ಐದು ಮಾರ್ಚ್ 2024 ರೊಳಗೆ ತಲುಪಿಸಲು ನಿಗದಿಪಡಿಸಲಾಗಿದೆ.

ಕಾವೇರಿ ಸಮಸ್ಯೆಗೆ ಎಲ್ಲಾ ರಾಜಕೀಯ ಪಕ್ಷಗಳು ಕಾರಣ : ವಿನೋದ್ ರಾಜ್

ಆರ್ಟಿಕಲ್ 262 ಪ್ರಕಾರ ಎರಡು ರಾಜ್ಯಗಳ ನಡುವಿನ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೊರ್ಟ ನೀಡುವ ತೀರ್ಪು ಅಂತಿಮವಲ್ಲ. ಮೇಲ್ಮನೆ ಸಲ್ಲಿಸುವ ಅಧಿಕಾರವಿದೆ.ಇದನ್ನ ಗಮನಿಸಿ ಸರ್ಕಾರ ಕೂಡಲೆ ಸುಪ್ರೀಮ್ ಕೋರ್ಟಗೆ ಮೇಲ್ಮನೆ ಸಲ್ಲಿಸಬೇಕು ಎಂದು ನಟ ವಿನೋದ್ ರಾಜ್ ಆಗ್ರಹಿಸಿದರು.

ನೆಲಮಂಗಲದಲ್ಲಿ ಕಾವೇರಿ ಕುರಿತ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಇವರು, ನಮ್ಮನ್ನ ಆಳಿದ ಎಲ್ಲ ಸರ್ಕಾರಗಳ ವೈಫಲ್ಲದಿಂದ ಕಾವೇರಿ ನೀರಿನ ವಿಷಯದಲ್ಲಿ ಅನ್ಯಾಯವಾಗುತ್ತಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2023)

ನಮಗೆ ಕೇವಲ 34 ಭಾಗ ತಮಿಳುನಾಡಿಗೆ ಉಳಿದ ಭಾಗವೆಂದರೆ ಅದು ನಮಗೆ ಮಾಡಿದ ಅನ್ಯಾಯ.ಇನೇನು ಉಳಿದಿದೆ ನಮಗೆ, ಸಾಯಬೇಕಷ್ಟೆ.ಇಲ್ಲಿಯ ತನಕ ಕರ್ನಾಟಕದ ಪರ ವಾದ ಮಾಡಿದ ವಕೀಲರ ವೈಫಲ್ಯ ಎದ್ದು ಕಾಣುತ್ತಿದೆ.

ಸರ್ಕಾರ ಕಾನೂನಿನ ತಿದ್ದುಪಡಿ ತರಬೇಕು.ನೀರಿನ ವಿಷಯ ಬಂದಾಗ ಎಲ್ಲಾ ಪಕ್ಷಗಳು ಒಂದಾಗಬೇಕು.ಸರ್ವಪಕ್ಷ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಂಸದರು ಮಾತನಾಡಬೇಕು ಎಂದು ಕರೆ ನೀಡಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2023)

ನಿತ್ಯ ನೀತಿ : ಹೊಸ ಚಿಂತನೆಗಳು ನಾವೀನ್ಯತೆಯ ಆಯಾಮವನ್ನು ಸೃಷ್ಟಿಸುತ್ತದೆ. ಮೂಡುವ ಸತ್ ಚಿಂತನೆಗಳು ಕೂಡಲೇ ಅನುಷ್ಠಾನಗೊಳಿಸಬೇಕು.

ಪಂಚಾಂಗ ಶುಕ್ರವಾರ 29-09-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಉತ್ತರಾಭಾದ್ರ / ಯೋಗ: ವೃದ್ಧಿ / ಕರಣ: ಬಾಲವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.11
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಸಂತೋಷವಾಗಿ ಹೆಚ್ಚು ಸಮಯ ಕಳೆಯುವಿರಿ.
ವೃಷಭ: ಆಸ್ತಿ ವಿಚಾರದಲ್ಲಿ ಶುಭ. ತೊಂದರೆಗಳು ದೂರವಾಗಲಿವೆ. ಗೃಹ ನಿರ್ಮಾಣಕ್ಕೆ ಚಿಂತಿಸುವಿರಿ.
ಮಿಥುನ: ಸಂಗಾತಿ ಹಾಗೂ ಕುಟುಂಬದೊಂದಿಗಿನ ಬಾಂಧವ್ಯವು ಬಹಳ ಉತ್ತಮವಾಗಿರುತ್ತದೆ.

ಕಟಕ: ಹಿರಿಯ ಸಹೋದರ -ಸಹೋದರಿಯ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.
ಸಿಂಹ: ಅನಿರೀಕ್ಷಿತ ಖರ್ಚು ತಲೆದೋರಬಹುದು. ವೈದ್ಯರಿಗೆ ಶುಭದಾಯಕ ದಿನ.
ಕನ್ಯಾ: ಮನೆಯ ಜವಾಬ್ದಾರಿ ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.

ತುಲಾ: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
ವೃಶ್ಚಿಕ: ಕಚೇರಿಯಲ್ಲಿ ಹಿರಿಯ ಅಕಾರಿಗಳನ್ನು ನಿರ್ಲಕ್ಷಿಸಿದಲ್ಲಿ ದೊಡ್ಡ ತೊಂದರೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.
ಧನುಸ್ಸು: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತ ರೊಂದಿಗೆ ಅಧ್ಯಯನ ಮಾಡುವುದು ಒಳಿತು.

ಮಕರ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.
ಕುಂಭ: ಗುರು-ಹಿರಿಯರ ಆಶೀರ್ವಾದದಿಂದ ಕೆಲಸ ಸುಗಮವಾಗಲಿದೆ. ಸ್ನೇಹಿತನಿಗೆ ನಿಮ್ಮಿಂದ ಬೇಸರವಾಗಬಹುದು. ರಫ್ತು ವ್ಯಾಪಾರದಲ್ಲಿ ಲಾಭ.
ಮೀನ: ಕೆಲಸದ ಹೊರೆ ಹೆಚ್ಚಿದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ.

ಕರಾಚಿಯಲ್ಲಿ ಅಪರಿಚಿತರಿಂದ ಹಿಜಬುಲ್ ಉಗ್ರ ಜಿಯಾ ಉರ್ ರೆಹಮಾನ್ ಹತ್ಯೆ..!?

ನವದೆಹಲಿ.ಸೆ.28: ಕೆನಡಾ ಪಾಕ್ ಸೇರಿದಂತೆ ವಿದೇಶಗಳಲ್ಲಿ ಭಾರತದ ದೇಶದ್ರೋಹಿಗಳ ಸರಣಿ ಹತ್ಯೆ ಸುದ್ದಿಗಳು ಇನ್ನೂ ಚರ್ಚಯಲ್ಲಿರುವಾಗಲೇ ಇದೀಗ ಹಿಜಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಪ್ರಮುಖ ಉಗ್ರ ಜಿಯಾ ಉರ್ ರೆಹಮಾನ್ ಪಾಕಿಸ್ತಾನದ ಕರಾಚಿಯಲ್ಲಿ ಅಪರಿಚಿತರಿಂದ ಹತ್ಯೆಯಾಗಿದ್ದನೆಂಬ ಸುದ್ದಿ ಹರಡಿದೆ.

ಕರಾಚಿಯಲ್ಲಿ ಅಪರಿಚಿತ ಬಂಧೂಕುಧಾದಿಗಳು ಜಿಯಾ ಉರ್ ರೆಹಮಾನ್ ನನ್ನು ಹತ್ಯೆಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ.

ಕಳೆದ ಹಲವು ದಿನಗಳಿಂದ ಈ ಮಾದರಿಯ ಸರಣಿ ಹತ್ಯೆಗಳಿಂದ ಪಾಕಿಸ್ತಾನದ ಗೂಢಾಚಾರಿ ಸಂಸ್ಥೆ ISI ಮತ್ತು ಪಾಕಿಸ್ತಾನದಲ್ಲಿನ ಉಗ್ರಸಂಘಟನೆಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪರಿಚಿತ ಹಂತಕರ ಪತ್ತೆಗೆ ಪಾಕಿಸ್ತಾನದ ಗೂಢಾಚಾರಿ ಸಂಸ್ಥೆ ISI ಹರಸಾಹಸಪಡುತ್ತಿದೆ.

ಭಾರತಕ್ಕೆ ಬಂದ ಬಾಬರ್ ಆಝಮ್ ಪಡೆಗೆ ಕೇಸರಿ ಶಾಲು ಹಾಕಿ ಸ್ವಾಗತ

ಹೈದ್ರಾಬಾದ್, ಸೆ.28- ಭಾರತದ ಆತಿಥ್ಯದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ಟೂರ್ನಿ ಆಡುವ ಸಲುವಾಗಿ ಮುತ್ತಿನ ನಗರಿ ಹೈದ್ರಾಬಾದ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನಕ್ಕೆ ಭವ್ಯ ಸ್ವಾಗತ ನೀಡಲಾಗಿದೆ.

ವೀಸಾ ಕೊರತೆಯಿಂದ ದುಬೈ ಕ್ಯಾಂಪ್ ಅನ್ನು ರದ್ದುಗೊಳಿಸಿದ ಪಾಕಿಸ್ತಾನ ತಂಡವು ನೇರವಾಗಿಯೇ ಹೈದರಾಬಾದ್‍ನ ರಾಜೀವ್‍ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದ ಪಾಕ್ ನಾಯಕ ಬಾಬರ್ ಆಝಮ್, ಉಪನಾಯಕ ಶದಾಬ್‍ಖಾನ್, ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಸೇರಿದಂತೆ ಕೆಲವು ಆಟಗಾರರ ಹೆಗಲ ಮೇಲೆ ಕೇಸರಿ ಶಾಲು ಹಾಕುವ ಮೂಲಕ ಭಾರತೀಯ ಸಂಸ್ಕøತಿಯಂತೆ ಸ್ವಾಗತಿಸಲಾಯಿತು.

ಹೈದರಾಬಾದ್ ಅಭಿಮಾನಿಗಳ ಪ್ರೇಮಕ್ಕೆ ಫಿದಾ ಆದ ಬಾಬರ್:
ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕ್ ನಾಯಕ ಬಾಬರ್ ಆಝಮ್‍ರನ್ನು ಅಭಿಮಾನಿಗಳು ಅವರ ಹೆಸರನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಫೋಟೋವನ್ನು ಹಂಚಿಕೊಂಡಿರುವ ಪಾಕ್ ನಾಯಕ, ` ಹೈದರಾಬಾದ್‍ನಲ್ಲಿನ ಪ್ರೀತಿಯ ಬೆಂಬಲದಿಂದ ಮುಳುಗಿದ್ದೇನೆ’ ಎಂಬ ಸುಂದರ ಉಪಶೀರ್ಷಿಕೆಯೊಂದಿಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ.

ಕರ್ನಾಟಕ ಬಂದ್‍ಗೆ ಅನುಮತಿ ಇಲ್ಲ : ಗೃಹಸಚಿವ ಪರಮೇಶ್ವರ್

ಸೆಪ್ಟೆಂಬರ್ 29 ರಂದು ಇಲ್ಲಿನ ರಾಜೀವ್‍ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೆದ ಬಾರಿಯ ರನ್ನರ್‍ಅಪ್ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿರುವ ಪಾಕಿಸ್ತಾನ, ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಪಯಣ ಆರಂಭಿಸಲಿದ್ದು, ಅಕ್ಟೋಬರ್ 14 ರಂದು ಅಹಮದಾಬಾದ್‍ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಸಂಪ್ರದಾಯಿಕ ವೈರಿ ಭಾರತ ತಂಡದ ಸವಾಲನ್ನು ಎದುರಿಸಲಿದೆ.

ಕರ್ನಾಟಕ ಬಂದ್ : ರೈಲು, ಹೆದ್ದಾರಿ ತಡೆಗೆ ಸಿದ್ಧತೆ, ಪರೀಕ್ಷೆಗಳು ಮುಂದೂಡಿಕೆ

ಬೆಂಗಳೂರು,ಸೆ.28- ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ನಾಳೆ ಎರಡನೇ ಬಂದ್ ನಡೆಯಲಿದ್ದು, ಸಾವಿರಕ್ಕೂ ಹೆಚ್ಚು ಸಂಘಟನೆ ಗಳು ಬೆಂಬಲ ನೀಡಿರುವುದರಿಂದ ಜಿಲ್ಲೆ, ತಾಲೂಕು ಮಟ್ಟದಲ್ಲೂ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಏಕಕಾಲಕ್ಕೆ ಜಿಲ್ಲೆಗಳಲ್ಲಿ, ತಾಲೂಕು ಮಟ್ಟಗಳಲ್ಲಿ ಬಂದ್ ಆಚರಣೆಯಾಗಲಿದ್ದು, ಪ್ರತಿಭಟನೆ ನಡೆಸಲು ಚರ್ಚೆಗಳು ನಡೆದಿವೆ. ಜೀವನಾವಶ್ಯಕವಾದ ಆಸ್ಪತ್ರೆ, ಔಷಧಾಲಯಗಳು, ಹಾಲು, ಹಣ್ಣು, ತರಕಾರಿ ಯಂತಹ ಅಗತ್ಯ ಸರಕು ಮತ್ತು ಸೇವೆ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಚಟು ವಟಿಕೆಗಳು ಸ್ತಬ್ಧಗೊಳ್ಳಲಿವೆ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.

ವಾಟಾಳ್ ನಾಗರಾಜ್ ಅವರ ಪ್ರಕಾರ 1900 ಕ್ಕೂ ಹೆಚ್ಚು ಸಂಘಟನೆಗಳು ರಾಜ್ಯಾದ್ಯಂತ ಬಂದ್‍ಗೆ ಕೈಜೋಡಿಸಿವೆ. ಚಾಮರಾಜನಗರದಿಂದ ಬೀದರ್‍ವರೆಗೂ, ಮಂಗಳೂರಿನಿಂದ ಕೋಲಾರದವರೆಗೂ ಅಖಂಡ ಕರ್ನಾಟಕ ಕಾವೇರಿಯ ಅನ್ಯಾಯಕ್ಕೆ ಧ್ವನಿ ಎತ್ತಲಿದೆ ಎಂದಿದ್ದಾರೆ. ಒಂದೇ ವಾರದಲ್ಲಿ ಎರಡು ಬಂದ್‍ಗಳು ನಡೆಯುತ್ತಿರುವುದು ರಾಜ್ಯ ಹಾಗೂ ಬೆಂಗಳೂರಿನ ಜನರಿಗೆ ದುಬಾರಿ ಎನಿಸಿದರೂ ಜೀವನದಿಯ ರಕ್ಷಣೆಗಾಗಿ ಪ್ರತಿಭಟನೆಗಳು ನಿರಂತರವಾಗಿ ಮುಂದುವರೆದಿವೆ.

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಮೊನ್ನೆ ಕಬ್ಬು ಬೆಳೆಗಾರರ ಸಂಘ, ಅಮ್ ಆದ್ಮಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ನಡೆಸಿದ್ದವು. ನಾಳೆ ನಡೆಯಲಿರುವ ಬಂದ್‍ನಲ್ಲಿ ರೈಲು ಸಂಚಾರ, ಹೆದ್ದಾರಿ ತಡೆ ಮಾಡುವುದರ ಜೊತೆಗೆ ಅಂಚೆ ಸೇರಿದಂತೆ ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ.

ಸಾರಿಗೆ ವಲಯದ ಖಾಸಗಿ ವಾಹನಗಳ ಮಾಲೀಕರು, ಸರ್ಕಾರದ ನಿಗಮಗಳ ನೌಕರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಸಂಚಾರ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಇದೆ. ಬಂದ್ ಯಶಸ್ವಿಗಾಗಿ ಕನ್ನಡಪರ ಸಂಘಟನೆಗಳು ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿವೆ. ಕನ್ನಡ ಚಲನಚಿತ್ರೋದ್ಯಮ ತನ್ನೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬಂದ್‍ಗೆ ಕೈಜೋಡಿಸಲಿದೆ ಎಂದು ಹೇಳಲಾಗುತ್ತಿದೆ.

ಕರವೇಯ ನಾರಾಯಣ ಗೌಡ ಅವರ ಬಣ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿವೆ. ಆದರೆ ಅದೇ ದಿನ ಕಾವೇರಿಗಾಗಿ ಪ್ರತಿಭಟನೆ ನಡೆಸಲಿದೆ. ಕರವೇಯ ಪ್ರವೀಣ್ ಶೆಟ್ಟಿ ಬಣ ಬಂದ್‍ನ ನೇತೃತ್ವ ವಹಿಸಿದ್ದು, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಉಳಿದಂತೆ ಕನ್ನಡ ಸೇನೆ ಹಾಗೂ ನೂರಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಲಾಗುತ್ತಿದೆ.

ಕರ್ನಾಟಕ ಬಂದ್ ವಿಷಯದಲ್ಲಿ ಸಿಡಿಮಿಡಿ ವ್ಯಕ್ತಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡೆರಡು ಬಂದ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಬಂದ್, ಪ್ರತಿಭಟನಾ ಮೆರವಣಿಗೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಆಸ್ತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಪ್ರತಿಭಟನೆ ನಡೆಸಲು ತಮ್ಮ ಆಕ್ಷೇಪವಿಲ್ಲ ಎಂದಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಬಂದ್ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರು ಬಂದ್ ವೇಳೆ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯಸರ್ಕಾರ 50 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದರು. ಬಲ ಪ್ರಯೋಗದ ಮೂಲಕ ಹೋರಾಟಗಾರರನ್ನು ಬಂಧಿಸಲಾಗುತ್ತಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸ್ ರಾಜ್ಯ ನಿರ್ಮಾಣ ಮಾಡಲಾಗಿದೆ. ಇದೇ ಧೋರಣೆಯನ್ನು ಮುಂದುವರೆಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

ಹರಿಪ್ರಸಾದ್ ಜತೆ ಡಿಸಿಎಂ ಸಮಾಲೋಚನೆ : ಹೈಕಮಾಂಡ್ ಸಂದೇಶ ರವಾನೆ

ಬೆಂಗಳೂರು, ಸೆ.28- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದ್ದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಮಾಲೋಚನೆ ನಡೆಸಿದ್ದಾರೆ.

ಬಿ.ಕೆ.ಹರಿಪ್ರಸಾದ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡ ಡಿ.ಕೆ.ಶಿವಕುಮಾರ್ ಅವರು, ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ಹಾಗೂ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಮೂಲಗಳ ಪ್ರಕಾರ, ಹೈಕಮಾಂಡ್ ಕಳುಹಿಸಿರುವ ಸಂದೇಶವನ್ನು ಡಿ.ಕೆ.ಶಿವಕುಮಾರ್ ಅವರು ಬಿ.ಕೆ.ಹರಿಪ್ರಸಾದ್ ಅವರಿಗೆ ರವಾನಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲ ಮೂಡಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೆಸ್‍ನ ಹಿರಿಯ ನಾಯಕರಾಗಿದ್ದು, ಎಐಸಿಸಿಯಲ್ಲಿ ಸುದೀರ್ಘ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಪ್ರಸ್ತುತವಾಗಿ ರಾಜ್ಯದಲ್ಲಿ ಅವರನ್ನು ವಿಧಾನಪರಿಷತ್‍ನ ಸದಸ್ಯರನ್ನಾಗಿ ನಿಯೋಜಿಸಲಾಗಿದೆ.

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರಿಪ್ರಸಾದ್ ವಿಧಾನಪರಿಷತ್‍ನ ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಹರಿಪ್ರಸಾದ್ ಅವರನ್ನು ಕಡೆಗಣಿಸಿ ಮಧು ಬಂಗಾರಪ್ಪ ಅವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ಹರಿಪ್ರಸಾದ್ ಅವರು ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅಷ್ಟಕ್ಕೆ ಸುಮ್ಮನಾಗದೆ ಹಲವಾರು ಬಾರಿ ತಮ್ಮ ಹೇಳಿಕೆಗಳನ್ನು ಅವರ ವಿರುದ್ಧ ಪುನರ್ ಉಚ್ಛರಿಸಿದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಹೈಕಮಾಂಡ್ ಬಿ.ಕೆ.ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಿ ಹತ್ತು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿತ್ತು. ಅದಕ್ಕೆ ಹರಿಪ್ರಸಾದ್ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದು ವದಂತಿಯ ಪ್ರಕಾರ ಬಿ.ಕೆ.ಹರಿಪ್ರಸಾದ್ ಉದ್ದೇಶಪೂರಕವಾಗಿಯೇ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಈ ತಯಾರಿಗಳು ನಡೆಯುತ್ತಿವೆ ಎಂಬ ಚರ್ಚೆಗಳಿದ್ದವು.

ನೋಟಿಸ್ ಬಳಿಕ ಹರಿಪ್ರಸಾದ್ ಅವರು ಮೌನಕ್ಕೆ ಶರಣಾಗಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.

ಭಾರತದ ಹಸಿರು ಕ್ರಾಂತಿ ಪಿತಾಮಹ ಸ್ವಾಮಿನಾಥನ್ ಇನ್ನಿಲ್ಲ

ಚೆನ್ನೆ ೈ, ಸೆ.28- ಭಾರತದ ಹಸಿರು ಕ್ರಾಂತಿಯ ಪಿತಾಮಹ, ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಎಂಎಸ್ ಸ್ವಾಮೀನಾಥನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಚನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 98 ವರ್ಷದ ಎಂಎಸ್ ಸ್ವಾಮೀನಾಥನ್ ಅವರು ಪತ್ನಿ ಮೀನಾ, ಪುತ್ರಿಯರಾದ ಸೌಮ್ಯ, ಮಧುರಾ ಮತ್ತು ನಿತ್ಯಾ ಅವರನ್ನು ಬಿಟ್ಟು ಅಗಲಿದ್ದಾರೆ. ಸ್ವಾಮೀನಾಥನ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಶ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

1925 ಆ.7ರಂದು ತಮಿಳುನಾಡಿನ ತಂಭಾರತದ ವೂರಿನಲ್ಲಿ ಜನಿಸಿದ್ದ ಎಂಎಸ್ ಸ್ವಾಮೀನಾಥನ್ ಅವರು ಓರ್ವ ಕೃಷಿ ವಿಜ್ಞಾನಿಯಾಗಿ, ಸಸ್ಯ ಶಾಸ್ತ್ರಜ್ಞರಾಗಿ, ಭಾರತದ ಕೃಷಿ ಬೆಳವಣಿಗೆ ರೈತರ ತಳ ಆದಾಯ ಹೆಚ್ಚಳ, ಭತ್ತದ ತಳಿಗಳ ಅಭಿವೃದ್ಧಿ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯ. ಈಗಾಗಿಯೇ ಅವರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತಿತ್ತು.

ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೆಂದರೆ ವಿದೇಶೀ ರೈತರನ್ನು ಶ್ರೀಮಂತರನ್ನಾಗಿಸುವ ಕೈಂಕರ್ಯಎಂಬುದು ಸ್ವಾಮಿನಾಥನ್ ಅವರ ಬಲವಾದ ಅಭಿಪ್ರಾಯವಾಗಿತ್ತು. ಆದ್ದರಿಂದ ಭಾರತ ದೇಶವನ್ನು ಎಲ್ಲ ರೀತಿಯ ಆಹಾರ ಧಾನ್ಯಗಳ ಆಮದುಗಳಿಂದ ಮುಕ್ತವಾಗಿಸಬೇಕೆಂಬುದು ಅವರ ಅಭಿಲಾಷೆಯಾಗಿತ್ತು.

1966ರ ವರ್ಷದಲ್ಲಿ ಸ್ವಾಮಿನಾಥನ್ ಅವರು ನವದೆಹಲಿಯ ಭಾರತೀಯ ವ್ಯವಸಾಯ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡರು. ಭಾರತೀಯ ಕೃಷಿಕರ ಮೂಲ ಅವಶ್ಯಕತೆಗಳ ಕುರಿತಾಗಿ ನೇರವಾದ ಅನುಭವ ಪಡೆಯುವ ನಿಟ್ಟಿನಲ್ಲಿ ಸ್ವಾಮಿನಾಥನ್ ಅವರು, ಮಣ್ಣಿನ ಮಕ್ಕಳಾದ ರೈತರೊಂದಿಗೆ ತಾವೂ ಬೆರೆತು ಕೈಕೆಸರು ಮಾಡಿಕೊಂಡು ಅಹರ್ನಿಶಿ ದುಡಿದರು.

ಜೆಡಿಎಸ್, ಬಿಜೆಪಿಯ ಕೆಳ ಹಂತದ ನಾಯಕರಿಗೆ ಕಾಂಗ್ರೆಸ್ ಗಾಳ

ಸ್ವಾಮಿನಾಥನ್ ಅವರು ಸಿದ್ಧಪಡಿಸಿದ್ದ ವರದಿಯನ್ನು ಮೆಚ್ಚಿದ ರಾಕ್ ಫೆಲ್ಲರ್ ಪ್ರತಿಷ್ಠಾನ ಅವರಿಗೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದದ್ದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ವಾಮಿನಾಥನ್, ಮಿಶ್ರತಳಿ ಗೋ ಬೀಜಗಳನ್ನು ಅಭಿವೃದ್ಧಿಪಡಿಸಿದರು. ಇದರ ಬಳಕೆಯ ದೆಸೆಯಿಂದಾಗಿ ಗೋ ಉತ್ಪನ್ನದಲ್ಲಿನ ಇಳುವರಿ ಹಲವು ಪಟ್ಟು ಹಿರಿದಾಗಿತ್ತು.

ಈ ತೆರನಾದ ಗೋಧಿ ಬೀಜಗಳು ರೈತರಲ್ಲಿ ಸಂತಸ ಸಂಭ್ರಮೋತ್ಸಾಹಗಳನ್ನು ಮೂಡಿಸಿ ಬಹಳಷ್ಟು ರೈತರು ಪ್ರಯೋಜನ ಪಡೆಯಲಾರಂಭಿಸಿದರು. ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆಯಿಂದಾಗುವ ಪ್ರಯೋಜನಗಳನ್ನು ರೈತಾಪಿ ಜನರಿಗೆ ಮನನ ಮಾಡಿಕೊಡುವುದಕ್ಕಾಗಿ ಡಾ. ಸ್ವಾಮಿನಾಥನ್ ಅವರು ದೆಹಲಿಯ ಆಸುಪಾಸಿನಲ್ಲಿ ಸುಮಾರು 2000 ಪ್ರಾತಿನಿಕ ತೋಟಗಳನ್ನು ನಿರ್ಮಿಸಿದರು.

ತಮ್ಮ ಅಭಿವೃದ್ಧಿಶೀಲ ಕಾಯಕದ ಪ್ರಥಮ ಹಂತದಲ್ಲಿ, 18000 ಟನ್‍ಗಳ ಮೆಕ್ಸಿಕನ್ ಗೊಯ ಬೀಜಗಳನ್ನು ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಸರ್ಕಾರದ ಮುಂದಿರಿಸಿದರು. ಸ್ವಾಮಿನಾಥನ್ ಅವರ ಕಾರ್ಯ ವೈಖರಿಯಲ್ಲಿದ್ದ ಹುಮ್ಮಸ್ಸು ಮತ್ತು ಸಾಧ್ಯತೆಗಳನ್ನು ಮನಗಂಡ ಸರ್ಕಾರ ಸ್ವಾಮಿನಾಥನ್ ಅವರಿಗೆ ಉತ್ತಮ ಬೆಂಬಲ ನೀಡಿತು.

ಡಾ. ಸ್ವಾಮಿನಾಥನ್ ಅವರು 1990ರ ವರ್ಷದಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಂಸ್ಥೆಯನ್ನು ಚೆನ್ನೈನಲ್ಲಿ ಸ್ಥಾಪಿಸಿ ಕೃಷಿಕ್ಷೇತ್ರದಲ್ಲಿನ ತಮ್ಮ ಕೊಡುಗೆಯನ್ನು ನಿರಂತರವಾಗಿ ಮುಂದುವರೆಸಿದ್ದರು. ಈ ಸಂಸ್ಥೆ ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆಗಾಗಿ ಮಹತ್ವದ ಕಾಯಕ ನಡೆಸುತ್ತಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ

ಹೀಗೆ ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿತ್ತು. ಟೈಮ್ಸ್ ಪತ್ರಿಕೆ 1999ರ ವರ್ಷದಲ್ಲಿ ಸ್ವಾಮಿನಾಥನ್ ಅವರನ್ನು 20ನೇ ಶತಮಾನದ 20 ಪ್ರಭಾವಪೂರ್ಣ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಿ ಭಾರತಕ್ಕೆ ಗೌರವ ಸಲ್ಲಿಸಿತು. ಈ ಪಟ್ಟಿಯಲ್ಲಿದ್ದ ಇನ್ನಿಬ್ಬರು ಭಾರತೀಯರೆಂದರೆ ಮಹಾತ್ಮ ಗಾಂಧಿ ಮತ್ತು ರಬೀಂದ್ರನಾಥ ಠಾಗೂರರು.
ಪ್ರಶಸ್ತಿ ಗೌರವಗಳು

  1. 1971ರಲ್ಲಿ ಅವರಿಗೆ ಮ್ಯಾಗ್ಸೇಸೆ ಪ್ರಶಸ್ತಿ
  2. ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ.
  3. 1986ರ ವರ್ಷದಲ್ಲಿ ಅವರಿಗೆ ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ
  4. 1987ರಲ್ಲಿ ಪ್ರಥಮ ವಿಶ್ವ ಆಹಾರ ಪ್ರಶಸ್ತಿಗಳ ಗೌರವ
  5. 1991ರಲ್ಲಿ ಅವರಿಗೆ ಅಮೆರಿಕದ ಟೈಲರ್ ಪುರಸ್ಕಾರ
  6. 1999ರ ವರ್ಷದಲ್ಲಿ ಯುನೆಸ್ಕೋದ ಗಾಂ ಸ್ವರ್ಣ ಪುರಸ್ಕಾರ

ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ

ಬೆಂಗಳೂರು, ಸೆ.28- ನಾಳೆಯ ಕರ್ನಾಟಕ ಬಂದ್‍ಗೆ ನಗರ ಸೇರಿದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆ ವರೆಗೆ ನಗರದಾದ್ಯಂತ ಸಿಆರ್‍ಪಿಸಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸ್ಥಳೀಯ ಪೊಲೀಸರ ಜತೆಗೆ ಎರಡು ಕಂಪೆನಿ ಆರ್‍ಎಎಫ್,
ಕೆಎಸ್‍ಆರ್‍ಪಿಯ 60, ಸಿಎಆರ್‍ನ 40 ತುಕಡಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಎಲ್ಲ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ಉಪ ವಿಭಾಗದ ಎಸಿಪಿಗಳು, ಎಲ್ಲ ವಿಭಾಗಗಳ ಡಿಸಿಪಿಗಳು, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ನಾಳೆ ಗಸ್ತಿನಲ್ಲಿರುತ್ತಾರೆ.

ಯಾವುದೇ ರೀತಿಯ ಸಣ್ಣಪುಟ್ಟ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಬಂದ್ ನಡೆಸುವುದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ. ಆದ್ದರಿಂದ ನಗರದಲ್ಲಿ ಯಾವುದೇ ರೀತಿಯ ಬಂದ್ ಮಾಡದಂತೆ ಸಂಘಟನೆಗಳಿಗೆ ಕೋರಲಾಗಿದೆ ಎಂದರು.

ಪ್ರತಿಭಟನೆ ನಡೆಸಲು ಫ್ರೀಡಂಪಾರ್ಕ್‍ನಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಯಾವುದೇ ಸಂಘಟನೆಗಳಿಗೆ ರ್ಯಾಲಿ, ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ. ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸುವುದು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್: ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ 5 ಕಂಪನಿ ಆರ್‍ಎಎಫ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆರ್‍ಎಎಫ್ ಪಡೆಯನ್ನು ಮಂಡ್ಯ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ನಿಯೋಜಿಸಲಾಗಿದೆ ಎಂದು ವಿವರಿಸಿದರು. ನಾಳೆ ಎಲ್ಲಾ ಜಿಲ್ಲಾ ಎಸ್‍ಪಿಗಳು, ವಲಯದ ಐಜಿಗಳು, ನಗರಗಳ ಆಯುಕ್ತರು ಗಸ್ತಿನಲ್ಲಿರುತ್ತಾರೆ. ಇಲಾಖೆಯ ಪ್ರತಿಯೊಬ್ಬರೂ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದೇವೆ. ಹಾಗಾಗಿ ಎಲ್ಲಾ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ ಎಂದರು.

ಸ್ಥಳೀಯ ಪೊಲೀಸರ ಜೊತೆಗೆ 5 ಕಂಪನಿ ಆರ್‍ಎಎಫ್, 250 ತುಕಡಿ ಕೆಎಸ್‍ಆರ್‍ಪಿ ಜೊತೆಗೆ ಡಿಎಆರ್ ಫ್ಲಟೂನ್ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಗಡಿಗಳಲ್ಲಿ ಹೆಚ್ಚಿನ ಭದ್ರತೆ: ರಾಜ್ಯದ ಗಡಿಗಳಲ್ಲಿಯೂ ಸಹ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. ಅದರಲ್ಲೂ ತಮಿಳುನಾಡಿನ ಗಡಿಯಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದೇವೆ. ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಎಫ್‍ಕೆಸಿಸಿಐ ಅಧ್ಯಕ್ಷರಾಗಿ ರಮೇಶ್ ಚಂದ್ರ ಲಹೋಟಿ ಆಯ್ಕೆ

ಬೆಂಗಳೂರು, ಸೆ.28- ಶತಮಾನದ ಇತಿ ಹಾಸವಿರುವ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ನೂತನ ಅಧ್ಯಕ್ಷರಾಗಿ ರಮೇಶ್ ಚಂದ್ರ ಲಹೋಟಿ ಅವರು ಆಯ್ಕೆಯಾಗಿದ್ದಾರೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಉದ್ಯಮಿಗಳು ಕಣದಲ್ಲಿದ್ದರು.

ಸಂಪ್ರದಾಯದಂತೆ ಹಿರಿಯ ಉದ್ಯಮಿ ರಮೇಶ್ ಚಂದ್ರ ಲಹೋಟಿ ಅವರು ಅಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಎಂ.ಜಿ.ಬಾಲಕೃಷ್ಣ ಹಾಗೂ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಬುಂಟು ಸಂಘಟನೆ (ಮಹಿಳಾ ಉದ್ಯಮಿಗಳ ಒಕ್ಕೂಟ)ಯಲ್ಲಿ ಗುರುತಿಸಿಕೊಂಡಿರುವ ಉಮಾರೆಡ್ಡಿ ಅವರು ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಹಿಳಾ ವಲಯಕ್ಕೆ ದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ. ವಲ್ರ್ಡ್ ಟ್ರೇಡ್ ಸೆಂಟರ್ ಸಲಹೆಗಾರರಾಗಿ ಈಮರ್ಗ್‍ನ ಸಹ ಸಂಸ್ಥಾಪಕರಾಗಿರುವ ಉಮಾರೆಡ್ಡಿ ಅವರು ಪ್ರಸ್ತುತ ಹೈಟೆಕ್ ಮ್ಯಾಗ್ನೆಟಿಕ್ಸ್ ಅಂಡ್ ಎಲೆಕ್ಟ್ರಾನಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ವಿ.ಶ್ರೀನಿವಾಸ್

ಇನ್ನು ಭಾರೀ ಮತ್ತು ಮಧ್ಯಮ ಕೈಗಾರಿಕಾ ವಲಯದಿಂದ ಅಭಿಮಾನಿ ಪಬ್ಲಿಕೇಷನ್ ಸಿಇಒ ವಿ.ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ. ಇದರ ಜತೆಗೆ ಲೆಸ್ಸಿ ಲಾರೆನ್ಸ್ ,ತಿಪ್ಪೇಶಪ್ಪ ಬಿ.ಸಿ. ಅವರು ಚುನಾಯಿತರಾಗಿದ್ದಾರೆ. ಇನ್ನು ಇದರ ಸೇವಾ ವಲಯದಲ್ಲಿ ವಾಸವಿ ವಿದ್ಯಾನಿಕೇತನ ಟ್ರಸ್ಟಿ ಹಾಗೂ ರೇಮಂಡ್ಸ್ ಮಾರಾಟ ಉದ್ಯಮದಲ್ಲಿರುವ ಬಿ.ಎ.ಅಭಿಷೇಕ್, ಕೀರ್ತನ್ ಕುಮಾರ್, ಪೆರುಮಾಳ್, ಸುರೇಶ್‍ಬಾಬು, ಸುಸೀಮಾ ವಿದ್ಯಾರತ್ನರಾಜ್ ಅವರು ಚುನಾಯಿತರಾಗಿದ್ದಾರೆ.