Friday, November 7, 2025
Home Blog Page 1936

ಅ.2ರವರೆಗೆ ರಾಷ್ಟ್ರಾದ್ಯಂತ ‘ಸ್ವಚ್ಛತಾ ಹೀ ಸೇವಾ’ ಅಭಿಯಾನ

ನವದೆಹಲಿ,ಸೆ.27- ಭಾರತೀಯ ರೈಲ್ವೇಯು ಸಮಗ್ರ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಸ್ವಚ್ಛತಾ ಹಿ ಸೇವಾ ಎಂಬ (ಸ್ವಚ್ಛತೆಯೇ ಸೇವೆ) ಅಭಿಯಾನ ನಡೆಸುತ್ತಿದೆ. ಈಗಾಗಲೇ ಸೆ.15ರಿಂದ ಪ್ರಾರಂಭವಾಗಿರುವ ಸ್ವಚ್ಛತಾ ಹಿ ಸೇವಾ ಅಭಿಯಾನವು ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೂ ಮುಂದುವರೆಯಲಿದೆ.

ಅಭಿಯಾನದ ಮೊದಲ ಒಂಬತ್ತು ದಿನಗಳಲ್ಲೇ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಹಕಾರ ನೀಡಿದ್ದು, 5 ಲಕ್ಷ ಗಂಟೆಗಳ ಕಾಲ ಕೆಲಸ ಮಾಡಿ ಸಾಮೂಹಿಕ 498,265 ಮಾನವ-ಗಂಟೆಗಳನ್ನು ಅಭಿಯಾನಕ್ಕೆ ಮೀಸಲಿಟ್ಟಿದ್ದಾರೆ. ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಸರಿಯಾದ ತ್ಯಾಜ್ಯ ವಿಲೇವಾರಿ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ಪ್ರಕಟಣೆಗಳನ್ನು ಮಾಡಲಾಗುತ್ತದೆ.

ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಭಾತ್ ಫೇರಿಸ್, ಬೆಳಿಗ್ಗೆ ಮೆರವಣಿಗೆಗಳನ್ನು ಸ್ವಚ್ಛ ರೈಲು, ಸ್ವಚ್ಛ ಭಾರತ ಎಂಬ ಘೋಷಣೆಯಡಿ ಆಯೋಜಿಸಲಾಗಿದೆ.

ಐಟಿ ಕಂಪನಿಗಳ ಜೊತೆ ಸೇರಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆ

ರೈಲು ನಿಲ್ದಾಣಗಳನ್ನು ಸಮೀಪಿಸುವ ಪ್ರದೇಶಗಳಲ್ಲಿ, ಟ್ರ್ಯಾಕ್ಗಳಲ್ಲಿ, ಯಾರ್ಡ್ಗಳಲ್ಲಿ ಅಥವಾ ಡಿಪೊ ಆವರಣದಲ್ಲಿ ಬಯಲು ಶೌಚವನ್ನು ಮುಕ್ತಗೊಳಿಸುವುದು ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳು ಈ ಸಂದೇಶವನ್ನು ಪರಿಣಾಮಕಾರಿಯಾಗಿ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಈ ವರ್ಷದ ಆವೃತ್ತಿಯಲ್ಲಿ ನಿಲ್ದಾಣಗಳಲ್ಲಿನ ರೈಲು ಹಳಿಗಳ ಸ್ವಚ್ಛತೆ, ಪ್ರಮುಖ ನಿಲ್ದಾಣಗಳಿಗೆ ತೆರಳುವ ಮಾರ್ಗಗಳು, ರೈಲ್ವೆ ಆವರಣದಿಂದ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಒತ್ತು ನೀಡಲಾಗಿದೆ. ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಸ್ವಚ್ಛತಾ ಹಿ ಸೇವಾ ಲೋಗೋ ಮತ್ತು ಬ್ಯಾನರ್ಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತಿದೆ. ಈ ಅಭಿಯಾನದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛವಾದ ಹಾಗೂ ಹೆಚ್ಚು ಸ್ಯಾನಿಟೈಸ್ಡ್ ರೈಲ್ವೇ ವ್ಯವಸ್ಥೆಗೆ ಕೆಲಸ ಮಾಡುತ್ತಿದೆ. ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ರೈಲ್ವೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ.

ಈ ಅಭಿಯಾನವು ಸ್ವಚ್ಛ ಸಂವಾದ (ಕ್ಲೀನ್ ಡೈಲಾಗ್), ಸ್ವಚ್ಛ ರೈಲುಗಾಡಿ (ಸ್ವಚ್ಛ ರೈಲುಗಳು), ಸ್ವಚ್ಛ ನಿಲ್ದಾಣ (ಸ್ವಚ್ಛ ನಿಲ್ದಾಣಗಳು), ಸ್ವಚ್ಛ ಪರಿಸರ (ಸ್ವಚ್ಛ ಆವರಣ), ಸ್ವಚ್ಛ ಆಹಾರ್ (ಸ್ವಚ್ಛ ಆಹಾರ), ಮತ್ತು ಸ್ವಚ್ಛ ಪ್ಯಾಂಟ್ರಿಗಳು (ಕ್ಲೀನ್ ಪ್ಯಾಂಟ್ರೀಸ್) ಇತರವುಗಳನ್ನು ಒಳಗೊಂಡಿದೆ.

ಪಾಕಿಸ್ತಾನಕ್ಕೆ ದೊಡ್ಡ ಶಾಕ್ ಕೊಟ್ಟ ಚೀನಾ

ಇಸ್ಲಾಮಾಬಾದ್,ಸೆ.27- ಸಾಲದ ಸುಳಿಯಲ್ಲಿ ಮುಳುಗಿ, ಆರ್ಥಿಕವಾಗಿ ಪೂರ್ಣ ದಿವಾಳಿಯಲ್ಲಿರುವ, ಚುನಾಯಿತ ಸರಕಾರವೇ ಇಲ್ಲದ ಹೊತ್ತಲ್ಲಿ ಪಾಕಿಸ್ತಾನಕ್ಕೆ ಚೀನಾ ದೊಡ್ಡ ಶಾಕ್ ಕೊಟ್ಟಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿಂದ ಪಾಕಿಸ್ತಾನವನ್ನು ಹೊರದಬ್ಬಲಾಗಿದೆ ಎಂದು ಪಾಕ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿಪಿಇಸಿ ಜಾರಿಯ ಉಸ್ತುವಾರಿ ಹೊತ್ತಿರುವ ಜಂಟಿ ಸಹಕಾರ ಸಮಿತಿ (ಜೆಸಿಸಿ) ನಡೆಸಿದ 11ನೇ ಸಭೆಯಲ್ಲಿ, ಪಾಕಿಸ್ತಾನ ಸರಕಾರವು ಚೀನಾ ಎದುರು ಹಲವು ಯೋಜನೆಗಳ ಪ್ರಸ್ತಾವನೆ ಇರಿಸಿತ್ತು. ಈ ಮೂಲಕ ಒಂದಷ್ಟು ಸಾಲ ಪಡೆಯಲು ಕೂಡ ಪಾಕಿಸ್ತಾನವು ಹೊಂಚು ಹಾಕಿತ್ತು. ಆದರೆ, ಚೀನಾದ ಅಧಿಕಾರಿಗಳು ಪಾಕಿಸ್ತಾನದಲ್ಲಿ ಎಲ್ಲ ಯೋಜನೆಗಳ ತಾತ್ಕಾಲಿಕ ಸ್ಥಗಿತಕ್ಕೆ ಆದೇಶಿಸಿ, ಹೊಸ ಯೋಜನೆ ಅಥವಾ ಹಾಲಿ ಯೋಜನೆಗಳ ವಿಸ್ತರಣೆಗೆ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಗಿಲ್ಗಿಟ್- ಬಲ್ಟಿಸ್ತಾನ್, ಖೈಬರ್ ಪಖ್ತುಂಖ್ವಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಂಧನ, ನೀರು ನಿರ್ವಹಣೆ , ಪ್ರವಾಸೋದ್ಯಮ, ಹವಾಮಾನ ವೈಪರೀತ್ಯ ನಿಯಂತ್ರಣ ಸೇರಿದಂತೆ ಉದ್ದೇಶಿತ ಹೊಸ ಯೋಜನೆಗಳನ್ನು ಶುರು ಮಾಡುವ ಪ್ರಸ್ತಾವನೆಯನ್ನು ಪಾಕ್ ಸರಕಾರವು ಚೀನಾ ಎದುರು ಇರಿಸಿತ್ತು.

ಜತೆಗೆ, ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲಿನಿಂದ ಗ್ವಾದರ್ ನಗರದಲ್ಲಿ ಹೊಸ ವಿದ್ಯುದಾಗಾರ ತೆರೆಯುವ ಚೀನಾ ಪ್ರಸ್ತಾವನೆಗೆ ಪಾಕ್ ಸರಕಾರ ಹಸಿರು ನಿಶಾನೆ ನೀಡಿತ್ತು. ಆದರೆ, ಚೀನಾ ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎನ್ನಲಾಗಿದೆ.

ಐಟಿ ಕಂಪನಿಗಳ ಜೊತೆ ಸೇರಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆ

2022ರ ಅಕ್ಟೋಬರ್ನಲ್ಲಿ ಜೆಸಿಸಿ ಸಭೆ ನಡೆದಿತ್ತು. ಅದರಲ್ಲಿನ ಒಪ್ಪಂದಗಳಿಗೆ ಈ ವರ್ಷದ ಜುಲೈ 31ರಂದು ಚೀನಾ ಉಪ ಪ್ರಧಾನಿ ಹಾಗೂ ಪಾಕಿಸ್ತಾನದ ಆಗಿನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು ಸಹಿ ಹಾಕಿದ್ದರು. ಈ ವಿಳಂಬ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ಬೀಜಿಂಗ್ ಜತೆ ಪಾಕ್ ಕರಡು ಹಂಚಿಕೊಂಡಿತ್ತು. ಆದರೆ ಎರಡೂ ದೇಶಗಳು ಸಹಿ ಹಾಕಿದ ಅಂತಿಮ ಒಪ್ಪಂದಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಪಾಕಿಸ್ತಾನದಲ್ಲಿ ಇತ್ತೀಚೆಗೆ ಸರ್ಕಾರಗಳಲ್ಲಿ ಪದೇ ಪದೇ ಬದಲಾವಣೆ ಆಗಿರುವುದು ಕೂಡ ಚೀನಾದ ಯೋಜನೆಗೆ ಹಿನ್ನಡೆ ಉಂಟುಮಾಡಿವೆ.

ಈಗಾಗಲೇ ಕರಾಚಿ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜರುಗುತ್ತಿರುವ ಸಿಪಿಇಸಿ ಕಾಮಗಾರಿಗೆ ಪಾಕಿಸ್ತಾನದಿಂದ ಸೂಕ್ತ ಭದ್ರತೆ ನೀಡಲಾಗುತ್ತಿಲ್ಲ. ಉಗ್ರರ ಉಪಟಳ ದಿನೇದಿನೆ ಹೆಚ್ಚುತ್ತಿದೆ ಎಂದು ಚೀನಾ ಅಧಿಕಾರಿಗಳು ಜಂಟಿ ಸಭೆಯಲ್ಲಿ ಪಾಕಿಸ್ತಾನಕ್ಕೆ ತಪರಾಕಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ನೇಪಾಳ ಆಟಗಾರರು

ಬಲೂಚಿಸ್ತಾನ ಪ್ರಾಂತ್ಯದ ಮೂಲಕ ಗ್ವಾದರ್ ಬಂದರಿನಲ್ಲಿ ಹಿಡಿತ ಸಾಸಿ ಅರಬ್ಬಿ ಸಮುದ್ರದಲ್ಲಿ ಪಾರುಪತ್ಯ ಸ್ಥಾಪಿಸಲು ಚೀನಾ ಸಿಪಿಇಸಿ ಯೋಜನೆಯನ್ನು ಶುರು ಮಾಡಿದೆ. ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಸಾಲದ ಆಮಿಷ ತೋರಿಸಿ ಪಾಕ್ ನೆಲವನ್ನು ತನ್ನ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ.

ಕಾಂಗ್ರೆಸ್ ವಿರುದ್ಧ ದೇವೇಗೌಡರು ಕಿಡಿ

ಬೆಂಗಳೂರು,ಸೆ.27- ನಾವು ಎಲ್ಲೇ ಇದ್ದರೂ ನಮ್ಮ ಪಕ್ಷದ ಜಾತ್ಯತೀತ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಅಲ್ಪಸಂಖ್ಯಾತರನ್ನು ಕೈಬಿಟ್ಟಿಲ್ಲ. ಮುಂದೆಯೂ ಕೈ ಬಿಡುವುದಿಲ್ಲ. ಅವರನ್ನು ರಕ್ಷಣೆ ಮಾಡುತ್ತೇವೆ. ಪಕ್ಷದ ಜಾತ್ಯತೀತ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದ್ದು, ಇನ್ನು ಪ್ರಧಾನಿ ಅವರೊಂದಿಗೆ ಚರ್ಚೆ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ಎರಡೂ ಪಕ್ಷಗಳ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಆನಂತರ ಸೀಟು ಹಂಚಿಕೆ ಮತ್ತು ಮುಂದಿನ ಮೈತ್ರಿ ಸ್ವರೂಪದ ಬಗ್ಗೆ ನಿರ್ಧಾರವಾಗಲಿದೆ ಎಂದರು.

ಕಳೆದ 60 ವರ್ಷದ ರಾಜಕೀಯ ಜೀವನದಲ್ಲಿ ಜಾತ್ಯತೀತ ನಿಲುವಿಗೆ ಬದ್ದವಾಗಿ ರಾಜಕೀಯ ಮಾಡಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಟ್ಟಿಲ್ಲ ಎಂದು ಹೇಳಿದರು. ಅವಕಾಶವಾದಿ ರಾಜಕಾರಣ ಮಾಡುವ ಪಕ್ಷ ನಮ್ಮದಲ್ಲ. ಜಾತ್ಯತೀತೆ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ನವರು ರಾಜ್ಯ ಮತ್ತು ರಾಷ್ಟ್ರದಲ್ಲಿ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸಲು ಮಾಡಿರುವ ಪ್ರಯತ್ನಗಳ ಬಗ್ಗೆ ಹತ್ತು ಹಲವು ನಿದರ್ಶನಗಳನ್ನು ನೀಡಬಲ್ಲೆ ಎಂದು ಹೇಳಿದರು.

ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ನೇಪಾಳ ಆಟಗಾರರು

ಜಾತ್ಯತೀತ ನಿಲುವಿನಲ್ಲಿ ಕಿಂಚಿತ್ತೂ ರಾಜೀ ಮಾಡಿಕೊಂಡಿಲ್ಲ. ಮುಂದೆ ಮಾಡಿಕೊಳ್ಳುವುದೂ ಇಲ್ಲ. ಬಿಜೆಪಿಯೊಂದಿಗಿನ ಮೈತ್ರಿ ವಿಚಾರದ ಬಗ್ಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆ ಮಾತನಾಡಿದ್ದೇನೆ. ಕದ್ದುಮುಚ್ಚಿ ಮಾತನಾಡಿಲ್ಲ. ಆ ವಿಚಾರವನ್ನು ಬಹಿರಂಗಪಡಿಸಲಾಗಿದೆ.

ಆನಂತರವೇ ಕುಮಾರಸ್ವಾಮಿಯವರು ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದ ಅವರು,ಬಿಜೆಪಿಯೊಂದಿಗಿನ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿಗೆ ಯಾರು ಹೊಣೆ? ಏಕೆ ಹೀಗಾಯ್ತು ಎಂದು ಪ್ರಶ್ನಿಸಿದರು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಡಳಿತ ನಡೆಸುವಾಗ 17 ಶಾಸಕರನ್ನು ಮುಂಬೈಗೆ ಕಳುಹಿಸಿ ಸರ್ಕಾರದ ಪತನಕ್ಕೆ ಕಾರಣರಾದವರು ಯಾರು? ಬಿಜೆಪಿ ಸರ್ಕಾರ ರಚನೆಗೆ ಯಾರು ಅವಕಾಶ ಮಾಡಿಕೊಟ್ಟರು ಎಂಬುದು ಚರ್ಚೆಯಾಗಲಿ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರೇ ನಮ್ಮನ್ನು ಒತ್ತಾಯಿಸಿದ್ದರು. ನಾವು ಬೇಡ ಎಂದು ಅವರು ಬಲವಂತ ಮಾಡಿ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿ ಮಾಡಿದರು. ನಂತರ ಅವರೇ ಸರ್ಕಾರವನ್ನು ತೆಗೆದರು ಎಂದು ಆರೋಪಿಸಿದರು.

ನಮ್ಮ ಪಕ್ಷದ ಎಲ್ಲ ವಿಧಾನಸಭೆ, ವಿಧಾನಪರಿಷತ್ನ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಮೈತ್ರಿ ಮಾತುಕತೆ ನಡೆಸಲಾಗಿದೆ ಎಂದ ಅವರು, ಜಾತ್ಯತೀತ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಎಷ್ಟರ ಮಟ್ಟಿಗೆ ರಾಷ್ಟ್ರದಲ್ಲಿ ಉಳಿಸಿದೆ ಎಂದು ಅವರು ಪ್ರಶ್ನಿಸಿದರು. ರಾಜಕೀಯ ಪಕ್ಷದ ಮಡಿವಂತಿಕೆಯಿಂದ ಹೊರಬಂದು ನೇರ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಬಂಧವಿಲ್ಲದೆ ಸ್ವಚ್ಛವಾಗಿದ್ದೇವೆ ಎಂಬ ಒಂದು ರಾಜಕೀಯ ಪಕ್ಷವಿದ್ದರೆ ಯಾರು ಬೇಕಾದರೂ ಪ್ರಶ್ನಿಸಬಹುದು.

ಪಶ್ಚಿ ಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಎಡಪಕ್ಷಗಳ ಕೆಲವು ಮುಖಂಡರು ಬಿಜೆಪಿ ಜೊತೆ ಕೆಲಸ ಮಾಡಿರುವುದು ಬಹಿರಂಗವಾಗಿಲ್ಲವೇ? ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ರಾಜ್ಯಸಭೆಗೆ ಸ್ರ್ಪಧಿಸಿದ್ದಾಗ 8 ಮಂದಿ ಪಕ್ಷಾಂತರ ಮಾಡಿ ಅವರನ್ನು ಸೋಲಿಸಲಿಲ್ಲವೇ? ಆಗ ಕಾಂಗ್ರೆಸ್ನ ಜಾತ್ಯತೀತ ನಿಲುವು ಎಲ್ಲಿ ಹೋಗಿತ್ತು? ಪ್ರಾದೇಶಿಕ ಪಕ್ಷವನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಫಾರೂಕ್ ಅಬ್ದುಲ್ಲಾ ಸರ್ಕಾರವನ್ನು ತೆಗೆದವರು ಯಾರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ಹಿಂದೆ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಮಂಗಳೂರಿನಲ್ಲಿ ಇಬ್ಬರು ಮುಸ್ಲಿಂ ಮುಖಂಡರ ಹತ್ಯೆಯಾಗಿತ್ತು. ಅಲ್ಲಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ಹಂತಕರಿಗೆ ಜೀವಾವ ಶಿಕ್ಷೆಯಾಯಿತು. ಹೀಗೆ ನಾವು ಎಲ್ಲೇ ಇದ್ದರೂ ಅಲ್ಪಸಂಖ್ಯಾತರನ್ನು ಕೈಬಿಟ್ಟಿಲ್ಲ ಎಂದು ಗೌಡರು ಸಮರ್ಥಿಸಿಕೊಂಡರು.

ಮೈತ್ರಿ ವಿಚಾರವನ್ನು ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ : ಹೆಚ್ಡಿಕೆ ಸ್ಪಷ್ಟನೆ

ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧ:
ಕೇರಳದ ನಮ್ಮ ಪಕ್ಷದ ಸ್ನೇಹಿತರು ಕರ್ನಾಟಕದಲ್ಲಿ ಪಕ್ಷವನ್ನು ಉಳಿಸಿ-ಬೆಳೆಸುವುದಾದರೆ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವೆ. ಸಂಕಷ್ಟ ಪರಿಸ್ಥಿತಿಯಲ್ಲಿ ಪಕ್ಷವನ್ನು ಉಳಿಸಿ ಬೆಳೆಸಬೇಕಿದೆ. ನಮ್ಮ ಪಕ್ಷದ ಶಾಸಕರಾದ ಕರ್ರೆಮ್ಮ ಅವರು ಪಕ್ಷ ಬಿಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲಿದೆ ನಾಗಾಲೋಟ:
ರಾಜ್ಯದಲ್ಲಿ ಕಾಂಗ್ರೆಸ್ನ ನಾಗಾಲೋಟ ಎಲ್ಲಿದೆ ಎಂದು ಪ್ರಶ್ನಿಸಿದ ಗೌಡರು, ಕಾವೇರಿ ನೀರು ಓಡುತ್ತಿದೆ… ಓಡುತ್ತಿದೆ ಎಂದು ಹೇಳಿದರು. ಕಾವೇರಿ ನದಿನೀರು ನಿರ್ವಹಣಾ ಸಮಿತಿ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮಾಡಿರುವ ಶಿಫಾರಸು ಖುಷಿ ತಂದಿದೆ ಎಂದು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಮಿತಿಯ ಶಿಫಾರಸ್ಸನ್ನು ಸ್ವಾಗತಿಸಿದ್ದಾರೆ. ನೀರನ್ನು ಉಳಿಸಿ ರಾಜ್ಯದ ಹಿತ ಕಾಪಾಡಲು ಹೋರಾಟ ನಡೆಸಿದೆ. ಆದರೆ ಅವರಿಗೆ ತಮಿಳುನಾಡಿನ ಸ್ಟಾಲಿನ್ ಅವರು ಗೆಲ್ಲಬೇಕಿದೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಂಜುನಾಥ್, ಟಿ.ಎ.ಶರವಣ, ಬಿ.ಎಂ.ಫಾರೂಖ್, ಮಂಜೇಗೌಡ, ವಿಧಾನಪರಿಷತ್ ಮಾಜಿ ಸದಸ್ಯರಾದ ರಮೇಶ್ ಗೌಡ, ಕೆ.ಪಿ.ಶ್ರೀಕಂಠೇಗೌಡ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.

ಐಟಿ ಕಂಪನಿಗಳ ಜೊತೆ ಸೇರಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆ

ಬೆಂಗಳೂರು,ಸೆ.27- ಆಂತರಿಕ ಭದ್ರತೆ, ಸಂಶೋಧನೆ ಹಾಗೂ ನಾವಿನ್ಯ ಸವಾಲುಗಳನ್ನು ಎದುರಿಸಲು ಪೂರಕವಾಗಿ ಬೆಂಗಳೂರಿನಲ್ಲಿ ಸೈಬರ್ ಸ್ಪೇರ್ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿಂದು ಟೆಕ್ ಪ್ಯೂಶನ್ ಸನ್ ರೈಸ್ ಸಮ್ಮಿಟ್ 2023 ಅಂಗವಾಗಿ ಐಟಿ ಸಂಸ್ಥೆಗಳ ಜೊತೆ ಸಂವಾದ ನಡೆಸಿದ ಅವರು, ಆಧುನಿಕ ತಂತ್ರಜ್ಞಾನದಲ್ಲಿ ಎದುರಾಗುತ್ತಿರುವ ಸೈಬರ್ ಸವಾಲುಗಳನ್ನು ನಿಭಾಯಿಸಲು ಗೃಹ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದಲ್ಲಿ ಬೆಂಗಳೂರು ಸೈಬರ್ ಸ್ಪೇರ್ ಜೇಷ್ಠತಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ನಮ್ಮ ಬಳಿ ಇರುವ ಜ್ಞಾನ ಹಾಗೂ ಐಟಿಬಿಟಿ ಕಂಪನಿಗಳ ತಂತ್ರಜ್ಞಾನ ಬಳಸಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈಗಾಗಲೇ ಠಾಣೆಗಳಲ್ಲಿ ಎಫ್‍ಐಆರ್ ದಾಖಲು ಸೇರಿದಂತೆ ಅನೇಕ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ, ಜೇಷ್ಠತಾ ಕೇಂದ್ರದಿಂದ ಮುಂದಿನ 5 ವರ್ಷಗಳಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಅಗತ್ಯ ತರಬೇತಿ ಕೊಡಿಸುವುದಾಗಿ ಹೇಳಿದರು.

ಸಂವಾದದಲ್ಲಿ ಸುಮಾರು 50ಕ್ಕೂ ಹೆಚ್ಚು ಐಟಿಬಿಟಿ ಕಂಪೆನಿಗಳು ಭಾಗವಹಿಸಿದ್ದವು. ಎಲ್ಲರ ಸಲಹೆ, ಸೂಚನೆಗಳನ್ನು ಪಡೆಯಲಾಗಿದೆ. ಟ್ರಾಫಿಕ್ ಸಮಸ್ಯೆ, ಭದ್ರತೆ ಕುರಿತಂತೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವುದು.

ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ

ಸೈಬರ್ ಸಂಶೋಧನಾ ಪ್ರಯೋಗಾಲಯ ಸ್ಥಾಪನೆ, ಕಾನೂನು ಜಾರಿ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕೊನೆ ಹಂತಕ್ಕೆ ತಂತ್ರಜ್ಞಾನದ ಸೌಲಭ್ಯ ಕಲ್ಪಿಸುವುದು, ಜ್ಞಾನದ ವಿನಿಮಯ, ಕೌಶಲ್ಯಾಭಿವೃದ್ಧಿ, ಸಮುದಾಯದ ಸಹಭಾಗಿತ್ವ, ಸೈಬರ್ ಸುರಕ್ಷತೆಗೆ ತಾಂತ್ರಿಕ ಸಂಶೋಧನೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಣೆ ಸೇರಿದಂತೆ ಅನೇಕ ಉದ್ದೇಶಗಳಿಗೆ ಈ ಕೇಂದ್ರ ನೆರವು ನೀಡಲಿದೆ ಎಂದರು.

ಖಾಸಗಿ ಕಂಪನಿಗಳು ತಮ್ಮ ಸಂಪನ್ಮೂಲ ವ್ಯಕ್ತಿಗಳನ್ನು ಇಲಾಖೆಯ ಜೊತೆ ಕೈ ಜೋಡಿಸಲು ಕಳುಹಿಸಿಕೊಡಬೇಕು, ಇದರಿಂದ ಅತ್ಯಾಧುನಿಕವಾದ ಅಪರಾಧಗಳು ಮತ್ತು ಅವುಗಳ ಬೆಳವಣಿಗೆಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಭಾರತದ ಆರ್ಥಿಕತೆಗೆ ಬೆಂಗಳೂರು ತಂತ್ರಜ್ಞಾನ ಕ್ಷೇತ್ರ ಶೇ.34 ರಷ್ಟು ಪಾಲು ನೀಡಿದೆ. ವಿಶ್ವದ ಅತ್ಯಂತ ವೇಗದ ಬೆಳವಣಿಗೆಯ ನಗರಗಳಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನವಿದೆ. ಇದಕ್ಕೆ ಐಟಿಬಿಟಿ ಕ್ಷೇತ್ರದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ಭಾರತವು ವಿಶ್ವದ 3 ನೇ ಆರ್ಥಿಕ ಶಕ್ತಿಯಾಗಲು ಮುನ್ನುಗ್ಗುತ್ತಿದೆ. ಇದಕ್ಕೆ ಪೂರಕವಾಗಿ ಬೆಟರ್ ಬೆಂಗಳೂರು, ಬೆಟರ್ ಕರ್ನಾಟಕ, ಬೆಟರ್ ಇಂಡಿಯಾ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಉದ್ಯಮಿ ಸ್ನೇಹಿಯಾಗಿದ್ದು, ವಿಶ್ವದ ಉದ್ಯಮಿಗಳನ್ನು ಆಕರ್ಷಿಸಲು ಬಂಡವಾಳ ಹೂಡಿಕೆ ಸಮಾವೇಶಗಳನ್ನು ನಡೆಸುತ್ತಿದ್ದೇವೆ. ಬೆಂಗಳೂರು ಸೇರಿದಂತೆ ಮಂಗಳೂರು, ಬೆಳಗಾಂ, ಹುಬ್ಬಳ್ಳಿ, ಧಾರವಾಡ, ಮೈಸೂರು ಕಡೆಗಳಲ್ಲಿ ಉದ್ಯಮಿಗಳನ್ನು ಹೂಡಿಕೆ ಮಾಡುವಂತೆ ಬೆಂಬಲಿಸಲಾಗುತ್ತಿದೆ ಎಂದರು.

ಭಾರತದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಾಮುಖ್ಯವಾದುದು. ಮಹಿಳೆಯರನ್ನು ಸ್ವಾವಲಂಬಿಗೊಳಿಸಲು ನಮ್ಮ ಸರ್ಕಾರ ಗ್ರಾಮೀಣ ಭಾಗದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯಸರ್ಕಾರದ ಪಂಚಖಾತ್ರಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ 24 ಸಾವಿರ ರೂ.ಗಳಿಗೂ ಅಕ ನೆರವು ದೊರೆಯುತ್ತಿದೆ ಎಂದು ಹೇಳಿದರು.

ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದ ‘2018’ ಸಿನಿಮಾ

ನವದೆಹಲಿ, ಸೆ.27- ಕೇರಳದ ಪ್ರವಾಹವನ್ನು ಪ್ರಮುಖ ಕೇಂದ್ರ ವಸ್ತುವಾಗಿ ಬಿಂಬಿಸಿರುವ 2018 ಎಂಬ ಮಲಯಾಳಂ ಸಿನಿಮಾವು 2024ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ಮೊದಲ ಭಾರತೀಯ ಸಿನಿಮಾ ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ಜ್ಯೂರಿ ಮುಖ್ಯಸ್ಥ ಗಿರೀಶ್ ಕಾಸರವಳ್ಳಿ ಅವರು ತಿಳಿಸಿದ್ದಾರೆ.

ಮಲಯಾಳಂನ ಖ್ಯಾತ ನಿರ್ದೇಶಕ ಜುಡೆ ಅಂಥೋನಿ ಜೋಸೆಫ್ ಅವರು ನಿರ್ದೇಶಿಸಿರುವ 2018 ಸಿನಿಮಾವು ಮೇ 8, 2023 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು 200 ಕೋಟಿಗೂ ಹೆಚ್ಚು ಸಂಭಾವನೆ ಗಳಿಸಿ ನಿರ್ಮಾಪಕರ ಗಲ್ಲಾಪೆಟ್ಟಿಗೆಯನ್ನು ತುಂಬಿಸಿತ್ತು. 2018 `ಪ್ರತಿಯೊಬ್ಬರು ಇಲ್ಲಿ ಹೀರೋಗಳೇ’ ಎಂಬ ಉಪಶೀರ್ಷಿಕೆ ಯಡಿ ಕಾವ್ಯ ಫಿಲಂ ಕಂಪೆನಿ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿತ್ತು.

ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ

ಚಿತ್ರದ ನಾಯಕ ಟಿವಿನೊ ಥಾಮಸ್ ಸುಳ್ಳು ವೈದ್ಯಕೀಯ ದಾಖಲೆ ನೀಡಿ ರಜೆ ಪಡೆದು ತವರಿಗೆ ಬಂದಿದ್ದಾಗ ಉಂಟಾದ ಪ್ರವಾಹದಲ್ಲಿ ಆತ ಜನರನ್ನು ಯಾವ ರೀತಿ ರಕ್ಷಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೇರಳದಲ್ಲಿ 2018ರಲ್ಲಿ ಉಂಟಾದ ಪ್ರವಾಹವನ್ನು ಆಧಾರಿಸಿಯೇ ಈ ಸಿನಿಮಾವನ್ನು ನಿರ್ಮಿಸಲಾಗಿದೆ.

ಈ ಸಿನಿಮಾದಲ್ಲಿ ಅಸೀಫ್ ಅಲಿ, ಲಾಲ್, ನರೇನ್, ಕುಂಚಚೊಕೊ ಬೊಮನ್, ಅಪರ್ಣ ಬಲಮುರಳಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವೇಣು ಕುನ್ನಿಪಿಳ್ಳೈ, ಸಿ.ಕೆ.ಪದ್ಮಾ ಕುಮಾರ್ ಹಾಗೂ ಅಂಟೊ ಜೋಸೆಫ್ ಅವರು 2018 ಕ್ಕೆ ಬಂಡವಾಳ ಹೂಡಿದ್ದಾರೆ.

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ಮಾರ್ಚ್ 2024, 10 ರಂದು ಲಾಸ್ ಏಂಜಲೀಸ್‍ನಲ್ಲಿ ನಡೆಯಲಿರುವ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ಸಿನಿಮಾಗಳು ಪಾಲ್ಗೊಳ್ಳಲಿದ್ದು ಪ್ರಶಸ್ತಿ ಗೆಲ್ಲಲು ಪರಸ್ಪರ ಪೈಪೋಟಿ ನಡೆಸಲಿವೆ. 2023ನೇ ಸಾಲಿನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಟಾಲಿವುಡ್‍ನ ಆರ್‍ಆರ್ ಆರ್ ಸಿನಿಮಾದ ನಾಟೊ ನಾಟೊ ಗೀತೆ ಹಾಗೂ ದಿ ಎಲಿಫೆಂಟ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.

ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ನೇಪಾಳ ಆಟಗಾರರು

ಹ್ಯಾಂಗ್‍ಝೌ, ಸೆ.27- ಚೀನಾದ ಆತಿಥ್ಯದಲ್ಲಿ ನಡೆಯುತ್ತಿರುವ 19ನೇ ಏಷ್ಯಾನ್ ಗೇಮ್ಸ್‍ನಲ್ಲಿ ನೇಪಾಳದ ಆಟಗಾರರು ವೇಗದ ಶತಕ, ಅರ್ಧಶತಕ ಹಾಗೂ ದಾಖಲೆಯ ಮೊತ್ತ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ರೋಹಿತ್, ಮಿಲ್ಲರ್ ದಾಖಲೆ ಮುರಿದ ಕುಶಾಲ್ ಮಲ್ಲ:
ಮೊಂಗೊಲಿಯಾ ವಿರುದ್ಧ `ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೇಪಾಳ 66 ರನ್ ಗಳಿಗೆ ಆರಂಭಿಕ 2 ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ 3ನೇ ಕ್ರಮಾಂಕಕ್ಕೆ ಮೈದಾನಕ್ಕಿಳಿದ 19ರ ಪ್ರಾಯದ ಕುಶಾಲ್ ಮಲ್ಲ ಮಂಗೊಲಿಯಾ ಬೌಲರ್‍ಗಳ ಮೇಲೆ ಸವಾರಿ ಮಾಡಿ 34 ಎಸೆತಗಳಲ್ಲೇ ವೇಗದ ಟಿ 20 ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಅವರು 35 ಎಸೆತದಲ್ಲಿ ನಿರ್ಮಿಸಿದ್ದ ಶತಕದ ದಾಖಲೆಯನ್ನು ಮುರಿದರು. ಪಂದ್ಯದಲ್ಲಿ 50 ಎಸೆತಗಳನ್ನು ಎದುರಿಸಿದ ಮಲ್ಲ 8 ಬೌಂಡರಿ, 12 ಸಿಕ್ಸರ್ ನೆರವಿನಿಂದ ಅಜೇಯ 137 ರನ್ ಸಿಡಿಸಿದರು.

ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ

ಯುವಿ ದಾಖಲೆ ಮುರಿದ ದೀಪಿಂದರ್:
ಪಂದ್ಯದ ಸ್ಲಾಗ್ ಓವರ್‍ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ದೀಪಿಂದರ್ ಸಿಂಗ್‍ಅಯ್‍ರಾ 9 ಎಸೆತಗಳಲ್ಲೇ 8 ಸಿಕ್ಸರ್‍ಗಳ ನೆರವಿನಿಂದ ಅರ್ಧಶತಕ ಸಿಡಿಸಿ 2007ರಲ್ಲಿ ನಡೆದಿದ್ದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ 12 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಯುವರಾಜ್‍ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ದಾಖಲೆಯ ಮೊತ್ತ:
ನಾಯಕ ರೋಹಿತ್ ಪೊಲ್ ಕೂಡ 27 ಎಸೆತಗಳಲ್ಲೇ 2 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ ಪರಿಣಾಮ ನೇಪಾಳ ನಿಗತ 20 ಓವರ್‍ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 314 ರನ್ ದಾಖಲಿಸುವ ಮೂಲಕ ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಎಂಬ ಕೀರ್ತಿಗೆ ಪಾತ್ರವಾಯಿತು. ಈ ಹಿಂದೆ 2019ರಲ್ಲಿ ಐರ್ಲೆಂಡ್ ವಿರುದ್ಧ ಆಫಾಘಾನಿಸ್ತಾನ ದಾಖಲಿಸಿದ್ದ 278/3 ರನ್ ಟಿ20 ಮಾದರಿಯ ಗರಿಷ್ಠ ಮೊತ್ತ ಆಗಿತ್ತು.

41 ರನ್‍ಗಳಿಗೆ ಮಂಗೊಲಿಯಾ ಆಲ್‍ಔಟ್:
ನೇಪಾಳ ನೀಡಿದ 315 ಬೃಹತ್ ಗುರಿ ಬೆನ್ನಟ್ಟಿದ ಮಂಗೊಲಿಯಾ ಎದುರಾಳಿ ತಂಡದ ಬೌಲರ್‍ಗಳ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ 13.1 ಓವರ್‍ಗಳಲ್ಲೇ 41 ರನ್‍ಗಳಿಗೆ ಅಲೌಟ್ ಆಗುವ ಮೂಲಕ ದಾಖಲೆಯ ಸೋಲು ಕಂಡಿತು. ದವಸುರೈನ್ (10ರನ್) ಗರಿಷ್ಠ ಸ್ಕೋರರ್ ಆದರೆ ಯಾವ ಆಟಗಾರರು ಎರಡಂಕಿ ದಾಟದಿರುವುದು ಕೂಡ ದಾಖಲೆ ಆಗಿದೆ.

ವಿಶ್ವಕಪ್ ಗೆಲ್ಲುವುದೇ ನಮ್ಮ ಗುರಿ : ಬಾಬರ್ ಆಝಮ್

ನವದೆಹಲಿ, ಸೆ. 27- ಮುಂಬರುವ ವಿಶ್ವಕಪ್‍ನಲ್ಲಿ ಟ್ರೋಫಿ ಗೆಲ್ಲುವುದೇ ನಮ್ಮ ತಂಡದ ಮುಖ್ಯ ಗುರಿ ಎಂದು ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಅವರು ಹೇಳಿದ್ದಾರೆ. ಅಕ್ಟೋಬರ್ 6 ರಂದು ನೆದರ್‍ಲ್ಯಾಂಡ್ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿರುವ ಪಾಕಿಸ್ತಾನ, ಅಕ್ಟೋಬರ್ 14 ರಂದು ಅಹಮದಾಬಾದ್‍ನಲ್ಲಿ ಟೀಮ್ ಇಂಡಿಯಾದ ಸವಾಲನ್ನು ಎದುರಿಸಲಿದೆ. ಬಾಬರ್ ಆಝಮ್ ಅವರು ಇದೇ ಮೊದಲ ಬಾರಿ ಭಾರತದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ವಿಶ್ವಕಪ್ ಆಡಲು ಭಾರತಕ್ಕೆ ತೆರಳುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ಮಂದಿ ಭಾರತದಲ್ಲಿ ಇದುವರೆಗೂ ಒಂದೇ ಒಂದು ಪಂದ್ಯ ಆಡಿದ ಅನುಭವ ಹೊಂದಿಲ್ಲ, ಆದರೆ ಟೂರ್ನಿಯಲ್ಲಿ ಎದುರಾಗುವ ಎಲ್ಲ ಒತ್ತಡವನ್ನು ನಿಭಾಯಿಸುವ ಭರವಸೆ ಇದೆ' ಎಂದು ಬಾಬರ್ ಆಝಮ್ ಹೇಳಿದರು.

ಏಷ್ಯಾದಲ್ಲಿನ ಬಹುತೇಕ ಪಿಚ್‍ಗಳಲ್ಲಿ ಒಂದೇ ತೆರನಾಗಿರುತ್ತದೆ, ಹಾಗಾಗಿ ವಿಶ್ವಕಪ್ ಟೂರ್ನಿ ಆಯೋಜನೆ ಗೊಂಡಿರುವ ಭಾರತದ ಪಿಚ್‍ಗಳಲ್ಲಿ ಆಡಲು ಪಾಕಿಸ್ತಾನದ ತಂಡದ ಆಟಗಾರರಿಗೆ ತೊಂದರೆಯಾಗಲಾರದು, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದೇ ತವರಿನ ನೆಲಕ್ಕೆ ಹಿಂದುರುಗಲಿದ್ದೇವೆ’ ಎಂದು ಪಾಕ್ ನಾಯಕ ಹೇಳಿದ್ದಾರೆ.

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತ ತಲುಪುವುದು ನಮಗೆ ಸುಲಭದ ಕೆಲಸವಾಗಿದೆ. ಆದರೆ ನಮ್ಮ ಗುರಿ ಚಾಂಪಿಯನ್ ಪಟ್ಟ ಅಲಂಕರಿಸುವುದಾಗಿದೆ. ನಾವು ಟೂರ್ನಿಯಲ್ಲಿ ಉತ್ತಮ ಆಟವನ್ನು ಪ್ರದರ್ಶನ ನೀಡಲು ಬಯಸುತ್ತೇವೆ. ಏಷ್ಯಾಕಪ್ ಟೂರ್ನಿಯ ನಂತರ ಸಾಕಷ್ಟು ವಿಶ್ರಾಂತಿ ಸಿಕ್ಕಿರುವುದರಿಂದ ಗೆಲುವಿನ ದಾಹ ಹೆಚ್ಚಾಗಿದೆ’ ಎಂದು ಪಾಕ್ ನಾಯಕ ಬಾಬರ್ ಆಝಮ್ ಹೇಳಿದ್ದಾರೆ.

ಮೈತ್ರಿ ವಿಚಾರವನ್ನು ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ : ಹೆಚ್ಡಿಕೆ ಸ್ಪಷ್ಟನೆ

ಬೆಂಗಳೂರು,ಸೆ.27-ಬಿಜೆಪಿಯೊಂದಿಗಿನ ಮೈತ್ರಿಗೆ ಸಂಬಂಧಿಸಿದ ಯಾವುದೇ ವಿವರವನ್ನು ಜೆಡಿಎಸ್ ಅಧ್ಯಕ್ಷ ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಇಬ್ರಾಹಿಂ ಗಮನಕ್ಕೆ ತರಲಾಗಿದೆ ಎಂದರು.

ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ ಸಮಸ್ತ ಕರ್ನಾಟಕದ ರಕ್ಷಣೆ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಎಲ್ಲ ಸಮುದಾಯದ ರಕ್ಷಣೆ ಮಾಡುತ್ತೇವೆ. 2004ರಿಂದಲೂ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿದೆ. ಕಳೆದ 60 ವರ್ಷದಿಂದ ದೇವೇಗೌಡರು ಜಾತ್ಯತೀತ ಶಕ್ತಿಯನ್ನು ಉಳಿಸಲು ಹೋರಾಟ ಮಾಡುತ್ತಾ ಬಂದರು. ಆದರೆ ಕಾಂಗ್ರೆಸ್ನವರು ಮಾಡಿದ್ದೇನು? ಅಲ್ಪಸಂಖ್ಯಾತರ ಬಗ್ಗೆ ಯಾವತ್ತೂ ಅಗೌರವಯುತವಾಗಿ ನಡೆದುಕೊಂಡಿಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ ಮತ ಹಾಕುತ್ತಿರಲಿಲ್ಲ. ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೋರಾಟವಿತ್ತು. 8 ತಿಂಗಳ ಕಾಲ ಪಂಚರತ್ನ ಕಾರ್ಯಕ್ರಮವನ್ನು ಜನರ ಮುಂದಿಟ್ಟು ಮತಯಾಚಿಸಿದರೂ ಜನರು ಮತ ಕೊಡಲಿಲ್ಲ. ಕಾವೇರಿ, ಕೃಷ್ಣ ವಿಚಾರದಲ್ಲಿ ದೇವೇಗೌಡರು ನೀಡಿರುವ ಕೊಡುಗೆ ಎಷ್ಟು? ಮತ್ತೊಬ್ಬರು ನೀಡಲು ಸಾಧ್ಯವಿಲ್ಲ. ಕಾವೇರಿ ಭಾಗದಲ್ಲಿ ರೈತರು ಉಳಿದಿದ್ದರೆ ಅದು ದೇವೇಗೌಡರಿಂದ ಮತ್ತು ಜೆಡಿಎಸ್ನಿಂದ ಮಾತ್ರ ಎಂದರು.

ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಕಾಲು ಹಿಡಿಯುವ ದುರ್ಗತಿ ಜೆಡಿಎಸ್ಗೆ ಬಂದಿಲ್ಲ. ನಿಮ್ಮ ರಾಷ್ಟ್ರ ನಾಯಕರು ದೇವೇಗೌಡರ ಕಾಲು ಹಿಡಿಲು ಬಂದಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.

ರಾಜಸಭೆಯಲ್ಲಿ ಕಾವೇರಿ ಬಗ್ಗೆ ಏಕಾಂಗಿಯಾಗಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಏಕೆ ಮಾತನಾಡಲಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸ್ಸು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಮೆಟ್ಟೂರು ಜಲಾಶಯದಲ್ಲಿ 11 ಟಿಎಂಸಿ ಅಡಿ ನೀರಿದೆ. 7,231 ಕ್ಯೂಸೆಕ್ ಒಳ ಹರಿವಿದ್ದರೆ, ಆರೂವರೆ ಸಾವಿರ ಕ್ಯೂಸೆಕ್ ಹೊರ ಹರಿವಿದೆ.ಕೆಆರ್ಎಸ್ಗೆ ಮಳೆಯಾಗಿದ್ದರಿಂದ 7 ಸಾವಿರ ಕ್ಯೂಸೆಕ್ನಷ್ಟು ನೀರು ಬರುತ್ತಿತ್ತು. ಈಗ 5 ಸಾವಿರ ಕ್ಯೂಸೆಕ್ಸ್ಗೆ ಇಳಿದಿದೆ. ನಾವು ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ನವರೇ ವಿಷಯಾಂತರ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ಸಾಕಷ್ಟು ವಿಸ್ತರಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವ ಮುನ್ನ ನಡೆದ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ನವರೇ ಸಿಎಂ ಆಗಲಿ ಎಂದು ಬಲವಂತ ಮಾಡಿದ್ದರು. ಅಂದೇ ಕೇಂದ್ರ ಗೃಹಸಚಿವ ಅಮಿತ್ ಷಾ ದೂರವಾಣಿ ಮಾಡಿ ಬಿಜೆಪಿ ಜೊತೆ ಸರ್ಕಾರ ಮಾಡುವಂತೆ ಆಹ್ವಾನ ನೀಡಿದ್ದರು. ಆಗ ಹೋಗಿದ್ದರೆ 5 ವರ್ಷ ಸರ್ಕಾರ ಇರುತ್ತಿತ್ತು. ಮೈತ್ರಿ ಹೆಸರಿನಲ್ಲಿ ದೇವೇಗೌಡರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದೆ ಎಂದರು.

ಮೈತ್ರಿ ಸರ್ಕಾರ ಪತನವಾಗುವ ಮುನ್ನ ಬಿಜೆಪಿಯ 5 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಒಂದು ವೇಳೆ ಆ 5 ಶಾಸಕರು ರಾಜೀನಾಮೆ ಕೊಟ್ಟರೆ, ನಮ್ಮ ಪಕ್ಷದ ಮತ್ತೈದು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಹೀಗೆ ಕಾಂಗ್ರೆಸ್ ಜಾತ್ಯತೀತ ಶಕ್ತಿಯನ್ನು ಉಳಿಸುವ ಬದಲು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ

ಬೆಂಗಳೂರು,ಸೆ.27-ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಡ್ರೋಣ್ ಹಾರಾಟ ನಡೆಸಿರುವ ಘಟನೆ ನಡೆದಿದೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲೇ ಡ್ರೋಣ್ ಹಾರಾಟ ನಡೆಸಿದೆ.

ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಹೊರಟ ವೇಳೆ ಡ್ರೋಣ್ ಹಾರಾಟ ನಡೆಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಡ್ರೋಣ್ ಕೇಸರಿ ಮತ್ತು ಹಳದಿ ಬಣ್ಣದಿಂದ ಕೂಡಿತ್ತು ಎನ್ನಲಾಗಿದೆ. ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಯಾವುದೇ ಡ್ರೋಣ್ ಹಾರಾಟ ಮಾಡುವಂತಿಲ್ಲ. ಈ ವೇಳೆ ಇದನ್ನು ನಿಷೇತ ವಲಯ ಎಂದು ಘೋಷಣೆ ಮಾಡಲಾಗಿರುತ್ತದೆ.

ಬ್ಯಾಂಕ್ ಲಾಕರ್‌ನಲ್ಲಿದ್ದ 18 ಲಕ್ಷ ರೂ. ತಿಂದ ಗೆದ್ದಲು ಹುಳುಗಳು

ವಿಮಾನವ ಟೇಕ್ ಆಫ್ ಆದ ಸ್ಥಳದಿಂದ ಆರು ನಾಟಿಕಲ್ ಮೈಲಿ ದೂರದಲ್ಲಿ ಡ್ರೋಣ್ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ಇದರಂದ ಆತಂಕಗೊಂಡ ಪೈಲೆಟ್ಗಳು ತಕ್ಷಣವೇ ವಾಯು ಸಂಚಾರ ನಿಯಂತ್ರಣಾಲಯ(ಎಟಿಸಿ)ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎಂ.ಕೆ.ಸ್ಟಾಲಿನ್-ಸಿದ್ದರಾಮಯ್ಯನವರ ಅಣಕು ಶವಯಾತ್ರೆಗೆ ಖಂಡನೆ

ನವದೆಹಲಿ,ಸೆ.27- ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿರುವ ಎರಡು ಸಂಘಟನೆಗಳ ನಡೆಯನ್ನು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಖಂಡಿಸಿದ್ದು, ಘನತೆಯಿಂದ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜನರಿಂದ ಆಯ್ಕೆಯಾದ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿರುವ ಎರಡು ಸಂಘಟನೆಗಳ ನಡೆಯನ್ನು ಖಂಡಿಸುತ್ತೇನೆ. ಘನತೆಯಿಂದ ಪ್ರತಿಭಟಿಸಿ.

ಬ್ಯಾಂಕ್ ಲಾಕರ್‌ನಲ್ಲಿದ್ದ 18 ಲಕ್ಷ ರೂ. ತಿಂದ ಗೆದ್ದಲು ಹುಳುಗಳು

ನಿಮ್ಮ ಕೋಪವನ್ನು ಯೋಗ್ಯ ರೀತಿಯಲ್ಲಿ ಪ್ರದರ್ಶಿಸಿ. ಕಾವೇರಿ ಇಬ್ಬರಿಗೂ ಪ್ರಮುಖ ವಿಷಯವಾಗಿದೆ. ನಮಗೆ ಮತ್ತು ನಮ್ಮದೆಂದು ಹೇಳಿಕೊಳ್ಳುವ ಹಕ್ಕು ನಮಗಿದೆ. ಅದನ್ನು ಸಭ್ಯತೆಯಿಂದ ಮಾಡೋಣ ಎಂದಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನ ರೈತರು ಹಾಗೂ ಕರ್ನಾಟಕದ ಸಂಘಟನೆಯೊಂದು ಮುಖ್ಯಮಂತ್ರಿಗಳ ಅಣಕು ಶವಸಂಸ್ಕಾರ ನಡೆಸುತ್ತಿರುವ ಹಾಗೂ ಬಾಯಲ್ಲಿ ಸತ್ತ ಇಲಿಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಫೋಟೊಗಳನ್ನು ಅವರು ಲಗತ್ತಿಸಿ, ಈ ಸಂಘಟನೆಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.