Home Blog Page 1942

ಮಗಳಿಗೆ ರಬಿಯಾ ಎಂದು ಹೆಸರಿಟ್ಟ ನಟಿ ಸ್ವರಾ ಭಾಸ್ಕರ್

ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರೊಂದಿಗೆ ಕಳೆದ ಜನವರಿ 6 ರಂದು ಮದುವೆಯಾಗಿದ್ದ ಬಾಲಿವುಡ್​ ನಟಿ ಸ್ವರಾ ಭಾಸ್ಕರ್, ಇದೀಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 23ರಂದು ಮಗುವಿಗೆ ಜನ್ಮ ನೀಡಿರುವ ಸ್ವರಾ ಅವರು ಈ ಖುಷಿಯ ವಿಷಯವನ್ನು ಮೂರು ದಿನಗಳ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಜೋಡಿ ಈ ಹಿಂದೆ ದಿಢೀರ್​ ಆಗಿ ಈ ಬಗ್ಗೆ ಘೋಷಿಸಿತ್ತು. ಸ್ವರಾ ತಮ್ಮ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು. ನಂತರ ಫೆಬ್ರುವರಿ ತಿಂಗಳಿನಲ್ಲಿ ಇವರ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು.

ಸ್ವರಾ ಮತ್ತು ಫಹಾದ್ ಇಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದಾಗ ಸಾಕಷ್ಟು ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಟ್ರೋಲಿಗರು, ನಿಮ್ಮ ಪ್ರೀತಿ ನಿಜವಾಗಿದ್ದರೆ, ಧೈರ್ಯವಿದ್ದರೆ ಮಗುವಿಗೆ ಹಿಂದೂ ಹೆಸರು ಇಡಿ ನೋಡೋಣ ಎಂದಿದ್ದರು. ಆದರೆ ಇದೀಗ ಹೆಸರು ಕೂಡ ರಿವೀಲ್​ ಆಗಿದೆ. ಮಗಳಿಗೆ ರಬಿಯಾ ಎಂದು ಹೆಸರು ಇಡಲಾಗಿದೆ.

ಡಾ.ರಾಜ್ ನೆನಪಿಸಿದ ಕಾವೇರಿ ಹೋರಾಟ

ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸ್ವರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್​ ಮಾಡಿಕೊಂಡಿದ್ದರು.

ಡಾ.ರಾಜ್ ನೆನಪಿಸಿದ ಕಾವೇರಿ ಹೋರಾಟ

ಬೆಂಗಳೂರು,ಸೆ.26- ನೆಲ,ಜಲ ಭಾಷೆಗೆ ದಕ್ಕೆ ಬಂದಾಗಲೆಲ್ಲ ಡಾ. ರಾಜ್ ಕುಮಾರ್ ಸಿಡಿದೇಳುತ್ತಿದ್ದರು. ಅವರು ಒಂದು ಕರೆ ನೀಡಿದ್ದರೆ ಇಡೀ ಕನ್ನಡಿಗರು ಜೊತೆಗೂಡುತ್ತಿದ್ದರು. ಈ ಹಿಂದೆ ಕಾವೇರಿ ಘಟನೆಗಳು ನಡೆದಾಗಲೆಲ್ಲಾ ಡಾ.ರಾಜ್ ಅವರ ಹೋರಾಟ ಈಗಲೂ ನೆನಪಿಗೆ ಬರುತ್ತದೆ.

ಅದು ಗೋಕಾಕ್ ಚಳುವಳಿ ಆಗಲಿ ಕನ್ನಡ ಚಿತ್ರರಂಗರದ ಸಮಸ್ಯೆಯಾಗಲಿ ಯಾವಾಗಲೂ ಅವರು ನೇತೃತ್ವ ವಹಿಸುತ್ತಿದ್ದರು. ಭಾಷಾ ಪ್ರೇಮ ಮತ್ತು ಕನ್ನಡ ನಾಡಿನ ಮೇಲೆ ಅವರಿಗಿದ್ದ ಅಪಾರ ಪ್ರೇಮವನ್ನು ಕೊನೆಯ ಉಸಿರಿರುವರೆಗೂ ಉಳಿಸಿಕೊಂಡಿದ್ದರು.

ಸೆ.29 ರಂದು ಕರ್ನಾಟಕ ಬಂದ್ ಫಿಕ್ಸ್

ಇಂದು ಬೆಂಗಳೂರು ಬಂದ್ ಸಂದರ್ಭದಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದರೆ, ಪ್ರತಿಭಟನೆಗಳು ಸೀಮಿತವಾಗಿದೆ. ನಮ್ಮ ಜೀವಜವ ಕಾವೇರಿಗಾಗಿ ಬೆಂಗಳೂರಿನ ಜನರು ಸ್ಪಂದಿಸಿದ್ದಾರೆ. ಆದರೆ ಇದರ ಬಿಸಿ ದೆಹಲಿಗೆ ತಟ್ಟುವಂತಹ ಗಟ್ಟಿ ದ್ವನಿ ಯಾರ ಬಳಿ ಇದೆ ಎಂದು ಈಗ ದೊಡ್ಡ ಪ್ರಶ್ನೆಯಾಗಿದೆ.

ಅಣ್ಣ ಅವರು ಯಾವಾಗಲೂ ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತಾರೆ. ಅವರು ಒಂದು ಕರೆ ನೀಡಿದರೆ ಕೆಂಪೇಗೌಡ ರಸ್ತೆ ತುಂಬಿ ತುಳುಕುತ್ತಿತ್ತು. ಆಳುವವರಿಗೆ ಬಿಸಿ ಮುಟ್ಟುತ್ತಿತ್ತು,

ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆ

ನವದೆಹಲಿ,ಸೆ.26- ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಿಗಧಿತ ಸಮಯದಲ್ಲಿ ಪೂರ್ಣಗೊಳ್ಳಲಿದ್ದು, ಬರುವ ಜನವರಿಯಲ್ಲಿ ಲೋಕಾರ್ಪಣೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ದೇವಾಲಯದ ನಿರ್ಮಾಣವು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಟ್ರಸ್ಟ್ ಹೇಳಿದೆ.

ನೆಲ ಅಂತಸ್ತಿನ ಕಾಮಗಾರಿಯನ್ನು ನವೆಂಬರ್‍ನಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಮೊದಲ ಅಂತಸ್ತಿನ ಶೇ.50ರಷ್ಟು ಪಿಲ್ಲರ್‍ಗಳು ಪೂರ್ಣಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ಮೊದಲ ಮಹಡಿಯ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಟ್ರಸ್ಟ್ ಹೊಂದಿದ್ದು, 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ.

ಈ ಹಿಂದೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ 2024 ರ ಜನವರಿ 21-23 ರಂದು ದೇವಾಲಯದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ ಎಂದು ಘೋಷಿಸಿತ್ತು. 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಪವಿತ್ರ ಸಮಾರಂಭಕ್ಕೆ ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ 25,000 ಸಂತರ ಜೊತೆಗೆ, 10,000 ವಿಶೇಷ ಅತಿಥಿಗಳು ಸಹ ಇರುತ್ತಾರೆ.

ಸೆ.29 ರಂದು ಕರ್ನಾಟಕ ಬಂದ್ ಫಿಕ್ಸ್

ರಾಮ ಜನ್ಮಭೂಮಿಯ ಶಂಕುಸ್ಥಾಪನೆ ಸಮಾರಂಭವು ಮುಂದಿನ ವರ್ಷ ಜನವರಿ ಮೂರನೇ ವಾರದಲ್ಲಿ ನಡೆಯಲಿದೆ. ಮೂರು ದಿನಾಂಕಗಳನ್ನು – 21, 22 ಮತ್ತು 23 ಜನವರಿ – ಶಂಕುಸ್ಥಾಪನೆ ಸಮಾರಂಭಕ್ಕೆ ನಿಗದಿಪಡಿಸಲಾಗಿದೆ. ಸಮಾರಂಭಕ್ಕೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇವೆ, ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದು ರಾಮಮಂದಿರ ಟ್ರಸ್ಟ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟನೆಗೂ ಮುನ್ನ ಅಯೋಧ್ಯೆಯನ್ನು ಸುಂದರಗೊಳಿಸಲು ಮತ್ತು ಅತ್ಯಾಧುನಿಕ ನಗರ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ

ಬೆಂಗಳೂರು, ಸೆ. 26- ಕಾವೇರಿ ನೀರು ಉಳಿವಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಬಂದ್‍ನಲ್ಲಿ ಜೆಡಿಎಸ್ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್‍ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟಗಾರರು ಶಾಂತಿಯುತವಾಗಿ ವರ್ತಿಸಬೇಕು. ಬಂದ್ ಯಶಸ್ವಿಯಾಗಲು ಜೆಡಿಎಸ್ ಕಾರ್ಯಕರ್ತರು ಕೂಡ ಸಹಕಾರ ನೀಡಲಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸೆ.29 ರಂದು ಕರ್ನಾಟಕ ಬಂದ್ ಫಿಕ್ಸ್

ಬೆಂಗಳೂರು,ಸೆ.25- ಕನ್ನಡಪರ ಸಂಘಟನೆಗಳ ನಡುವೆಯೇ ಗೊಂದಲಕ್ಕೆ ಕಾರಣವಾಗಿದ್ದ ಕರ್ನಾಟಕ ಬಂದ್ ಇದೇ 29ರಂದು ನಡೆಯುವುದು ಖಚಿತವಾಗಿದ್ದು, ಒಂದೇ ವಾರದಲ್ಲಿ ಎರಡೆರಡು ಬಂದ್ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಮಂಗಳವಾರ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಹಾಗೂ ಜಲಶಕ್ತಿ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‍ಗೆ ಕರೆ ಕೊಟ್ಟಿರುವ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಇದೇ 29ರಂದು ಕರ್ನಾಟಕ ಬಂದ್‍ಗೂ ಕರೆ ಕೊಟ್ಟಿವೆ.

ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ 29ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿಂತೆಗೆದುಕೊಳ್ಳಬಾರದು ಎಂಬ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ನಾಳೆ ನಡೆಯಲಿರುವ ಬೆಂಗಳೂರು ಬಂದ್‍ಗೆ ನಮ್ಮ ಬೆಂಬಲವಿಲ್ಲ. ಸೆ.29ಕ್ಕೆ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ರಾಜಭವನವನ್ನು ಮುತ್ತಿಗೆ ಹಾಕುತ್ತೇವೆ ಎಂದು ಘೋಷಣೆ ಮಾಡಿದರು. ಶುಕ್ರವಾರ ನಡೆಯುವ ಅಖಂಡ ಕರ್ನಾಟಕ ಬಂದ್ ಸೇರಿದಂತೆ ರಾಜ್ಯಾದ್ಯಂತ ಭಾರೀ ಚಳವಳಿ ನಡೆಸುವ ಬಗ್ಗೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಮಹತ್ತರವಾದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.

ರಾಹುಲ್ ಗಾಂಧಿಗೆ ಹೈದರಾಬಾದ್‍ನಲ್ಲಿ ಸ್ಪರ್ಧಿಸುವಂತೆ ಓವೈಸಿ ಚಾಲೆಂಜ್

ಬಂದ್ ಎಂದರೆ ಕನ್ನಡ ಒಕ್ಕೂಟ, ಎಲ್ಲಾ ಕನ್ನಡ ಪರ ಸಂಘಟನೆಗಳು ಸೆ.29ಕ್ಕೆ ಬಂದ್ ನಡೆಸಲು ತೀರ್ಮಾನಿಸಿರುವ ಸಂದರ್ಭದಲ್ಲಿ ಇದನ್ನು ತಿಳಿದು ಆಮ್ ಆದ್ವಿ ಪಕ್ಷ ಮತ್ತು ರೈತ ಸಂಘಟನೆಯೊಂದು ನಾಳೆ ಬೆಂಗಳೂರು ಬಂದ್ ಕರೆಕೊಟ್ಟು ರಾಜಕೀಯ ಮಾಡುತ್ತಿವೆ. ನಾವೆಲ್ಲಾ ಸಂಘಟನೆಗಳು ನಾಳೆ ಬಂದ್ ಬೇಡ ಎಂದು ಕೈ ಮುಗಿದು ಕೇಳಿಕೊಂಡರು ಅವರು ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೇವಲ ಬೆಂಗಳೂರು ಮಾತ್ರ ಕರ್ನಾಟಕವಲ್ಲ ಅಖಂಡ ಕರ್ನಾಟಕ ಸೇರಿ ಕರ್ನಾಟಕವಾಗಿದೆ. ಆದ್ದರಿಂದ ನಮ್ಮ ಕೂಗು, ದೇಶದ ಪ್ರಧಾನಿಗಳಿಗೆ ಮುಟ್ಟಬೇಕು ದೆಹಲಿಯಲ್ಲಿ ನಮ್ಮ ಹೋರಾಟದ ಕಿಚ್ಚು ಹೆಚ್ಚಾಗಬೇಕು ಎಂದರು. ರಾಜ್ಯದ ಸುಮಾರು 12 -16 ಸಂಘಟನೆಗಳು ನಮಗೆ ಬೆಂಬಲ ನೀಡವೆ. ಇದೇ 29ರಂದು ಕರೆ ಕೊಟ್ಟಿರುವ ಅಖಂಡ ಕರ್ನಾಟಕ ಬಂಧಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಅಂದು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಯಾವುದೇ ಚಲನಚಿತ್ರಗಳು ಪ್ರದರ್ಶನವಾಗುವುದಿಲ್ಲ ಹಾಗೆಯೇ ರಾಷ್ಟ್ರೀಯ ಹೆದ್ದಾರಿಗಳು ಕೂಡ ಬಂದ್ ಆಗಲಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಬಂದ್ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ಕುಡಿಯು ನೀರಿಗೆ ಮೇಕೆದಾಟು ಅಣೆಕಟ್ಟು ಕಟ್ಟಲು ತೊಂದರೆ ಕೊಡುತ್ತಿರುವ ತಮಿಳು ನಾಡಿಗೆ ಕಾವೇರಿ ನೀರಿನ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವತ್ತು ಅಧಿಕಾರದಲ್ಲಿ ಇಲ್ಲದೇ ಇರುವವರು ಹೋರಾಟಕ್ಕೆ ಬೆಂಬಲ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ನೀರನ್ನು ತಮಿಳುನಾಡಿಗೆ ನೀರು ಹರಿಸಿ ದ್ರೋಹವೆಸಗಿದ್ದಾರೆ ಅವರಿಗೆ ಮಾತನಾಡುವ ಹಕ್ಕಿಲ್ಲ. ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕನ್ನಡಪರ ಸಂಘಟನೆಗಳಿಗೆ ಮಾತ್ರ ನೈತಿಕ ಹಕ್ಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷವನ್ನು ದೂರಿದರು. ಅಷ್ಟೇ ಅಲ್ಲದೆ ನಾಳೆ ನಡೆಯುವ ಬಂದ್ ಗೆ ಬೆಂಬಲವಾಗಿ ನಿಂತಿರುವ ಆಮ್ ಆದ್ಮಿ ಪಕ್ಷದ ನಿರ್ಣಯವನ್ನು ಖಂಡಿಸಿದರು.

ಕಾವೇರಿ ವಿವಾದದಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ : ಸಿಎಂ

ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕೆ.ಆರ್. ಕುಮಾರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಎನ್.ಮೂರ್ತಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್, ಹಾಗೂ ಹೆಚ್.ವಿ. ಗಿರೀಶ್ ಗೌಡ ಹಾಗೂ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಸೇರಿದಂತೆ ಮತ್ತಿತರರು ಇದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2023)

ನಿತ್ಯ ನೀತಿ : ಭಕ್ತಿಯಿಂದ ಸಮರ್ಪಿಸಿಕೊಂಡವರನ್ನು ಭಗವಂತನೆಂದೂ ಕೈ ಬಿಡುವುದಿಲ್ಲ. ಭಕ್ತನು ಭಕ್ತಿ ಸಂಪತ್ತಿನ ಸದುಪಯೋಗವನ್ನು ಪಡೆದುಕೊಳ್ಳಬೇಕು. ಭಗವಂತ ಭಕ್ತರ ಪರಾಧೀನ.

ಪಂಚಾಂಗ ಮಂಗಳವಾರ 26-09-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಶ್ರವಣ / ಯೋಗ: ಸುಕರ್ಮಾ / ಕರಣ: ಭವ

ಸೂರ್ಯೋದಯ ; ಬೆ.06.09
ಸೂರ್ಯಾಸ್ತ : 06.13
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಕಾರ್ಯ ಸಾಮಥ್ರ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ವೃಷಭ: ನಿಮ್ಮಿಂದ ಕೆಟ್ಟ ಕೆಲಸ ಮಾಡಿಸುವ ಪ್ರಯತ್ನಕ್ಕೆ ನಿಮ್ಮ ಸ್ನೇಹಿತರೇ ಯತ್ನ ನಡೆಸುವರು.
ಮಿಥುನ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯುವುದು ಸೂಕ್ತ.

ಕಟಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ. ಸಣ್ಣ ಸಣ್ಣ ವಿಚಾರಕ್ಕೂ ನೆರೆಹೊರೆ ಯವರ ಕಿರಿಕಿರಿ ತಪ್ಪದು.
ಸಿಂಹ: ಜವಾಬ್ದಾರಿ ಯುತವಾದ ಕಾರ್ಯಗಳ ಬಗ್ಗೆ ಗಮನ ಹರಿಸಿ.
ಕನ್ಯಾ: ಮನೆಯ ವಿಷಯದಲ್ಲಿ ಯಾವುದೇ ಚಿಂತೆ ಬೇಡ. ವ್ಯಾಪಾರ- ವ್ಯವಹಾರಗಳು ಸರಾಗವಾಗಿ ನಡೆಯಲಿವೆ.

ತುಲಾ: ಆರ್ಥಿಕ ತಾಪತ್ರಯಗಳ ಬಗ್ಗೆ ಬೇರೆಯವರೊಂದಿಗೆ ಹೇಳಿಕೊಳ್ಳಲಾಗದು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕಂದಾಯ ಅಕಾರಿಗಳಿಗೆ ಕೆಲಸದ ಹೊಣೆ ಹೆಚ್ಚಾಗುವುದು. ಉತ್ತಮ ದಿನ.
ಧನುಸ್ಸು: ಹಲವಾರು ಆಸಕ್ತಿದಾಯಕ ವಿಚಾರಗಳು ನಿಮ್ಮ ಕಿವಿಗೆ ಬೀಳಲಿವೆ. ದೂರ ಪ್ರಯಾಣ ಬೇಡ.

ಮಕರ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.
ಕುಂಭ: ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ.
ಮೀನ: ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳದೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದಿರಿ.

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್

ಬೆಂಗಳೂರು,ಸೆ.25- ಬಂದ್ ಹಿನ್ನೆಲೆಯಲ್ಲಿ ನಾಳೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಂದ್ ಸಂದರ್ಭದಲ್ಲಿ ಯಾರಾದರೂ ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಲು ಯತ್ನಿಸಿದರೆ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ನಗರದ ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಉಪ ವಲಯದ ಎಸಿಪಿಗಳು, ಠಾಣೆಗಳ ಇನ್ಸ್‍ಪೆಕ್ಟರ್‍ಗಳು ನಾಳೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಕ್ಷಿಪ್ರ ಕಾರ್ಯಚರಣೆ ಪಡೆ (ಆರ್‍ಎಎಫ್) 3 ಕಂಪನಿಗಳನ್ನು ಕರೆಸಿಕೊಳ್ಳಲಾಗಿದೆ. 60 ಕೆಎಸ್‍ಆರ್‍ಪಿ ಹಾಗೂ ಸಿಎಆರ್ ತುಕಡಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಣ್ಣಪುಟ್ಟ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಬಂದ್‍ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸ್ವಪ್ರೇರಣೆಯಿಂದ ಬಂದ್ ಮಾಡಬೇಕು. ಒಂದು ವೇಳೆ ಯಾರಾದರೂ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.

ಮನೆಗೆ ಬಂದಿದ್ದ ಆಟೋ ಚಾಲಕನ ಕೊಲೆ

ಬೆಂಗಳೂರು, ಸೆ.25- ಅಣ್ಣನ ಮನೆಗೆ ಬಂದು ತಂಗುತ್ತಿದ್ದ ಆಟೋ ಚಾಲಕ ಹಾಗೂ ಹೋಮ್‍ಕೇರ್ ನೌಕರನನ್ನು ತಮ್ಮ ರಾಡ್‍ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಜೆಪಿ ನಗರದ ನಿವಾಸಿ ಗಣೇಶ (43) ಕೊಲೆಯಾದ ವ್ಯಕ್ತಿ. ಇವರು ಹಿಂದೆ ಆಟೋ ಚಾಲಕರಾಗಿದ್ದು, ಈಗ ಹೋಮ್‍ಕೇರ್‍ವೊಂದರಲ್ಲಿ ಉದ್ಯೋಗಿಯಾಗಿದ್ದರು.

ಸಾರ್ವಭೌಮನಗರದ ಶಾರದಾ ನಗರದಲ್ಲಿ ಮಲ್ಲೇಶ್ ಎಂಬುವವರು ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಅಲ್ಲಿಗೆ ಅವರ ಸ್ನೇಹಿತ ಗಣೇಶ ತನ್ನ ಮನೆ ಬಿಟ್ಟು ಬಂದು ಉಳಿದುಕೊಂಡಿದ್ದ. ಇದು ಮಲ್ಲೇಶನ ತಮ್ಮ ನಾರಾಯಣನಿಗೆ ಇಷ್ಟವಿರಲಿಲ್ಲ.

ನಮ್ಮ ಅಣ್ಣನ ಮನೆಯಲ್ಲಿ ನೀನು ಇರುವುದು ಬೇಡ. ನಿಮ್ಮ ಮನೆಗೆ ಹೋಗು ಎಂದು ಗಣೇಶನಿಗೆ ಹಲವಾರು ಬಾರಿ ನಾರಾಯಣ ಎಚ್ಚರಿಕೆ ನೀಡಿದ್ದ. ಆದರೆ, ನಿನ್ನೆ ಮಲ್ಲೇಶ ಇಲ್ಲದಿದ್ದ ಸಂದರ್ಭದಲ್ಲಿ ಗಣೇಶ ಮನೆಯಲ್ಲಿದ್ದ. ರಾತ್ರಿ ಅಣ್ಣನ ಮನೆಗೆ ಬಂದ ನಾರಾಯಣ ಗಣೇಶನನ್ನು ನೋಡಿ ಮನೆಯಲ್ಲಿ ಏಕೆ ಇದ್ದೀಯ ಎಂದು ಗಲಾಟೆ ಮಾಡಿದ್ದಾನೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು

ಈ ವೇಳೆ ಮುಂಜಾನೆ 2.30ರ ಸಮಯದಲ್ಲಿ ನಾರಾಯಣ ರಾಡ್‍ನಿಂದ ಗಣೇಶನ ತಲೆಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಕೂಗಾಟ ಕೇಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಗಣೇಶ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದಾಗ ಆತ ಕೊನೆಯುಸಿರೆಳೆದಿದ್ದಾನೆ.

ನಾರಾಯಣ ಪರಾರಿಯಾಗಿದ್ದು, ಸುದ್ದಿ ತಿಳಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ಏಕಕಾಲದಲ್ಲಿ ಜನತಾ ದರ್ಶನ, ಸ್ಥಳದಲ್ಲೇ ಪರಿಹಾರ

ನಗರ ಪ್ರದೇಶದಲ್ಲಿ ನೀರಿನ ಬಳಕೆ ಮಿತಿಗೊಳಿಸಲು ತಜ್ಞರ ಸಲಹೆ

ಬೆಂಗಳೂರು, ಸೆ.25- ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುತ್ತಿದ್ದು, ಈಗಿನಿಂದಲೇ ನಗರ ಪ್ರದೇಶಗಳಿಗೆ ಮತ್ತು ನೀರಾವರಿಗೆ ಪಡಿತರ ರೀತಿಯಲ್ಲಿ ನೀರು ಸರಬರಾಜು ಅಂದರೆ ದೈನಂದಿನ ನೀರಿನ ಬಳಕೆಯನ್ನು ಸೀಮಿತಗೊಳಿಸುವ ಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಮತ್ತು ಅಂತರ್ಜಲ ಮಂಡಳಿಯ ಅಧಿಕಾರಿಗಳ ಪ್ರಕಾರ, ಮೇಲ್ಮೈಯಲ್ಲಿನ ನೀರನ್ನು ಮಾತ್ರ ಅತ್ಯುತ್ತಮವಾಗಿ ಹಿಡಿದಿಡಲಾಗುತ್ತದೆ. ಅಣೆಕಟ್ಟಿನ ಸುತ್ತಲ ಪ್ರದೇಶಗಳಲ್ಲಿ ಅಂತರ್ಜಲ ವನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡಿ ಅವುಗಳನ್ನು ನೀರಿನ ಕೊರತೆಯ ಸಮಯದಲ್ಲಿ ಬಳಸಿಕೊಳ್ಳುವಂತೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಮತ್ತು ನೀರಾವರಿಗೆ ದಿನನಿತ್ಯ ಸಹಜವಾಗಿ ನೀರು ಪೂರೈಕೆ ಮಾಡು ವುದಕ್ಕಿಂತ ಕಡಿಮೆ ಮಿತಿಯಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು.

ಸರ್ಕಾರವು ನೀರಾವರಿ, ಕೈಗಾರಿಕೆ ಗಳಿಗೆ ಮತ್ತು ನಗರ ಪ್ರದೇಶಗಳಿಗೆ ತಕ್ಷಣವೇ ಶೇಕಡಾ 20 ರಿಂದ 30 ರಷ್ಟು ನೀರು ಸರಬರಾಜನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈಶಾನ್ಯ ಮುಂಗಾರು ವಿಫಲವಾದರೆ ಈ ನೀರನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಬಳಸಬೇಕೆಂಬ ಸಲಹೆ ಕೊಟ್ಟಿದ್ದಾರೆ.

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಮಾನದಂಡಗಳ ಬ್ಯೂರೋ ಮಾರ್ಗಸೂಚಿಗಳ ಪ್ರಕಾರ, ನಾಲ್ಕು ಜನರ ಕುಟುಂಬಕ್ಕೆ ಮಾಸಿಕವಾಗಿ 12,000-15,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬವು ತಿಂಗಳಿಗೆ 20,000-40,000 ಲೀಟರ್ ನೀರನ್ನು ಬಳಸುತ್ತದೆ. ನಗರ ನೀರು ಬಳಕೆಯ ಕುರಿತು ಯೋಜನೆಯ ಕೊರತೆ ಇದೆ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಣೆಕಟ್ಟು ಸುತ್ತಲ ಪ್ರದೇಶಗಳಲ್ಲಿ ಕೃಷಿ ಮಾಡಲು ಅಂತರ್ಜಲದತ್ತ ಗಮನಹರಿಸಬೇಕು. ಸಮಸ್ಯೆ ಹೆಚ್ಚು ರಾಜಕೀಯವಾಗುತ್ತಿದೆ ಎಂದು ಅವರು ಹೇಳಿದರು. ಕಾವೇರಿಯಿಂದ ಕರ್ನಾಟಕದ ನೀರಿನ ಪಾಲು ಕೇವಲ ಶೇ.25ರಷ್ಟಿದೆ ಆದರೆ ಇತರ ಮೂಲಗಳಿಂದ ಅದರ ನೀರಿನ ಬಳಕೆ ಹೆಚ್ಚಾಗಿದೆ.

ಕಳೆದ 32 ವರ್ಷಗಳಲ್ಲಿ, ಕರ್ನಾಟಕವು ತಮಿಳುನಾಡಿನೊಂದಿಗೆ ಆರು ಬಾರಿ ಬರ ಮತ್ತು ನೀರಿನ ಹೋರಾಟವನ್ನು ಎದುರಿಸಿತು. ಸರ್ಕಾರಗಳ ಕಡೆಯಿಂದ ಯೋಜನೆ ಮತ್ತು ಸಿದ್ಧತೆಯ ಕೊರತೆ ಇತ್ತು, ಅದು ಈಗ ಪ್ರತಿಫಲಿಸಿದೆ ಎಂದಿದ್ದಾರೆ.

ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 51 ಟಿಎಂಸಿ ಅಡಿ ನೀರು ಇದೆ. ಬೆಳೆದ ಬೆಳೆಗಳಿಗೆ 70 ಟಿಎಂಸಿ, ಕುಡಿಯಲು 33 ಟಿಎಂಸಿ ನೀರು, ಕೈಗಾರಿಕೆಗಳಿಗೆ 3 ಟಿಎಂಸಿ ಅಡಿ ನೀರು ಬೇಕು. ರೈತರು ಬಿತ್ತನೆ ಕೈಗೊಂಡಿದ್ದರಿಂದ ನೀರಾವರಿಗೆ ಹೊಡೆತ ಬೀಳಲಿದೆ. ಎರಡೂ ರಾಜ್ಯಗಳ ರೈತರಿಗೆ ಈಗಲೇ ಮನವರಿಕೆ ಮಾಡಿಕೊಡಬೇಕಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಐಐಎಸ್‍ಸಿಯ ತಜ್ಞರು ಹೇಳಿದ್ದಾರೆ. ನೀರಾವರಿಗಾಗಿ ಉತ್ತಮ ನೀರಿನ ನಿರ್ವಹಣೆಯನ್ನು ರೈತರು ಅರ್ಥಮಾಡಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಇಲ್ಲಿ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸಿ : ಸಚಿವ ಗುಂಡೂರಾವ್

ವೈಕ್ತಿಗತವಾಗಿ ದೈನಂದಿನ ನೀರಿನ ಬಳಕೆ
3-4 ಲೀಟರ್ ಕುಡಿಯಲು ಬೇಕು
8 ಲೀಟರ್ ಅಡುಗೆಗಾಗಿ ಕಾದಿರಿಸಬೇಕು
20 ಲೀಟರ್ ಸ್ನಾನ, ಬಟ್ಟೆ, ಪಾತ್ರೆ ತೊಳೆಯಲು ಬೇಕು
25-30 ಲೀಟರ್ ಫ್ಲಶ್, ಶೌಚಾಲಯದ ಅವಶ್ಯಕತೆ
8-10 ಲೀಟರ್ ಇತರ ಉಪಯುಕ್ತತೆಗಾಗಿ ಬೇಕು

ನಾಳೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ನವದೆಹಲಿ,ಸೆ.25- ಕರ್ನಾಟಕ ಮತ್ತು ತಮಿಳುನಾಡು ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಕಾವೇರಿ ಜಲನಯನ ತೀರಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ಅಧಿಕಾರಿಗಳ ಸಭೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು ಕರೆದಿದ್ದು ವಿಡಿಯೋ ಕಾನರೆನ್ಸ್ ಮೂಲಕ ನಡೆಯಲಿದೆ.

ಕಾವೇರಿ ಜಲನಯನ ತೀರಪ್ರದೇಶದಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕಳೆದ ಸೆ.13ರಂದು ನೀಡಿತ್ತು. ಇದೀಗ ಆದೇಶ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಸಭೆ ಕರೆಯಲಾಗಿದೆ.ನಾಳಿನ ಸಭೆಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಲು ಕರ್ನಾಟಕ ನಿರ್ಧರಿಸಿದೆ. ನೀರಿನ ಕೊರತೆ ನಡುವೆ ಸಿಡಬ್ಲ್ಯು ಆರ್‍ಸಿ ನೀಡಿರುವ ಎಲ್ಲಾ ಆದೇಶಗಳನ್ನು ಪಾಲಿಸಿದೆ. ಈಗ ನೀರಿನ ಕೊರತೆ ಹೆಚ್ಚಳವಾಗಿದ್ದು, ಸಣ್ಣ ಪ್ರಮಾಣದ ಕೃಷಿಗೂ ಸಮಸ್ಯೆಯಾಗುವ ಸಾಧ್ಯತೆಗಳಿದೆ.

ರಾಹುಲ್ ಗಾಂಧಿಗೆ ಹೈದರಾಬಾದ್‍ನಲ್ಲಿ ಸ್ಪರ್ಧಿಸುವಂತೆ ಓವೈಸಿ ಚಾಲೆಂಜ್

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗಿದೆ. ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ಮತ್ತಿತರರು ಮಂಡ್ಯ, ಮದ್ದೂರು, ಕೆಆರ್‍ಪೇಟೆ, ರಾಮನಗರ ಬಂದ್‍ಗೆ ಕರೆಕೊಟ್ಟಿವೆ. ಇನ್ನೊಂದೆಡೆ ಮಂಗಳವಾರ ಬೆಂಗಳೂರು ಬಂದ್ ಕರೆ ಕೊಟ್ಟಿದ್ದರೆ, ಮತ್ತೊಂದೆಡೆ ಕನ್ನಡಪರ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್‍ಗೂ ಕರೆ ನೀಡಿದೆ. ಸಂಕಷ್ಟ ಸ್ಥಿತಿಯಲ್ಲಿರುವ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಅದರೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ನಾಳೆ ನಡೆಯಲಿರುವ ಸಭೆ ಕರ್ನಾಟಕ ಪಾಲಿಗೆ ಮಹತ್ವದ್ದಾಗಿದೆ.

ಈ ನಡುವೆ ತಮಿಳುನಾಡು ಕೂಡಾ ಕಾವೇರಿ ನೀರಿಗಾಗಿ ಬೇಡಿಕೆ ಇಡಲಿದೆ. ಈವರೆಗೂ 5,000 ಕ್ಯೂಸೆಕ್ ನೀರು ನಿತ್ಯ ಹರಿಸಲು ಸೂಚಿಸಿದರೂ ಕರ್ನಾಟಕ ಕಡಿಮೆ ಪ್ರಮಾಣದ ನೀರು ಹರಿಸಿ ಅನ್ಯಾಯ ಮಾಡಿದೆ. ಬೆಳೆ ಒಣಗುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲೂ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ನೀರು ಹರಿಸಲು ನಿರ್ದೇಶನ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸುವ ಸಾಧ್ಯತೆಯಿದೆ.

ಕಾವೇರಿ ವಿವಾದದಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ : ಸಿಎಂ

ಕಾವೇರಿ ನೀರಿಗಾಗಿ ಎರಡು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಕಾವೇರಿ ನೀರು ನಿಯಂತ್ರಣ ಸಮಿತಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆ ಮಳೆ ಪ್ರಮಾಣ, ಅಣೆಕಟ್ಟುಗಳಿಗೆ ಬರುತ್ತಿರುವ ಒಳ ಹರಿವು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಲೆಕ್ಕ ಹಾಕಿ ನೀರು ಬಿಡುವ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.