Homeರಾಜಕೀಯಡಿಕೆಶಿ ಸಿಎಂ ಆದ ಮಾತ್ರಕ್ಕೆ ಒಕ್ಕಲಿಗರು ಕಾಂಗ್ರೆಸ್‌‍ಗೆ ವೋಟ್ ಹಾಕಲ್ಲ : ಕೆ.ಎನ್‌.ರಾಜಣ್ಣ

ಡಿಕೆಶಿ ಸಿಎಂ ಆದ ಮಾತ್ರಕ್ಕೆ ಒಕ್ಕಲಿಗರು ಕಾಂಗ್ರೆಸ್‌‍ಗೆ ವೋಟ್ ಹಾಕಲ್ಲ : ಕೆ.ಎನ್‌.ರಾಜಣ್ಣ

ಬೆಂಗಳೂರು, ಸೆ.18- ಸಚಿವ ಸಂಪುಟದಿಂದ ವಜಾಗೊಂಡು ಮಾಜಿ ಆಗಿರುವ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್‌.ರಾಜಣ್ಣ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಬಳಿಕ ಮತ್ತೆ ವಿವಾದಾತ್ಮಕ ಹೇಳಿಕೆಗಳ ಬೆನ್ನು ಹತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಕಾರಣಕ್ಕೆ ಒಕ್ಕಲಿಗರೆಲ್ಲರೂ ಕಾಂಗ್ರೆಸ್‌‍ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಹೇಳಿರುವುದು ರಾಜಕಾರಣದಲ್ಲಿ ಹಲ್‌ ಚಲ್‌ ಎಬ್ಬಿಸಿದೆ.

ಒಕ್ಕಲಿಗರು ದೇವೇಗೌಡರನ್ನು ನೋಡಿ ಮತ ಹಾಕುತ್ತಾರೆ, ಡಿ.ಕೆ. ಶಿವಕುಮಾರ್‌ ಅವರನ್ನು ನೋಡಿ ಅಲ್ಲ ಎಂದು ರಾಜಣ್ಣ ಹೇಳಿದ್ದಾರೆ. ನಮ ಸಮುದಾಯದವರು ಮುಖ್ಯಮಂತ್ರಿ ಆಗಿದ್ದಾರೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಮೂಲಕ ಕಾಂಗ್ರೆಸ್‌‍ಗೆ ಶೇ.5ರಷ್ಟು ಹೆಚ್ಚು ಮತ ಬರಬಹುದು ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಮತಗಳನ್ನು ಕಾಂಗ್ರೆಸ್‌‍ ಗೆ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ ಅವರು ತಮ ಸಮುದಾಯದ ಮತಗಳನ್ನು ಬಿಜೆಪಿಗೆ ಸೆಳೆಯಬಲ್ಲ ನಾಯಕರಾಗಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ ದುರ್ಬಲರಾದರೆ ಕಾಂಗ್ರೆಸ್‌‍ ಪಕ್ಷವೇ ದುರ್ಬಲವಾಗುತ್ತದೆ ಎಂದು ಪ್ರತಿಪಾದಿಸಿರುವ ಅವರು, ನಾನು ಕೆಲ ನಿಷ್ಠುರ ವಿಚಾರಗಳನ್ನು ನೇರವಾಗಿ ಹೇಳುತ್ತೇನೆ. ಅವುಗಳನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ಕುಳಿತಿರುವ ಕೆಲವರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಜೆಡಿಎಸ್‌‍ ಪಕ್ಷ ಸೇರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕದ ರಾಜಣ್ಣ, ಕ್ಷೇತ್ರ ಪುನರ್ವಿಂಗಡಣೆ ಸೇರಿದಂತೆ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ತಮ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್‌‍ ಪಕ್ಷದಲ್ಲೇ ಮುಂದುವರಿಯಬೇಕು ಎಂಬ ಮನಸ್ಥಿತಿಯಲ್ಲಿದ್ದೇನೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ನನಗೆ ಕಾಂಗ್ರೆಸ್‌‍ ಪಕ್ಷ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿ-ಫಾರಂ ನೀಡಿದೆ.ಈ ಹಿಂದೆ ಜೆಡಿಎಸ್‌‍ ಪಕ್ಷ ಕೂಡ ಒಮೆ ಟಿಕೆಟ್‌ ನೀಡಿತ್ತು. ಕಾಂಗ್ರೆಸ್‌‍ ಪಕ್ಷ ನನಗೆ ಶಾಸಕ, ಸಚಿವ ಸ್ಥಾನ ಎಲ್ಲವನ್ನೂ ನೀಡಿದೆ. ಧ್ವನಿ ಇಲ್ಲದವರಿಗೆ ಕಾಂಗ್ರೆಸ್‌‍ ಪಕ್ಷದಲ್ಲಿ ಮಾತ್ರ ಅವಕಾಶಗಳಿವೆ ಎಂದು ಕೆ.ಎನ್‌. ರಾಜಣ್ಣ ಹೇಳಿದ್ದಾರೆ.

RELATED ARTICLES
spot_img

Latest News