Homeರಾಷ್ಟ್ರೀಯಯುಪಿಐ ವಹಿವಾಟುಗಳ ಮೇಲಿನ ಶುಲ್ಕ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ

ಯುಪಿಐ ವಹಿವಾಟುಗಳ ಮೇಲಿನ ಶುಲ್ಕ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ/ಬೆಂಗಳೂರು,ಸೆ.18- ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಯುಪಿಐ ಪಾವತಿಗಳ ಮೇಲಿನ ಶೇ 0.4ರಷ್ಟು ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ ಕುರಿತು ಕೇಂದ್ರ ಸರ್ಕಾರ ಹಾಗೂ ಎನ್‌ಪಿಸಿಐ ಹಲವು ಸ್ಪಷ್ಟನೆಗಳನ್ನು ನೀಡಿವೆ.

ಹೊಸ ವ್ಯವಸ್ಥೆ ಅಕ್ಟೋಬರ್‌ 15, 2026ರಿಂದ ಜಾರಿಗೆ ಬರಲಿದ್ದು, 2,000ಕ್ಕಿಂತ ಹೆಚ್ಚಿನ ಮೊತ್ತದ ನಿರ್ದಿಷ್ಟ ಪರ್ಸನ್‌ ಟು ಮರ್ಚೆಂಟ್‌ (ಪಿ2ಎಂ) ವಹಿವಾಟುಗಳಿಗೆ ಮಾತ್ರ ಶೇ. 0.4ರಷ್ಟು ಎಂಡಿಆರ್‌ ಅನ್ವಯವಾಗಲಿದೆ. ಸಾಮಾನ್ಯವಾಗಿ ಜನರು ಪರಸ್ಪರ ಹಣ ಕಳುಹಿಸುವ ಪರ್ಸನ್‌ ಟು ಪರ್ಸನ್‌ ವಹಿವಾಟುಗಳಿಗೆ ಯಾವುದೇ ಎಂಡಿಆರ್‌ ಇರುವುದಿಲ್ಲ.

ಅಂದರೆ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ 5,000, 50,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಕಳುಹಿಸಿದರೂ ಈ ಎಂಡಿಆರ್‌ ಅನ್ವಯಿಸುವುದಿಲ್ಲ. ಸರ್ಕಾರದ ಪ್ರಕಾರ, 2,000ವರೆಗಿನ ವ್ಯಾಪಾರಿ ಪಾವತಿಗಳು ಹಾಗೂ ಶೂನ್ಯ-ಎಂಡಿಆರ್‌ ವ್ಯವಸ್ಥೆಯಡಿ ಬರುವ ಸಣ್ಣ ವ್ಯಾಪಾರಿಗಳ ವಹಿವಾಟುಗಳು ಕೂಡ ಉಚಿತವಾಗಿಯೇ ಮುಂದುವರಿಯಲಿವೆ. ಇದರಿಂದ ಒಟ್ಟಾರೆ ಪಿ2ಎಂ ವಹಿವಾಟುಗಳ ಸುಮಾರು ಶೇ.96 ರಷ್ಟು ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಗ್ರಾಹಕರಿಗೆ ನೇರ ವಹಿವಾಟು ಶುಲ್ಕವಲ್ಲ :
ಇಲ್ಲಿ ಈ್ಕ ಮತ್ತು ಗ್ರಾಹಕರಿಂದ ನೇರವಾಗಿ ಪಡೆಯುವ ಖಿಐ ಶುಲ್ಕದ ನಡುವಿನ ವ್ಯತ್ಯಾಸ ಪ್ರಮುಖವಾಗಿದೆ. ಎಂಡಿಆರ್‌ಎನ್ನುವುದು ಪಾವತಿ ವ್ಯವಸ್ಥೆಯಲ್ಲಿನ ವ್‌ಯಾಪಾರಿ ಪಾವತಿಗೆ ಸಂಬಂಧಿಸಿದ ಶುಲ್ಕವಾಗಿದ್ದು, ಇದನ್ನು ಸರ್ಕಾರ ಅಥವಾ ಘೆಇಐ ತೆರಿಗೆಯಾಗಿ ಸಂಗ್ರಹಿಸುವುದಿಲ್ಲ. ಬ್ಯಾಂಕ್‌ಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಇತರ ಯುಪಿಐ ಎಕೋಸಿಸ್ಟಮ್‌ ಭಾಗಿಗಳ ನಡುವೆ ಈ ಮೊತ್ತ ಹಂಚಿಕೆಯಾಗುತ್ತದೆ.

ಸಾಮಾನ್ಯವಾಗಿ ಎಂಡಿಆರ್‌ ಅನ್ನು ಗ್ರಾಹಕರಿಂದ ಪ್ರತ್ಯೇಕವಾಗಿ ವಸೂಲಿ ಮಾಡುವ ಬದಲು ವ್ಯಾಪಾರಿಗೆ ಜಮೆಯಾಗಬೇಕಾದ ಮೊತ್ತದಿಂದ ಕಡಿತಗೊಳಿಸುವ ವ್ಯವಸ್ಥೆಯಾಗಿದೆ. ಹೀಗಾಗಿ 10,000ರ ಅರ್ಹ ಪಿ2ಎಂ ವಹಿವಾಟಿಗೆ ಶೇ.0.4 ರಷ್ಟು ಎಂದರೆ 40, 5,000ಕ್ಕೆ 20 ಮತ್ತು 3,000ಕ್ಕೆ 12 ಎಂಡಿಆರ್‌ ಆಗುತ್ತದೆ. 75,000ರ ವಹಿವಾಟಿನಲ್ಲಿ 300ಕ್ಕೆ ತಲುಪಿದ ಬಳಿಕ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೂ ಗರಿಷ್ಠ ಎಂಡಿಆರ್‌ 300ರಲ್ಲೇ ಸೀಮಿತವಾಗಿರುತ್ತದೆ.

ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ :
ಹೊಸ ಚೌಕಟ್ಟಿನಲ್ಲಿ ತಿಂಗಳಿಗೆ ಯುಪಿಐ ಕ್ಯೂಆರ್‌ ಮೂಲಕ 1 ಲಕ್ಷದವರೆಗೆ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ಶೂನ್ಯ-ಎಂಡಿಆರ್‌ ವ್ಯವಸ್ಥೆಯನ್ನು ಮುಂದುವರಿಸುವ ಕ್ರಮವೂ ಇದೆ. ಹೀಗಾಗಿ ಹೊಸ ಶುಲ್ಕ ವ್ಯವಸ್ಥೆಯ ಸಂಪೂರ್ಣ ಹೊರೆ ಸಣ್ಣ ವ್ಯಾಪಾರಿಗಳ ಮೇಲೆ ಬೀಳುವುದಿಲ್ಲ ಎಂಬುದು ಸರ್ಕಾರದ ವಾದವಾಗಿದೆ.

ಇದೇ ವೇಳೆ ರೈಲ್ವೆ, ಇಂಧನ, ದೂರಸಂಪರ್ಕ, ವಿಮೆ ಸೇರಿದಂತೆ ಕೆಲವು ನಿರ್ದಿಷ್ಟ ವರ್ಗಗಳಿಗೆ ಶೇಕಡಾವಾರು ಎಂಡಿಆರ್‌ ಬದಲಾಗಿ ಪ್ರತಿ ವಹಿವಾಟಿಗೆ ಶೇ.5ರಷ್ಟು ನಿಗದಿತ ಎಂಡಿಆರ್‌ ವ್ಯವಸ್ಥೆ ಇರಲಿದೆ. ಬಂಡವಾಳ ಮಾರುಕಟ್ಟೆ ಸಂಬಂಧಿತ ಕೆಲವು ಪಾವತಿಗಳಿಗೆ ಶೇ.0.02ರಷ್ಟು ದರ ಹಾಗೂ 300ರ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.

1,500 ಕೋಟಿ ಯೋಜನೆ: ಶೂನ್ಯ ಎಂಡಿಆರ್‌ ಹಿಂದಿನ ಹಿನ್ನೆಲೆ :
ಯುಪಿಐಗೆ ಎಂಡಿಆರ್‌ ವಿಧಿಸುವ ಕುರಿತು ಈಗ ಚರ್ಚೆ ನಡೆಯುತ್ತಿರುವಾಗ, ಹಿಂದೆ ಶೂನ್ಯ-ಎಂಡಿಆರ್‌ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸರ್ಕಾರವೇ ಆರ್ಥಿಕ ನೆರವು ನೀಡುತ್ತಿದ್ದ ಹಿನ್ನೆಲೆಯೂ ಇದೆ. 2025ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಎಫ್‌ವೈ 2024-25ಕ್ಕಾಗಿ ಕಡಿಮೆ ಮೌಲ್ಯದ ಬಿಎಚ್‌ಐಎಂ ಮತ್ತು ಯುಪಿಐ ಪಿ2ಎಂ ವಹಿವಾಟುಗಳನ್ನು ಉತ್ತೇಜಿಸಲು 1,500 ಕೋಟಿ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿತ್ತು. 2,000ವರೆಗಿನ ಅರ್ಹ ವಹಿವಾಟುಗಳಿಗೆ ಸಣ್ಣ ವ್ಯಾಪಾರಿಗಳ ಪರವಾಗಿ ಶೇ.0.15ರಷ್ಟು ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಇದರಲ್ಲಿ ಇತ್ತು.

ಇದಕ್ಕೂ ಮುನ್ನ 2020ರಿಂದ ಬಿಎಚ್‌ಐಎಂ ಮತ್ತು ಯುಪಿಐ ಮತ್ತು ರೂ ಪೇ ಡೆಬಿಟ್‌ ಕಾರ್ಡ್‌ ವಹಿವಾಟುಗಳಿಗೆ ಶೂನ್ಯ ಎಂಡಿಆರ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಡಿಜಿಟಲ್‌ ಪಾವತಿಗಳ ವಿಸ್ತರಣೆ ಹಾಗೂ ಕಡಿಮೆ ವೆಚ್ಚದ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.

ಹೊಸ ವ್ಯವಸ್ಥೆಯ ಹಿಂದಿನ ಉದ್ದೇಶವೇನು? :
ಎಂಡಿಆರ್‌ ವಹಿವಾಟುಗಳ ಪ್ರಮಾಣ ವೇಗವಾಗಿ ಏರಿರುವ ಹಿನ್ನೆಲೆಯಲ್ಲಿ ಪಾವತಿ ವ್‌ಯವಸ್ಥೆಯ ಕಾರ್ಯಾಚರಣೆ, ತಾಂತ್ರಿಕ ಮೂಲಸೌಕರ್ಯ, ಸೈಬರ್‌ ಭದ್ರತೆ ಮತ್ತು ಗ್ರಾಹಕ ಸೇವೆಗಳಿಗೆ ನಿರಂತರ ವೆಚ್ಚವಾಗುತ್ತಿದೆ ಎಂಬುದು ಎಂಡಿಆರ್‌ ಪರವಾದ ಪ್ರಮುಖ ವಾದವಾಗಿದೆ. ಹೊಸ ಮಾದರಿಯ ಉದ್ದೇಶವು ಸಂಪೂರ್ಣ ಯುಪಿಐ ಬಳಕೆಗೆ ಸಾರ್ವತ್ರಿಕ ಶುಲ್ಕ ವಿಧಿಸುವುದಲ್ಲ; ಬದಲಾಗಿ ಹೆಚ್ಚಿನ ಮೌಲ್ಯದ ನಿರ್ದಿಷ್ಟ ವ್‌ಯಾಪಾರಿ ವಹಿವಾಟುಗಳಿಂದ ಪಾವತಿ ವ್ಯವಸ್ಥೆಗೆ ಆದಾಯದ ಮೂಲ ಸೃಷ್ಟಿಸುವುದಾಗಿದೆ.

ಇದರ ಜತೆಗೆ, ಎಂಡಿಆರ್‌ ಮೊತ್ತವನ್ನು ವ್ಯಾಪಾರಿಗಳು ಗ್ರಾಹಕರ ಮೇಲೆ ಪ್ರತ್ಯೇಕ ಯುಪಿಐ ಶುಲ್ಕವಾಗಿ ವರ್ಗಾಯಿಸದಂತೆ ಸರ್ಕಾರ ನಿಗಾ ವಹಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯ ನೈಜ ಪರಿಣಾಮವು ಅಕ್ಟೋಬರ್‌ 15ರ ಜಾರಿಗೆ ಬಂದ ನಂತರ ವ್ಯಾಪಾರಿಗಳು ಮತ್ತು ಪಾವತಿ ಸಂಸ್ಥೆಗಳು ಅದನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದರ ಮೇಲೆ ಅವಲಂಬಿತವಾಗಲಿದೆ.

RELATED ARTICLES
spot_img

Latest News