Saturday, July 27, 2024
Homeರಾಜ್ಯಪ್ರಜ್ವಲ್‌ಗಾಗಿ ಕಾದು ಕಾದು ಸುಸ್ತಾದ ಎಸ್ಐಟಿ, ರೆಡ್ ಕಾರ್ನರ್ ನೋಟಿಸ್ ಜಾರಿಯೊಂದೇ ದಾರಿ

ಪ್ರಜ್ವಲ್‌ಗಾಗಿ ಕಾದು ಕಾದು ಸುಸ್ತಾದ ಎಸ್ಐಟಿ, ರೆಡ್ ಕಾರ್ನರ್ ನೋಟಿಸ್ ಜಾರಿಯೊಂದೇ ದಾರಿ

ಬೆಂಗಳೂರು, ಮೇ 16– ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಈಗ ಬರುತ್ತಾರೆ…, ಆಗ ಬರುತ್ತಾರೆ ಎಂದು ಎಸ್ಐಟಿ ಕಾದು ಕಾದು ಸುಸ್ತಾಗಿದೆ.

ಕಳೆದ 20 ದಿನಗಳಿಂದ ಪ್ರಜ್ವಲ್ ರೇವಣ್ಣ ಎಸ್ಐಟಿ ಅಧಿಕಾರಿಗಳೊಂದಿಗೆ ಕಣ್ಣಾಮುಚ್ಚಾಲೆಯ ಆಟ ಆಡುತ್ತಿದ್ದಾರೆ. ಭಾರತಕ್ಕೆ ಹಿಂದಿರುಗಲು ಮೇ 3 ರಿಂದ ನಿನ್ನೆ 15ರ ವರೆಗೆ 5 ಭಾರಿ ವಿಮಾನ ಟಿಕೆಟ್ ಬುಕ್ ಆಗಿ ಕೊನೆಕ್ಷಣಗಳಲ್ಲಿ ರದ್ದಾಗಿವೆ. ಇತ್ತ ಪ್ರಜ್ವಲ್ ರೇವಣ್ಣ ಹಿಂದಿರುಗುತ್ತಾರೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಎಸ್ಐಟಿ ಅಧಿಕಾರಿಗಳ ನಿರೀಕ್ಷೆ ಹುಸಿಯಾಗಿದೆ.

ಈಗಾಗಲೇ ಪ್ರಜ್ವಲ್ ಅವರು ವಿಚಾರಣೆಗೆ ಹಾಜರಾಗಬೇಕೆಂದು ಮೊದಲು ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ನಂತರ ಲುಕ್ಔಟ್ ನೋಟಿಸ್ ಜಾರಿ ಗೊಳಿಸಲಾಗಿತ್ತು. ಆಮೇಲೆ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಪ್ರಜ್ವಲ್ ಅವರನ್ನು ಸ್ವದೇಶಕ್ಕೆ ಕರೆತರಲು ಇರುವ ಏಕೈಕ ಮಾರ್ಗವೆಂದರೆ ರೆಡ್ ಕಾರ್ನರ್ ನೋಟಿಸ್ ಜಾರಿ ಗೊಳಿಸುವುದು.

ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವುದು ಅಷ್ಟು ಸುಲಭವಾದ ಪ್ರಕ್ರಿಯೆಯಲ್ಲ. ಪ್ರಜ್ವಲ್ ರೇವಣ್ಣ ಬಂಧನವಾಗದ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆಗ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಮನ್್ಸ ಜಾರಿ ಮಾಡುತ್ತದೆ. ಈ ವೇಳೆ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಎಸ್ಐಟಿ ಮಾಹಿತಿ ನೀಡುತ್ತದೆ.

ಕೋರ್ಟ್ ಸಮನ್್ಸಗೆ ಗೈರಾದರೆ ಪ್ರಜ್ವಲ್ ಪತ್ತೆಗೆ ಕೋರ್ಟ್ ಅನುಮತಿಯೊಂದಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಎಸ್ಐಟಿ ಮನವಿ ಮಾಡುತ್ತದೆ. ಬಳಿಕ ಸಿಬಿಐ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುತ್ತದೆ. ಈ ನೋಟಿಸ್ ಜಾರಿಯಾದರೆ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೊ ಆ ದೇಶದ ಸ್ಥಳೀಯ ಪೊಲೀಸರೇ ಅವರನ್ನು ವಶಕ್ಕೆ ಪಡೆಯಲು ಅನುಮತಿ ನೀಡುತ್ತದೆ.

ವಶಕ್ಕೆ ಪಡೆದ ನಂತರ ಆ ದೇಶದ ಪೊಲೀಸರು ಭಾರತಕ್ಕೆ ಒಪ್ಪಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಬೇಕಾದರೇ ಎಸ್ಐಟಿಗೆ ಕನಿಷ್ಠ 40 ದಿನಗಳು ಬೇಕಾಗಬಹುದು.

ರಾಜತಾಂತ್ರಿಕ ಪಾಸ್ಪೋರ್ಟ್ ಸುಲಭವಾಗಿ ರದ್ದು ಗೊಳಿಸಲು ಸಾಧ್ಯವಿಲ್ಲ:
ಸಂಸದರಾಗಿರುವ ಕಾರಣ ಪ್ರಜ್ವಲ್ ರೇವಣ್ಣ ಅವರು ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಹೋಗಿದ್ದಾರೆ. ಅವರ ರಾಜತಾಂತ್ರಿಕ ಪಾಸ್ಪೋರ್ಟ್ನ್ನು ರದ್ದು ಗೊಳಿಸಿಬೇಕೆಂಬ ಒತ್ತಾಯವೂ ಕೂಡ ಕೇಳಿಬಂದಿದೆ.

ಈ ಪಾಸ್ಪೋರ್ಟ್ ಅನ್ನು ಅಷ್ಟು ಸುಲಭವಾಗಿ ರದ್ದು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಿಂದ ಆದೇಶ ಬಂದ ಬಳಿಕವಷ್ಟೇ ವಿದೇಶಾಂಗ ಸಚಿವಾಲಯ ಪಾಸ್ಪೋರ್ಟ್ಅನ್ನು ರದ್ದು ಮಾಡಬಹುದಾಗಿದೆ.ಎಸ್ಐಟಿ ತಂಡ ಪ್ರಜ್ವಲ್ ಅವರನ್ನು ಭಾರತಕ್ಕೆ ಕರೆ ತರಲು ಎಲ್ಲಾ ಮಾರ್ಗೋಪಾಯಗಳನ್ನು ಬಳಸಲು ಮುಂದಾಗಿದೆ.

ವಿದೇಶದಲ್ಲಿ ಕಳೆದ 20 ದಿನಗಳಿಂದ ತಲೆ ಮರೆಸಿಕೊಂಡಿರುವ ಪ್ರಜ್ವಲ್ ನಿನ್ನೆ ಜರ್ಮನಿಯಿಂದ ಬೆಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುತ್ತಾರೆ ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಎಸ್ಐಟಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿ, ಪ್ರಜ್ವಲ್ನನ್ನು ವಶಕ್ಕೆ ಪಡೆಯಲು ಎಲ್ಲ ಸಿದ್ಧತೆ ಕೂಡ ನಡೆಸಿದ್ದರು. ಜರ್ಮನಿಯ ಮ್ಯೂನಿಚ್ನಿಂದ ಟಿಕೆಟ್ ಬುಕ್ ಆಗಿತ್ತು. ಲುಫ್ತಾನ್್ಸ ಏರ್ಲೈನ್್ಸನಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಪ್ರಜ್ವಲ್ ಬರುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಕಾದು ಕುಳಿತಿದ್ದರು.

ನಂತರ ಬ್ರಿಟಿಷ್ ಏರ್ಲೈನ್್ಸನಲ್ಲಿ ಬರುವ ಮಾಹಿತಿ ತಿಳಿದು ಮುಂಜಾನೆ 5 ಗಂಟೆವರೆಗೆ ಪೊಲೀಸರು ಕಾದಿದ್ದರು. ಆದರೆ 2 ವಿಮಾನದಲ್ಲೂ ಪ್ರಜ್ವಲ್ ಬಾರದ ಕಾರಣ ಪೊಲೀಸರು ಬರಿಗೈಯಲ್ಲಿ ಹಿಂದಿರುಗಿದ್ದರು.

RELATED ARTICLES

Latest News