Sunday, May 19, 2024
Homeಕ್ರೀಡಾ ಸುದ್ದಿಗಿಲ್, ರೋಹಿತ್ ಶತಕ : ಬೃಹತ್ ಮೊತ್ತದತ್ತ ಭಾರತ

ಗಿಲ್, ರೋಹಿತ್ ಶತಕ : ಬೃಹತ್ ಮೊತ್ತದತ್ತ ಭಾರತ

ಧರ್ಮಶಾಲಾ, ಮಾ.8- ಹಿಟ್‍ಮ್ಯಾನ್ ರೋಹಿತ್ ಶರ್ಮಾ (103 ರನ್) ಹಾಗೂ ಶುಭಮನ್ ಗಿಲ್ (110 ರನ್) ಅವರ ಶತಕಗಳ ನೆರವಿನಿಂದ ಭಾರತ ತಂಡವು 350 ರನ್‍ಗಳ ಗಡಿ ಮುಟ್ಟಿದ್ದು ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿದೆ. ಧರ್ಮಶಾಲಾzದಲ್ಲಿ ನಡೆಯಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಯಶಸ್ವಿ ಜೈಸ್ವಾಲ್(57 ರನ್) ಅವರ ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತ್ತು.

ಎರಡನೇ ದಿನದಾಟದ ಆರಂಭದಿಂದಲೂ ತೀರಾ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದ ಗಿಲ್ ಹಾಗೂ ರೋಹಿತ್ ಜೋಡಿಯು ಇಂಗ್ಲೆಂಡ್ ಬೌಲರ್‍ಗಳ ವಿರುದ್ಧ ಪ್ರಾಬಲ್ಯ ಮೆರೆಯುವ ಮೂಲಕ ಶತಕಗಳ ಸಂಭ್ರಮ ಕಂಡರೂ ಕ್ರಮವಾಗಿ ಜೇಮ್ಸ್ ಆಂಡ್ರರ್ಸನ್ ಹಾಗೂ ಬೆನ್ ಸ್ಟೋಕ್ಸ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆದರು.

ದೇವದತ್ ಪಡಿಕ್ಕಲ್(39 ರನ್) ಹಾಗೂ ಸರ್ಫರಾಝ್‍ಖಾನ್ (47 ರನ್) ಕ್ರೀಸ್‍ನಲ್ಲಿದ್ದು 81 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿದ್ದ ಭಾರತ ತಂಡ 148 ರನ್‍ಗಳ ಮುನ್ನಡೆ ಸಾಧಿಸಿತ್ತು.

RELATED ARTICLES

Latest News