ಬೆಂಗಳೂರು, ಜೂ.8- ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಚಾರಣೆಗಾಗಿ ಎಸ್‌ಐಟಿ ಕಚೇರಿಗೆ ಭವಾನಿ ರೇವಣ್ಣ ಅವರು ಆಗಮಿಸಿದಾಗ ಪಕ್ಕದ ಕೊಠಡಿಯಲ್ಲಿ ಮಗ ಪ್ರಜ್ವಲ್ ಇದ್ದರೂ ಒಬ್ಬರನ್ನೊಬ್ಬರು ನೋಡಲಾಗದ ಸನ್ನಿವೇಶ ಮನಕಲಕುವಂತಿತ್ತು.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದು, ನಿನ್ನೆ ಭವಾನಿ ಅವರು ಎಸ್‌ಐಟಿ ವಿಚಾರಣೆಗಾಗಿ ಕಚೇರಿಗೆ ಹಾಜರಾದಾಗ ಅಮ್ಮ-ಮಗ ಅಕ್ಕಪಕ್ಕದ ಕೊಠಡಿಯಲ್ಲಿದ್ದರೂ ಮುಖ ನೋಡಲಾಗಲಿಲ್ಲ.
ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ನಿನ್ನೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಭವಾನಿ ಅವರನ್ನು ಯಾವುದೇ ಕಾರಣಕ್ಕೂ ಎಸ್‌ಐಟಿ ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಕಚೇರಿಗೆ ವಕೀಲರೊಂದಿಗೆ ವಿಚಾರಣೆಗಾಗಿ ಭವಾನಿ ರೇವಣ್ಣ ತೆರಳಿದಾಗ ಪಕ್ಕದ ಕೊಠಡಿಯಲ್ಲೇ ಪ್ರಜ್ವಲ್ ಇದ್ದರೂ ನೋಡಲಿಕ್ಕೆ ಆಗಲಿಲ್ಲ.
ಸುಮಾರು ಒಂದೂವರೆ ತಿಂಗಳಿನಿಂದ ಮಗನ ಮುಖವನ್ನು ಭವಾನಿ ಅವರು ನೋಡಿಲ್ಲ. ನಿನ್ನೆ ಎಸ್‌ಐಟಿ ವಿಚಾರಣೆ ಮುಗಿಸಿ ಸೀದಾ ಹೊರಬಂದಿದ್ದಾರೆ. ಪ್ರಜ್ವಲ್ ಹಾಗೂ ಭವಾನಿ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಎಸ್‌ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.