Homeಕ್ರೀಡಾ ಸುದ್ದಿಜಪಾನ್‌ನಲ್ಲಿ ಏಷ್ಯನ್‌ ಗೇಮ್ಸ್‌ ಆರಂಭ : 503 ಭಾರತೀಯ ಕ್ರೀಡಾಪಟುಗಳ ಸ್ಪರ್ಧೆ

ಜಪಾನ್‌ನಲ್ಲಿ ಏಷ್ಯನ್‌ ಗೇಮ್ಸ್‌ ಆರಂಭ : 503 ಭಾರತೀಯ ಕ್ರೀಡಾಪಟುಗಳ ಸ್ಪರ್ಧೆ

ನಗೋಯಾ, ಸೆ.19- ಮಿನಿ ಒಲಿಂಪಿಕ್ಸ್‌ ಎಂದೇ ಕರೆಯಲ್ಪಡುವ ಏಷ್ಯನ್‌ ಕ್ರೀಡಾಕೂಟದ 20ನೇ ಆವೃತ್ತಿಯು ಇಂದಿನಿಂದ ಜಪಾನ್‌ನ ಐಚಿ-ನಗೋಯಾದಲ್ಲಿ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದ ಖ್ಯಾತ ಶಾಟ್‌ಪುಟ್‌ ಪಟು ತಜಿಂದರ್‌ಪಾಲ್‌ ಸಿಂಗ್‌ ತೂರ್‌ ಅವರನ್ನು ಕೊನೇ ಕ್ಷಣದಲ್ಲಿ ಬದಲಾಯಿಸಲಾಗಿದೆ. ಇದೀಗ ಒಲಿಂಪಿಯನ್‌ ಶೂಟರ್‌ ಮನು ಭಾಕರ್‌ ಅವರೊಂದಿಗೆ ಅನುಭವಿ ಕಬಡ್ಡಿ ಆಟಗಾರ ಪವನ್‌ ಶೆರಾವತ್‌ ಧ್ವಜಧಾರಿಗಳಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತದ 503 ಅಥ್ಲೀಟ್‌ಗಳು 36 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. 265 ನೆರವು ಸಿಬ್ಬಂದಿ ಮತ್ತು ಪದಾಧಿಕಾರಿಗಳೂ ಕ್ರೀಡಾಪಟುಗಳೊಂದಿಗೆ ಇರಲಿದ್ದಾರೆ.2028ರ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿಕೊಳ್ಳುವ ಅವಕಾಶವೂ ಇಲ್ಲಿದೆ. 2023ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವು 106 ಪದಕಗಳನ್ನು ಜಯಿಸಿತ್ತು.

1952ರಲ್ಲಿ ನಡೆದ ಚೊಚ್ಚಲ ಏಷ್ಯನ್‌ ಗೇಮ್ಸ್‌ನಲ್ಲಿ ಕೇವಲ ಆರು ಕ್ರೀಡೆಗಳು ಇದ್ದವು. ಅಥ್ಲೆಟಿಕ್ಸ್‌, ಈಜು, ಬಾಸ್ಕೆಟ್‌ಬಾಲ್‌, ಸೈಕ್ಲಿಂಗ್‌, ಫುಟ್‌ಬಾಲ್‌ ಹಾಗೂ ವೇಟ್‌ಲಿಫ್ಟಿಂಗ್‌ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಒಟ್ಟು 57 ಪದಕ ಸ್ಪರ್ಧೆಗಳು ನಡೆದಿದ್ದು, 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 43 ಕ್ರೀಡೆಗಳಿವೆ. ಒಟ್ಟು 71 ವಿಭಾಗಗಳಲ್ಲಿ 469 ಪದಕ ಸ್ಪರ್ಧೆಗಳು ನಡೆಯಲಿವೆ. 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

RELATED ARTICLES
spot_img

Latest News