Homeಕ್ರೀಡಾ ಸುದ್ದಿಭಾರತದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸ್ಥಾನಕ್ಕೆ ಹರ್ಮನ್‌ಪ್ರೀತ್‌‍ ಕೌರ್‌ ವಿದಾಯ

ಭಾರತದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸ್ಥಾನಕ್ಕೆ ಹರ್ಮನ್‌ಪ್ರೀತ್‌‍ ಕೌರ್‌ ವಿದಾಯ

ನವದೆಹಲಿ, ಅ.6-ಭಾರತದ ಮಹಿಳಾ ಕ್ರಿಕೆಟ್‌ ತಂಡದ ವಿಶ್ವಕಪ್‌ ವಿಜೇತ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಹರ್ಮನ್‌ಪ್ರೀತ್‌‍ ಕೌರ್‌ ಇಂದು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. 2026ರ ಏಷ್ಯನ್‌ ಗೇಮ್ಸೌನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಕೆಲವೇ ದಿನಗಳ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿರುವ ಹರ್ಮನ್‌ಪ್ರೀತ್‌‍, ನಾಯಕತ್ವ ತ್ಯಜಿಸಿದರೂ ತಂಡದ ಭಾಗವಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ತಂಡದ ಒಳಿತಿಗಾಗಿ ಹಾಗೂ ಹೊಸ ಆಟಗಾರ್ತಿಗಳನ್ನು ಬೆಳೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಇಂದು ನಾನು ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಹಲವು ವರ್ಷಗಳ ನೆನಪು, ಭಾವನೆ, ತ್ಯಾಗ ಮತ್ತು ಮರೆಯಲಾಗದ ಕ್ಷಣಗಳು ಈ ನಿರ್ಧಾರದೊಂದಿಗೆ ಬೆಸೆದುಕೊಂಡಿವೆ ಎಂದು ಹರ್ಮನ್‌ಪ್ರೀತ್‌‍ ಹೇಳಿದ್ದಾರೆ.ತಂಡಕ್ಕಾಗಿ ತಮ ರಕ್ತ, ಬೆವರು, ಸಮಯ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನೂ ತ್ಯಾಗ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ನಾಯಕಿಯಾಗಿ ಹಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದು, ಅವು ಕೆಲವೊಮ್ಮೆ ವೈಯಕ್ತಿಕವಾಗಿ ಬೆಲೆ ತೆರಬೇಕಾದ ಸಂದರ್ಭಗಳನ್ನೂ ತಂದಿದ್ದವು. ಆದರೆ ಪ್ರತಿಯೊಂದು ನಿರ್ಧಾರದ ಹಿಂದೆಯೂ ತಂಡವನ್ನು ಉತ್ತಮಗೊಳಿಸುವುದೇ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ. ಸೋಲು, ನೋವು, ಟೀಕೆ ಮತ್ತು ಅನುಮಾನಗಳನ್ನೂ ಕಂಡಿದ್ದೇನೆ. ಅದೇ ರೀತಿ ಗೆಲುವು, ಸಂಭ್ರಮ ಹಾಗೂ ದೇಶವನ್ನು ಪ್ರತಿನಿಧಿಸಿದ ಹೆಮೆಯ ಕ್ಷಣಗಳನ್ನೂ ಅನುಭವಿಸಿದ್ದೇನೆ ಎಂದು ಅವರು ಸರಿಸಿದ್ದಾರೆ.

ತಂಡವು ಪ್ರತಿಭೆ, ಆತ್ಮವಿಶ್ವಾಸ ಮತ್ತು ಉತ್ತಮ ಭವಿಷ್ಯ ಹೊಂದಿದ್ದು, ತಾವು ಕರ್ತವ್ಯ ನಿರ್ವಹಿಸಿರುವ ತೃಪ್ತಿ ಇದೆ ಎಂದು ಹರ್ಮನ್‌ಪ್ರೀತ್‌‍ ಹೇಳಿದ್ದಾರೆ. ಬಿಸಿಸಿಐ, ಕೋಚ್‌ಗಳು, ಸಹ ಆಟಗಾರರು, ಸಿಬ್ಬಂದಿ, ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅವರು, ನಾಯಕತ್ವ ಅಂತ್ಯಗೊಂಡಿದೆ; ಆದರೆ ಪ್ರಯಾಣ ಮುಂದುವರಿಯಲಿದೆ. ಈಗ ಮತ್ತೆ ಆಟದ ಮೇಲಿನ ಪ್ರೀತಿಗಾಗಿ ಆಡಲು ಸಿದ್ಧಳಾಗಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES
spot_img

Latest News