Homeರಾಜಕೀಯಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವ ಕಾಲ ಸಮೀಪಿಸುತ್ತಿದೆ : ನಾರಾಯಣಸ್ವಾಮಿ ಎಚ್ಚರಿಕೆ

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವ ಕಾಲ ಸಮೀಪಿಸುತ್ತಿದೆ : ನಾರಾಯಣಸ್ವಾಮಿ ಎಚ್ಚರಿಕೆ

ಬೆಂಗಳೂರು,ಅ.6-ರಾಜ್ಯದಲ್ಲಿ ವಿವಿಧ ಕಡೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ಹಾಕಲಾಗುತ್ತಿದೆ. ಗೃಹಸಚಿವ ಪ್ರಿಯಾಂಕ ಖರ್ಗೆ ಸದ್ಯದಲ್ಲೇ ಜೈಲಿಗೆ ಹೋಗುವ ಕಾಲ ಬಂದಿದೆ ಎಂದು ವಿಧಾನಪರಿಷತ್‌ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಮೂನೆ 7ನ್ನು ದುರುಪಯೋಗಪಡಿಸಿಕೊಂಡರೆ ಜೈಲಿಗೆ ಹಾಕುತ್ತೇವೆ ಎಂದು ಗೃಹಸಚಿವರು ಹೇಳುತ್ತಾರೆ. ನ್ಯಾಯಾಲಯ ಹೇಳಿರುವುದನ್ನು ನೋಡಿದರೆ ಗೃಹಸಚಿವರೇ ಜೈಲಿಗೆ ಹೋಗುವ ಕಾಲ ದೂರ ಇಲ್ಲ ಎಂದು ಎಚ್ಚರಿಸಿದರು.ಸುಳ್ಳು ಎಫ್‌ಐಆರ್‌ ಹಾಕಿಸಿದ್ದಾರೆ. ಕೋರ್ಟ್‌ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ. ನಿಮಗೆ ಪ್ರತಿಭಟನೆ ಮಾಡುವ ದರಿದ್ರ ಬಂದಿದೆ. ಕ್ಯಾಬಿನೆಟ್‌ ಬಿಟ್ಟು ಪ್ರತಿಭಟನೆ ಮಾಡುವಂತ ಅಪಹಾಸ್ಯಕ್ಕೆ ಒಳಗಾಗಿದ್ದಾರೆ ಎಂದರು.

ಯಾರು ಬೇಕಾದರೂ ಫಾರ್ಮ್‌ 7 ತುಂಬಬಹುದು. ಕಾಂಗ್ರೆಸ್‌‍ ಭಯ ಹುಟ್ಟಿಸುವೕ ಕೆಲಸ ಮಾಡುತ್ತಿದೆ. ಪರಿಶೀಲನೆ ಮಾಡಿದಾಗ ಅದನ್ನ ತೆಗೆಯುವುದು, ಸೇರಿಸುವುದು ಆಗಲಿದೆ. ಅದನ್ನೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

ಬಿಎನ್‌ಎಸ್‌‍ ಆಕ್ಟ್‌ನಡಿ ಎಫ್‌ಐಆರ್‌ ಹಾಕಿ ಕಾಂಗ್ರೆಸ್‌‍ ಸರ್ಕಾರ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಪೀಪಲ್‌ ರೆಪ್ರೆಸೆಂಟೇಟಿವ್‌್ಸ ಆಕ್ಟ್‌ ಅಡಿ ಏನಾದರೂ ಸಮಸ್ಯೆ ಇದ್ದರೆ ಆಯೋಗವೇ ಕ್ರಮ ತೆಗೆದುಕೊಳ್ಳಬೇಕು. ಚುನಾವಣಾ ಆಯೋಗದ ಬದಲು, ಪೊಲೀಸರಿಂದ ಮಾಡಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮೈತ್ರಿ ಬಗ್ಗೆ ಬೆಂಬಲದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಹೇಳಿರುವುದು ಸರಿ ಇದೆ. ನಮಲ್ಲಿ ದ್ವಂದ್ವ, ಗೊಂದಲ ಇಲ್ಲ. ನಾವು ಎನ್‌ಡಿಎ ಒಟ್ಟಾಗಿ ಹೋರಾಡುತ್ತೇವೆ. ನಾವು ಹಾಲು ಜೇನಿನಂತೆ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯುತ್ತೇವೆ. ಕಾಂಗ್ರೆಸ್‌‍ ಆಗಲೇ ಚಾಪೆ ಸುತ್ತುತ್ತಿದೆ ಎಂದು ವ್ಯಂಗ್ಯವಾಡಿದರು.

RELATED ARTICLES
spot_img

Latest News