Homeಕ್ರೀಡಾ ಸುದ್ದಿಐಪಿಎಲ್‌ ಟ್ರೋಫಿಗಾಗಿ ಕನ್ನಡಿಗರ ಹೋರಾಟ

ಐಪಿಎಲ್‌ ಟ್ರೋಫಿಗಾಗಿ ಕನ್ನಡಿಗರ ಹೋರಾಟ

Kannadigas fight for the IPL trophy

ಅಹಮದಾಬಾದ್‌, ಮೇ 31- ಹತ್ತೊಂಭತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ ಫೈನಲ್‌ ಪಂದ್ಯದಲ್ಲಿ ಟ್ರೋಫಿ ಗೆಲ್ಲಲು ಕನ್ನಡಿಗರಾದ ದೇವದತ್‌ ಪಡಿಕ್ಕಲ್‌ ಹಾಗೂ ಪ್ರಸಿದ್ಧ್ ಕೃಷ್ಣ ಅವರು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ದೇವದತ್‌ ಪಡಿಕ್ಕಲ್‌ ಹಾಗೂ ಪ್ರಸಿದ್ಧ್ ಕೃಷ್ಣ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದು, ಕ್ರಮವಾಗಿ ತಾವು ಪ್ರತಿನಿಧಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟಾನ್ಸ್ ತಂಡಗಳು ಫೈನಲ್‌ ತಲುಪುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.

ಐಪಿಎಲ್‌ 18ನೇ ಆವೃತ್ತಿಯಲ್ಲಿ ಸ್ಫೋಟಕ ಪ್ರದರ್ಶನ ತೋರಿದ್ದ ದೇವದತ್‌ ಪಡಿಕ್ಕಲ್‌ (10 ಪಂದ್ಯ, 247 ರನ್‌) ಸ್ಫೋಟಕ ಆಟವನ್ನು ಪ್ರಸಕ್ತ ಟೂರ್ನಿಯಲ್ಲೂ ಮುಂದುರಿಸಿದ್ದು 14 ಪಂದ್ಯಗಳಲ್ಲಿ 3 ಅರ್ಧಶತಕಗಳ ನೆರವಿನಿಂದ 463 ರನ್‌ ಸಿಡಿಸಿದ್ದರೆ, ಗುಜರಾತ್‌ ಟೈಟನ್‌್ಸ ವಿರುದ್ಧದ ಕ್ವಾಲಿಫೈಯರ್‌ 1 ಪಂದ್ಯದಲ್ಲೂ 30 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದ್ದರು. ಟೂರ್ನಿಯಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ತೋರಿ 12 ಕ್ಯಾಚ್‌ ಪಡೆದು ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಗುಜರಾತ್‌ ಟೈಟನ್ಸ್ ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರಾದ ಪ್ರಸಿದ್‌್ಧ ಕೃಷ್ಣ ಪಂದ್ಯ ಒಂದರಲ್ಲಿ 28/4 ವಿಕೆಟ್‌ ಸೇರಿದಂತೆ ಒಟ್ಟಾರೆ 16 ವಿಕೆಟ್‌ ಪಡೆದಿದ್ದು, ಫೈನಲ್‌ ಪಂದ್ಯದಲ್ಲೂ ಆರ್‌ಸಿಬಿ ಬ್ಯಾಟರ್‌ಗಳ ರನ್‌ ದಾಹಕ್ಕೆ ಬ್ರೇಕ್‌ ಹಾಕಲು ಮುಂದಾಗಿದ್ದಾರೆ.

RELATED ARTICLES

Latest News