ನವದೆಹಲಿ,ಮಾ. 22- ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಎರಡು ಸೀಸನ್‌ಗಳಲ್ಲಿ ಮತ್ತೊಮೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
ತಮದೇ ಆದ ಯುಟ್ಯೂಬ್ ಚಾನೆಲ್ ನಲ್ಲಿ ತಮ ಅನಿಸಿಕೆ ಹಂಚಿಕೊಂಡಿರುವ ರವಿಚಂದ್ರನ್ ಅಶ್ವಿನ್ ಅವರು, ಆರ್‌ಸಿಬಿ ತಂಡವು ಮತ್ತೊಮೆ ಐಪಿಎಲ್ ಟ್ರೋಫಿ ಗೆಲ್ಲುವ ಸಾಧ್ಯತೆ ಕುರಿತು ಅವಲೋಕಿಸಿದ್ದಾರೆ.
`ಐಪಿಎಲ್ ಟ್ರೋಫಿ ಗೆಲ್ಲುವುದು ಸುಲಭದ ಮಾತಲ್ಲ. ಆದರೆ ಆರ್ ಸಿಬಿ ತಂಡವು ಮಿನಿ ಹರಾಜಿನಲ್ಲಿ ಬ್ಲ್ಯಾಕ್ ಆಪ್ ಆಟಗಾರರನ್ನು ಸಮರ್ಥವಾಗಿ ಖರೀದಿಸಿರುವುದರಿಂದ ಮುಂದಿನ ಎರಡು ವರ್ಷಗಳಲ್ಲಿ ಈ ತಂಡವು ಮತ್ತೊಮೆ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ’ ಎಂದು ಅಶ್ವಿನ್ ಹೇಳಿದ್ದಾರೆ.
ಜೋಶ್ ಹೇಜಲ್‌ವುಡ್ ಅಲಭ್ಯತೆ ವರದಾನ:
ಇದೇ ವೇಳೆ ಆರ್‌ಸಿಬಿ ಮುಖ್ಯ ವೇಗಿ ಜೋಶ್ ಹೇಜಲ್‌ವುಡ್ ಅಲಭ್ಯತೆ ಕುರಿತು ರವಿಚಂದ್ರನ್ ಅಶ್ವಿನ್ ಪ್ರಸ್ತಾಪಿಸಿದ್ದಾರೆ.`ಆಸೀಸ್ ವೇಗಿ ಜೋಶ್ ಹೇಜಲ್ ವುಡ್ ಅವರು ಗಾಯದಿಂದ ಕೆಲವು ಪಂದ್ಯಗಳಿಂದ ಹೊರಗುಳಿದಿರುವುದು ತಂಡದ ದೃಷ್ಟಿಯಿಂದ ಉತ್ತಮವಾಗಿದೆ. ಟಿ 20 ವಿಶ್ವಕಪ್ ಟೂರ್ನಿಯಲ್ಲಿ ರನ್ ಬರ ಎದುರಿಸಿರುವ ಫಿಲ್ ಸಾಲ್ಟ್ ಹಾಗೂ ಸ್ಫೋಟಕ ಯುವ ಆಟಗಾರ ಜೋಕಬ್ ಬೆಥಲ್ ಅವರಿಬ್ಬರನ್ನು ಪ್ಲೇಯಿಂಗ್ 11ನಲ್ಲಿ ಆಡಿಸಬಹುದು. ಹೇಜಲ್‌ವುಡ್ ಮರಳಿ ತಂಡಕ್ಕೆ ಮರಳಿದಾಗ ಈ ಇಬ್ಬರು ಆಟಗಾರರಲ್ಲಿ ಯಾರನ್ನು ಆಡಿಸಬಹುದು ಎಂಬ ಸ್ಪಷ್ಟತೆ ಸಿಗುತ್ತದೆ’ ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡವು ಬಲಿಷ್ಠ ವಿದೇಶಿ ಆಟಗಾರರನ್ನು ಹೊಂದಿದ್ದು, ಫಿಲ್ ಸಾಲ್‌್ಟ , ಟಿಮ್ ಡೇವಿಡ್, ರೊಮಾರಿಯೋ ಶೆಫಾರ್ಡ್, ಬೆಥಲ್ ರಂತಹ ಆಟಗಾರರನ್ನು ಹೊಂದಿದ್ದು ಇಡೀ ಟೂರ್ನಿಯಲ್ಲೇ ವಿದೇಶಿ ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡವಾಗಿ ಆರ್‌ಸಿಬಿ ತಂಡವು ಹೊರಹೊಮಿದ್ದು ಮುಂದಿನ ಎರಡು ಸೀಸನ್‌ಗಳಲ್ಲಿ ಮತ್ತೊಮೆ ಟ್ರೋಫಿ ಗೆಲ್ಲಲಿದೆ ಎಂದರು.
