Homeಕ್ರೀಡಾ ಸುದ್ದಿಕೋಟಿ ಒಡೆಯನಾದ 15 ವರ್ಷದ ಸೂಪರ್‌ ಬೇಬಿ ವೈಭವ್‌ ಸೂರ್ಯವಂಶಿ

ಕೋಟಿ ಒಡೆಯನಾದ 15 ವರ್ಷದ ಸೂಪರ್‌ ಬೇಬಿ ವೈಭವ್‌ ಸೂರ್ಯವಂಶಿ

Vaibhav Sooryavanshi earned over Rs 2.50 crore in IPL 2026

ಅಹಮದಾಬಾದ್‌,ಜೂನ್‌.1- ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತ ಎಲ್ಲರನ್ನು ಚಕಿತಗೊಳಿಸಿದ ಕೇವಲ 15 ವರ್ಷದ ಸೂಪರ್‌ ಬೇಬಿ ವೈಭವ್‌ ಸೂರ್ಯವಂಶಿ ಕೋಟಿ ಒಡೆಯನಾಗಿದ್ದಾನೆ.

ಐಪಿಎಲ್‌ನ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿ ದಾಖಲೆ ಸುರಿಮಳೆ ಸುರಿಸಿದ ವೈಭವ್‌ ಸೂರ್ಯವಂಶಿ 2026ರ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆಹಾಕುವ ಮೂಲಕ ಆರೇಂಜ್‌ ಕ್ಯಾಪ್‌‍ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅನುಭವಿ ಮತ್ತು ವಿಶ್ವ ಖ್ಯಾತಿಯ ಬೌಲರ್‌ಗಳನ್ನು ದಂಡಿಸಿದ ರೀತಿ ಕ್ರಿಕೆಟ್‌ ಜಗತ್ತನ್ನೇ ಬೆರಗುಗೊಳಿಸಿದೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ವೈಭವ್‌‍, ಆಡಿದ 16 ಪಂದ್ಯಗಳಿಂದ ಒಟ್ಟು 776 ರನ್‌ ಸಿಡಿಸಿ ಈ ಸಾಧನೆ ಮಾಡಿದ್ದಾರೆ. ಕೇವಲ ಆರೇಂಜ್‌ ಕ್ಯಾಪ್‌ ಮಾತ್ರವಲ್ಲದೆ, ಇಡೀ ಟೂರ್ನಿಯಲ್ಲಿ ತಮ ಬ್ಯಾಟಿಂಗ್‌ ಅಬ್ಬರದಿಂದ ಧೂಳೆಬ್ಬಿಸಿದ ವೈಭವ್‌ ಸೂರ್ಯವಂಶಿ ಒಟ್ಟು 5 ಪ್ರಮುಖ ಪ್ರಶಸ್ತಿಗಳನ್ನು ತಮದಾಗಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಅತ್ಯಧಿಕ ರನ್‌(776) ಬಹುಮಾನ ಮೊತ್ತ 10 ಲಕ್ಷ ರೂ., ಟೂರ್ನಿಯ ಶ್ರೇಷ್ಠ ಆಟಗಾರ ಒಟ್ಟು 436.5 ಪಾಯಿಂಟ್‌್ಸಗಳಿಸುವ ಮೂಲಕ ಸರಣಿ ಶ್ರೇಷ್ಠ ಗೌರವ ಬಹುಮಾನ ಮೊತ್ತ 15 ಲಕ್ಷ ರೂ.,ಅತಿ ಹೆಚ್ಚು ಸಿಕ್ಸರ್‌ (75)10 ಲಕ್ಷ ರೂ., ಟೂರ್ನಿಯ ಉದಯೋನುಖ ಆಟಗಾರ ಮತ್ತು ಉತ್ತಮ ರನ್‌ಗತಿ ಹಿರಿಮೆ ಬಹುಮಾನವಾಗಿ ಟಾಟಾ ಸಿಯೆರಾ ಕಾರು ಮತ್ತು 10 ಲಕ್ಷ .

ಈ ಮೂಲಕ ಒಟ್ಟು 45 ಲಕ್ಷ ರೂ. ನಗದು ಜೊತೆಗೆ ಜೊತೆಗೆ ಟಾಟಾ ಸಿಯೆರಾ ಕಾರನ್ನು ಸೂರ್ಯವಂಶಿ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಜೊತೆಗೆ ಪಂದ್ಯವಾಡಿದ ಮೊತ್ತ ಸೇರಿ ಕೋಟ್ಯಂತರ ರೂ ಸಂಪಾದಿಸಿದ್ದಾರೆ.

ಹದಿನೈದರ ಹರೆಯದಲ್ಲೇ ಅನುಭವಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಒಂದೇ ಐಪಿಎಲ್‌ ಆವೃತ್ತಿಯಲ್ಲಿ 5 ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡ ವೈಭವ್‌ ಸೂರ್ಯವಂಶಿ ಅವರ ಈ ಅಪ್ರತಿಮ ಸಾಧನೆ ಕ್ರಿಕೆಟ್‌ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಆದರೂ ಅವರ ಮುಗ್ಧತೆ ಅವರ ಮಾತುಗಳಲ್ಲಿ ಕೇಳಿಬಂತ್ತು,ಕೇವಲ ಹೊಡಿ ಬಡಿ ಅಲ್ಲ ,ಪಂದ್ಯವನ್ನು ಅಥರ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಡಬೇಕು ಎಂಬುದನ್ನು ಕಲಿತಿದ್ದೇನೆ ಮತ್ತು ಉತ್ತಮ ಆರೋಗ್ಯದ ಕಡೆಗೂ ಗಮನ ನೀಡುತ್ತಿದ್ದೇನೆ ಎಂದಿದ್ದಾರೆ.

RELATED ARTICLES

Latest News