Friday, April 17, 2026
Homeರಾಜ್ಯಸೆ.4 ರಿಂದ 6ರವರೆಗೆ ಫಿಲಡೆಲ್ಫಿಯಾದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ

ಸೆ.4 ರಿಂದ 6ರವರೆಗೆ ಫಿಲಡೆಲ್ಫಿಯಾದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ

AKKA 25th Silver Jubilee in Philadelphia from September 4th to 6th.

ಬೆಂಗಳೂರು,ಫೆ.27- ಇದೇ ಸೆಪ್ಟೆಂಬರ್‌ 4 ರಿಂದ 6, ರವರೆಗೆ ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅಮೆರಿಕದ ಕನ್ನಡಿಗರ ಅತೀ ದೊಡ್ಡ ಸಂಘಟನೆಯಾದ ಅಕ್ಕ ಸಂಸ್ಥೆ ಕಳೆದ 25 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ಸೇವೆಯನ್ನು ಉತ್ತೇಜಿಸುವ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ.

ಈ ಬೆಳ್ಳಿ ಹಬ್ಬದ ಸಂಭ್ರಮವು ವಿಶ್ವದ ಕನ್ನಡಿಗರ ಏಕತೆಯ ಪ್ರತೀಕವಾಗಿದ್ದು, ಅಮೆರಿಕಾದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ಸೇರಿದಂತೆ ಅನೇಕ ಕಡೆಗಳಿಂದ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾಣಿಜ್ಯ ಹಾಗೂ ಉದ್ಯಮಿಗಳ ಸಮೇಳನ, ವಿಶೇಷ ಪ್ರದರ್ಶನ ಮಳಿಗೆಗಳು, ಕನ್ನಡ ಸಿನಿಮಾಗಳು, ನಾಟಕಗಳ ಪ್ರದರ್ಶನಗಳು ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದೆ.

ಅಕ್ಕ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವು ಕೇವಲ ಒಂದು ಉತ್ಸವವಲ್ಲ. ಇದು 25 ವರ್ಷಗಳ ಸಾಧನೆ, ಸಮರ್ಪಣೆ ಮತ್ತು ಕನ್ನಡಿಗರ ಏಕತೆಯ ಸಂಭ್ರಮವಾಗಿದೆ. ಈ ಐತಿಹಾಸಿಕ ಸಮಾರಂಭಕ್ಕೆ ವಿಶ್ವದ ವಿವಿಧ ಭಾಗಗಳ ಕನ್ನಡಿಗರು ಹಾಗೂ ಕರ್ನಾಟಕದ ಕಲಾಭಿಮಾನಿಗಳು ಆಗಮಿಸಲಿದ್ದು, ಎಲ್ಲರನ್ನು ಆತೀಯವಾಗಿ ಆಹ್ವಾನಿಸಲಾಗಿದೆ.

ಕಾರ್ಯಕ್ರಮದ ದಿನಾಂಕ ನಿಗದಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ನೋಂದಣಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅಕ್ಕ ಸಂಸ್ಥೆಯ ಅಧ್ಯಕ್ಷರಾದ ಮಧುರಂಗಯ್ಯ ತಿಳಿಸಿದ್ದಾರೆ.

RELATED ARTICLES

Latest News