Thursday, April 16, 2026
Homeರಾಜ್ಯಶಾಸಕ ಚಂದ್ರು ಲಮಾಣಿಗೆ ಬಿಜೆಪಿ ನೋಟಿಸ್‌‍

ಶಾಸಕ ಚಂದ್ರು ಲಮಾಣಿಗೆ ಬಿಜೆಪಿ ನೋಟಿಸ್‌‍

BJP notice to MLA Chandru Lamani

ಬೆಂಗಳೂರು,ಫೆ.23- ಗುತ್ತಿಗೆದಾರರಿಂದ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಪಟ್ಟು ಜೈಲು ಪಾಲಾಗಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿಗೆ ಪಕ್ಷವು ವಿವರಣೆ ಕೇಳಿ ನೋಟಿಸ್‌‍ ನೀಡಲು ಮುಂದಾಗಿದೆ.

ಈ ಸಂಬಂಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಧಾನಸೌಧದಲ್ಲಿ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರಕರಣದಿಂದ ಬಿಜೆಪಿಗೆ ಭಾರೀ ಮುಜುಗರವಾಗಿದ್ದು, ನ್ಯಾಯಾಂಗ ಬಂಧನದಲ್ಲಿರುವ ಚಂದ್ರು ಲಮಾಣಿಯಿಂದ ವಿವರಣೆ ಪಡೆಯುವ ಕುರಿತು ನೋಟಿಸ್‌‍ ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಆರ್‌.ಅಶೋಕ್‌, ಲಮಾಣಿಗೆ ಒಂದೆರಡು ದಿನದಲ್ಲಿ ಸ್ಪಷ್ಟನೆ ಕೇಳಿ ನೋಟಿಸ್‌‍ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಮುಂದೇನು ಮಾಡಬೇಕು ಎಂಬುದರ ಕುರಿತು ಉಭಯ ನಾಯಕರು ಚರ್ಚಿಸಿ ಅಂತಿಮವಾಗಿ ನೋಟಿಸ್‌‍ ನೀಡಲು ತೀರ್ಮಾ ಮಾಡಲಾಗಿದೆ.

ಗುತ್ತಿಗೆದಾರರಿಂದ ಲಂಚ ಪಡೆಯುವ ವೇಳೆ ಸಿಕ್ಕಿ ಹಾಕಿಕೊಂಡಿದ್ದ ಚಂದ್ರು ಲಮಾಣಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಮಾ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಶಾಸಕ ಚಂದ್ರು ಲಮಾಣಿಯನ್ನು ತರಾಟೆಗೆ ತೆಗುದುಕೊಂಡ ಕೋರ್ಟ್‌
ಕಮಿಷನ್‌ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ಪರ ವಕೀಲರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ಪರಪ್ಪನ ಅಗ್ರಹಾರದಲ್ಲಿರುವ ಶಾಸಕ ಚಂದ್ರು ಲಮಾಣಿ ಅವರ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಬೇಕು. ಇದನ್ನು ವಿಚಾರಣೆಗಳ ಪಟ್ಟಿಗೆ ಸೇರಿಸಬೇಕೆಂದು ಲಮಾಣಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು.

ಇದರಿಂದ ಸಿಟ್ಟುಗೆದ್ದ ವಿಶೇಷ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್‌ ಗಜಾನನ ಭಟ್‌ ಅವರು, ಸಿಕ್ಕಿ ಹಾಕಿಕೊಂಡಿರುವವರು ನೀವು. ನಿಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲರನ್ನು ಪ್ರಶ್ನೆ ಮಾಡಿದರು. ನೀವು ಆಗಿರುವುದು ಟ್ರ್ಯಾಪ್‌ ನಿಮಗೆ ಶಾರ್ಟ್‌ ಡೇಟ್‌ ಬೇರೆ ಬೇಕೇ…? ನಿಮಗೆ ಏಕೆ ಜಾಮೀನು ನೀಡಬೇಕು ಎಂದು ಆರೋಪಿ ಪರ ವಕೀಲರ ಮೇಲೆ ನ್ಯಾಯಾಧೀಶರು ಸಿಟ್ಟಾದರು. ಜಾಮೀನು ಅರ್ಜಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಲೋಕಾಯುಕ್ತ ಪರ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಿ 27ಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತಕ್ಕೆ ಸೂಚನೆ ನೀಡಿದರು.

RELATED ARTICLES

Latest News