Thursday, April 16, 2026
Homeಬೆಂಗಳೂರುಬೆಂಗಳೂರಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ

ಬೆಂಗಳೂರಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ

ATM robbery attempt foiled in Bengaluru

ಬೆಂಗಳೂರು,ಫೆ.23- ಎಟಿಎಂ ಒಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಹಲಸೂರು ಗೇಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಕಬ್ಬನ್‌ಪೇಟೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ನುಗ್ಗಿದ ದರೋಡೆಕೋರನೊಬ್ಬ ಹಣ ದರೋಡೆಗೆ ವಿಫಲ ಯತ್ನ ನಡೆಸಿ ಸ್ಥಳದಿಂದ ತೆರಳಿದ್ದಾನೆ.

ಈ ವಿಷಯ ಬ್ಯಾಂಕ್‌ನವರಿಗೆ ಗೊತ್ತಾಗಿ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಹಲಸೂರು ಗೇಟ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.ಇತ್ತೀಚೆಗೆ ಸಿದ್ದಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಸಿಎಂಎಸ್‌‍ ಕಂಪನಿಯ ಮಾಜಿ ಸಿಬ್ಬಂದಿಯಿಂದಲೇ ಎಟಿಎಂ ದರೋಡೆ ನಡೆದಿತ್ತು.

ಫೆ.10 ರಂದು ಇಂದಿರಾನಗರದ ಡಬ್ಬಲ್‌ ರಸ್ತೆಯ ಬ್ಯಾಂಕ್‌ ಆಫ್‌ ಬರೋಡಾದ ಎಟಿಎಂ ದರೋಡೆ ನಡೆಸಲು ಆರೋಪಿ ನೇಪಾಳ ಮೂಲದ ರಾಜೇಂದ್ರ ಸಿಂಗ್‌ ಎಟಿಎಂ ಶೆಟ್ಟರ್‌ ಬಂದ್‌ ಮಾಡಿ ಕಟ್ಟಿಂಗ್‌ ಮಿಷನ್‌ ಬಳಸಿ ದರೋಡೆಗೆ ಯತ್ನಿಸಿ ವಿಫಲ ವಾದ್ದರಿಂದ ಸ್ಥಳದಿಂದ ನಿರ್ಗಮಿಸಿದ್ದನು.

ತನ್ನ ಸುಳಿವು ಸಿಗಬಾರದು ಎಂದು ಎಟಿಎಂ ಒಳಗಿದ್ದ ಸಿಸಿ ಕ್ಯಾಮೆರಾಗೆ ಬಟ್ಟೆ ಹಾಗೂ ಟೇಪ್‌ ಕವರ್‌ನಿಂದ ಮುಚ್ಚಿದ್ದನು. ಈ ಬಗ್ಗೆ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪ್ರಕರಣದ ಬೆನ್ನಲ್ಲೇ ಇಂದು ಬೆಳಗಿನ ಜಾವ ಹಲಸೂರು ಗೇಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದ್ದು ಪೊಲೀಸರ ನಿದ್ದೆಗೆಡಿಸಿದೆ.

RELATED ARTICLES

Latest News