Thursday, April 16, 2026
Homeರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಘಟಕಕ್ಕೆ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆ

ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಘಟಕಕ್ಕೆ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆ

Somashekar Gandhi elected as president of KWJ Bangalore district unit

ಬೆಂಗಳೂರು,ಫೆ.23- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಸೋಮಶೇಖರ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪರಿಮಳ ಹೆಚ್‌.ಎಸ್‌‍, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್‌.ಕೆ.ಬಸವರಾಜ್‌, ಕೆ.ಎಸ್‌‍. ಸ್ವಾಮಿ, ಕಾರ್ಯದರ್ಶಿ ಸ್ಥಾನಕ್ಕೆ ಜಯಕುಮಾರ್‌ ಗೌಡ, ಕೆ. ಹರೀಶ್‌, ಕೆ. ಎಲ್‌.ಲೋಕೇಶ್‌, ಗೋದಾವರಿ ಡಿ. ಎಸ್‌‍ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಖಜಾಂಚಿಯಾಗಿ ಟಿ. ಮೋಹನ್‌, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೆಚ್‌. ಆರ್‌. ರವೀಶ್‌ ಅಯ್ಕೆಯಾಗಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರವಿಕಾಂತ್‌ ಕುಂದಾಪುರ ಅತಿಹೆಚ್ಚು ಮತ ಗಳಸಿ ಪ್ರಥಮ ಸ್ಥಾನ ಗಳಿಸಿದರೆ, ಗಂಡಸಿ ಸದಾನಂದ ಸ್ವಾಮಿ ಎರಡನೆ ಸ್ಥಾನಕ್ಕೆ ಹಾಗೂ ಈ ಸಂಜೆ ಪತ್ರಿಕೆಯ ಮುಖ್ಯ ವರದಿಗಾರರಾದ ಬಿ.ಎಸ್‌‍.ರಾಮಚಂದ್ರ ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಇನ್ನುಳಿದಂತೆ ರಮಾಕಾಂತ್‌ ಗುಗ್ರಿ, ಗಂಗರಾಜು, ನಟರಾಜ್‌, ಮೋಹನ್‌ಕುಮಾರ್‌, ರಾಜಗಿರಿ ಪ್ರದೀಪ್‌,ಲಿಂಗರಾಜು ನೊಣವಿನಕೆರೆ, ಶರಣ ಬಸಪ್ಪ, ಎನ್‌.ಶಿವಾನಂದ, ಎಸ್‌‍.ಶ್ಯಾಮ್‌ ಅಯ್ಕೆಯಾಗಿದ್ದಾರೆ.

ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಳ್ಳಿ, ವಿಜಯವಾಣಿ ಸಂಪಾದಕರಾದ ಚನ್ನೇಗೌಡ, ಕೆಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಿರಿಯ ಪತ್ರಕರ್ತರು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಂಜುಂಡಪ್ಪ ಅವರು ಚುನಾವಣೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

RELATED ARTICLES

Latest News