Thursday, April 16, 2026
Homeರಾಜ್ಯಬಾರ್‌ ಲೈಸೆನ್ಸ್ ನೀಡಲು ಲಂಚ : ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬಾರ್‌ ಲೈಸೆನ್ಸ್ ನೀಡಲು ಲಂಚ : ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

Bribe to issue bar license: Complaint to Lokayukta against minister

ಬೆಂಗಳೂರು,ಜ.19- ಅಬಕಾರಿ ಇಲಾಖೆಯಲ್ಲಿ ಬಾರ್‌ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಸಚಿವ ಆರ್‌.ಬಿ.ತಿಮಾಪುರ ಹಾಗೂ ಅವರ ಪುತ್ರನ ಪಾತ್ರದ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಸಚಿವ ಆರ್‌.ಬಿ.ತಿಮ್ಮಾಪುರಾಗೆ ಸಂಕಷ್ಟ ಎದುರಾಗಿದೆ.

ಲಕ್ಷ್ಮಿನಾರಾಯಣ ಎಂಬುವರು ಲೋಕಾಯುಕ್ತ ಕಚೇರಿಗೆ ಆಗಮಿಸಿ ಸಚಿವ ತಿಮಾಪುರ ಹಾಗೂ ಪುತ್ರ, ಜಿಲ್ಲಾಧಿಕಾರಿ ಜಗದೀಶ್‌ ನಾಯಕ್‌ ಅವರ ಪಾತ್ರದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಜಗದೀಶ್‌ ನಾಯಕ್‌ ಹಾಗೂ ಎಸ್‌‍ಪಿ ತಮಣ ಮತ್ತು ಕಾನ್‌ಸ್ಟೇಬಲ್‌ ಲಕ್ಕಪ್ಪ ಅವರುಗಳು ನಡೆಸಿರುವ ಆಡಿಯೋ ಸಂಭಾಷಣೆಯಲ್ಲಿ ಸಚಿವರು ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವುದನ್ನು ಸಾಕ್ಷಿಯಾಗಿ ಪರಿಗಣಿಸಬೇಕೆಂದು ಲಕ್ಷ್ಮಿನಾರಾಯಣ ಮನವಿ ಮಾಡಿದ್ದಾರೆ.

ಸಚಿವರಿಗೆ ತಿಂಗಳಿಗೆ ಇಂತಿಷ್ಟು ಲಂಚ ನೀಡದಿದ್ದರೆ ಲೈಸೆನ್ಸ್ ನವೀಕರಣ ಇಲ್ಲವೇ ಹೊಸದಾಗಿ ಮಂಜೂರು ಮಾಡುವುದಿಲ್ಲ. ಇದು ಟೇಬಲ್‌ನಿಂದ ಟೇಬಲ್‌ಗೆ ವರ್ಗಾವಣೆಯಾಗುತ್ತದೆ. ಇದು ಇಲಾಖೆಯಲ್ಲಿ ನಡೆಯುವ ನಿರಂತರ ಪ್ರಕ್ರಿಯೆ. ವಿಳಂಬ ಮಾಡಿದರೆ ಯಾವ ಕೆಲಸವೂ ಆಗುವುದಿಲ್ಲ ಎಂದು ಜಗದೀಶ್‌ ನಾಯಕ್‌ ಮಾತನಾಡಿರುವ ಆಡಿಯೋ ವೈರಲ್ಲಾಗಿತ್ತು.

ಇದೀಗ ಇದನ್ನೇ ಆಧಾರವಾಗಿಟ್ಟುಕೊಂಡು ಆಡಿಯೋ ಸಂಭಾಷಣೆ ಯನ್ನು ಲೋಕಾಯುಕ್ತರಿಗೆ ನೀಡಿರುವ ಲಕ್ಷ್ಮಿನಾರಾಯಣ ಇದರ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಕೋರಿದ್ದಾರೆ. ಬಾರ್‌ ಲೈಸೆನ್ಸ್ ಪಡೆಯಲು ವ್ಯಕ್ತಿಯೊಬ್ಬರಿಂದ 2 ಕೋಟಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಜಗದೀಶ್‌, ಸೂಪರಿಟೆಂಡೆಂಟ್‌ ತಮಣ್ಣ ಹಾಗೂ ಕಾನ್‌ಸ್ಟೇಬಲ್‌ ಲಕ್ಕಪ್ಪ ಗಣಿ ಅವರುಗಳು 2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಈ ಮೂವರನ್ನು ಬಂಧಿಸಲಾಗಿತ್ತು. ಇದೀಗ ನ್ಯಾಯಾಲಯವು ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಹಿನ್ನೆಲೆ:
ದೂರುದಾರ ಲಕ್ಷಿ ನಾರಾಯಣ ತಮ ಮಗನಿಗಾಗಿ ಬಾರ್‌ ಓಪನ್‌ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಸಿಎಲ್‌7 ಮತ್ತು ಮೈಕ್ರೋ ಬ್ರೈವರಿ ಲೈಸೆನ್‌್ಸಗೆ ಸರ್ಕಾರಿ ಫೀಸ್‌‍ 21 ಲಕ್ಷ ಕೂಡ ಪಾವತಿಸಿದ್ದರು. ಆದರೆ ಈ ಎರಡು ಲೈಸೆನ್‌್ಸಗಳನ್ನು ಕೊಡಲು ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್‌ ನಾಯ್ಕ್ ಬರೋಬ್ಬರಿ 2.30 ಕೋಟಿ ರೂ. ಲಂಚ ಕೇಳಿದ್ದಾರೆ. ಅದರಲ್ಲಿ 50 ಲಕ್ಷ ರೂ. ಇಂದು ಅಡ್ವಾನ್ಸ್ ಕೊಡಲು ಹೇಳಿದ್ದರು. ಇದರಿಂದ ಲಕ್ಷೀನಾರಾಯಣ ನೇರವಾಗಿ ಲೋಕಾಯುಕ್ತ ಪೊಲೀಸರ ಮೊರೆಹೋದರು.

ಲೈಸೆನ್‌್ಸ ವಿಚಾರಕ್ಕೆ ಕೇಸ್‌‍ ದಾಖಲಿಸಿ ಅಖಾಡಕ್ಕೆ ಇಳಿದ ಎಸ್‌‍ಪಿ ಶಿವಪ್ರಕಾಶ್‌ ದೇವರಾಜ್‌ ನೇತೃತ್ವದ ಟೀಂ ಬ್ಯಾಟರಾಯನಪುರದಲ್ಲಿರೋ ಅಬಕಾರಿ ಭವನದಲ್ಲೇ 25 ಲಕ್ಷ ಹಣ ಮುಂಗಡವಾಗಿ ಸ್ವೀಕರಿಸುತ್ತಿದ್ದ ಡಿಸಿ ಜಗದೀಶ್‌ ನಾಯ್ಕ್ , ಲಕ್ಕಪ್ಪನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಮೂವರನ್ನು ಬಂಧಿಸಲಾಗಿತ್ತು.

ಇನ್ನು ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಹಣ ಸ್ವೀಕರಿಸಿದ್ದ ಸೂಪರಿಂಟೆಂಡೆಂಟ್‌ ಮತ್ತು ಲಕ್ಕಪ್ಪ ಪರಾರಿಯಾಗಲು ಮುಂದಾಗಿದ್ದರು. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News