Wednesday, April 29, 2026
Homeರಾಜ್ಯಶ್ರೀಸಾಮಾನ್ಯರನ್ನು ಸಾಲಗಾರರನ್ನಾಗಿ ಮಾಡುವ ಬಜೆಟ್‌ : ಶರವಣ ಟೀಕೆ

ಶ್ರೀಸಾಮಾನ್ಯರನ್ನು ಸಾಲಗಾರರನ್ನಾಗಿ ಮಾಡುವ ಬಜೆಟ್‌ : ಶರವಣ ಟೀಕೆ

Budget that makes common people debtors: Sharavana

ಬೆಂಗಳೂರು,ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಮುಂಗಡಪತ್ರವು ದೂರದೃಷ್ಟಿ ಇಲ್ಲದ, ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೋಟ ಇಲ್ಲದ ಸಪ್ಪೆ ಬಜೆಟ್‌ ಎಂದು ವಿಧಾನ ಪರಿಷತ್‌ ಜೆಡಿಎಸ್‌‍ ಶಾಸಕಾಂಗ ಪಕ್ಷದ ಉಪ ನಾಯಕ ಟಿ.ಎ.ಶರವಣ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರು ತಮ ಆಡಳಿತಾತಕ ವೈಫಲ್ಯ ಮುಚ್ಚಿಕೊಳ್ಳಲು, ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ಹೊಸ ತಂತ್ರಗಾರಿಕೆಯನ್ನು ಅನುಸರಿಸಿದ್ದಾರೆ. ಸಣ್ಣ, ಪುಟ್ಟ ಸಹಾಯಧನಗಳ ಘೋಷಣೆ ಬಿಟ್ಟು ರೈತರ ಮೂಲಭೂತ ಸಮಸ್ಯೆಗಳ ಇತ್ಯರ್ಥಕ್ಕೆ ಶಾಶ್ವತ ಪರಿಹಾರಗಳನ್ನು ಅವರು ಘೋಷಣೆ ಮಾಡಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಬೆಂಬಲ ಬೆಲೆಗಳು, ಆತಹತ್ಯೆಯ ಸುಳಿಗೆ ಸಿಕ್ಕ ರೈತನನ್ನು ಬಚಾವ್‌ ಮಾಡಲು ಸಾಲ ಮನ್ನಾ ಮುಂತಾದ ಸದೃಢ ಘೋಷಣೆಗಳನ್ನು ಮಾಡದೇ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದಾರೆ. ರೈತರಿಗೆ ಅನುಕೂಲ ಎನ್ನುವ ಭ್ರಮೆ ಸೃಷ್ಟಿಸಿ ಮಂಕು ಬೂದಿ ಎರಚಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ಕಳೆದ ಬಜೆಟ್‌ನಲ್ಲಿ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಶೇ.25 ರಷ್ಟು ಖೋತಾ ಆಗಿರುವುದನ್ನು ಗಮನಿಸಿದಾಗ, ಈ ಬಾರಿಯೂ ಇನ್ನಷ್ಟು ಭಾರೀ ಪ್ರಮಾಣದಲ್ಲಿ ಸಾಲ ಎತ್ತಿ, ಜನಸಾಮಾನ್ಯರನ್ನು ಇನ್ನಷ್ಟು ಸಾಲಗಾರರಾಗಿ ಮಾಡುವ ಉದ್ದೇಶ ಸಿದ್ದರಾಮಯ್ಯ ಅವರಿಗಿದೆ ಎಂದು ಟೀಕಿಸಿದ್ದಾರೆ.

ಅಂಗನವಾಡಿ ನೌಕರರಿಗೆ, ವೃದ್ಧರಿಗೆ, ಅಬಲೆಯರಿಗೆ, ಕೈಗಾರಿಕೋದ್ಯಮಿಗಳಿಗೆ, ಸಣ್ಣ ಕೈಗಾರಿಕೆಗಳಿಗೆ, ಬಡ ರೈತರಿಗೆ ಏನೇನೂ ಇಲ್ಲ. ಗೃಹ ಲಕ್ಷ್ಮಿ ಯೋಜನೆ ವೆಚ್ಚ 62ಸಾವಿರ ಕೋಟಿ ಎಂದಾದರೂ, ಅದಕ್ಕೆ ಮೀಸಲಿಟ್ಟ ಹಣ ಬರೀ 28 ಸಾವಿರ ಕೋಟಿ ಎನ್ನುವುದು ಆಶ್ಚರ್ಯದ ಸಂಗತಿ ಎಂದಿದ್ದಾರೆ.

ರಾಜ್ಯದಲ್ಲಿ 2.8 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಬಗ್ಗೆ ನೀತಿ ಇಲ್ಲ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಗ್ಗೆ ಸರ್ಕಾರಕ್ಕೆ ನಿಲುವಿಲ್ಲ ಎಂದು ಅವರು ಆರೋಪಿಸಿದ್ದಾರೆ.

RELATED ARTICLES

Latest News