Wednesday, April 29, 2026
Homeರಾಜ್ಯ37 ಸಾವಿರ ಕೋಟಿ ರೂ.ಗಳ ಬಾಕಿ ಬಿಲ್‌ : ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ

37 ಸಾವಿರ ಕೋಟಿ ರೂ.ಗಳ ಬಾಕಿ ಬಿಲ್‌ : ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ

37 thousand crores pending bill: Contractors demand release

ಬೆಂಗಳೂರು, ಮಾ.6- ಬಾಕಿ ಇರುವ 37 ಸಾವಿರ ಕೋಟಿ ರೂ.ಗಳ ಬಿಲ್‌ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ ಶಕ್ತಿ ಪ್ರದರ್ಶನ ಮಾಡಿದರು.

ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಸರ್ಕಾರ ಕಳೆದ ಎರಡು ವರ್ಷಗಳಿಂದ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದರೆ.ಕರ್ನಾಟಕದಲ್ಲಿ ಸುಮಾರು 1.5 ಲಕ್ಷ ಅಧಿಕೃತ ನೋಂದಣಿ ಪಡೆದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು ಇದ್ದು, ಕಳೆದ ಮೂರು ವರ್ಷಗಳಿಂದ ವಿವಿಧ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಬಾಕಿ ಹಣ ಬಿಡುಗಡೆ ಆಗಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಆರೋಪಿಸಿದರು.

2021-22, 2022-23 ಹಾಗೂ 2023-24 ಹಣಕಾಸು ವರ್ಷಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಮೊತ್ತ ಡಿಸೆಂಬರ್‌ 2025ರ ವೇಳೆಗೆ ಸುಮಾರು 37,000 ಕೋಟಿ ಆಗಿದೆ ಎಂದು ಸಂಘದ ಅಧ್ಯಕ್ಷರು ಹೇಳಿದರು.ಇದರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೂ ವ್ಯತ್ಯಯ ಉಂಟಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗುತ್ತಿಗೆದಾರರಿಗೆ ಯಾವುದೇ ವಿಶೇಷ ಅನುಕೂಲವಾಗಿಲ್ಲ ಹಿಂದಿನ ಸರ್ಕಾರಕ್ಕಿಂತಲೂ ಕೆಲ ಇಲಾಖೆಗಳಲ್ಲಿನ ಕಮಿಷನ್‌ ಪ್ರಮಾಣ ಹೆಚ್ಚಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಟೆಂಡರ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ನೀಡುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನಾನುಕೂಲವಾಗುತ್ತಿದೆ. ಕೆಲವು ಇಲಾಖೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಬಲಿಷ್ಠ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿವೆ ಎಂದು ಆರೋಪಿಸಿದರು.

ಇನ್ನೂ ಜಿಬಿಎ ವ್ಯಾಪ್ತಿಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ ಮಂಜುನಾಥ್‌ ಮಾತಾನಾಡಿ ಜಿಬಿಎ ವ್ಯಾಪ್ತಿಯಲ್ಲೂ ಭದ್ರತಾ ಠೇವಣಿಯಾಗಿ ಶೇ.10ರಷ್ಟು ಕತ್ತರಿಸಿದ ಹಣವನ್ನು ಐದು ವರ್ಷವಾದರೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ತುರ್ತಾಗಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಬಾಕಿ ಹಣ ಬಿಡುಗಡೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ.ನಂದಕುಮಾರ್‌, ಬಿ.ಸಿ.ದಿನೇಶ್‌, ಬಿ.ಎಸ್‌‍.ಗುರುಸಿದ್ದಪ್ಪ, ಡಿ.ಎಂ.ನಾಗರಾಜ್‌, ವಿ.ಎಲ್‌.ಮುನಿರಾಜು, ಚಿಕ್ಕಹೊಂಬಯ್ಯ, ಶಿವಪ್ಪ, ಚೇತನ್‌ಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

Latest News