Homeರಾಜ್ಯಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ : ಸಿಎಂ ಡಿಕೆಶಿ

ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ : ಸಿಎಂ ಡಿಕೆಶಿ

ಬೆಂಗಳೂರು, ನ.15- ಸಚಿವ ಸಂಪುಟದಲ್ಲಿ ಖಾಲಿಯಿರುವ 2 ಸ್ಥಾನಗಳಿಗೆ ವಿಧಾನಮಂಡಲದ ಅಧಿವೇಶನದೊಳಗೆ ನೇಮಕಾತಿ ಮಾಡಲು ಹೈಕಮಾಂಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲಿ ಸಮಯ ಸಿಕ್ಕರೆ ಚರ್ಚೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿರುವ ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಚರ್ಚೆಗೆ ದೆಹಲಿಗೆ ಕರೆಸಿಕೊಳ್ಳುವುದಾಗಿ ಹೈಕಮಾಂಡ್‌ ನಾಯಕರು ಕೂಡ ಹೇಳಿದ್ದಾರೆ ಎಂದರು.ತಮ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡುವಿನ ಒಡನಾಟ ಬಿಜೆಪಿಯವರಿಗೆ ನುಂಗಲಾರದ ಬಿಸಿ ತುಪ್ಪವಾಗಿರುವುದಕ್ಕೆ ನಾನೇನು ಮಾಡಲಾಗುವುದಿಲ್ಲ.

ಪ್ರಧಾನಮಂತ್ರಿಯವರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟನ್ನು ಕೊಡಲೇಬೇಕು. ಅವರು ಕೂಡ ಮುಖ್ಯಮಂತ್ರಿಗೆ ಕೊಡಬೇಕಾದ ಗೌರವ ಕೊಡಬೇಕು ಎಂದರು.ಚುನಾವಣೆಯ ಸಂದರ್ಭದಲ್ಲಿ ಇಬ್ಬರು ಜಗಳವಾಡೋಣ, ಅಭಿವೃದ್ಧಿ ವಿಷಯದಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದೇನೆ. ಅದರಂತೆ ನಡೆದು ಕೊಳ್ಳುತ್ತೇನೆ ಎಂದರು.

ಹಿರಿಯೂರು ವಿಧಾನಸಭೆಗೆ ಉಪಚುನಾವಣೆ ಸಮಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ಶನಿವಾರ ನಾನೇ ಖುದ್ದಾಗಿ ಹಿರಿಯೂರಿಗೆ ಹೋಗಿ ಪ್ರಜಾಸೇವಾ ಕಾರ್ಯಕ್ರಮ ನಡೆಸುತ್ತೇನೆ ಎಂದರು.

ಉಪ ಚುನಾವಣೆ ಘೋಷಣೆಯಾಗಬಹದು ಎಂದು ನಾನು ಅಂದುಕೊಂಡಿದ್ದೆ. ಬಹುಶಃ ಇನ್ನೂ ಸಮಯ ಇರಬಹುದು. ನಮ ಪ್ರಜಾ ಸೇವೆಗೆ ಸಮಯ ಸಿಗಬಹುದು ಎಂದು ಹೇಳಿದರು.
ಹೊಸ ಮನೆ ಇನ್ನೂ ಸಿದ್ದವಾಗಿಲ್ಲ. ದಿನ ಚೆನ್ನಾಗಿದೆ ಎಂದು ಹೋಮ ಮಾಡಿಸುತ್ತಿದ್ದೇನೆ. ಯಾರನ್ನೂ ಕರೆದಿಲ್ಲ, ಖಾಸಗಿಯಾಗಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದರು.
ನಾಳೆ ಸೋನಿಯಾ ಗಾಂಧಿಯವರ ಆತಚರಿತ್ರೆ ಪುಸ್ತಕ ದೆಹಲಿಯಲ್ಲಿ ಬಿಡುಗಡೆಯಾಗಲಿದೆ. ಅದರಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ಪುಸ್ತಕ ಬಿಡುಗಡೆಯಾದ ನಂತರ ಸಂಜೆಯೇ ವಾಪಸ್‌‍ ಬರುತ್ತೇನೆ ಎಂದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಳ ಅಧೀವೇಶನ ನಡೆಸುವ ಕುರಿತಂತೆ ವಿಧಾನಸಭಾಧ್ಯಕ್ಷರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದರು.
ಮೇಕೆದಾಟು ಯೋಜನೆ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ನೆಲದ ಕಾನೂನಿನ ಅನುಸಾರ ಎಲ್ಲರೂ ನಡೆದುಕೊಳ್ಳಬೇಕು.

ತಮಿಳುನಾಡಿನವರು ರಾಜಕೀಯವಾಗಿ ವಿರೋಧ ಮಾಡಬಹದು, ಚೆನ್ನೈನಲ್ಲೂ ಕಾನೂನು ತಜ್ಞರ ತಂಡ ಇದೆ. ನ್ಯಾಯಾಂಗದ ಅಂಶಗಳನ್ನು ಅವರು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ರಾಜಕೀಯವಾಗಿ ಮಾತನಾಡಲೇಬೇಕು. ಅದಕ್ಕಾಗಿ ಅವರು ಆ ಕರ್ತವ್ಯ ಮಾಡುತ್ತಿರುತ್ತಾರೆ ಎಂದು ಹೇಳಿದರು.

RELATED ARTICLES

Latest News