Homeರಾಜ್ಯನಾಯಿ ಕಣ್ಣು, ನರಿ ಕಣ್ಣು ನಾಶವಾಗಲಿ : ಮೈಸೂರು ಅರಮನೆಗೆ ದೃಷ್ಟಿ ತೆಗೆದ ನಾಗರಿಕರು!

ನಾಯಿ ಕಣ್ಣು, ನರಿ ಕಣ್ಣು ನಾಶವಾಗಲಿ : ಮೈಸೂರು ಅರಮನೆಗೆ ದೃಷ್ಟಿ ತೆಗೆದ ನಾಗರಿಕರು!

ಮೈಸೂರು,ನ.5- ಇತ್ತೀಚಿನ ದಿನಗಳಲ್ಲಿ ಮೈಸೂರು ಅರಮನೆಯ ಸುತ್ತಮುತ್ತ ವಿವಾದಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ಜಗತ್ಪ್ರಸಿದ್ಧ ಮೈಸೂರು ಅರಮನೆಗೆ ಕೆಟ್ಟ ದೃಷ್ಟಿ ಬೀಳಬಾರದು ಎಂಬ ಆಶಯದೊಂದಿಗೆ ಮೈಸೂರಿನ ನಾಗರಿಕರ ಪರವಾಗಿ ಅರಮನೆಯ ಜಯಮಾರ್ತಾಂಡ ಗೇಟ್‌ ಮುಂಭಾಗದಲ್ಲಿ ವಿನೂತನವಾಗಿ ದೃಷ್ಟಿ ನಿವಾರಣೆ ಕಾರ್ಯಕ್ರಮ ಹಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಾನಪದ ಶೈಲಿಯಲ್ಲಿ ಱಱನಾಯಿ ಕಣ್ಣು, ನರಿ ಕಣ್ಣು, ಅವರ ಕಣ್ಣು, ಇವರ ಕಣ್ಣು, ಊರವರ ಕಣ್ಣು ನಾಶವಾಗಲಿ ಎಂದು ಹಾಡುತ್ತಾ ಅರಮನೆಗೆ ಕುಂಬಳಕಾಯಿ ದೃಷ್ಟಿ ತೆಗೆದು, ನಂತರ ಕುಂಬಳಕಾಯಿ ಒಡೆಯುವ ಮೂಲಕ ಸಾಂಪ್ರದಾಯಿಕವಾಗಿ ದೃಷ್ಟಿ ನಿವಾರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ನಾಗರಿಕ ಜಯಸಿಂಹ, ಇತ್ತೀಚಿನ ದಿನಗಳಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆಯ ಮೇಲೆ ಹತ್ತಾರು ಕಣ್ಣುಗಳು ಬಿದ್ದಿದ್ದು, ಅರಮನೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಹುನ್ನಾರಗಳು ನಡೆಯುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಮೈಸೂರು ಅರಮನೆ ಕೇವಲ ಒಂದು ಕಟ್ಟಡವಲ್ಲ, ಅದು ಮೈಸೂರಿನ ಹೆಮೆ, ಇತಿಹಾಸ, ಪರಂಪರೆ ಹಾಗೂ ಕನ್ನಡಿಗರ ಭಾವನಾತಕ ಪ್ರತೀಕವಾಗಿದೆ ಎಂದರು.

ಅರಮನೆಯ ಕುರಿತು ನಡೆಯುತ್ತಿರುವ ವಿವಾದಗಳ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಜಾನಪದ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ದೃಷ್ಟಿ ನಿವಾರಣೆ ಮಾಡುವ ಮೂಲಕ ಅರಮನೆಯ ಮೇಲೆ ಕೆಟ್ಟ ದೃಷ್ಟಿ ಬೀರುತ್ತಿರುವವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಯಸಿಂಹ, ಸಂದೇಶ್‌, ಬೈರತಿ ಲಿಂಗರಾಜು, ದಯಾನಂದ ನಾಯಕ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

Latest News