ಗುವಾಹಟಿ, ನ.4- ಅಸ್ಸಾಮ್ ವಿರುದ್ಧ 314 ರನ್ ಹಾಗೂ ಇನ್ನಿಂಗ್ಸ್ ಗೆಲುವು ಸಾಧಿಸಿದ ಕರ್ನಾಟಕ ತಂಡವು 16 ಅಂಕಗಳೊಂದಿಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ 442 ರನ್‌ಗಳ ಹಿನ್ನೆಡೆ ಅನುಭವಿಸಿದ್ದ ಅಸ್ಸಾಮ್ ನಾಯಕ ದಿನೇಶ್ ದಾಸ್‌ರವರ ಅರ್ಧಶತಕ (50ರನ್, 8 ಬೌಂಡರಿ)ದ ನೆರವಿದ್ದರೂ, 128 ರನ್‌ಗಳಿಗೆ ಸರ್ವಪತನ ಕಂಡಿದೆ.
ಕರ್ನಾಟಕ ಪರ ನಾಯಕ ಶ್ರೇಯಸ್ ಗೋಪಾಲ್ (39ಕ್ಕೆ 4), ಶಿಖರ್ ಶೆಟ್ಟಿ (28ಕ್ಕೆ 3) ಅಸ್ಸಾಮ್ ಆಟಗಾರರನ್ನು ಬೆಂಬಿಡದಂತೆ ಕಾಡಿದರೆ, ವಿದ್ವತ್ ಕಾವೇರಪ್ಪ, ಮನ್ವತ್‌ಕುಮಾರ್ ಎಲ್. ಹಾಗೂ ರಿತೇಶ್ ಭಟ್ಕಲ್ ತಲಾ 1 ವಿಕೆಟ್ ಪಡೆದರು. ಇಂದು ಬೆಳಗ್ಗೆ ಆಟ ಆರಂಭಿಸಿದ ಕರ್ನಾಟಕ ಅನ್ವೀಶ್ ಕೆ.ವಿ. (145ರನ್) ಹಾಗೂ ಮನ್ವತ್‌ಕುಮಾರ್ (100ರನ್) ಅವರ ಆಕರ್ಷಕ ಶತಕಗಳ ನೆರವಿನಿಂದ 577/6 ಬೃಹತ್ ಮೊತ್ತ ಕಲೆಹಾಕಿತು.
ಸಂಕ್ಷಿಪ್ತ ಸ್ಕೋರ್:
ಅಸ್ಸಾಮ್ ಮೊದಲ ಇನ್ನಿಂಗ್ಸ್ : 135/10, ದ್ವಿತೀಯ ಇನ್ನಿಂಗ್ಸ್ : 128/10
ಕರ್ನಾಟಕ ಮೊದಲ ಇನ್ನಿಂಗ್ಸ್ : 577/6 ಡಿಕ್ಲೇರ್ಡ್
