ಹುಬ್ಬಳ್ಳಿ,ನ.4- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋರಸ್ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮಾಯಿ ಆರೋಪಿಸಿದರು.ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿ. ತಾವು ಅಪರಾಧ ಮಾಡಿರುತ್ತಾರೆ,
ಅದನ್ನು ಇನ್ನೊಬ್ಬರ ಮೇಲೆ ಬಿಂಬಿಸುವಂತಹ ರೂಢಿ ಮಾಡಿಕೊಂಡಿದ್ದಾರೆ. ಸೋರಸ್ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವಿದೇಶದಿಂದ ಹಣ ಹರಿದು ಬರುತ್ತಿದೆ. ಆ ಹಣದಿಂದ ನಮ ಪ್ರಜಾಪ್ರಭುತ್ವವನ್ನು ದುರ್ಬಲ ಗೊಳಿಸುವ ಸಲುವಾಗಿ, ಮತ್ತು ಭಾರತದ ಅಖಂಡತೆ, ಏಕತೆಗೆ ದಕ್ಕೆ ತರಲು ಹೇಸದಿರುವಂತ ಕಾರ್ಯಕ್ರಮಗಳನ್ನು ಅದರಲ್ಲಿ ಅಳವಡಿಸಿಕೊಂಡಿರುವಂತದ್ದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ್ದಾರೆ.
ನಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಬ್ಬ ಮೊದಲು ದೇಶಾಭಿಮಾನಿ. ದೇಶಕ್ಕಾಗಿಯೇ ತಮ ಜೀವನವನ್ನು ಮುಡುಪಿಟ್ಟಿರುವಂತ ಪ್ರಧಾನಮಂತ್ರಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಇಡೀ ಭಾರತ ದೇಶದ ದೇಶಾಭಿಮಾನಿಗಳಿಗೆ ಅವಮಾನ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047ಕ್ಕೆ ವಿಕಸಿತ ಭಾರತ ಮಾಡಬೇಕು ಎಂದು ಸಂಕಲ್ಪ ಮಾಡಿ, ಆತನಿರ್ಭರ ಭಾರತ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಅದಕ್ಕೆ ನಾವು ಸಂಪೂರ್ಣ ಬೆಂಬಲವಾಗಿ ನಿಂತು ಭಾರತದ ಸಂವಿಧಾನದ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಕರೆ ನೀಡಿದ್ದಾರೆ.
