Homeರಾಷ್ಟ್ರೀಯರಾಜಸ್ಥಾನದಲ್ಲಿ ರೈಲು ಹಳಿ ಸ್ಫೋಟ

ರಾಜಸ್ಥಾನದಲ್ಲಿ ರೈಲು ಹಳಿ ಸ್ಫೋಟ

ಜೈಪುರ, ನ. 4 – ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ರೈಲು ಹಳಿಯಲ್ಲಿ ಸಂಭವಿಸಿದ ಸ್ಫೋಟದಿಂದ ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್‌ ಬ್ಲಾಕ್‌ಗಳು ಹಾನಿಗೊಳಗಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸೂರತ್‌ಗಢ್‌ಅನೂಪ್‌ಗಢ್‌‍ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ರಾತ್ರಿ 50 ಜಿಬಿ ಗ್ರಾಮದ ಸಮೀಪ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿ ಪ್ರಯಾಣಿಕ ರೈಲೊಂದು ಹಾದುಹೋದ ಸುಮಾರು 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ರೈಲು ಹಳಿಯ ಕೆಳಭಾಗದಲ್ಲಿದ್ದ ಎರಡು ಕಾಂಕ್ರೀಟ್‌ ಬ್ಲಾಕ್‌ಗಳು ಹಾನಿಗೊಂಡಿದ್ದು, ಸುಮಾರು ಎರಡು ಅಡಿ ಆಳದ ಕುಳಿಯೊಂದು ನಿರ್ಮಾಣವಾಗಿದೆ. ಘಟನಾ ಸ್ಥಳದಿಂದ ಸುಮಾರು 200 ಮೀಟರ್‌ ದೂರದಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರು ಸ್ಫೋಟದ ಶಬ್ದ ಕೇಳಿ ರೈಲು ಹಳಿಯತ್ತ ಧಾವಿಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಫೋಟದ ಸ್ವರೂಪ ಮತ್ತು ಅದಕ್ಕೆ ಬಳಸಲಾದ ವಸ್ತುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ಭದ್ರತಾ ಸಂಸ್ಥೆಗಳು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ವಾಯವ್ಯ ರೈಲ್ವೆ ವಲಯವು ಸೂರತ್‌ಗಢ್‌ಅನೂಪ್‌ಗಢ್‌‍ ಮತ್ತು ಅನೂಪ್‌ಗಢ್‌ಸೂರತ್‌ಗಢ್‌‍ ನಡುವಿನ ಎರಡು ಪ್ರಯಾಣಿಕ ರೈಲುಗಳ ಸಂಚಾರವನ್ನು ಬುಧವಾರದ ಮಟ್ಟಿಗೆ ರದ್ದುಗೊಳಿಸಿದೆ.

RELATED ARTICLES

Latest News