Homeರಾಜ್ಯಸಂಪುಟ ವಿಸ್ತರಣೆಯಲ್ಲಿ ಸಿಎಂ ಜಾಣ ನಡೆ : ಕೇವಲ ನಾಲ್ವರ ಹೆಸರು ಶಿಫಾರಸು

ಸಂಪುಟ ವಿಸ್ತರಣೆಯಲ್ಲಿ ಸಿಎಂ ಜಾಣ ನಡೆ : ಕೇವಲ ನಾಲ್ವರ ಹೆಸರು ಶಿಫಾರಸು

CM's smart move in cabinet expansion: Only four names recommended

ಬೆಂಗಳೂರು, ಜು.17- ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಾಣ ನಡೆ ಅನುಸರಿಸಿದ್ದು ತಮ ಕಡೆಯಿಂದ ಕೇವಲ ನಾಲ್ಕು ಜನರ ಹೆಸರುಗಳನ್ನು ಮಾತ್ರ ಶಿಫಾರಸು ಮಾಡಿ ಉಳಿದ ಸ್ಥಾನಗಳಿಗೆ ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್‌ ಸೂಚಿಸಿದವರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ನಿನ್ನೆ ತಡ ರಾತ್ರಿಯವರೆಗೂ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರ ನಡೆ ಹೈಕಮಾಂಡ್‌ ಅನ್ನು ಅಚ್ಚರಿ ಗೀಡು ಮಾಡಿದೆ.ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿಯಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಒಟ್ಟು 20 ಸ್ಥಾನಗಳಿಗೆ ತಮ ಶಿಫಾರಸು ಪಟ್ಟಿಯನ್ನು ನೀಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್‌ ಮಾತ್ರ ಕೇವಲ ನಾಲ್ಕು ಜನರ ಹೆಸರನ್ನು ನೀಡಿ, ಉಳಿದಂತೆ ಹೈಕಮಾಂಡ್‌ ನಾಯಕರು ಸೂಚಿಸುವವರನ್ನು ಸಂಪುಟಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ತಮಗೆ ಮುಂದಿನ ದಿನಗಳಲ್ಲಿ ಸರ್ಕಾರ ನಡೆಸಲು ಯಾವುದೇ ಅಡಚಣೆಯಾಗಬಾರದು, ಅನಗತ್ಯ ಗೊಂದಲಗಳಿಗೆ ಅವಕಾಶವಾಗದಂತೆ ರಾಜ್ಯ ನಾಯಕರು ಮತ್ತು ವರಿಷ್ಠರು ಸಹಕರಿಸಬೇಕು ಎಂದು ಷರತ್ತು ವಿಧಿಸುವುದಾಗಿ ಹೇಳಲಾಗುತ್ತದೆ.ಭವಿಷ್ಯದಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲಾ ನಾಯಕರು ಸಹಕರಿಸಬೇಕು ಮತ್ತು ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಆಕಾಂಕ್ಷಿಗಳ ಸಂಖ್ಯೆ ತುಂಬಾ ದೊಡ್ಡದಿದೆ. ಇರುವ 20 ಸ್ಥಾನಗಳಲ್ಲಿ ಎಲ್ಲರನ್ನೂಸಮಾಧಾನ ಪಡಿಸುವುದು ಸಾಧ್ಯವಿಲ್ಲ. ಹೈಕಮಾಂಡ್‌ ಸೂಚಿಸಿದವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಕಡ್ಡಿ ಮುರಿದಂತೆ ಹೇಳಿರುವ ಮುಖ್ಯಮಂತ್ರಿಯವರು, ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳ ವಿಚಾರವಾಗಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್‌ಗೆ ಡಿ.ಕೆ.ಶಿವಕುಮಾರ್‌ ಸಲ್ಲಿಸಿರುವ ನಾಲ್ಕು ಹೆಸರುಗಳ ಪೈಕಿ ಆನೇಕಲ್‌ನ ಬಿ.ಶಿವಣ್ಣ ಮತ್ತು ಹಾಸನ ಜಿಲ್ಲೆ ಅರಕಲಗೂಡು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೆಸರುಗಳು ಸೇರಿವೆ ಎಂದು ತಿಳಿದು ಬಂದಿದೆ. ಸಂಪುಟದಲ್ಲಿ ಬಾಕಿ ಉಳಿದಿರುವ 16 ಸ್ಥಾನಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಸೂಚಿಸಿದ ಹೆಸರುಗಳನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ.

ತೀವ್ರಗೊಂಡ ಪೈಪೋಟಿ:
ಸಂಪುಟದಲ್ಲಿ ಹಳಬರಿಗೆ ಕಡಿಮೆ ಅವಕಾಶ ಕೊಟ್ಟು ಹೊಸ ಮುಖಗಳಿಗೆ ಹೆಚ್ಚಿನದಾಗಿ ಮಣೆ ಹಾಕಲು ಚರ್ಚೆಯಾಗುತ್ತಿದೆ. ಆದರೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ರಹೀಂಖಾನ್‌, ಸಂತೋಷ್‌ ಲಾಡ್‌, ಆರ್‌.ಬಿ.ತಿಮಾಪುರ್‌, ಶಿವರಾಜ್‌ ತಂಗಡಗಿ, ದಿನೇಶ್‌ ಗುಂಡೂರಾವ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್‌, ಮಂಕಾಳ ವೈದ್ಯ ಅವರು ಮರಳಿ ಅವಕಾಶ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.

9 ಬಾರಿ ಶಾಸಕರಾಗಿರುವ ಹಿರಿಯರಾದ ಆರ್‌.ವಿ.ದೇಶಪಾಂಡೆಯವರನ್ನು ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸಲು ಚರ್ಚೆಗಳಾಗಿವೆ. ಒಂದು ವೇಳೆ ಅವರು ನಿರಾಕರಿಸಿದರೆ, ಟಿ.ಬಿ.ಜಯಚಂದ್ರ, ಸಿ.ಎಸ್‌‍.ನಾಡಗೌಡ, ದಿನೇಶ್‌ ಗುಂಡೂರಾವ್‌ ಅವರ ಹೆಸರುಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಈವರೆಗೂ ಒಮೆಯೂ ಸಚಿವರಾಗದೇ ಇರುವ ಎನ್‌.ವೈ.ಗೋಪಾಲಕೃಷ್ಣ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಆದರೆ ವಯಸ್ಸಿನ ಕಾರಣಕ್ಕಾಗಿ ವರಿಷ್ಠರು ಮರುಪರಿಶೀಲನೆ ನಡೆಸುತ್ತಿದ್ದಾರೆ.

ಟಿ.ಬಿ.ಜಯಚಂದ್ರ ಅವರು ತಮ ಹಿರಿತನ ಮತ್ತು ಸಾಮಾಜಿಕ ನ್ಯಾಯದ ಅನುಸಾರ ತಮಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಿದ್ದಾರೆ. ಆರು ಬಾರಿ ಶಾಸಕರಾಗಿರುವ ಸಿ.ಎಸ್‌‍.ನಾಡಗೌಡ ಹೆಸರು ಮುಂಚೂಣಿಯಲ್ಲಿದೆ. 5 ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ, ಎಚ್‌.ಸಿ.ಬಾಲಕೃಷ್ಣ, ಎಸ್‌‍.ಆರ್‌.ಶ್ರೀನಿವಾಸ್‌‍. ನಾಲ್ಕು ಬಾರಿ ಶಾಸಕರಾಗಿರುವ ಎನ್‌.ಎ.ಹ್ಯಾರಿಸ್‌‍, ಲಕ್ಷ್ಮಣ ಸವದಿ, ಪುಟ್ಟರಂಗ ಶೆಟ್ಟಿ, ಕೆ.ಎಂ.ಶಿವಲಿಂಗೇಗೌಡ, ಬಿ.ಕೆ.ಸಂಗಮೇಶ್ವರ್‌ ಪ್ರಬಲ ಲಾಬಿ ನಡೆಸುತ್ತಿದ್ದಾರೆ.

ಲಕ್ಷ್ಮಣ ಸವದಿ ಬಿಜೆಪಿಯಿಂದ ವಲಸೆ ಬಂದಿದ್ದು ಅಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಪುಟ್ಟರಂಗ ಶೆಟ್ಟಿ ಹಿಂದೆ ಸಚಿವರಾಗಿದ್ದವರು. ಆದರೆ ವಿವಾದಕ್ಕೆ ಸಿಲುಕಿದ್ದರು.
ಮೂರು ಬಾರಿ ಶಾಸಕರಾಗಿ ಒಮೆಯೂ ಸಚಿವರಾಗದಿರುವ ಪ್ರಸಾದ್‌ ಅಬ್ಬಯ್ಯ, ಡಾ.ಅಜಯ್‌ಸಿಂಗ್‌, ಪಿ.ಎಂ.ಅಶೋಕ್‌, ಎ.ಆರ್‌.ಕೃಷ್ಣ ಮೂರ್ತಿ, ಎಸ್‌‍.ಎನ್‌.ನಾರಾಯಣಸ್ವಾಮಿ, ಪ್ರಿಯಕೃಷ್ಣ, ಬಿ.ಶಿವಣ್ಣ, ಡಿ.ಜಿ.ಶಾಂತನಗೌಡ, ಕೆ.ಷಡಕ್ಷರಿ, ಯಶವಂತರಾಯಗೌಡ ಪಾಟೀಲ್‌ ಅವರು ವರಿಷ್ಠ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಮಂಡ್ಯ ಜಿಲ್ಲೆಯಿಂದ ಪಿ.ಎಂ.ನರೇಂದ್ರಸ್ವಾಮಿ ಅವಕಾಶ ಕೇಳುತ್ತಿದ್ದಾರೆ. ಆದರೆ ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ಅವರ ಪೈಪೋಟಿಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಯಾರಿಗೆ ಅವಕಾಶ ದಕ್ಕಲಿದೆ ಎಂದು ಕಾದು ನೋಡಬೇಕಿದೆ.

ಶಾಸಕರಾಗಿರುವ ಬಸನಗೌಡ ದದ್ದಲ್‌, ವಿಜಯಾನಂದ ಕಾಶಪ್ಪನವರ್‌, ಕೋನರೆಡ್ಡಿ, ಕೆ.ವೈ.ನಂಜೇಗೌಡ, ರಿಜ್ವಾನ್‌ ಅರ್ಷದ್‌, ಶರತ್‌ ಬಚ್ಚೇಗೌಡ ಅವರು ರೇಸ್‌‍ನಲ್ಲಿದ್ದಾರೆ.
ಇಷ್ಟು ಜನ ಪ್ರಮುಖ ಆಕಾಂಕ್ಷಿಗಳ ಪೈಕಿ 20 ಜನರಿಗೆ ಅವಕಾಶ ನೀಡಬೇಕಿದೆ.

RELATED ARTICLES

Latest News