Homeರಾಜ್ಯಚಾಮುಂಡೇಶ್ವರಿ ದೇವಿಗೆ ಸೀರೆ ನೀಡಿ ಹರಕೆ ತೀರಿಸಿದ ಸಿಎಂ ಪತ್ನಿ

ಚಾಮುಂಡೇಶ್ವರಿ ದೇವಿಗೆ ಸೀರೆ ನೀಡಿ ಹರಕೆ ತೀರಿಸಿದ ಸಿಎಂ ಪತ್ನಿ

CM's wife visit Chamundeshwari temple in Mysuru

ಮೈಸೂರು, ಜು. 17- ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ದೇವಿಗೆ ಸೀರೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದರೆ ಚಾಮುಂಡೇಶ್ವರಿ ದೇವಿಗೆ ಸೀರೆ ಸಲ್ಲಿಸುವುದಾಗಿ ಉಷಾ ಶಿವಕುಮಾರ್‌ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಇಂದು ಬೆಟ್ಟಕ್ಕೆ ತೆರಳಿದ ಉಷಾ ಶಿವಕುಮಾರ್‌ ಅವರು ದೇವಿಗೆ ಉಡಿಲು ಸೀರೆ ಮೂಲಕ ತಮ ಹರಕೆ ತೀರಿಸಿದ್ದಾರೆ.

ಸಿಎಂ ಪತ್ನಿ ಉಷಾ ಶಿವಕುಮಾರ್‌ ಅವರು ಸಲ್ಲಿಸಿದ ಹರಕೆಯ ಸೀರೆಯನ್ನು ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಹಾಗೂ ದೇಗುಲದ ಪ್ರಧಾನ ಆರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಬೆಟ್ಟಕ್ಕೆ ಆಗಮಿಸಿದ್ದ ಸಿಎಂ ಕುಟುಂಬವನ್ನು ನೋಡಲು ಡಿ.ಕೆ.ಶಿವಕುಮಾರ್‌ ಅವರ ಅಭಿಮಾನಿಗಳು , ಕಾಂಗ್ರೆಸ್‌‍ ಕಾರ್ಯರ್ತರು ಮುಗಿಬಿದ್ದರು.

RELATED ARTICLES

Latest News