ಮಧುಗಿರಿ ,ಜೂ.6- ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ತಾಯಿಯ ಹೆಸರಿನಲ್ಲಿ ಒಂದು ಮರ ಬೆಳೆಸಿ ಎಂಬ ಪರಿಸರ ಕಾಳಜಿಯ ಕರೆಗೆ ಶಾಸಕ ಕೆ.ಎನ. ರಾಜಣ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಗಾಗಿ ಪ್ರಧಾನಿ ಮೋದಿ ನೀಡಿರುವ ಈ ಸಲಹೆ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಶ್ಲಾಸಿದರು.
ನಾವು ವಿರೋಧ ಪಕ್ಷದವರು ಎಂದ ಮಾತ್ರಕ್ಕೆ ಎಲ್ಲವನ್ನೂ ವಿರೋಧಿಸಬೇಕಾಗಿಲ್ಲ. ಸಮಾಜದ ಹಿತದೃಷ್ಟಿಯಿಂದ ಯಾರೇ ಒಳ್ಳೆಯ ಸಲಹೆ ನೀಡಿದರೂ ಅದನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪಕ್ಷ ರಾಜಕಾರಣವನ್ನು ಮರೆತು ಪರಿಸರ ಸಂರಕ್ಷಣೆಯಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಕನಿಷ್ಠ ಒಂದು ಮರವನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮುನಿಯಪ್ಪ ರಾಜೀನಾಮೆ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಮತ್ತು ರಾಜಕೀಯ ಅವಕಾಶಗಳ ಬಗ್ಗೆ ಮಾತನಾಡಿದರು. ಈಶ್ವರ ಖಂಡ್ರೆ ಅವರಿಗೆ ಯಾಕೆ ಅದೇ ಖಾತೆ ಕೊಡಲಿಲ್ಲ? ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಬೇಕಿತ್ತು, ಯಾಕೆ ಕಂದಾಯ ಖಾತೆ ನೀಡಿದ್ದಾರೆ? ಇವೆಲ್ಲವೂ ಕಾಲಾನುಸಾರ ಬದಲಾಗುವ ರಾಜಕೀಯ ನಿರ್ಧಾರಗಳು ಎಂದರು.
ನೋಡಿ, ಯಾವ ಹ್ದುೆಯೂ ಯಾರೊಬ್ಬರ ಸ್ವತ್ತಲ್ಲ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಅವಕಾಶಗಳು ದೊರೆಯುತ್ತವೆ. ಆ ಅವಕಾಶಗಳನ್ನು ತಮ ಬುದ್ಧಿಶಕ್ತಿ ಮತ್ತು ಅನುಭವ ಬಳಸಿ ಜನಪರ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಕೆ.ಎನ್. ರಾಜಣ್ಣ ತಿಳಿಸಿದರು.
