Friday, April 17, 2026
Homeರಾಜ್ಯಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಚಿಂತನೆ..!

ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಚಿಂತನೆ..!

Consideration to implement ESMA against transport workers

ಬೆಂಗಳೂರು,ಫೆ.18- ಸರ್ಕಾರದ ನಿಯಮ ಉಲ್ಲಂಘಿಸಿ ತಮ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾರಿಗೆ ನೌಕರರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸಾ) ಜಾರಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.

ನಾಳೆ ನಡೆಯಲಿರುವ ಸಾರಿಗೆ ಇಲಾಖೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುವವರಿಗೆ ನೋ ವರ್ಕ್‌, ನೋ ಪೇ (ಕೆಲಸಕ್ಕೆ ಬಾರದಿದ್ದರೆ ವೇತನವಿಲ್ಲ) ಜಾರಿ ಮಾಡಲಾಗಿದ್ದು, ಭಾಗವಹಿಸದಂತೆ ಇಲಾಖೆ ತನ್ನ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಇದರ ಹೊರತಾಗಿಯೂ ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸೇರಿದಂತೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಎಸಾ ಜಾರಿ ಮಾಡುವ ಬಗ್ಗೆ ಇಲಾಖೆಯಲ್ಲಿ ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.

ಏಕಾಏಕಿ ನೌಕರರ ವಿರುದ್ಧ ಎಸಾ ಜಾರಿ ಮಾಡಿದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದೆಂಬ ಹಿನ್ನಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಾರಿಗೆ ಇಲಾಖೆ ಮೊದಲು ಮನವೊಲಿಸುವ ಪ್ರಯತ್ನ ನಡೆಸಲಿದೆ.ಅಷ್ಟಕ್ಕೂ ಜಗ್ಗದಿದ್ದರೆ ಸಿಬ್ಬಂದಿಗಳಿಗೆ ನೋ ವರ್ಕ್‌, ನೋ ಪೇ ನೋಟಿಸ್‌‍ ಜಾರಿ ಮಾಡುವುದು ಇಲ್ಲದಿದ್ದರೆ ಅಮಾನತು ಕೊನೆಗೆ ಎಸಾ ಹಾಕುವ ಬಗ್ಗೆಯೂ ಸಾರಿಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆಯೂ ಸಾರಿಗೆ ನೌಕರರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೆಲವು ನೌಕರರು ನಿಯಮ ಮೀರಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಕೆಲವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಮುಷ್ಕರ ಏಕೆ :
ತಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರು ನಾಳೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಂಗಳೂರು ಚಲೋ ನಡೆಸುತ್ತಿದ್ದಾರೆ.ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಚಲೋ ನಡೆಯುತ್ತಿದ್ದು, ಫೆ.20 ರಿಂದ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವ ಆಲೋಚನೆಯಲ್ಲಿ ನೌಕರರಿದ್ದಾರೆ.

2020-2023 ಮೂರು ವರ್ಷ 2 ತಿಂಗಳು 38 ತಿಂಗಳ ಹಿಂಬಾಕಿ ಹಣ ಪಾವತಿಸಬೇಕು. 2024ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನವನ್ನ ಪರಿಷ್ಕರಣೆ ಮಾಡುವಂತೆ ಜಂಟಿ ಕ್ರಿಯಾ ಸಮಿತಿ ಬೇಡಿಕೆ ಮುಂದಿಟ್ಟಿದೆ. ಆದರೆ ನೌಕರರ ಬೇಡಿಕೆಗೆ ಸರ್ಕಾರ ಒಪ್ಪುತ್ತಿಲ್ಲ.
2024ರ ಬದಲು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದ್ದು, 38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದಿದೆ.

ಆದರೆ ಇದಕ್ಕೆ ಜಂಟಿ ಕ್ರಿಯಾ ಸಮಿತಿ ಒಪ್ಪದೇ ಪ್ರತಿಭಟನೆಯ ಹಾದಿ ಹಿಡಿದಿದೆ. ನೌಕರರ ಬೇಡಿಕೆಗೆ ಸರ್ಕಾರ ಒಪ್ಪುತ್ತಿಲ್ಲ. 2024ರ ಬದಲು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. 38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದಿದೆ. ಆದರೆ ಇದಕ್ಕೆ ಜಂಟಿ ಕ್ರಿಯಾ ಸಮಿತಿ ಒಪ್ಪದೇ ಪ್ರತಿಭಟನೆಯ ಹಾದಿ ಹಿಡಿದಿದೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯಿಂದ ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ.

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರಪತ್ರ ಹಂಚಲಿದೆ. ನಾವು ಏಕೆ ಪ್ರತಿಭಟನೆ ಹಾದಿ ಹಿಡಿದಿದ್ದೇವೆ? ನಮ ಬೇಡಿಕೆ ಏನು? ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಲು ಜಂಟಿ ಕ್ರಿಯಾ ಸಮಿತಿ ಮುಂದಾಗಿದ್ದು, ಬಸ್‌‍ ನಿಲ್ದಾಣದಲ್ಲಿ ಕರ ಪತ್ರ ಹಂಚಿದೆ. ಈ ಹಿಂದೆ ಮುಷ್ಕರ ಮಾಡಿದಾಗ ಜನಾಕ್ರೋಶ ಸ್ಫೋಟವಾಗಿತ್ತು. ಮುಷ್ಕರ ಹೂಡಿದವರ ವಿರುದ್ಧವೇ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದರು. ಇದೇ ಕಾರಣಕ್ಕೆ ಹೋರಾಟದ ವಿಚಾರವನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಲು ನೌಕರರ ಸಂಘ ನಿರ್ಧರಿಸಿದೆ.

ಫೆ.20ರಿಂದ ಮುಷ್ಕರಕ್ಕೆ ಮುಂದಾಗಲಿದೆ. ಬೆಂಗಳೂರು ಚಲೋದಲ್ಲಿ ಭಾಗಿಯಾಗದಂತೆ ನೌಕರರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ಸಂಸ್ಥೆ ವೇತನ ಕಡಿತ ಆದೇಶ ಹೊರಡಿಸಿದೆ. ನಾಳೆ ಬೆಂಗಳೂರು ಚಲೋಗೆ ಸಾರಿಗೆ ನೌಕರರು ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಸಾರಿಗೆ ನೌಕರರಿಗೆ ಸಾರಿಗೆ ಇಲಾಖೆಯಿಂದ ಖಡಕ್‌ ಎಚ್ಚರಿಕೆ ನೀಡಿದೆ.

ಬೇಡಿಕೆಗಳೇನು ? :
38 ತಿಂಗಳ ವೇತನ ಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಕಾರ್ಮಿಕರ ಕಿರುಕುಳ ನಿಲ್ಲಬೇಕು, 1-1-2024 ರಿಂದ ವೇತನ ಪರಿಷ್ಕರಣೆ ಜಾರಿಗೊಳಿಸುವುದು.

RELATED ARTICLES

Latest News