Sunday, April 19, 2026
Homeರಾಜ್ಯಶಾಸಕರ ಆಸ್ತಿವಿವರ ಸಲ್ಲಿಕೆಗೆ ಜೂ.30ರ ಗಡುವು

ಶಾಸಕರ ಆಸ್ತಿವಿವರ ಸಲ್ಲಿಕೆಗೆ ಜೂ.30ರ ಗಡುವು

Deadline for submission of asset details of MLAs is June 30

ಬೆಂಗಳೂರು,ಮಾ.28- ಪ್ರಸಕ್ತ 2025-26ನೇ ಸಾಲಿಗೆ ಸಂಬಂಧಿಸಿದಂತೆ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಜೂ.30ರೊಳಗೆ ಸಲ್ಲಿಸಬೇಕಿದೆ.

ಈ ಸಂಬಂಧ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಶಾಸಕರಿಗೆ ಮಾಹಿತಿ ನೀಡಿದ್ದು, ಜೂ.30 ರೊಳಗೆ ಲೋಕಾಯುಕ್ತರಿಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದಾರೆ.

16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು ತಮ ಹಾಗೂ ತಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಜೂ.30ರೊಳಗೆ ಲೋಕಾಯುಕ್ತಕ್ಕೆ ನೇರವಾಗಿ ಸಲ್ಲಿಸಿ ಅದರ ಮಾಹಿತಿಯನ್ನು ವಿಧಾನಸಭೆ ಸಚಿವಾಲಯಕ್ಕೆ ನೀಡಬೇಕು ಎಂದು ಪ್ರಕಟಣೆಯಲ್ಲಿ ಅವರು ಕೋರಿದ್ದಾರೆ.

ಲೋಕಾಯುಕ್ತ ನಿಬಂಧಕರು ಮಾ.25 ರಂದು ಪತ್ರ ಬರೆದು ಶಾಸಕರು ಮತ್ತು ಅವರ ಕುಟುಂಬ ಸದಸ್ಯರ ಆಸ್ತಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಮಾಹಿತಿ ನೀಡಲಾಗಿದೆ. ಇದೇ ರೀತಿ ವಿಧಾನಪರಿಷತ್‌ ಸದಸ್ಯರೂ ಕೂಡ ತಮ ಹಾಗೂ ತಮ ಕುಟುಂಬದ ಆಸ್ತಿ ವಿವರಗಳನ್ನು ಜೂ.30ರೊಳಗೆ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ.

RELATED ARTICLES

Latest News