Homeರಾಜ್ಯಕಷ್ಟದಲ್ಲಿರುವ ಹಿರಿಯ ಶಾಸಕರ ಕುಟುಂಬಗಳ ಸರ್ವೇಗೆ ಒತ್ತಾಯ

ಕಷ್ಟದಲ್ಲಿರುವ ಹಿರಿಯ ಶಾಸಕರ ಕುಟುಂಬಗಳ ಸರ್ವೇಗೆ ಒತ್ತಾಯ

ಬೆಂಗಳೂರು,ಆ.13- ಹಿರಿಯ ಶಾಸಕರ ಕುಟುಂಬಗಳು ಯಾವ ರೀತಿ ಜೀವನ ಸಾಗಿಸುತ್ತಿವೆ ಎಂಬ ಬಗ್ಗೆ ಸರ್ವೇ ಮಾಡಿಸಬೇಕು ಎಂದು ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ಅವರು ಸಿಎಂ ಡಿ.ಕೆ.ಶಿವಕುಮಾರ್‌ರನ್ನು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಇತ್ತೀಚಿನ ರಾಜಕಾರಣಿಗಳಿಗೆ ಕಷ್ಟದ ಪರಿಸ್ಥಿತಿ ಇಲ್ಲದಿರಬಹುದು. ಹಿಂದಿನ ರಾಜಕಾರಣಿಗಳು ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು. ಹೀಗಾಗಿ ಹಿರಿಯ ಶಾಸಕರ ಕುಟುಂಬಗಳ ಸರ್ವೇ ಮಾಡಿಸಿ ಅವರ ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ತಿಳಿಯುವುದು ಸೂಕ್ತ. ಬಹಳಷ್ಟು ಮಾಜಿ ಶಾಸಕರ ಕುಟುಂಬಗಳು ಕಷ್ಟದಲ್ಲಿ ಇದೆ ಎಂದು ಹೇಳಿದರು.

ಕಲಾವಿದೆ ಎಸ್‌‍.ಜಾನಕಿಯವರು ಸಾವಿರಾರು ಹಾಡುಗಳ ಮೂಲಕ ತಮೊಂದಿಗಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ಅವರು 72 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ಜೀವನ ನಡೆಸಿ ಆದರ್ಶ ಮಹಿಳೆಯಾಗಿದ್ದರು. ರಾಜಕೀಯ ಟೀಕೆಗಳಿಗೆ ಕಿವಿಗೊಡದೆ ದೈವಪೂಜೆಯಲ್ಲಿ ನಿರತರಾಗಿ ಬಂದಂತಹ ಅತಿಥಿಗಳನ್ನು ಸತ್ಕರಿಸಿ ಸದ್ಗಹಿಣಿಯಾಗಿದ್ದರು. ದೇವೇಗೌಡರ ಏಳಿಗೆಗೆ ಬೆಂಬಲವಾಗಿ ನಿಂತವರು ಎಂದು ಬಣ್ಣಿಸಿದರು.

ಸಿಎಂ ಚನ್ನಮ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಿದ್ದಕ್ಕೆ ಜೆಡಿಎಸ್‌‍ ಹಾಗೂ ನಾಡಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು.ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ವಿಧಾನಸಭೆಯಲ್ಲಿ ಶಾಸಕರಾಗಿ, ಸಚಿವರಾಗಿ ಇದ್ದ ಸುಧಾಕರ್‌ರವರು ನಮನ್ನು ಅಗಲಿದ್ದಾರೆ. 5 ವರ್ಷ ಪೂರ್ಣಗೊಳಿಸಲಾಗಲಿಲ್ಲ. ಒಳ್ಳೆಯ ಕೆಲಸ ಮಾಡಿದವರು ಅವರನ್ನು ಮುಂದೆ ನೆನೆಸಿಕೊಳ್ಳುತ್ತಾರೆ. ವೆಂಕಟರಮಣಪ್ಪ ಮತ್ತು ಡಿ.ಸುಧಾಕರ್‌ರವರು ಹಕ್ಕಬುಕ್ಕರ ರೀತಿಯಲ್ಲಿದ್ದರು. ಅವರಿಬ್ಬರೂ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು ಎಂದು ಸರಿಸಿದರು.

ರಾಮಚಂದ್ರಗೌಡ ಅವರು ನಮಗೆಲ್ಲ ಹಿರಿಯ ಮಾರ್ಗದರ್ಶಕರಾಗಿದ್ದು, ಬಿಜೆಪಿ ಬೆಳವಣಿಗೆಗೆ ಕಾರಣೀಭೂತರಾಗಿದ್ದರು. ಎಸ್‌‍.ಜಾನಕಿ ಅವರು ಹಾಡಿನ ರೂಪದಲ್ಲಿ ಜೀವಂತವಾಗಿದ್ದಾರೆ. ದೇವೇಗೌಡರ ಧರ್ಮಪತ್ನಿ ಚನ್ನಮ ಅವರು ದೇವೇಗೌಡರ ಪ್ರಗತಿಗೆ ಮಾತ್ರವಲ್ಲ. ಅವರ ಕುಟುಂಬಕ್ಕೆ ದಾರಿದೀಪವಾಗಿದ್ದರು. ನಿಜವಾಗಲೂ ಅನ್ನಪೂರ್ಣೆಯಾಗಿದ್ದರು ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಡಿ.ಸುಧಾಕರ್‌ರವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರೊಬ್ಬ ಪ್ರಾಮಾಣೀಕ ರಾಜಕಾರಣಿಯಾಗಿದ್ದರು ಎಂದರು.ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕರಾದ ಅರಗ ಜ್ಞಾನೇಂದ್ರ, ಚಂದ್ರಪ್ಪ, ಜಿ.ಟಿ.ದೇವೇಗೌಡ ಮೊದಲಾದವರು ಇತ್ತೀಚೆಗೆ ಅಗಲಿದ ಗಣ್ಯರ ಗುಣಗಾನ ಮಾಡಿ ಸಂತಾಪ ವ್ಯಕ್ತಪಡಿಸಿದರು.

RELATED ARTICLES
spot_img

Latest News