Homeರಾಜ್ಯಹೆಚ್ಚುತ್ತಲೇ ಇವೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು : ಎಚ್ಚೆತ್ತುಕೊಳ್ಳದ ಸಾರ್ವಜನಿಕರು

ಹೆಚ್ಚುತ್ತಲೇ ಇವೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು : ಎಚ್ಚೆತ್ತುಕೊಳ್ಳದ ಸಾರ್ವಜನಿಕರು

Digital arrest cases are increasing: Public not waking up

ಬೆಂಗಳೂರು,ಮಾ.13- ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಡಿಜಿಟಲ್‌ ಅರೆಸ್ಟ್‌ನಿಂದ ಕೋಟ್ಯಂತರ ರೂ. ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರತೀ ವರ್ಷವೂ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಪೊಲೀಸರು ಆಗಾಗ್ಗೆ ಹಲವು ರೀತಿಗಳಲ್ಲಿ ಎಷ್ಟೇ ತಿಳವಳಿಕೆ ನೀಡುತ್ತಿದ್ದರೂ ಸಹ ಜಾಗೃತರಾಗದೇ ವಿದ್ಯಾವಂತರೇ ಹೆಚ್ಚಾಗಿ ಹಣ ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸೈಬರ್‌ ವಂಚನಗೊಳಗಾಗಿ ಜನರು ಬರೋಬ್ಬರಿ 468 ಕೋಟಿ ರೂ. ಕಳೆದುಕೊಂಡಿರುವುದು ವರದಿಯಾಗಿದೆ.ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,695 ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಈವರೆಗೂ 500 ಮಂದಿ ಸೈಬರ್‌ ಅಪರಾಧಿ ಗಳನ್ನು ಬಂಧಿಸಲಾಗಿದೆ. ಈ ಸೈಬರ್‌ ಅಪರಾಧಿಗಳು ತೆರೆದಿದ್ದ 40 ಸಾವಿರ ನಕಲಿ ಬ್ಯಾಂಕ್‌ ಖಾತೆಗಳನ್ನು ಪೊಲೀಸರು ಪತ್ತೆ ಹಚ್ಚಿ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ.

RELATED ARTICLES
spot_img

Latest News