Homeರಾಜ್ಯವಿಧಾನಪರಿಷತ್‌ನ 7 ಸ್ಥಾನಕ್ಕೆ ಚುನಾವಣೆ : ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ವಿಧಾನಪರಿಷತ್‌ನ 7 ಸ್ಥಾನಕ್ಕೆ ಚುನಾವಣೆ : ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

Elections for 7 seats of the Legislative Council: Nomination filing begins from today

ಬೆಂಗಳೂರು, ಜೂ.1- ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ 7 ಸದಸ್ಯ ಸ್ಥಾನಕ್ಕೆ ನಡೆಯುವ ದ್ವಿವಾರ್ಷಿಕ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದ ಜೂ.8ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ವಿಧಾನಪರಿಷತ್‌ನ ದ್ವೈವಾರ್ಷಿಕ ಚುನಾವಣೆಯ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಅವರು ಈ ಸಂಬಂಧ ಪ್ರಕಟಣೆ ಹೊರಡಿಸಿದ್ದಾರೆ.ಜೂ.9 ರಂದು ನಾಮಪತ್ರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ ಹೊರಡಿಸಲಾಗುತ್ತದೆ.

ಜೂ.11 ರವರೆಗೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಚುನಾವಣಾ ಸ್ಪರ್ಧೆಯಲ್ಲಿ 7ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಜೂ. 18ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು, ನಾಸಿರ್‌ ಅಹಮದ್‌, ಎಂಟಿಬಿ ನಾಗರಾಜ್‌, ಪ್ರತಾಪ್‌ ಸಿಂಹ ನಾಯಕ್‌ ಕೆ., ತಿಪ್ಪಣ್ಣಪ್ಪ, ಸುನೀಲ್‌ ವಲ್ಯಾಪುರೆ, ಬಿ.ಕೆ.ಹರಿಪ್ರಸಾದ್‌ ಅವರು ಜೂ. 30 ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಮೇಲನೆ ಸದಸ್ಯ ಸ್ಥಾನಕ್ಕೆ ಭಾರತೀಯ ಚುನಾವಣಾ ಆಯೋಗವು ಪ್ರಕಟಣೆ ಹೊರಡಿಸಿದ್ದು, ಅದರಂತೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.

RELATED ARTICLES

Latest News