Homeಜಿಲ್ಲಾ ಸುದ್ದಿಗಳುಮಂಡ್ಯ : ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಮಂಡ್ಯ : ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

Mandya: young farmer commits suicide

ಮಂಡ್ಯ,ಜೂನ್‌.1- ಸಾಲಬಾಧೆ ತಾಳಲಾರದೆ ಯುವ ರೈತ ಸಂಜೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಮಳವಳ್ಳಿ ಸಮೀಪದ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಟಿ.ಆರ್‌.ಚೇತನ್‌ ಗೌಡ(25) ಆತಹತ್ಯೆ ಮಾಡಿಕೊಂಡಿರುವ ರೈತ.

ತಂದೆಯ ಅನಾರೋಗ್ಯದ ಕಾರಣ ಕಳೆದ ಎರಡು ವರ್ಷಗಳಿಂದ ವ್ಯವಸಾಯದ ಜವಾಬ್ದಾರಿ ಹೊತ್ತಿದ್ದರು. ತಳಗವಾದಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ತಂದೆಯ ಹೆಸರಿನಲ್ಲಿ 1.40 ಲಕ್ಷ ಬೆಳೆ ಸಾಲ ಹಾಗೂ ಖಾಸಗಿ ಫೈನಾನ್‌್ಸ ಸೇರಿದಂತೆ ವಿವಿಧೆಡೆ ಒಟ್ಟು ಸುಮಾರು 5 ಲಕ್ಷದಷ್ಟು ಸಾಲ ಮಾಡಿದ್ದರು.

ಹೈನುಗಾರಿಕೆ, ರೇಷೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮಾಡಿಕೊಂಡು ಸಾಲ ತೀರಿಸುವ ಪ್ರಯತ್ನದಲ್ಲಿದ್ದರು. ಆದರೆ ಕಳೆದ ಒಂದು ವರ್ಷದಿಂದ ವ್ಯವಸಾಯದಲ್ಲಿ ಸತತ ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೇತನ್‌ ಗೌಡ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಮೃತ ರೈತನ ಪತ್ನಿ ಎಂ.ಡಿ.ಸಂಜನಾ ಅವರು ಗ್ರಾಮಾಂತರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News