ಬೆಂಗಳೂರು,ಫೆ.21- ನಗರದಲ್ಲಿ ನಡೆದಿದ್ದ ಮಂಗಳೂರು ಮೂಲದ ಮಹಿಳಾ ಟೆಕ್ಕಿಯ ಕೊಲೆಗೆ ರೋಚಕ ತಿರುವು ಸಿಕ್ಕಿದ್ದು, ನೆರೆಮನೆಯಾತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾಗಿದ್ದರಿಂದ ಆಕೆಯನ್ನೇ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಕರ್ನಲ್ ಕುರೈ (18) ವಿಚಾರಣೆ ವೇಳೆ ಭಯಾನಕ ಅಂಶಗಳು ಬೆಳಕಿಗೆ ಬಂದಿದ್ದು, ಆತನ ವಿಕೃತ ಮನಸ್ಥಿತಿ ಬಯಲಾಗಿದೆ.ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಲ್ ಕುರೈ ನೆರೆಮನೆಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ಸಾಫ್‌್ಟವೇರ್ ಇಂಜಿನಿಯರ್ ಶರ್ಮಿಳಾ ಅವರ ಮೇಲೆ ಕಣ್ಣುಬಿದ್ದಿದೆ.
ಅವರು ವಾಸವಾಗಿದ್ದ ಫ್ಲ್ಯಾಟ್‌ಗೆ ನುಗ್ಗುವ ಮುನ್ನ ಹಲವು ಬಾರಿ ಹೇಗೆ ಫ್ಲ್ಯಾಟ್‌ಗೆ ಹೋಗಬೇಕೆನ್ನುವ ಬಗ್ಗೆ ಅಭ್ಯಾಸ ಮಾಡಿದ್ದನಂತೆ. ಹಾಗಾಗಿ ಸುಲಭವಾಗಿ ತನ್ನ ಮನೆಯ ಮಹಡಿಯಿಂದ ಪಕ್ಕದ ಆಕೆಯ ಫ್ಲ್ಯಾಟ್‌ಗೆ ನುಗ್ಗಿ ಹಿಂಬದಿಯಿಂದ ಶರ್ಮಿಳಾ ಅವರನ್ನು ಹಿಡಿದುಕೊಂಡಿದ್ದು, ಆಕೆ ಪ್ರತಿರೋಧ ಒಡ್ಡಿ, ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ಆತ ತಳ್ಳಿದ್ದರಿಂದ ಸೋಫಾಗೆ ತಲೆ ಬಡಿದು ತೀವ್ರ ರಕ್ತಸ್ರಾವವಾಗಿತ್ತು. ಆದರೂಬಿಡದೆ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ ಆರೋಪಿ.
ಶರ್ಮಿಳಾ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಆಕೆಯನ್ನು ಹಿಡಿದುಕೊಂಡು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆ ಧರಿಸಿದ್ದ ಬಟ್ಟೆಯನ್ನೇ ಬಿಚ್ಚಿ, ಆ ಬಟ್ಟೆಯಿಂದ ರಕ್ತ ಒರೆಸಿ ನಂತರ ನೀರಿನಲ್ಲಿ ಬಟ್ಟೆ ತೊಳೆದಿದ್ದಾನೆ.
ಇಷ್ಟೆಲ್ಲಾ ಆದರೂ ತನ್ನ ತಪ್ಪಿನ ಅರಿವಾಗದೇ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬುದು ಪೊಲೀಸರ ಸುದೀರ್ಘ ವಿಚಾರಣೆ ಹಾಗೂ ತನಿಖೆಯಿಂದ ಗೊತ್ತಾಗಿದೆ.ತಾನು ಸಿಕ್ಕಿ ಬೀಳುವ ಭಯದಲ್ಲಿ ಶರ್ಮಿಳಾಗೆ ಬೀರುವಿನಲ್ಲಿದ್ದ ಬೇರೆ ಬಟ್ಟೆಯನ್ನು ತಂದು ಆಕೆಗೆ ತೊಡಿಸಿ ನಂತರ ಮಲಗಿಸಿ ದ್ದನಂತೆ. ತದನಂತರ ಆಕೆಯ ಬಟ್ಟೆಗಳನ್ನೆಲ್ಲಾ ಮಂಚದ ಮೇಲೆ ತಂದಿಟ್ಟು ಟಿಶ್ಯೂ ಪೇಪರ್‌ಗೆ ಬೆಂಕಿ ಹಚ್ಚಿ ಅಲ್ಲಿಂದ ತನ್ನ ಮನೆಗೆ ಹೋಗಿ ಏನೂ ಗೊತ್ತಿಲ್ಲದಂತೆ ಇದ್ದನಂತೆ.
ಆದರೆ ಅಪರಾಧ ಮಾಡುವವರು ಏನಾದರೂ ಒಂದು ಸುಳಿವು ಬಿಟ್ಟು ಹೋಗುತ್ತಾರೆ ಎಂಬುದಕ್ಕೆ ಆತ ಪಕ್ಕದ ಮನೆಯ ಮರದ ಮೇಲೆ ಪ್ಯಾಂಟ್ ಬಿಸಾಡಿ ಹೋಗಿದ್ದು, ಅದು ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿತ್ತು.
ಅಲ್ಲದೆ ಶರ್ಮಿಳಾ ಅವರ ಫೋನ್ ತೆಗೆದುಕೊಂಡು ಹೋಗಿ ಕೆಲ ದಿನಗಳ ನಂತರ ಅದನ್ನು ಆನ್ ಮಾಡಿದ್ದರಿಂದಲೇ ಪೊಲೀಸರಿಗೆ ಸಲೀಸಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಒಟ್ಟಾರೆ ಈ ಪ್ರಕರಣದ ತನಿಖೆಯಿಂದ ವಿದ್ಯಾರ್ಥಿಯ ವಿಕೃತ ಮನಸ್ಥಿತಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
