Homeರಾಜ್ಯ4 ದಿನ ಬ್ಯಾಂಕ್‌ ನೌಕರರ ಪ್ರತಿಭಟನೆ : ಗ್ರಾಹಕರ ಪರದಾಟ

4 ದಿನ ಬ್ಯಾಂಕ್‌ ನೌಕರರ ಪ್ರತಿಭಟನೆ : ಗ್ರಾಹಕರ ಪರದಾಟ

ಮೈಸೂರು, ಸೆ.11- ಯುನೈಟೆಡ್‌ ಫೋರಮ್‌ ಆಫ್‌ ಬ್ಯಾಂಕ್‌ ಯೂನಿಯನ್‌್ಸ (ಯುಎಫ್‌ಬಿಯು) ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಬ್ಯಾಂಕ್‌ ಸೇವೆಗಳು ಸ್ಥಗಿತಗೊಳ್ಳಲಿವೆ.ವಾರದಲ್ಲಿ 5 ದಿನಗಳ ಕೆಲಸದ ಘೋಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಯುಎಫ್‌ಬಿಯು ಸರ್ಕಾರದ ಮುಂದಿಟ್ಟಿದ್ದು, ಈ ಸಂಬಂಧ ಸರಸ್ವತಿಪುರಂ, ಟಿ.ಕೆ.ಲೇಔಟ್‌ನಲ್ಲಿರುವ ಎಸ್‌‍ಬಿಐ ಆಡಳಿತ ಭವನದ ಎದುರು ಸಂಘಟಕ ಕಲ್ಯಾಣ್‌ ನೇತೃತ್ವದಲ್ಲಿ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಸೆಪ್ಟೆಂಬರ್‌ 11ರ ಸಾಂಕೇತಿಕ ಮುಷ್ಕರದ ನಂತರವೂ ಸರ್ಕಾರ ಹಾಗೂ ಭಾರತೀಯ ಬ್ಯಾಂಕುಗಳ ಒಕ್ಕೂಟ (ಐಬಿಎ) ಸ್ಪಂದಿಸದಿದ್ದರೆ, ಮುಂದಿನ ಹಂತದಲ್ಲಿ ಮೂರು ದಿನಗಳ ಕಾಲ ದೇಶದಾದ್ಯಂತ ಸಂಪೂರ್ಣ ಬ್ಯಾಂಕ್‌ ಬಂದ್‌ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ. ಈ ಮೂರು ದಿನಗಳ ಮುಷ್ಕರ ಸೆಪ್ಟೆಂಬರ್‌ 28ರಿಂದ ನಡೆಯಲಿದ್ದು, ಅದಕ್ಕೂ ಫಲ ಸಿಗದಿದ್ದರೆ ಅಕ್ಟೋಬರ್‌ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘಟನೆಗಳು ತಿಳಿಸಿವೆ.

RELATED ARTICLES
spot_img

Latest News