Homeರಾಜ್ಯನಿರಂತರ ಕುಸಿತದ ಬಳಿಕ ಚೇತರಿಸಿಕೊಂಡ ಚಿನ್ನ-ಬೆಳ್ಳಿ ದರಗಳು

ನಿರಂತರ ಕುಸಿತದ ಬಳಿಕ ಚೇತರಿಸಿಕೊಂಡ ಚಿನ್ನ-ಬೆಳ್ಳಿ ದರಗಳು

Gold and silver prices recover after continuous decline

ಬೆಂಗಳೂರು,ಜೂ.12- ನಿರಂತರ ಕುಸಿತದಿಂದ ಚಿನ್ನ-ಬೆಳ್ಳಿ ದರಗಳು ಏರಿಕೆ ಕಂಡಿವೆ. ಕಳೆದ ಎರಡು ದಿನಗಳಿಂದ ಇಳಿಮುಖವಾಗಿದ್ದ ಚಿನ್ನ ಇಂದು ಏರಿಕೆಯಾಗಿದೆ. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್‌ನ 1 ಗ್ರಾಂ ಚಿನ್ನವು 294 ರೂ.ನಷ್ಟು ಹೆಚ್ಚಳವಾಗಿದ್ದು, 14,858 ರೂ.ನಷ್ಟಿದೆ.

22 ಕ್ಯಾರೆಟ್‌ನ ಚಿನ್ನವು 1 ಗ್ರಾಂಗೆ 270 ರೂ.ನಷ್ಟು ಏರಿಕೆಯಾಗಿದ್ದು, 13,620 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು 1 ಗ್ರಾಂಗೆ 221 ರೂ. ಹೆಚ್ಚಳವಾಗಿದ್ದು, 11,144 ರೂ.ನಷ್ಟಿದೆ.
ಮೇ ಕೊನೆಯ ವಾರದಿಂದಲೂ ಇಳಿಮುಖವಾಗಿದ್ದ ಚಿನ್ನದ ಬೆಲೆಯು ಜೂ.9ರಂದು ಅಲ್ಪಪ್ರಮಾಣದ ಏರಿಕೆ ಕಂಡಿತ್ತು. ಮತ್ತೆ ಎರಡು ದಿನ ಇಳಿಕೆಯಾಗಿದ್ದು, ಇಂದು ಮತ್ತೆ ಹೆಚ್ಚಳವಾಗಿದೆ.

ಇದೇ ರೀತಿ ಪ್ಲಾಟಿನಂ ದರದಲ್ಲೂ ಹೆಚ್ಚಳವಾಗಿದ್ದು,10 ಗ್ರಾಂ 2100 ರೂ. ಏರಿಕೆಯಾಗಿದೆ. 53,160 ರೂ.ನಷ್ಟಿದೆ. ಇನ್ನು ಬೆಳ್ಳಿ ದರವು ದೀರ್ಘಾವಧಿಯ ಕುಸಿತದ ನಂತರ ಇಂದು ಚೇತರಿಕೆ ಕಂಡಿದೆ. ಮೇ ಕೊನೆಯ ವಾರದಿಂದಲೂ ಇಳಿಮುಖವಾಗಿ ಸಾಗುತ್ತಿದ್ದ ಬೆಳ್ಳಿ ದರವು ಇಂದು 1 ಕೆಜಿಗೆ 10 ಸಾವಿರ ರೂ.ನಷ್ಟು ಏರಿಕೆಯಾಗಿದೆ. ಪ್ರಸ್ತುತ 1 ಕೆ.ಜಿ. ಬೆಳ್ಳಿ ದರವು 2.60 ಲಕ್ಷ ರೂ.ನಷ್ಟಿದೆ.

ಜಾಗತಿಕವಾಗಿ ಉಂಟಾಗುವ ಬದಲಾವಣೆಯಿಂದಾಗಿ ಚಿನಿವಾರಪೇಟೆಯಲ್ಲಿ ಪದೇ ಪದೇ ಏರಿಳಿತಗಳು ಉಂಟಾಗುತ್ತಿವೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಚಿನಿವಾರಪೇಟೆ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದ್ದರಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತವಾಗುತ್ತಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

RELATED ARTICLES

Latest News