Wednesday, April 22, 2026
Homeರಾಜ್ಯಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು, ಮಾ.11ರಿಂದ ಮುಷ್ಕರ

ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು, ಮಾ.11ರಿಂದ ಮುಷ್ಕರ

Government doctors to go on strike from March 11

ಬೆಂಗಳೂರು,ಫೆ.28- ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು ತಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮಾ.11ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯದಿರಲು ತೀರ್ಮಾನಿಸಿದ್ದಾರೆ.

ಕರ್ತವ್ಯಕ್ಕೆ ಗೈರುಹಾಜರಾಗುವ ಸರ್ಕಾರಿ ಆಸ್ಪತ್ರೆಗಳ ವೈದ್ಯರ ವಿರುದ್ಧ
ಶಿಸ್ತು ಕ್ರಮ ಜರುಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿ ಹರ್ಷಗುಪ್ತ ಎಚ್ಚರಿಕೆ ಕೊಟ್ಟಿದ್ದರು.

ಆದರೆ ಸರ್ಕಾರದ ಯಾವುದೇ ಎಚ್ಚರಿಕೆಗೂ ಬಗ್ಗದ ಕರ್ನಾಟಕ ವೈದ್ಯಕೀಯ ಸಂಘಗಳು ಈಗಾಗಲೇ ತೀರ್ಮಾನಿಸಿರುವಂತೆ ಮಾ.11ರಂದು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಒಪಿಡಿ ಸೇವೆಯನ್ನು ಬಂದ್‌ ಮಾಡಿ ಅನಿರ್ಧಿಷ್ಟ ಅವಧಿವರೆಗೆ ಮುಷ್ಕರವನ್ನು ನಡೆಸಲು ಒಮತದ ತೀರ್ಮಾನಕ್ಕೆ ಬಂದಿದ್ದಾರೆ.
ವೈದ್ಯರ ವಿರುದ್ಧ ಸರ್ಕಾರ ಶಿಸ್ತುಕ್ರಮ ಸೇರಿದಂತೆ ಸೇವೆಯಿಂದ ಅಮಾನತುಪಡಿಸುವುದು, ವಜಾಗೊಳಿಸುವುದು ಇಲ್ಲವೇ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ(ಎಸಾ) ಜಾರಿ ಮಾಡಿದರೂ ಸರಿಯೇ ನಾವು ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವೈದ್ಯರ ಬೇಡಿಕೆಗಳನ್ನು ಸಕಾರಾತಕವಾಗಿ ಪರಿಗಣಿಸಿ ಮಾತುಕತೆಗೆ ಆಹ್ವಾನಿಸಿದರೆ ಮಾತುಕತೆಗೆ ಸಿದ್ದರಿದ್ದೇವೆ. ಅದನ್ನು ಬಿಟ್ಟು ಶಿಸ್ತು ಕ್ರಮ ಇಲ್ಲವೇ ಕಾನೂನಿನ ಮೂಲಕ ಬೆದರಿಸಲು ಬಂದರೆ ನಾವು ಹೆದರುವುದಿಲ್ಲ ಎನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.

ನಾವು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನಿನ್ನೆ-ಮೊನ್ನೆಯದಲ್ಲ. ಹಲವಾರು ವರ್ಷಗಳ ಬೇಡಿಕೆ ಇದಾಗಿದೆ. ಈಗ ನಾಳೆ ಎನ್ನುತ್ತಲೇ ಕಾಲಹರಣ ಮಾಡುತ್ತಿದೆ. ನಾವು ಸಾಕಷ್ಟು ತಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಪುನಃ ಅದೇ ರೀತಿ ನಮನ್ನು ಬೆದರಿಸಲು ಬಂದರೆ ಈ ಬಾರಿ ಹೆದರುವುದಿಲ್ಲ ಎಂದು ಹೇಳುತ್ತಿದ್ದಾರೆ.

ನಮನ್ನು ಜೈಲಿಗಟ್ಟಿದರೂ ಸರಿಯೇ. ಮುಷ್ಕರ ಕೈಬಿಡುವುದಿಲ್ಲ. ಸಚಿವರು ಮತ್ತು ಅಧಿಕಾರಿಗಳು ತಕ್ಷಣವೇ ಮಾತುಕತೆಗೆ ಆಹ್ವಾನಿಸಿದರೆ ಚರ್ಚೆಗೆ ಸಿದ್ದರಿದ್ದೇವೆ. ಆದರೆ ಸರ್ಕಾರ ನಮನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಮುಂದಾದರೆ ನಮಗೂ ಕೂಡ ಕಾನೂನು ಮೂಲಕವೇ ಹೋರಾಟ ನಡೆಸಲು ಗೊತ್ತು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರದ ವೇಳೆ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ತುರ್ತು ಸೇವೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಆನಂತರವೂ ಸರ್ಕಾರ ತಮ ನಿಲುವಿನಲ್ಲಿ ಬದಲಾವಣೆ ಕಾಣದಿದ್ದರೆ ಮಾ.11ರಂದು ಆಸ್ಪತ್ರೆಗೆ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಸರಿಯಾಗಿ ನೇಮಕ, ವರ್ಗಾವಣೆ ಆಗುತ್ತಿಲ್ಲ. ಕಾಲಕಾಲಕ್ಕೆ ಔಷಧಗಳ ಪೂರೈಕೆಯಾಗಿಲ್ಲ. ಔಷಧಗಳು ಇಲ್ಲದಿದ್ದರೂ ಇದೆ ಅಂತ ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮದ ಪ್ರಕಾರ ಚೀಟಿ ಹೊರಗೆ ಬರೆಯಬಾರದು, ಆದರೆ ಬರೆಯಲೇಬೇಕಾದ ಪರಿಸ್ಥಿತಿ ಇದೆ ಎಂಬುದು ವೈದ್ಯರ ವಾದವಾಗಿದೆ.

ಮುಷ್ಕರ ನಿಮಿತ್ತ ಕರ್ತವ್ಯಕ್ಕೆ ಗೈರು ಹಾಜರಾದರೆ ಕ್ರಮದ ಎಚ್ಚರಿಕೆ ನೀಡಿದೆ. ಹಾಗೆಯೇ ಮಾರ್ಚ್‌ 11ರಂದು ಕರೆ ನೀಡಿದ್ದ ಮುಷ್ಕರವನ್ನು ಕೈ ಬಿಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರಿಗೆ ಸೂಚನೆ ನೀಡಿದೆ.

ರಾಜ್ಯದ ಜನರು ಈ ಮುಷ್ಕರದಿಂದ ತೊಂದರೆಗೊಳಗಾಗುವ ಸಾಧ್ಯತೆ ಇದೆ. ಸರ್ಕಾರ ಮತ್ತು ವೈದ್ಯರ ನಡುವೆ ಶೀಘ್ರ ಮಾತುಕತೆ ನಡೆಯಬೇಕು ಎಂಬ ಮನವಿ ಎಲ್ಲೆಡೆ ಕೇಳಿ ಬರುತ್ತಿದೆ. ಈ ಮುಷ್ಕರದಿಂದ ಆರೋಗ್ಯ ಸೇವೆಗಳ ಮೇಲೆ ದೊಡ್ಡ ಪರಿಣಾಮ ಬೀಳುವ ಸಾಧ್ಯತೆ ಇದೆ. ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚಾಗಿದೆ.

ವೈದ್ಯರ ಪ್ರಮುಖ ಬೇಡಿಕೆಗಳು ಏನು?

  • ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಔಷಧಗಳ ಸರಬರಾಜು
  • ಪ್ರತಿ 3 ವರ್ಷಕ್ಕೊಮೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ
  • ಎಲ್ಲಾ ವೃಂದಗಳ ಜೇಷ್ಠತಾಪಟ್ಟಿ ಪ್ರಕಟಿಸಿ
  • 5 ವರ್ಷಗಳಿಂದ ತಡೆಹಿಡಿದಿರುವ ಮುಂಬಡ್ತಿಗೆ ಒತ್ತಾಯ
  • ಉನ್ನತ ವ್ಯಾಸಂಗ ಮತ್ತು ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ
  • ಕೇಂದ್ರ ಪುರಸ್ಕೃತ ಯೋಜನೆಯಡಿ 6 ಸಾವಿರ ನೌಕರರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆ
  • ಖಾಲಿ ಇರುವ ವೈದ್ಯರು ಮತ್ತು ಅರೆ ವೈದ್ಯರ ಹುದ್ದೆಗಳ ಭರ್ತಿ
RELATED ARTICLES

Latest News