Homeರಾಜ್ಯಗೃಹಲಕ್ಷೀ ಪರಿಷ್ಕರಣೆ : 3.89 ಲಕ್ಷ ಅನರ್ಹ ಲಾನುಭವಿಗಳ ಪತ್ತೆ, ರಾಜ್ಯ ಸರ್ಕಾರಕ್ಕೆ 77 ಕೋಟಿ...

ಗೃಹಲಕ್ಷೀ ಪರಿಷ್ಕರಣೆ : 3.89 ಲಕ್ಷ ಅನರ್ಹ ಲಾನುಭವಿಗಳ ಪತ್ತೆ, ರಾಜ್ಯ ಸರ್ಕಾರಕ್ಕೆ 77 ಕೋಟಿ ಉಳಿತಾಯ

Gruhalakshmi Scheme : 3.89 lakh ineligible beneficiaries identified,

ಬೆಂಗಳೂರು, ಜೂ.15-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷೀ ಯೋಜನೆಯಲ್ಲಿ ನಡೆದ ಪರಿಷ್ಕರಣೆ ವೇಳೆ ರಾಜ್ಯಾದ್ಯಂತ ಒಟ್ಟು 3,89,784 ಅನರ್ಹ ಲಾನುಭವಿಗಳು ಪತ್ತೆಯಾಗಿದ್ದು, ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಇದರಿಂದಾಗಿ ಸರ್ಕಾರಕ್ಕೆ ತಿಂಗಳಿಗೆ ಸುಮಾರು 77 ಕೋಟಿ ಉಳಿತಾಯವಾಗಿರುವುದು ತಿಳಿದುಬಂದಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಸರ್ಕಾರಿ ದತ್ತಾಂಶಗಳನ್ನು ಆಧರಿಸಿ ನಡೆಸಿದ ಪರಿಶೀಲನೆಯಲ್ಲಿ, ಆದಾಯ ತೆರಿಗೆ ಹಾಗೂ ಜಿಎಸ್‌‍ಟಿ ಪಾವತಿಸುತ್ತಿರುವ 1,94,560 ಮಂದಿ ಮತ್ತು ಮರಣ ಹೊಂದಿದ 1,95,224 ಲಾನುಭವಿಗಳ ಹೆಸರಿನಲ್ಲಿ ಸಹ ಯೋಜನೆಯ ಹಣ ಜಮೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ.

ಪರಿಷ್ಕರಣೆ ಪ್ರಕ್ರಿಯೆಯನ್ನು ಮಾರ್ಚ್‌ ತಿಂಗಳಲ್ಲಿ ಕೈಗೊಳ್ಳಲಾಗಿದ್ದು, ಅನರ್ಹರ ಪಟ್ಟಿಯನ್ನು ಅಂತಿಮಗೊಳಿಸಿ ಯೋಜನೆಯಿಂದ ಹೊರಗಿಡಲಾಗಿದೆ. ಸರ್ಕಾರದ ಮಾಹಿತಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 47,871 ಅನರ್ಹ ಲಾನುಭವಿಗಳು ಪತ್ತೆಯಾಗಿದ್ದಾರೆ.

ಉಳಿದ ಜಿಲ್ಲೆಗಳಲ್ಲಿಯೂ ಸಾವಿರಾರು ಅನರ್ಹ ಲಾನುಭವಿಗಳು ಪತ್ತೆಯಾಗಿದ್ದು, ಯೋಜನೆಯ ಅರ್ಹತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇಲಾಖೆ ಮುಂದಾಗಿದೆ. ಅಧಿಕಾರಿಗಳ ಪ್ರಕಾರ, ಯೋಜನೆಯ ಸೌಲಭ್ಯ ನಿಜವಾದ ಅರ್ಹ ಮಹಿಳೆಯರಿಗೆ ತಲುಪುವ ಉದ್ದೇಶದಿಂದಲೇ ಈ ಪರಿಷ್ಕರಣೆ ಕೈಗೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ದತ್ತಾಂಶ ಪರಿಶೀಲನೆ ನಡೆಸಿ ಅನರ್ಹರನ್ನು ಗುರುತಿಸುವ ಕಾರ್ಯ ಮುಂದುವರಿಯಲಿದೆ.ಒಟ್ಟಾರೆ, ಗೃಹಲಕ್ಷೀ ಯೋಜನೆಯಲ್ಲಿ ನಡೆದ ಈ ಬೃಹತ್‌ ಪರಿಶೀಲನೆಯಿಂದ ಸುಮಾರು 3.89 ಲಕ್ಷ ಅನರ್ಹ ಲಾನುಭವಿಗಳು ಹೊರಬಿದ್ದಿದ್ದು, ಸರ್ಕಾರದ ವೆಚ್ಚದಲ್ಲಿ ಗಣನೀಯ ಉಳಿತಾಯವಾಗಿದೆ.

RELATED ARTICLES

Latest News