Thursday, April 16, 2026
Homeರಾಜ್ಯಪೊಲೀಸರ ತನಿಖೆಯಿಂದ ಬಯಲಾಯ್ತು ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆಯ ಕಾರಣ

ಪೊಲೀಸರ ತನಿಖೆಯಿಂದ ಬಯಲಾಯ್ತು ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆಯ ಕಾರಣ

Police investigation reveals reason for businessman CJ Roy's suicide

ಬೆಂಗಳೂರು,ಫೆ.3- ಉದ್ಯಮಿ ಸಿಜೆ ರಾಯ್‌ ಅವರು ಕಳೆದ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುವುದು ಇದುವರೆಗಿನ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ರಾಯ್‌ ಅವರು ರಾಜ್ಯವಲ್ಲದೇ ದೇಶ,ವಿದೇಶಗಳಲ್ಲಿ ಸುಮಾರು 8 ಸಾವಿರ ಕೋಟಿಗೂ ಹೆಚ್ಚು ಸ್ಥಿರ-ಚರ ಆಸ್ತಿ ಹೊಂದಿದ್ದಾರೆ. ಆದರೆ ಅವರು ಹೂಡಿಕೆಗೆ ಎಲ್ಲಿಯೂ ಬ್ಯಾಂಕ್‌ ಸಾಲ ಮಾಡಿಲ್ಲ ಎಂದು ತಿಳಿದು ಬಂದಿದೆ.

ಬ್ಯಾಂಕ್‌ ಸಾಲವಿಲ್ಲದೇ ಇಷ್ಟೊಂದು ಅಪಾರ ಪ್ರಮಾಣದ ಹಣ ಅವರಿಗೆ ಎಲ್ಲಿಂದ ಬಂತು ಎಂಬುವುದು ಎಲ್ಲ ಉದ್ಯಮಿಗಳ ಪ್ರಶ್ನೆಯಾಗಿದೆ.ಇವರ ಹೊಸ ಯೋಜನೆಗಳಿಗೆ ಕೆಲವು ರಾಜಕೀಯ ಗಣ್ಯ ವ್ಯಕ್ತಿಗಳು, ಕೆಲ ಉನ್ನತ ಮಟ್ಟದ ಅಧಿಕಾರಿಗಳು ಹೂಡಿಕೆ ಮಾಡಿದ್ದಾರೆ ಎಂಬುವುದು ಸಹ ತಿಳಿದು ಬಂದಿದೆ.

ಈ ಹಣದ ಪೈಕಿ ಬಹುಪಾಲು ಅಕ್ರಮ ಹಣ (ಬ್ಲಾಕ್‌ ಮನಿ)ಆಗಿರಬಹುದೆಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆಕಾನ್ಫಿಡೆಂಟ್‌ ಸಂಸ್ಥೆ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ಮಾಡುತ್ತಿದ್ದುದ್ದರಿಂದ ಇವರ ಬಳಿ ಹೂಡಿಕೆ ಮಾಡಿದ್ದ ಹಣ ವಾಪಸ್‌‍ ಕೊಡುವಂತೆ ರಾಜಕಾರಣಿಗಳು, ಗಣ್ಯವ್ಯಕ್ತಿಗಳು,ಉನ್ನತ ಮಟ್ಟದ ಅಧಿಕಾರಿಗಳು ಒತ್ತಾಯಿಸುತ್ತಿದ್ದರೆಂಬ ಅನುಮಾನ ಈಗ ವ್ಯಕ್ತವಾಗಿದೆ.

ಒಂದು ವೇಳೆ ದಾಳಿ ಸಂದರ್ಭದಲ್ಲಿ ರಾಯ್‌ ಅವರು ತಮ ಹೆಸರು ಎಲ್ಲಿ ಬಾಯ್ಬಿಡುತ್ತಾರೆಂಬ ಆತಂಕದಲ್ಲಿ ಹಣ ವಾಪಸ್‌‍ ಕೊಡುವಂತೆ ಅವರುಗಳೆಲ್ಲರೂ ಒತ್ತಾಯಿಸುತ್ತಿದ್ದಾರೆಂಬ ಕಾರಣಕ್ಕೆ ರಾಯ್‌ ಅವರು ಒತ್ತಡಕ್ಕೆ ಒಳಗಾಗಿದ್ದರೇ ಎಂಬ ಸಂಶಯ ಅಲ್ಲಗೆಳೆಯುವಂತಿಲ್ಲ.
ಐಟಿ ಅಧಿಕಾರಿಗಳಲ್ಲದೇ ಕೇಂದ್ರ ತನಿಖಾ ಸಂಸ್ಥೆಗಳು ರಾಯ್‌ ಅವರ ವ್ಯವಹಾರದತ್ತ ಕಣ್ಣಿಟ್ಟಿದ್ದವು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ರಾಯ್‌ ಅವರು ಕಳೆದ ಆರು ತಿಂಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುವುದು ತನಿಖೆಯಿಂದ ಗೊತ್ತಾಗಿದೆ.

ರಾಯ್‌ ಅವರು ಕರ್ನಾಟಕ, ಕೇರಳ ಅಲ್ಲದೇ ದುಬೈ ಸೇರಿದಂತೆ ವಿದೇಶಗಳಲ್ಲಿಯೂ ತಮ ವ್ಯವಹಾರವನ್ನು ವಿಸ್ತರಿಸಿದ್ದರು. ರಾಯ್‌ ಅವರ ಹೊಸ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸುಆಗದ ಪರಿಣಾಮ ಹಣಕಾಸು ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿದೆ.

ತಮ ಜೀವನ ಶೈಲಿಯ ಅನುಗುಣಕ್ಕನುಸಾರವಾಗಿ ರಾಯ್‌ ಅವರು ಆದಾಯದ ಬಹುಪಾಲನ್ನು ಖರ್ಚು ಮಾಡುತ್ತಿದ್ದುದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು ಎಂಬುದು ಕಂಡು ಬಂದಿದೆ. ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ರಾಯ್‌ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಈ ಎಲ್ಲಾ ಒತ್ತಡಗಳು ಒಂದೇ ಬಾರಿಗೆ ರಾಯ್‌ ಅವರ ಜೀವನದಲ್ಲಿ ಆವರಿಸಿಕೊಂಡ ಪರಿಣಾಮ ಅದರಿಂದ ಹೊರ ಬರಲಾಗದೇ ಆತಹತ್ಯೆಯ ನಿರ್ಧಾರ ಮಾಡಿ ತಮ ಪ್ರಾಣವನ್ನು ತ್ಯಜಿಸಿದರೇ ಎಂಬೆಲ್ಲಾ ಅಂಶಗಳು ವ್ಯಕ್ತವಾಗುತ್ತಿವೆ.

ರಾಯ್‌ ಅವರು ಮೇಲ್ನೋಟಕ್ಕೆ ಆರ್ಥಿಕ ಸಂಕಷ್ಟದಿಂದ ಆತಹತ್ಯೆ ಮಾಡಿಕೊಂಡಿದ್ದಾರೆಂಬುವುದು ಕಂಡು ಬಂದಿದ್ದು, ಒಟ್ಟಾರೆ ರಾಯ್‌ ಅವರ ಆತಹತ್ಯೆಗೆ ನಿಖರ ಕಾರಣವೇನೆಂಬುವುದರ ಬಗ್ಗೆ ಎಸ್‌‍ಐಟಿ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ.

RELATED ARTICLES

Latest News