ಬೆಂಗಳೂರು, ಫೆ.20- ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.ಬೀದಿ ನಾಯಿಗಳ ಸಂರಕ್ಷಣೆಗಾಗಿ ನಗರದ ಐದು ಪಾಲಿಕೆಗಳಲ್ಲಿ 15 ಎಕರೆ ಜಾಗ ಗುರುತು ಮಾಡಲಾಗಿದ್ದು, ಬೀದಿ ನಾಯಿಗಳಿಗಾಗಿ ಶೆಲ್ಟರ್ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 2.69 ಲಕ್ಷ ಬೀದಿ ನಾಯಿಗಳು ಇದ್ದು ಅವುಗಳ ಪೈಕಿ ಕೆಲ ಬೀದಿ ನಾಯಿಗಳು ಕ್ರೂರವಾಗಿ ನಡೆದುಕೊಂಡು ಸಾರ್ವಜನಿಕರಿಗೆ ಹಾಗೂ ವೃದ್ದರಿಗೆ ತೊಂದರೆ ಕೊಡುತ್ತಿವೆ ಅಂತಹ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಿಸಿ ಅವುಗಳ ಸಂರಕ್ಷಣೆಗೆ ಐದು ನಗರಪಾಲಿಕೆಗಳು ತೀರ್ಮಾನಿಸಿವೆ.
ಐದು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಎರಡೂವರೆ ಸಾವಿರ ಕ್ರೂರ ಬೀದಿ ನಾಯಿಗಳನ್ನು ಗುರುತು ಮಾಡಲಾಗಿದ್ದು ಅವುಗಳ ಸಂರಕ್ಷಣೆಗೆ ಶೆಲ್ಟರ್ ನಿರ್ಮಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 2 ರಿಂದ 3 ಎಕರೆ ಭೂಮಿಯನ್ನು ಗುರುತು ಮಾಡಿದಿವಿ.ಪ್ರಾಣಿ ನಿಯಂತ್ರಣ ಕಾಯ್ದೆಯ ಅನ್ವಯದಂತೆ ಶೆಲ್ಟರ್ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಸುಮಾರು 7 ಕೋಟಿ ವೆಚ್ಚದಲ್ಲಿ 5 ಕಡೆ ಶೆಲ್ಟರ್ ನಿರ್ಮಿಸಲಾಗುತ್ತೆ. ಪ್ರತಿ ಶೆಲ್ಟರ್ ನಲ್ಲಿ 500 ರಿಂದ 600 ನಾಯಿಗಳು ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶೆಲ್ಟರ್ ನಿರ್ಮಾಣ ಕಾರ್ಯಕ್ಕೆ ಹೆಜ್ಜೆ ಇರಿಸಲಾಗಿದೆ. ಬೀದಿನಾಯಿಗಳ ಪಾಲನೆ ಮತ್ತು ಪೋಷಣೆ ಮಾಡಲಾಗುತ್ತದೆ.ನಗರದ ಹೊರ ವಲಯಗಳದ ಭಂಗೀಪುರ, ಮಹದೇವಪುರದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
