ಬೆಂಗಳೂರು,ಫೆ.20- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮದು ಕಮಿಷನ್ ಚೋರ್ ಸರ್ಕಾರ, ಕಾಮ್ ಚೋರ್ ಮಂತ್ರಿಗಳು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಸಿ.ಎಂ ಸಿದ್ದರಾಮಯ್ಯ ಅವರೇ, ಕರ್ನಾಟಕದಲ್ಲಿರುವ ನಿಮ ಕಮಿಷನ್ ಚೋರ್ ಕಾಂಗ್ರೆಸ್ ಸರ್ಕಾರದಲ್ಲಿ ಕಾಮ್ ಚೋರ್ ಮಂತ್ರಿಗಳೇ ತುಂಬಿ ತುಳುಕುತ್ತಿತ್ದಾರೆ. ಒಂದು ಕಡೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಣಕಾಸು ಇಲಾಖೆಯಿಂದ 880 ಕೋಟಿ ಅನುದಾನ ಬಿಡುಗಡೆ ಆಗಿದ್ದರೂ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಖರೀದಿ ಮಾಡದೆ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ 143 ಕೋಟಿ ಬಾಕಿ ಬಿಲ್ ಪಾವತಿ ಮಾಡದೆ, ಸಾರ್ವಜನಿಕರು ಪರದಾಡುವಂತೆ ಮಾಡಿದ್ದಾರೆ.
ಇನ್ನೊಂದು ಕಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಎಸ್‌ಐ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡಿದ ಕಂಪನಿಗಳಿಗೆ 60 ಕೋಟಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡು, ರೇಟ್‌ಕಾರ್ಡ್ ಆಧಾರದಲ್ಲಿ ಔಷಧಿ, ಉಪಕರಣ ಖರೀಸುವ ಮೂಲಕ ಕಾರ್ಮಿಕರ ಹಣ ಲೂಟಿ ಹೊಡೆಯಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ಎಲ್ಲ ಇಲಾಖೆಗಳಲ್ಲೂ ಹಿಂದಿನ ವರ್ಷಗಳಲ್ಲೇ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿ ಇರುವಾಗ ಈಗ ಇನ್ನೊಂದು ಬಜೆಟ್ ಮಂಡನೆ ಮಾಡಿ ಏನು ಸಾಧಿಸಲು ಹೊರಟಿದ್ದೀರಿ ಸ್ವಾಮಿ? ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಕಿಡಿಕಾರಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ದವೂ ಕಿಡಿಕಾರಿರುವ ಅಶೋಕ್, ತಮ ತವರು ಜಿಲ್ಲೆಯಲ್ಲಿ ಕುಡಿಯುವ ನೀರು ಕೊಡಲೂ ಯೋಗ್ಯತೆ ಇಲ್ಲದವರು ಕರಾವಳಿಯಲ್ಲಿ ಐಟಿ ಕಂಪನಿಗಳ ಹೂಡಿಕೆ ಬಗ್ಗೆ ಮಾತಾಡುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ.ಕಲ್ಯಾಣ ಕರ್ನಾಟಕದ ಅಧಿಕಾರದಾಹಿ ದೆವ್ವಗಳು ಅಲ್ಲಿಂದ ತೊಲಗುವವರೆಗೂ ಕಲ್ಯಾಣ ಕರ್ನಾಟಕದ ಈ ದುಸ್ಥಿತಿಗೆ ಮುಕ್ತಿ ಇಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
