Sunday, April 12, 2026
Homeರಾಜ್ಯವಾಣಿಜ್ಯ ಸಿಲಿಂಡರ್‌ಗಳ ಕೊರತೆ : ಹಲವೆಡೆ ಹೋಟೆಲ್‌ಗಳು ಬಂದ್‌

ವಾಣಿಜ್ಯ ಸಿಲಿಂಡರ್‌ಗಳ ಕೊರತೆ : ಹಲವೆಡೆ ಹೋಟೆಲ್‌ಗಳು ಬಂದ್‌

Shortage of commercial cylinders: Hotels closed in many places

ಬೆಂಗಳೂರು,ಮಾ.12- ವಾಣಿಜ್ಯ ಸಿಲಿಂಡರ್‌ಗಳ ಅಭಾವ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಹೋಟೆಲ್‌ಗಳನ್ನು ಬಂದ್‌ ಮಾಡಲಾಗಿದೆ. ಪ್ರತಿ ದಿನ 5ರಿಂದ 6 ಸಿಲಿಂಡರ್‌ ಬೇಕಾಗುತ್ತಿದ್ದು, ಈಗ ಕೇವಲ ಒಂದು ಸಿಲಿಂಡರ್‌ ನೀಡುತ್ತಿದ್ದು, ಇದರಿಂದ
ಆಹಾರ ತಯಾರಿಸುವುದು ಸಾಧ್ಯವಾಗುವುದಿಲ್ಲ. ಇದರಿಂದ ಗ್ರಾಹಕರು ಕೂಡ ಕೋಪಗೊಳ್ಳುತ್ತಾರೆ. ಅದರಿಂದ ಸಮಸ್ಯೆ ಬಗೆಹರಿಯುವವರೆಗೂ ಹೋಟೆಲ್‌ಗೆ ಬೀಗ ಹಾಕುವುದೇ ಲೇಸು ಎಂದು ಮಾಲೀಕರು ಕಿಡಿಕಾರಿದ್ದಾರೆ.

ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಬಸವನಗುಡಿ, ಮಲ್ಲೇಶ್ವರ, ಬಾಣಸವಾಡಿ, ಕೆ.ಆರ್‌.ಪುರ, ಸರ್ಜಾಪುರ, ಎಚ್‌ಎಸ್‌‍ಆರ್‌ ಲೇಔಟ್‌ , ಇಂದಿರಾನಗರ ಸೇರಿದಂತೆ ಹಲವು ಕಡೆ ಹೋಟೆಲ್‌ಗಳಿಗೆ ಬೀಗ ಜಡಿಯಲಾಗಿದೆ.

ಕಾಫಿ-ಟೀ ಮತ್ತು ಉಪಹಾರಗಳನ್ನು ಚಿಕ್ಕಪುಟ್ಟ ಹೋಟೆಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ಯಾವಾಗ ಅನಿಲ ಖಾಲಿಯಾಗುತ್ತದೆಯೋ ಎಂಬ ಆತಂಕ ಶುರುವಾಗಿದೆ. ಕೆಲವು ಪಂಚತಾರಾ ಹೋಟೆಲ್‌ಗಳು, ಪಬ್‌, ರೆಸ್ಟೋರೆಂಟ್‌ಗಳು ಸೇರಿದಂತೆ ಹಲವರು ಖಾಸಗಿ ಕಂಪನಿಗಳ ವಾಣಿಜ್ಯ ಸಿಲಿಂಡರ್‌ಗಳನ್ನು ತುರ್ತಾಗಿ ಹೆಚ್ಚಿನ ಬೆಲೆಗೆ ತರಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಕೆಲವೆಡೆ ಪಿಜಿ , ಲಾಡ್‌್ಜಗಳಲ್ಲೂ ಕೂಡ ನಿಗದಿತ ಸಮಯಕ್ಕೆ ಮಾತ್ರ ಊಟದ ವ್ಯವಸ್ಥೆ ಎಂಬ ಬೋರ್ಡ್‌ಗಳನ್ನು ಹಾಕಲಾಗುತ್ತಿದೆ.

ಪರಿಸ್ಥಿತಿ ಗಂಭೀರಗೊಳ್ಳುತ್ತಿದ್ದು, ಕೂಡಲೇ ಆತಿಥ್ಯ ವಲಯಕ್ಕೆ ಎದುರಾಗುತ್ತಿರುವ ತುರ್ತು ಪರಿಸ್ಥಿತಿಯನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಡ ಕೇಳಿಬಂದಿದೆ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಎದುರಾಗಿರುವ ಸಂಘರ್ಷದಿಂದ ಅನಿಲ ಆಮದು ಕಷ್ಟವಾಗುತ್ತಿದ್ದು, ಸದ್ಯ ಗೃಹಬಳಕೆ ಮತ್ತು ಕೆಲವು ಕೈಗಾರಿಕಾ ಬಳಕೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆದ್ಯತೆ ಮೇಲೆ ನೀಡಲಾಗುತ್ತಿದೆ.

ಸದ್ಯ ಬೆಂಗಳೂರು ಅಲ್ಲದೆ ಚಿಕ್ಕಮಗಳೂರು, ಬೀದರ್‌, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಕೊಪ್ಪಳ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಗ್ಯಾಸ್‌‍ ಎಮರ್ಜೆನ್ಸಿ ಶುರುವಾಗಿದೆ.

RELATED ARTICLES

Latest News