ಬೆಂಗಳೂರು,ಫೆ.24-ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿಜೆ ರಾಯ್ ಅವರು ಹಲವಾರು ಕಾರಣಗಳಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಎಸ್‌ಐಟಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ರಾಯ್ ಅವರ ಆತಹತ್ಯೆಗೆ ಒಂದೇ ಕಾರಣವಲ್ಲ, ಮಾನಸಿಕ ಒತ್ತಡ, ಐಷಾರಾಮಿ ಜೀವನ, ವ್ಯವಹಾರಿಕ ಸಮಸ್ಯೆಗಳು, ಐಟಿ ಒತ್ತಡ ಹೀಗೆ ಹಲವು ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ.
ಐಟಿ ದಾಳಿ ಸಂದರ್ಭದಲ್ಲಿ ಹೂಡಿಕೆ ಮಾಡಿರುವವರು ಹಣ ಹಿಂದಿರುಗಿಸುವಂತೆ ಒತ್ತಡ ಹಾಕುತ್ತಿದ್ದರು. ಐಷಾರಾಮಿ ಜೀವನಕ್ಕೆ ಹಣ ವೆಚ್ಚವಾಗುತ್ತಿತ್ತು.ಈ ನಡುವೆ ಮೂರ್ನಾಲ್ಕು ಭಾರಿ ಐಟಿ ದಾಳಿಯಿಂದ ರಾಯ್ ಅವರು ಒಂದು ರೀತಿ ಅಸಾಯಕರಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬುವುದು ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಎಸ್‌ಐಟಿ ಅಧಿಕಾರಿಗಳು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ರಾಯ್ ಆತಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿ ಸಿಕ್ಕಿರುವ ಡೈರಿ, ಆತಹತ್ಯೆಗೆ ಬಳಿಸಿದ್ದ ಪಿಸ್ತೂಲ್, ಮೊಬೈಲ್, ರೂಂ ಡೋರ್ ಲಾಕರ್ ಹೀಗೆ 30ಕ್ಕೂ ಹೆಚ್ಚು ವಸ್ತುಗಳನ್ನೆಲ್ಲಾ ಎಫ್‌ಎಸ್‌ಎಲ್‌ಗೆ ಈಗಾಗಲೇ ಕಳುಹಿಸಿದ್ದು, ಅದರ ವರದಿ ಬಂದ ತಕ್ಷಣ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರಿಗೆ ಹಸ್ತಾಂತರಿಸಲಿದ್ದಾರೆ.
ಅದರ ವರದಿ ಆಯುಕ್ತರ ಕೈ ಸೇರುತ್ತಿದ್ದಂತೆ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಉದ್ಯಮಿ ರಾಯ್ ಅವರ ಆತಹತ್ಯೆ ಇಡೀ ದೇಶವೇ ನಗರದತ್ತ ತಿರುಗಿನೋಡುವಂತಾಗಿತ್ತು. ಅಷ್ಟೊಂದು ಕಾನ್ಫಿಡೆಂಟ್ ಆಗಿದ್ದ ಸಿಜೆ ರಾಯ್ ಅವರು ಯಾವ ಕಾರಣಕ್ಕೆ ಅಂತಹ ನಿರ್ಧಾರಕ್ಕೆ ಬಂದರು ಎಂಬುವುದೇ ಎಲ್ಲರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು.
ರಾಯ್ ಅವರ ಆತಹತ್ಯೆಯನ್ನು ಅವರ ಕುಟುಂಬ ವರ್ಗ ಹಾಗೂ ಹಲವು ಉದ್ಯಮಿಗಳಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.ಒಟ್ಟಾರೆ ಎಸ್‌ಐಟಿ ತನಿಖೆ ಪೂರ್ಣಗೊಂಡು ಅಂತಿಮ ವರದಿ ಬಂದ ನಂತರವಷ್ಟೇ ರಾಯ್ ಅವರ ಆತಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.
